ಅಂಕಣ

ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಧ್ಯೇಯ ಹೊಂದಿರುವ ಭಾರತೀಯ ಗುಪ್ತಚರ ಸಂಸ್ಥೆ (RAW)ಯ ಬುದ್ದಿಮತ್ತೆಗೆ ಸರಿಸಮನಾದ ಇನ್ನೊಂದು ಸಂಸ್ಥೆ ಈ ಪ್ರಪಂಚದಲ್ಲೆ ಇಲ್ಲ!!

ಹಿಂದೆಲ್ಲಾ ಒಂದು ಜೋಕ್ ಹರಿದಾಡುತ್ತಿತ್ತು, ಅದೇನೆಂದರೆ ರಷ್ಯಾದಲ್ಲಿ ಅಪರಾಧ ನಡೆದ ಕೆಲವೆ ಘಂಟೆಗಳೊಳಗಾಗಿ ಅಪರಾಧಿಗಳನ್ನು ಹಿಡಿಯಲಾಗುತ್ತದೆ. ಇಂಗ್ಲೆಂಡಿನಲ್ಲಿ ಅಪರಾಧ ನಡೆದ ಕೆಲವೆ ನಿಮಿಷಗಳಲ್ಲಿ ಅಪರಾಧಿಗಳನ್ನು ಹಿಡಿಯಲಾಗುತ್ತದೆ. ಅಮೇರಿಕಾದಲ್ಲಿ ಅಪರಾಧ ನಡೆದ ಕೆಲವೆ ಸೆಕೆಂಡುಗಳ ಒಳಗೆ ಅಪರಾಧಿಯನ್ನು ಹಿಡಿಯಲಾಗುತ್ತದೆ. ಭಾರತದಲ್ಲಿ ಅಪರಾಧ ನಡೆಯುತ್ತದೆ ಎಂದು ಮುಂಚಿತವಾಗಿಯೆ ತಿಳಿದಿರುತ್ತದೆ ಆದರೂ ಅಪರಾಧಿಗಳನ್ನು ಹಿಡಿಯಲಾಗುವುದಿಲ್ಲ!! ಇದು ಜೋಕ್ ಅನ್ನಿಸಬಹುದು ಆದರೆ ಇದು ವಾಸ್ತವ ಕೂಡಾ. ಪ್ರಪಂಚದ ಅಷ್ಟೂ ಗುಪ್ತಚರ ಸಂಸ್ಥೆಗಳನ್ನು ನೀವಾಳಿಸಿ ಎತ್ತಿ ಬಿಸಾಕಬಹುದು ಅಷ್ಟು ಸಂಕೀರ್ಣವಾದ ಗುಪ್ತಚರ ವ್ಯವಸ್ಥೆ ಭಾರತದಲ್ಲಿದೆ!

ಭಾರತೀಯ ಸಂಶೋಧನಾ ಮತ್ತು ವಿಶ್ಲೇಷಣಾ ಸಂಸ್ಥೆ ನಮಗೆಲ್ಲ RAW ಎಂದೆ ಚಿರಪರಿಚಿತ. ಸೈನೋ-ಇಂಡಿಯನ್ ಯುದ್ಧದಲ್ಲಿ ಗುಪ್ತಚರ ವೈಫಲ್ಯದ ನಂತರ 1968 ರಲ್ಲಿ ಇದನ್ನು ಸ್ಥಾಪಿಸಲಾಯಿತು. ವಿದೇಶದಿಂದ ಗುಪ್ತ ಮಾಹಿತಿಗಳನ್ನು ಕಲೆಹಾಕಲು ಅನುಕೂಲವಾಗುವಂತೆ ಈ ಸ್ವತಂತ್ರ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಪ್ರಂಪಚದಲ್ಲಾಗುವ ಅತಿ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳ ಮೇಲೂ RAW ಹದ್ದಿನ ಕಣ್ಣಿಟ್ಟಿರುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಾಗುವ ಸಂಭಾವ್ಯ ಭಯೋತ್ಪಾದಕ ದಾಳಿಯ ಬಗ್ಗೆ ಮೊತ್ತ ಮೊದಲು ಸಂದೇಶ ರವಾನಿಸುವುದೆ RAW. ಆದರೆ ದೇಶಗಳ ಸರ್ಕಾರಗಳೆ ಭಯೋತ್ಪಾದಕರ ಜೊತೆ ಶಾಮೀಲಾಗಿದ್ದರೆ RAW ಕಳಿಸಿದ ಸಂದೇಶಗಳು ಕಸದ ಬುಟ್ಟಿಗೆ ಸೇರುತ್ತವೆ.

