ಪ್ರಚಲಿತ

ನಾರಿ ನಾರಾಯಣಿ ಎಂದು ಪೂಜಿಸುವ ಸಂಸ್ಕೃತಿ ಹಿಂದೂಗಳದ್ದು ! ಅತ್ಯಾಚಾರದಂತಹ ಹೀನ ಮನಸ್ಥಿತಿಗೂ ಭಾರತದ ಸಂಸ್ಕಾರಕ್ಕೂ ತಳಕು ಹಾಕಬೇಡಿ

“ಯಾತ್ರನಾರ್ಯಸ್ತು ಪೂಜೆಯಂತೇ ರಮಂತೇ ತತ್ರ ದೇವತಾಃ” ಎನ್ನುವ ದೇಶ ನಮ್ಮದು…ಒಂದು ಕಾಲದಲ್ಲಿ ಎಲ್ಲಾ ಮಹಿಳೆಯರನ್ನೂ ದೇವತೆಗೆ ಸಮಾನವಾಗಿಯೂ..ತನಗಿಂತ ಹಿರಿಯ ಮಹಿಳೆಯನ್ನು ತಾಯಿಯಂತೆಯೂ ತನಗಿಂತ ಕಿರಿಯ ಹೆಣ್ಣು ಮಕ್ಕಳನ್ನು ತಂಗಿಯಂತೆಯೂ ಮಗಳಂತೆಯೂ ಆರಾಧಿಸುತ್ತಿದ್ದ ದೇಶವಿದು..ನಮ್ಮ ದೇಶವು ಮಹಾ ವೀರರೂ,ದಯಾಳುಗಳೂ,ನ್ಯಾಯಪರರೂ ಆದ ಅನೇಕ ಅಪ್ರತಿಮರನ್ನು ಇತಿಹಾಸದುದ್ದಕ್ಕೂ ಕಂಡಿದೆ..ತ್ರೇತಾಯುಗದ ರಾಮನನ್ನೇ ಉದಾಹರಣೆಗೆ ತೆಗೆದುಕೊಳ್ಳುವ..ತನ್ನನ್ನು ವನವಾಸಕ್ಕಟ್ಟಿದ ಚಿಕ್ಕಮ್ಮ ಕೈಕೆಯ ಕುರಿತಾಗಿ ಒಂದೇ ಒಂದು ಬಾರಿಯೂ ಕೋಪಗೊಂಡು ತಪ್ಪು ಮಾತನ್ನಾಡಲಿಲ್ಲ.ಬದಲಾಗಿ ಕೋಪದಿಂದ ತಾಯಿಯನ್ನೇ ದ್ವೇಷಿಸಲಾರಂಭಿಸಿದ ಸಹೋದರ ಭರತನಿಗೆ ಮಹಿಳೆಯನ್ನು,ತಾಯಿಯನ್ನು ಗೌರವಿಸಬೇಕೆಂಬ ಪಾಠವನ್ನು ಹೇಳಿದ.ಎಡೆಬಿಡದೆ ಹಿಂದೆ ಬಿದ್ದು ತಡೆಯಲಾರದಂತಹಾ ತೊಂದರೆ ನೀಡುತ್ತಿದ್ದ ಶೂರ್ಪನಖಿಯನ್ನು ಕೊಳ್ಳುವ ಅವಕಾಶವಿದ್ದರೂ ಕೇವಲ ಮೂಗು ತುಂಡರಿಸಿ ಬಿಟ್ಟಿದ್ದನು.ವಾಲೀ,ರಾವಣ ಹೀಗೆ ಶತ್ರುಗಳನ್ನು ಸಂಹರಿಸಿದಾಗ ಆ ದೇಶದ ಮಹಿಳೆಯರನ್ನು ವಿವಾಹಗಯ್ಯುವ ಅವಕಾಶವಿದ್ದಾಗಲೂ ಅವರೊಂದಿಗೆ ರಾಮನು ಗೌರವದಿಂದಲೇ ವರ್ತಿಸಿದ್ದ.ಅಪವಾದಕ್ಕೆ ಕಟ್ಟುಬಿದ್ದು ಸೀತೆಯನ್ನು ವನವಾಸಕ್ಕೆ ಕಳುಹಿಸಿದ ಬಳಿಕ ಅಖಂಡ ಭಾರತದ ಚಕ್ರವರ್ತಿ ರಘುಕುಲ ತಿಲಕ ರಾಮನಿಗೆ ಮರುಮದುವೆಯಾಗುವ ಅವಕಾಶವಿದ್ದರೂ ಶ್ರೀರಾಮ ಏಕಪತ್ನೀವ್ರತಸ್ಥನಾಗಿಯೇ ಉಳಿದುಕೊಂಡ.

