ಪ್ರಚಲಿತ

ಸೀಶೆಲ್ಸ್ ದ್ವೀಪದ ರಕ್ಷಣಾ ಕ್ಷೇತ್ರಕ್ಕೆ 100 ಮಿಲಿಯನ್ ಡಾಲರ್ ಸಾಲ ನೀಡಲಿರುವ ಭಾರತ!! ದೇಶ ರಕ್ಷಣೆಗಾಗಿ ಅಸಂಪ್ಷನ್ ದ್ವೀಪದಲ್ಲಿ ನೌಕಾ ಪಡೆ ನಿಯೋಜಿಸಲು ಮೋದಿ ಸರಕಾರಕ್ಕೆ ಹಸಿರು ನಿಶಾನೆ ತೋರಿದ ಸೀಶೆಲ್ಸ್!!

ಅಯ್ಯೋ, ಈ ಮೋದಿ ಅವರ ವಿದೇಶಾಂಗ ನೀತಿಗಳಿಂದಾಗಿ ಚೀನಾ ಮತ್ತು ಪಾಕಿಸ್ತಾನದ ನಿದ್ದೆ ಹಾಳಾಗಿ ಹೋಗಿದೆ. ಭಾರತದಲ್ಲಿರುವ ವಿರೋಧಿಗಳಂತೂ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಮೋದಿ ಅವರನ್ನು ಇನ್ನೊಂದು ಅವಧಿಗೆ ಪ್ರಧಾನ ಮಂತ್ರಿಯಾಗಲು ಬಿಟ್ಟರೆ ಈ ಫಕೀರ ಭಾರತವನ್ನು ವಿಶ್ವಗುರು ಮಾಡಿಯೇ ತೀರುತ್ತಾರೆ ಎಂದು ಮೈ ಪರಚಿಕೊಂಡು, ಕೂದಲು ಕಿತ್ತು ಕೊಳ್ಳುತ್ತಿದ್ದಾರೆ! ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಪ್ರಬಲ ವಿದೇಶಾಂಗ ನೀತಿ ಹೊಂದಿದ್ದ ಭಾರತ, ತನ್ನ ರಕ್ಷಣಾ ನೆಲೆಗಳನ್ನು ಭಾರತದ ಹೊರಗೂ ಚಾಚಬೇಕೆಂದು ಬಯಸಿತ್ತು. ಆದರೆ ಯೂಪಿಎ ಸರಕಾರ, ಅಟಲ್ ಅವರ ಮಹತ್ವಾಕಾಂಕ್ಷಿ ಯೋಜನೆಗೆ ಏಳ್ಳು ನೀರು ಬಿಟ್ಟಿತ್ತು. ಕೈ ಕಮಾಂಡ್ ಅಂಟೋನಿಯಾ ಮಾಯಿನೋಗೆ ಭಾರತ ಸಶಕ್ತ ರಾಷ್ಟ್ರವಾಗುವುದು ಸುತರಾಂ ಇಷ್ಟವಿಲ್ಲ. ಆದರೆ ಮೋದಿ ಪ್ರಧಾನಿ ಆದ ಬಳಿಕ ಗುರುವಿನ ಕನಸನ್ನು ನನಸಾಗಿಸುವ ಪಣ ತೊಟ್ಟಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ.