ಭಾರತದಲ್ಲಿ ಯೂಪಿಎ ಶಾಸನದ ಕಾಲದಲ್ಲಿ ಇಂತಹ ಅದೆಷ್ಟು ಸಂದೇಶಗಳು ಕಸದ ಬುಟ್ಟಿ ಸೇರಿದ್ದವು ಎನ್ನುವುದು ಆ ಕಾಲದಲ್ಲಾದ ಭಯೋತ್ಪಾದನಾ ದಾಳಿಗಳ ಲೆಕ್ಕ ನೋಡಿ ಅಂದಾಜಿಸಬಹುದು. ಭಾರತೀಯ ಗುಪ್ತಚರ ಸಂಸ್ಥೆಯ ಅನುಮಾನಗಳು ಸುಳ್ಳಾಗುವುದು ಬಹಳಾ ಬಹಳಾ ವಿರಳ. ಸಂಸ್ಥೆಯ ನೆಟವರ್ಕ್ ಎಷ್ಟು ಬಲಿಷ್ಟವಾಗಿದೆ ಎಂದರೆ ಸಂದೇಶ 99.99% ನಿಖರವಾಗಿರುತ್ತದೆ. 2017ರಲ್ಲಿ ಭಾರತದಲ್ಲಿ ಐಸಿಸ್ ಪ್ರೇರಿತ ಸಂಭಾವ್ಯ ಬಾಂಬ್ ಸ್ಪೋಟವನ್ನು RAW ಸರಿಯಾದ ಸಮಯದಲ್ಲಿ ವಿಫಲಗೊಳಿಸಿದೆ ಎಂದು ಇದೀಗ ತಾನೆ ಬಂದ ವರದಿಗಳು ಹೇಳುತ್ತಿವೆ. ಮೋದಿ ಸರಕಾರದಲ್ಲಿ ಒಂದೆ ಒಂದು ಭಯೋತ್ಪಾದನಾ ದಾಳಿ ನಡೆಯದಿರಲು RAW ಸರಿಯಾದ ಸಮಯಕ್ಕೆ ಸರಕಾರಕ್ಕೆ ಸಂದೇಶ ರವಾನಿಸುವುದರಿಂದಾಗಿ ಮತ್ತು ಮೋದಿ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿರುವುದರಿಂದಲೆ ಸಾಧ್ಯವಾಗಿರುವುದು.

RAW ಬಗ್ಗೆ ಜನರಿಗೆ ಗೊತ್ತಿಲ್ಲದ ಕೆಲವು ವಿಷಯಗಳು:

1.’ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವುದು RAWನ ಧ್ಯೇಯ ಮಂತ್ರ! ಧರ್ಮವೆನ್ನುವುದು ಇಲ್ಲಿ ‘ದೇಶ’. ದೇಶವನ್ನು ರಕ್ಷಿಸುವುದೆ ಧರ್ಮ.

2.RAW ಅಧಿಕಾರಿಗಳನ್ನು ಕಠಿಣ ತರಬೇತಿಗಾಗಿ ದೇಶದ ನಾನಾ ಭಾಗಗಳಿಗೆ ಕಳುಹಿಸಲಾಗುತ್ತದೆ ಮಾತ್ರವಲ್ಲ ಅಮೇರಿಕಾ, ಇಂಗ್ಲೆಂಡ್ ಮತ್ತು ಇಸ್ರೇಲಿನಂತಹ ದೇಶಗಳಲ್ಲೂ ಇವರ ತರಬೇತಿ ನಡೆಯುತ್ತದೆ. ಬೇಹುಗಾರಿಕೆ ಉಪಕರಣಗಳನ್ನು ಉಪಯೋಗಿಸುವುದನ್ನು ಕಲಿಸುವುದರ ಜೊತೆಗೆ ಇಸ್ರೇಲಿನ ಮಿಲಿಟರಿ ರಕ್ಷಣಾ ಸಂಸ್ಥೆ ‘ಕ್ರಾವ್ ಮಾಗ’ ದಿಂದ ಆತ್ಮ ರಕ್ಷಣೆಯ ತರಬೇತಿಯನ್ನು ಕೊಡಿಸಲಾಗುತ್ತದೆ.