ದ್ವಾಪರಯುಗದಲ್ಲಿ ಸುಭದ್ರೆಗೆ ಅರ್ಜುನನ ಮೇಲೆ ಒಲವಿತ್ತು..ಅಣ್ಣ ಕೃಷ್ಣ ಆಕೆಯ ವಿವಾಹವನ್ನು ಅರ್ಜುನನೊಂದಿಗೆಯೇ ನೆರವೇರಿಸಿದ.ಕೌರವರು ಅಹಂಕಾರದಿಂದ ಮೆರೆದು ದ್ರೌಪದಿಯನ್ನು ವಿವಸ್ತ್ರಳನ್ನಾಗಿಸಲು ಎತ್ನಿಸಿದಾಗ ಶ್ರೀಕೃಷ್ಣ ವಸ್ತ್ರವನ್ನು ಅಕ್ಷಯವಾಗಿಸಿದ..ಆದರೂ ತನ್ನನ್ನು ಅವಮಾನಿಸಿದ ಕೌರವರ ಅಹಂಕಾರವನ್ನು ದ್ರೌಪದಿ ಮರೆಯಲಿಲ್ಲ ಕೊನೆಗೂ ಕೌರವರ ವಿನಾಶಕ್ಕೆ ಆಕೆಯೇ ಕಾರಣಳಾದಳು..ದ್ರೌಪದಿಯನ್ನು ಐವರು ಪುತ್ರರೂ ವಿವಾಹವಾಗಿ ಎಂಬ ಕುಂತಿಯ ಮಾತನ್ನು ಅಸಾಧ್ಯವೆಂದು ತಳ್ಳಿ ಹಾಕಲಿಲ್ಲ..ಐವರು ಪತಿಯರನ್ನು ಹೊಂದಿದ್ದರೂ ದ್ರೌಪದಿ ಇಂದಿಗೂ ಮಹಾಪತಿವ್ರತೆ ಎಂದೇ ಪೂಜಿಸಲ್ಪಡುತ್ತಾಳೆ.ನರಕಾಸುರನನ್ನು ವಧಿಸಲು ಸತ್ಯಭಾಮೆಯೂ ಹೋರಾಡಿದ್ದಳು…ಮಹಿಳೆಯರನ್ನು ಅವಮಾನಿಸಿದವರಿಗೆ ಶಿಕ್ಷೆಯು ಕಟ್ಟಿಟ್ಟ ಬುತ್ತಿಯಾಗಿತ್ತು..ಮಹರ್ಷಿಗಳ ಪತ್ನಿಯನ್ನು ಮೋಸದಿಂದ ಭೋಗಿಸಿದ ದೇವೇಂದ್ರನೇ ಶಿಕ್ಷೆಯನ್ನು ಅನುಭವಿಸಿದ್ದ..ರಂಭೆ ಊರ್ವಶಿವರನ್ನು ಛೇಡಿಸಲು ಹೋಗಿ ಶಿಕ್ಷೆಗೀಡಾದ ಅನೇಕ ಗಂಧರ್ವರ ಉದಾಹರಣೆಗಳೂ ಇತಿಹಾಸದಲ್ಲಿದೆ.ವರ್ತಮಾನದ ಭಾರತದಲ್ಲಿ ಜರಗುವ ಪ್ರತಿಯೊಂದಕ್ಕೂ ಮನುವನ್ನೂ ಮನುಸ್ಮೃತಿಯನ್ನೂ ದೂರುವವರೇ ಅತ್ಯಾಚಾರಿಗೆ ಮನುಸ್ಮೃತಿ ಹೇಳಿರುವ ಶಿಕ್ಷೆ ಯಾವುದೆಂದು ನಿಮಗೆ ಗೊತ್ತಿದೆಯೇ?ಮಹಿಳೆಯರೊಂದಿಗೆ ದುರ್ವರ್ತನೆಯಲ್ಲಿ ತೊಡಗಿದವನಿಗೆ ಮರಣದಂಡನೆಯೇ ಶಿಕ್ಷೆ,ಮಹಿಳೆ ಮತ್ತು ಮಕ್ಕಳನ್ನು ಕೊಂದವನಿಗೆ ಅತ್ಯಂತ ಕಠಿಣವಾದ ಶಿಕ್ಷೆಯನ್ನು ನೀಡಬೇಕು,ಅತ್ಯಾಚಾರ ನಡೆಸಿದವನಿಗೆ ಸಮೂಹದಲ್ಲಿ ಎಲ್ಲರೆದುರು ಶಿಕ್ಷಿಸಬೇಕು ಏಕೆಂದರೆ ಆ ಶಿಕ್ಷೆ ಉಳಿದವರಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎನ್ನುತ್ತದೆ ಮನುಸ್ಮೃತಿ.