ಮಂಗೋಲಿಯಾದಲ್ಲಿ ತೈಲ ಸಂಸ್ಕರಣಾಗಾರ ನಿರ್ಮಿಸಲು ಅಲ್ಲಿನ ಸರ್ಕಾರಕ್ಕೆ 1 ಬಿಲಿಯನ್ ಡಾಲರ್ ಸಾಲ ನೀಡಿದ ಭಾರತ, ಇದೀಗ ಆಫ್ರಿಕಾ ಮತ್ತು ಭಾರತದ ಸಮುದ್ರದ ನಡುವೆ ಇರುವ ಸೀಶೆಲ್ಸ್ ಎನ್ನುವ ಪುಟ್ಟ ದ್ವೀಪ ರಾಷ್ಟ್ರಕ್ಕೂ 100 ಮಿಲಿಯನ್ ಡಾಲರ್ ಸಾಲ ನೀಡಲಿದೆ!! ಪ್ರಧಾನಿ ನರೇಂದ್ರ ಮೋದಿ ಮತ್ತು ಸೀಶೆಲ್ಸ್ ನ ಅಧ್ಯಕ್ಷ ಡ್ಯಾನಿ ಫೌರ್ ಅವರು ಭೇಟಿ ನಡೆಸಿದ ಬಳಿಕ, ಎರಡೂ ದೇಶಗಳು ಅಸಂಪ್ಷನ್ ಐಲೆಂಡ್ ನಲ್ಲಿ ಬೇಸ್ ಯೋಜನೆಗೆ ಸಹಕಾರ ನೀಡಲಿವೆ ಎಂದು ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಇದರ ಜೊತೆಗೆ ಎರಡನೆ ಡಾರ್ನಿಯರ್ ವಿಮಾನವನ್ನು ಸೀಶೆಲ್ಸ್ ಗೆ ಹಸ್ತಾಂತರಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ತನ್ನ ನೌಕಾ ನೆಲೆಯನ್ನು ಸ್ಥಾಪಿಸುವ ಕೊಡುಗೆಗೆ ಪ್ರತಿಯಾಗಿ ಸೀಶೇಲ್ಸ್ ನ ರಕ್ಷಣಾ ಕ್ಷೇತ್ರದಲ್ಲಿ ಅಭಿವೃದ್ದಿ ನಡೆಸಲು ಭಾರತ, ದ್ವೀಪ ರಾಷ್ಟ್ರಕ್ಕೆ ಆರ್ಥಿಕ ಸಹಾಯ ಒದಗಿಸಲಿದೆ. ಕಡಲ ಮಾರ್ಗಗಳನ್ನು ಕಡಲ್ಗಳ್ಳರಿಂದ ರಕ್ಷಿಸಲು ಈ ದ್ವೀಪದಲ್ಲಿ ನೌಕಾ ನೆಲೆಯನ್ನು ಸ್ಥಾಪಿಸಲು ಭಾರತ ಪ್ರಸ್ತಾವನೆ ನೀಡಿತ್ತು. ಈ ಕಡಲ ಮಾರ್ಗಗಳಲ್ಲಿ ಕಡಲ್ಗಳ್ಳರ ಹಾವಳಿಯನ್ನು ನಿಯಂತ್ರಿಸಲು ಭಾರತೀಯ ನೌಕಾಪಡೆ ಗಸ್ತು ತಿರುಗುತ್ತಿರುತ್ತದೆ.

ಸೀಶೆಲ್ಸ್ ನಲ್ಲಿ ನೌಕಾ ನೆಲೆ ಸ್ಥಾಪಿಸುವುದರಿಂದ ಭಾರತಕ್ಕೇನು ಲಾಭ?