3.ಬೇಹುಗಾರಿಕೆಯ ಸಂಧರ್ಭದಲ್ಲಿ ಶತ್ರುಗಳ ಕೈಗೆ ಸಿಕ್ಕಿ ಬಿದ್ದರೆ ಈ ತರಬೇತಿಗಳು ಆತ್ಮ ರಕ್ಷಣೆಗೆ ಉಪಯೋಗವಾಗುತ್ತವೆ. ಯಮ ಯಾತನೆ ನೀಡಿದರೂ ಒಬ್ಬ RAW ಅಧಿಕಾರಿ ತನ್ನ ದೇಶದ ರಹಸ್ಯವನ್ನು ಶತ್ರುಗಳಿಗೆ ಬಿಟ್ಟುಕೊಡುವುದಿಲ್ಲ. ಅಂತಹ ಸಿಂಹದ ಗುಂಡಿಗೆ ಹೊಂದಿರುತ್ತಾರೆ RAW ಅಧಿಕಾರಿಗಳು.

4.1984 ರಲ್ಲಿ ಸಿಯಾಚಿನ್ ನಲ್ಲಿನ ಸಾಲ್ಟೊರೊ ರಿಡ್ಜ್ ಅನ್ನು ಪಾಕಿಸ್ತಾನ ವಶಪಡಿಸಿಕೊಳ್ಳಲು ಯೋಜಿಸುತ್ತಿದೆ ಎಂದು ಭಾರತೀಯ ಸೇನೆಗೆ ಸಕಾಲಿಕ ಕರೆ ಮಾಡುತ್ತದೆ RAW. ಪಾಕಿಸ್ತಾನದ ಕುತಂತ್ರ ಅರಿತ ಭಾರತ ‘ಆಪರೇಶನ್ ಮೇಘದೂತ್’ ಕೈಗೊಂಡು ಪಾಕ್ ಸೇನೆ ಭಾರತದ ಗಡಿ ದಾಟುವ ಮುಂಚೆಯೆ ಅವರನ್ನು ಅಲ್ಲಿಂದ ಹೊಡೆದೋಡಿಸುತ್ತಾರೆ. ಇದೆ ರೀತಿ ರಾಜೀವ್ ಗಾಂಧಿಯನ್ನು ಅಪಹರಿಸುವ ಪಾಕ್ ಕುತಂತ್ರವನ್ನು ಭೇದಿಸಿ ಅವರ ಆಟವನ್ನು ಅವರ ಮೇಲೆಯೆ ಪ್ರಯೋಗಿಸಿ ಪಾಕಿಗೆ ಮಣ್ಣು ಮುಕ್ಕಿಸಿದೆ ಈ ಸಂಸ್ಥೆ.

5.ಆರಂಭದಲ್ಲಿ, RAW ಸಂಸ್ಥೆಯು ಕೇವಲ ಇಂಟೆಲಿಜೆನ್ಸ್ ಬ್ಯೂರೊ, ಭಾರತೀಯ ಪೋಲಿಸ್ ಸೇವೆಗಳು, ಭಾರತೀಯ ಮಿಲಿಟರಿ ಅಥವಾ ರೆವೆನ್ಯೂ ಇಲಾಖೆಗಳಿಂದ ಮಾತ್ರ ಜನರನ್ನು ನೇಮಿಸಿಕೊಳ್ಳುತ್ತಿತ್ತು. ಆದರೆ ಈಗ ಸಂಸ್ಥೆಯ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಈಗ ನೇರವಾಗಿ ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

6.ಯಾವುದೆ ಸಮಯ ಮತ್ತು ಸಂಧರ್ಭದಲ್ಲಿಯೂ ಭಾರತೀಯ ಸಂಸತ್ತಿಗೆ ಉತ್ತರಿಸಲು RAW ಭಾದ್ಯವಾಗಿಲ್ಲ ಹಾಗೂ RTI ಅಡಿಯಲ್ಲಿ ಈ ಸಂಸ್ಥೆ ಬರುವುದಿಲ್ಲ. ಹಾಗಾಗಿ ಯಾವ ಮಾಹಿತಿಯೂ ಸಾರ್ವಜನಿಕರಿಗೆ ದೊರೆಯುವುದಿಲ್ಲ. ಈ ದೇಶದಲ್ಲಿ ಪ್ರಧಾನಮಂತ್ರಿ ಮತ್ತು ಜಾಯಿಂಟ್ ಇಂಟೆಲಿಗೆನ್ಸ್ ಸಮಿತಿಯನ್ನು ಹೊರತು ಪಡಿಸಿ ಬೇರಾರಿಗೂ ಯಾವುದೆ ವಿಷಯದ ಬಗ್ಗೆ RAW ಸ್ಪಷ್ಟೀಕರಣ ನೀಡಬೇಕಾಗಿಲ್ಲ. ಇದೊಂದು ಸರ್ವತಂತ್ರ ಸ್ವತಂತ್ರ ಸಂಸ್ಥೆ.