ಕಲಿಯುಗದಲ್ಲೂ ಹಿಂದೂ ಅರಸರು ಹೆಂಗಸರನ್ನು ಗೌರವಯುತವಾಗಿಯೇ ನಡೆಸಿಕೊಳ್ಳುತ್ತಿದ್ದರು..ರಜಪೂತ ಅರಸರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗಲೂ ಪತ್ನಿಯ ಅಭಿಪ್ರಾಯವನ್ನು ಗೌರವಿಸುತ್ತಿದ್ದರು..ಛತ್ರಪತಿ ಶಿವಾಜಿ ಮಹಾರಾಜರು ಸೋತ ರಾಜ್ಯದ ಸ್ತ್ರೀಯರನ್ನು ಗೌರವಯುತವಾಗಿ ಕುಟುಂಬಕ್ಕೆ ಹಿಂತಿರುಗಿಸುತ್ತಿದ್ದರು.ಪೃಥ್ವಿರಾಜ್ ಚೌಹಾಣ್ ಘೋರಿಯ ಪತ್ನಿಗೆ ತಾನು ನೀಡಿದ ವಚನಕ್ಕೆ ಬದ್ಧನಾಗಿ ಎರಡು ಬಾರಿ ಜೀವದಾನ ನೀಡಿದ್ದ..ದಕ್ಷಿಣ ಭಾರತದ ರಾಜರು ಎಷ್ಟು ಪ್ರಖ್ಯಾತರೋ ಅವರ ಪತ್ನಿಯಂದಿರೂ ಸಹಾ ಅಷ್ಟೇ ಪ್ರಖ್ಯಾತರಾಗಿದ್ದಾರೆ..ಬೆಲೂರು ಹಳೇಬೀಡು ನಿರ್ಮಿಸಿದ ರಾಣಿ ಶಾಂತಲೆ ಅವರಿಗೊಂದು ಉದಾಹರಣೆ.ಆದರೆ ಪೃಥ್ವಿರಾಜನ ಸಾಮ್ರಾಜ್ಯ ಪತನವಾಗುವುದರೊಂದಿಗೆ ಭಾರತದ ಮಹಿಳೆಯರ ಗೌರವ ಅಭಿಮಾನಗಳೆಲ್ಲ ಕಥೆಗಳಿಗೆ ಮಾತ್ರ ಸೀಮಿತವಾಯಿತು..ಉತ್ತರ ಭಾರತದಲ್ಲಿ ಅಸ್ತಿತ್ವದಲ್ಲಿರುವ ಸತೀಪದ್ಧತಿ,ಮುಖಪರದೆ,ಬಾಲ್ಯವಿವಾಹಗಳಿಗೆಲ್ಲ ಹಿಂದೂ ಧರ್ಮ,ಮನುಸ್ಮೃತಿ ಮತ್ತು ಹಿಂದೂ ಅರಸರು ಮಹಿಳೆಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯ ಸಂಕೇತವೆಂದು ಅರಚಾಡುವ ಮಹಿಳಾ ಮಣಿಗಳು ಗಮನಿಸಬೇಕಾದ ಹಲವು ಅಂಶಗಳಿವೆ.ಉತ್ತರ ಭಾರತ ಅದರಲ್ಲೂ ಗುಜರಾತ್ ಮತ್ತು ರಾಜಸ್ಥಾನ,ಮಧ್ಯಪ್ರದೇಶ,ಉತ್ತರ ಪ್ರದೇಶಗಳಲ್ಲಿ ಮೇಲ್ಕಂಡ ಸಂಪ್ರದಾಯಗಳು ಹೆಚ್ಚ್ಚಾಗಿ ಜಾರಿಯಲ್ಲಿದೆ..ಹಾಗೆ ನೋಡಿದರೆ ಮೊಘಲರಿಂದ ಅತೀ ಹೆಚ್ಚುಬಾರಿ ಆಕ್ರಮಿಸಲ್ಪಟ್ಟ ಮತ್ತು ಆಳಲ್ಪಟ್ಟ ಸ್ಥಳಗಳೂ ಇವುಗಳೇ ಆಗಿವೆ..ಈ ಪದ್ದತಿಯು ಮನಸ್ಮೃತಿಯದೇ ಆಗಿದ್ದಲ್ಲಿ ಕೇರಳ,ಆಂಧ್ರ,ಕರ್ನಾಟಕ ಮತ್ತು ತಮಿಳುನಾಡುಗಳಲ್ಲೂ ಇರಬೇಕಿತ್ತಲ್ಲ..ಮಹಾರಾಷ್ಟ್ರದಲ್ಲಿ ಈ ಪದ್ಧತಿ ಸಣ್ಣ ಮಟ್ಟದಲ್ಲಿದೆ ಏಕೆಂದರೆ ಅಲ್ಲಿ ಮೊಘಲರ ಬಳಿಕ ಛತ್ರಪತಿ ಶಿವಾಜಿ ಸ್ಥಾಪಿಸಿದ ಮಾರಾಟ ಸಾಮ್ರಾಜ್ಯದ ಆಳ್ವಿಕೆಯೂ ಇತ್ತು..ಇದರ ಕುರುಹು ಬೆಳಗಾವಿ,ಹುಬ್ಬಳ್ಳಿ ಜಿಲ್ಲೆಗಳಲ್ಲಿ ಕಾಣಸಿಗುತ್ತದೆ.ಗುಲ್ಬರ್ಗ ಮತ್ತಿತರ ಜಿಲ್ಲೆಗಳಲ್ಲೂ ಕಾಣಸಿಗುತ್ತದೆ ಏಕೆಂದರೆ ಈ ಭಾಗವನ್ನು ಬಹುಮನಿ ಸುಲ್ತಾನರು ಆಳುತ್ತಿದ್ದರು.