ಕಡಲ್ಗಳ್ಳರ ಹಾವಳಿಯ ಜೊತೆ ಜೊತೆಗೆ ಅರಬ್ಬೀ ಸಮುದ್ರದಲ್ಲಿ ತನ್ನ ಪಾರುಪತ್ಯ ಸ್ಥಾಪಿಸಿ ಚೀನಾದ ಸಮುದ್ರ ಲಂಘನದ ಕನಸಿಗೆ ಮಣ್ಣು ಮುಕ್ಕಿಸುವ ಪ್ರಯತ್ನ ಇದೆಂದೆ ಹೇಳಬಹುದು. ದಕ್ಷಿಣ ಸಾಗರದ ಮೇಲೆ ಕಣ್ಣಿಟ್ಟಿರುವ ಚೀನಾ, ಪಾಕಿಸ್ತಾನ, ಶ್ರೀಲಂಕಾ, ಮಾಲ್ದೀವ್ಸ್ ನಲ್ಲಿ ತನ್ನ ನೌಕಾ ನೆಲಗಳನ್ನು ಸ್ಥಾಪಿಸಲು ಈ ದೇಶಗಳಿಗೆ ದೊಡ್ಡ ಪ್ರಮಾಣದ ಆರ್ಥಿಕ ಸಹಾಯ ನೀಡುತ್ತಿದೆ. ಚೀನಾದ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಕೊಕ್ ಕೊಡಲು ಭಾರತವೂ ಇಂಡೋನೇಷಿಯಾ, ಸಿಂಗಾಪುರ, ಮಲೇಶಿಯಾ, ಶ್ರೀಲಂಕಾ ಮತ್ತು ಸೀಶೆಲ್ಸ್ ನಲ್ಲಿ ತನ್ನ ನೌಕಾ ನೆಲೆಗಳನ್ನು ಸ್ಥಾಪಿಸಲು ಅನುಮತಿ ಪಡೆದುಕೊಂಡಿದೆ. ಸಮುದ್ರದಲ್ಲಿ ಚೀನಾದ ‘ಸ್ಟ್ರಿಂಗ್ ಅಫ್ ಪರ್ಲ್ಸ್’ ವಿರುದ್ದ ಭಾರತ ತನ್ನ ‘ಸ್ಟ್ರಿಂಗ್ ಆಫ್ ಫ್ಲಾವರ್ಸ್’ ನಿರ್ಮಿಸಿ ಚೀನಾಕ್ಕೆ ಸಡ್ಡು ಹೊಡೆಯುತ್ತಿದೆ.

ಇದೊಂಥರಾ ಚದುರಂಗದ ಆಟವಿದ್ದಂತೆ. ಚೀನಾ ತನ್ನ ಒಂದು ಕಾಯಿಯನ್ನು ಮುಂದಿಟ್ಟು ಭಾರತದ ಸಿಂಹವನ್ನು ಮಣಿಸಲು ನೋಡುತ್ತಿದ್ದರೆ, ಭಾರತ ಎರಡು ಕಾಯಿಗಳನ್ನು ಮುಂದಿಟ್ಟು ಡ್ರಾಗನ್ ಗೆ ಚೆಕ್-ಮೇಟ್ ಎನ್ನುತ್ತಿದೆ!! ಒಂದೇ ಬಾರಿಗೆ ಎರಡೆರಡು ಮೆಟ್ಟಿಲನ್ನು ಏರುವ ಅಭ್ಯಾಸವಿರುವ ಮೋದಿ ಚದುರಂಗದಾಟದಲ್ಲೂ ಒಂದೇ ಹೊತ್ತಿಗೆ ಎರಡು ಕಾಯಿಗಳನ್ನು ಬಳಸುತ್ತಾರೆ!! ಏಷಿಯಾದ ಒಂದೊಂದೆ ರಾಷ್ಟ್ರಗಳನ್ನು ತನ್ನ ಬಾಹುಬಂಧದಲ್ಲಿ ಭದ್ರವಾಗಿ ಹಿಡಿದಿಡುವ ಪ್ರಯತ್ನದಲ್ಲಿ ಮೋದಿ ಅವರು ಯಶಸ್ವಿಯಾಗುತ್ತಿದ್ದಾರೆ. ಸೀಶೆಲ್ಸ್ ನಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಅಲ್ಲಿನ ಸರಕಾರ ಭಾರತದ ಜೊತೆ ಮೈತ್ರಿ ಸಾಧಿಸಿರುವುದು ದೊಡ್ದ ಸಾಧನೆಯೆಂದೆ ಹೇಳಬಹುದು. ದಕ್ಷಿಣ ಸಾಗರದಲ್ಲಿ ಭಾರತವಿನ್ನು ಏಕಾಚಕ್ರಾಧಿಪತಿಯಾಗಿ ಮೆರೆಯುವ ಕಾಲ ದೂರವಿಲ್ಲ ಮತ್ತು ಅಟಲ್ ಜಿ ಅವರು ಕಂಡ ಕನಸು ನನಸಾಗುವ ಕಾಲ ಹತ್ತಿರ ಬರುತ್ತಿದೆ ಎಂದು ಹೇಳಬಹುದು.

-ಶಾರ್ವರಿ

Tags

Related Articles

Close