7.ಕ್ಯಾಬಿನೆಟ್ ಸಚಿವಾಲಯದಲ್ಲಿ RAW ನ ಮುಖ್ಯಸ್ಥನನ್ನು “ಸೆಕ್ರೆಟರಿ” ಎಂದು ಸಂಬೋಧಿಸಲಾಗುತ್ತದೆ. ಪ್ರಸ್ತುತ IPS ಅಧಿಕಾರಿ ಅನಿಲ್ ಧಾಸ್ಮಾನ ಅವರ ನೇತೃತ್ವದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಕೆಂದ್ರ ಕಚೇರಿ ದೆಹಲಿಯಲ್ಲಿದೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇರ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕನಿಷ್ಟವೆಂದರೂ ಮೂವತ್ತು ಅನ್ಯ ಗುಪ್ತಚರ ವಿಭಾಗಗಳಿಗೆ RAW ಮಾತೃ ಸಂಸ್ಥೆಯಾಗಿದೆ.

8.ತರಬೇತಿ ಸಮಯದಲ್ಲಿ CIA, KGB, ISI, Mossad ಮತ್ತು MI6 ನಂತಹ ಇತರ ಏಜೆನ್ಸಿಗಳ ಕೇಸ್ ಗಳನ್ನು ಅಧ್ಯಯನಕ್ಕಾಗಿ ನೀಡಲಾಗುತ್ತದೆ. ಯಾರು ಮಿತ್ರ ಯಾರು ಶತ್ರು ಎನ್ನುವುದನನ್ನು ರಾ ನಿರ್ಧರಿಸುವುದಿಲ್ಲ, ಬದಲಾಗಿ ದೇಶದ ವಿದೇಶಾಂಗ ನೀತಿ ನಿರ್ಧರಿಸುತ್ತದೆ ಎಂದು ಕಲಿಸಿಕೊಡಲಾಗುತ್ತದೆ. ಕೆಲವು ದಿನಗಳ ಮೂಲಭೂತ ತರಬೇತಿಯ ಬಳಿಕ 1-2 ವರ್ಷಗಳ ಕಠಿಣ ತರಬೇತಿಗಾಗಿ FIB ಗೆ ಕಳಿಸಿಕೊಡಲಾಗುತ್ತದೆ.

9.ಬಾಂಗ್ಲಾ ವಿಮೋಚನೆ ಮತ್ತು ಸಿಕ್ಕಿಂ ಅನ್ನು ಭಾರತದಲ್ಲಿ ವಿಲೀನಗೊಳಿಸಲು ಸಾಧ್ಯವಾದದ್ದು RAW ನಿಂದಾಗಿಯೆ. ಭಾರತೀಯ ಸೇನೆ ಭಾರತದ ಗಡಿ ಕಾಯುವ ಪ್ರತ್ಯಕ್ಷ ಗೋಡೆಯಾದರೆ RAW ದೇಶ ಕಾಯುವ ಅದೃಶ್ಯ ಗೋಡೆ. RAW ನ ಕಣ್ಣು ತಪ್ಪಿಸಿ ಹಕ್ಕಿಯೂ ಭಾರತವನ್ನು ಪ್ರವೇಶಿಸಲಾರದು. ಪ್ರಸ್ತುತ ಈ ಸಂಸ್ಥೆ ದೇಶ ಭಕ್ತ ಮೋದಿ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವುದರಿಂದಾಗಿಯೆ ಭಾರತೀಯರು ನೆಮ್ಮದಿಯ ನಿದ್ರೆ ಮಾಡುವಂತಾಗಿದೆ.

-ಶಾರ್ವರಿ

Tags

Related Articles

FOR DAILY ALERTS
Close