ಬಾಬರನಿಂದ ಔರಂಗಜೇಬ ಘಜನಿ ಘೋರಿ ಹೀಗೆ ಪರಕೀಯ ಯಾವುದೇ ಮೊಘಲ ಅರಸರು ದಾಳಿ ನಡೆಸಿದರೂ ಯುದ್ಧದಲ್ಲಿ ಸೋತ ರಾಜ್ಯದ ಹೆಣ್ಣು ಮಕ್ಕಳ ಪರಿಸ್ಥಿತಿಯು ಘನಘೋರವಾಗಿರುತ್ತಿತ್ತು.ರಾಣಿ ಪದ್ಮಾವತಿಯನ್ನು ಪಡೆಯಬೇಕೆಂಬ ಒಂದೇ ಒಂದು ದುರಾಸೆಯಿಂದ ಚಿತ್ತೋರ್ ರಾಜ್ಯವನ್ನೇ ಧ್ವಂಸಗೊಳಿಸಿದ್ದ ಕ್ರೂರ ಅಲ್ಲಾಉದ್ದೀನ್ ಖಿಲ್ಜಿ ..ಆತನ ಸೈನಿಕರ ವಕ್ರದೃಷ್ಟಿಯೂ ರಜಪೂತ ಮಹಿಳೆಯರ ಮೇಲಿತ್ತು..ಸಾಮೂಹಿಕ ಜೊಹರ್ ಆಚರಿಸುವುದರ ಹೊರತಾಗಿ ಚಿತ್ತೋರ್ ನ ಮಹಿಳೆಯರಬಳಿ ಇನ್ಯಾವ ಉಪಾಯವಿತ್ತು?ಅಷ್ಟಕ್ಕೂ ಪದ್ಮಾವತಿಯೇನೂ ಸಾಮಾನ್ಯ ಹೆಣ್ಣಾಗಿರಲಿಲ್ಲ,ಚಿತ್ತೋರ್ನಂತಹಾ ಬಲಿಷ್ಠ ರಾಜ್ಯವೊಂದರ ಪರಾಕ್ರಮಿ ಮಹಾರಾವಲ್ ರತನ್ ಸಿಂಗ್ ಎಂಬ ಅರಸನ ಪತ್ನಿಯ ಮೇಲೆಯೇ ಕೆಟ್ಟ ದೃಷಿ ಹಾಕಿ ಅದಕ್ಕಾಗಿ ಯುದ್ಧ ನಡೆಸಿದ್ದ ಮುಸಲ್ಮಾನ ಅರಸರಿಗೆ ಅವರದ್ದೇ ಸಾಮ್ರಾಜ್ಯದಲ್ಲಿದ್ದ ಸಾಮಾನ್ಯ ಮಹಿಳೆಯರು ಯಾವ ಲೆಕ್ಕ.ಅಕ್ಬರ ಮತ್ತು ಅವನ ಮಗ ಶಹಜಾನನು ತಮ್ಮ ಜನನಾದಲ್ಲಿ ಪೇರಿಸಿಟ್ಟಿದ್ದ ಮಹಿಳೆಯರಿಗೆ ಲೆಕ್ಕವಿರಲಿಲ್ಲ..ವಾರಕ್ಕೊಮ್ಮೆ ಮಹಿಳೆಯರ ಸಂತೆ(?) ಏರ್ಪಡಿಸಿ ತಮಗಿಷ್ಟಬಂದವರನ್ನು ಎತ್ತಿಕೊಂಡು ಹೋಗಿ ಭೋಗಿಸಿ ಜನಾನಾ ಸೇರಿಸುತ್ತಿದ್ದರು.ಅವರು ಸೈನಿಕರ ಮಡದಿ ಮಕ್ಕಳಾದರೂ ಸರಿಯೇ ಅಥವಾ ಅಧಿಕಾರಿಗಳ ಮಡದಿ ಮಗಳಾದರೂ ಸರಿಯೇ..ಸುಂದರವಾಗಿ ಕಂಡ ಸ್ತ್ರೀಯ ಜೀವನ ನರಕವಾಗುತ್ತಿತ್ತು..ರಾಜನ ಕೃಪೆಗೆ ಪಾತ್ರರಾಗಲು ಅಧಿಕಾರಿಗಳೂ ತಮ್ಮೂರಿನ ಸುಂದರ ಮಹಿಳೆಯರನ್ನು ಅರಸರಿಗೊಪ್ಪಿಸುವ ಕೆಲಸವನ್ನು ಮಾಡುತ್ತಿದ್ದರು..ಇದಕ್ಕಾಗಿಯೇ ಯಾರ ಕಣ್ಣಿಗೂ ಕಾಣಿಸದಂತೆ ಮುಖ ಮುಚ್ಚಿಕೊಳ್ಳುವ ಸಲುವಾಗಿಯೇ ಇಟ್ಟರ ಭಾರತದಲ್ಲಿ ಮುಖಪರದೆಯ ಸಂಪ್ರದಾಯವು ಪ್ರಾರಂಭವಾದದ್ದು.

ಇಂದಿಗೂ ಆ ಪ್ರದೇಶಗಳಲ್ಲಿ ರಾತ್ರೆ ಮದುವೆಗಳು ನಡೆಯುತ್ತವೆ..ರಾಜನಿಗೆ ಅಥವಾ ಅಧಿಕಾರಿಗಳಿಗೆ ಅನುಮಾನ ಬಾರದಂತೆ ಕತ್ತಲಲ್ಲೇ,ನಿಶಬ್ದವಾಗಿ ವಿವಾಹಗಳನ್ನು ಮೊಘಲರ ಆಳ್ವಿಕೆಯ ಕಾಲದಲ್ಲಿ ಹಿಂದೂಗಳು ನಡೆಸುತ್ತಿದ್ದರು..ಬಾಲ್ಯವಿವಾಹವೂ ಪ್ರಾರಂಭವಾದದ್ದು ಇದೆ ಕಾರಣದಿಂದ ಇಲ್ಲದಿದ್ದಲ್ಲಿ ಯಾರು ಯಾವ ಕ್ಷಣದಲ್ಲಿ ಬಂದು ಮಗಳನ್ನು ಹೊತ್ತೊಯ್ಯುವರೋ ಎಂಬ ಚಿಂತೆಯಲ್ಲೇ ಹೆತ್ತವರು ನರಳುತ್ತಿದ್ದರು…ಅದಕ್ಕಾಗಿಯೇ ಭಾರತವು ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂಬುದಕ್ಕೆ,ಮುಖಪರದೆಗೆ,ಬಾಲ್ಯವಿವಾಹಕ್ಕೆ ಮನುವನ್ನೂ ಮನುಸ್ಮೃತಿಯನ್ನೂ,ಹಿಂದೂ ಸಂಸ್ಕೃತಿಯನ್ನೂ ದೂರುವುದನ್ನು ಬಿಟ್ಟುಬಿಡಿ..ಅತ್ಯಾಚಾರಿ ದೇವೇಂದ್ರನನ್ನೇ ಶಿಕ್ಷಿಸಿದ ಸಂಸ್ಕೃತಿ ನಮ್ಮದು.ತಪ್ಪು ಮಾಡಿದವರಾರಾದರೂ ಸರಿ ಅತ್ಯಾಚಾರಿಗಳನ್ನು ಶಿಕ್ಷಿಸಿ.

-Deepashree M

Tags

Related Articles

FOR DAILY ALERTS
Close