ಪ್ರಚಲಿತ

ನಿಯಂತ್ರಣ ರೇಖೆ ದಾಟಿ ಬಂದ 11 ವರ್ಷದ ಬಾಲಕನನ್ನು ಸಿಹಿ ತಿಂಡಿ ಜೊತೆ ಪಾಕಿಸ್ತಾನಕ್ಕೆ ಮರಳಿಸಿದ ಚಿನ್ನದಂತಹ ಹೃದಯ ಹೊಂದಿರುವ ಭಾರತೀಯ ಸೈನಿಕರ ಹೃದಯವಂತಿಕೆಗೆ ಸಲಾಂ!!

ಭಾರತ-ಪಾಕಿಸ್ತಾನ LOCಯನ್ನು ತಪ್ಪಿನಿಂದ ದಾಟಿ ಬಂದ 11 ವರ್ಷದ ಬಾಲಕನನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸುವ ಮೂಲಕ ಭಾರತೀಯ ಸೇನೆ ಮಾನವೀಯತೆಯ ಪಾಠವನ್ನು ಜಗತ್ತಿಗೇ ಸಾರಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಹನ್ನೊಂದು ವರ್ಷದ ಹುಡುಗನೊಬ್ಬ ಅಜಾಗರೂಕತೆಯಿಂದ ನಿಯಂತ್ರಣ ರೇಖೆಯನ್ನು ದಾಟಿ ಬಂದಿರುತ್ತಾನೆ. ನಾಲ್ಕು ದಿನಗಳ ಬಳಿಕ ಆತನನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಮೊಹಮ್ಮದ್ ಅಬ್ದುಲ್ಲಾ ಎನ್ನುವ ಹುಡುಗನನ್ನು ಜೂನ್ 24 ರಂದು ಪೂಂಚ್ ಜಿಲ್ಲೆಯ ದೇಗ್ವಾರ್ ಪ್ರದೇಶದಲ್ಲಿ ಭಾರತೀಯ ಸೇನೆಯ ಸೈನಿಕರು ಬಂಧಿಸಿದ್ದರು ಮತ್ತು ತಕ್ಷಣವೇ ಜಮ್ಮು ಮತ್ತು ಕಾಶ್ಮೀರ ಪೋಲಿಸರಿಗೆ ಹಸ್ತಾಂತರಿಸಿದ್ದರು. ತದನಂತರ ಮೊಹಮ್ಮದ್ ಪಾಕಿಸ್ತಾನಕ್ಕೆ ಹಿಂದಿರುಗಲು ಬೇಕಾದ ಅಗತ್ಯ ಕ್ರಮಗಳನ್ನು ಜಮ್ಮು-ಕಾಶ್ಮೀರ ಪೋಲೀಸರು ಕೈಗೊಂಡಿದ್ದಾರೆ. ಬಾಲಕನ ಎಳೆ ವಯಸ್ಸನ್ನು ಪರಿಗಣಿಸಿ ಮಾನವೀಯ ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು ಮತ್ತು ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಾಸಾರ್ಹ ವಾತಾವರಣ ನಿರ್ಮಾಣ ಮಾಡಲು ಸೇನೆಯ ಈ ಕ್ರಮ ಸಹಾಯ ಮಾಡುವುದು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ಸಾಮಾನ್ಯ ಸಂಧರ್ಭಗಳಲ್ಲಿ ಗಡಿ ರೇಖೆ ದಾಟಿ ಬಂದ ವ್ಯಕ್ತಿಗಳನ್ನು ಹಿಂದೆ ಕಳುಹಿಸಲಾಗುವುದಿಲ್ಲ. ಅದರಲ್ಲೂ ಭಾರತದಿಂದ ಗಡಿ ರೇಖೆ ದಾಟಿ ಪಾಕಿಸ್ತಾನಕ್ಕೆ ಹೋದ ವ್ಯಕ್ತಿಗಳನ್ನು ಹಿಂದಿರುಗಿಸುವ ಮಾತೆ ಇರುವುದಿಲ್ಲ. ಆತ ಸಾಮಾನ್ಯ ವ್ಯಕ್ತಿ ಆಗಿದ್ದರೂ ಕೂಡಾ ಆತನಿಗೆ ಚಿತ್ರಹಿಂಸೆ ನೀಡಿ ಕೊಲ್ಲುತ್ತದೆ ಪಾಪಿಸ್ತಾನ. ಸರಬ್ಜಿತ್ ಎಂಬ ಅಮಾಯಕನೊಬ್ಬ ಇದೆ ರೀತಿ ತಪ್ಪಿನಿಂದ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿದ್ದಾಗ ಆತನನ್ನು ಬಂಧಿಸಿ, ದಶಕಗಳ ಕಾಲ ಜೈಲಿನಲ್ಲಿ ಕೊಳೆಸಿ, ಆತ ಉಗ್ರನೆಂಬ ಪಟ್ಟ ಕಟ್ಟಿ ಗಲ್ಲಿಗೇರಿಸಿತ್ತು ಪಾಕಿಸ್ತಾನ ಸರಕಾರ.

ಆದರೆ ಭಾರತೀಯ ಸೇನೆ ಮಾತ್ರ ಶತೃತ್ವಕ್ಕಿಂತಲೂ ಮಾನವೀಯತೆ ಮೇಲು ಎಂಬುದನ್ನು ಪಾಕಿಸ್ತಾನಕ್ಕೆ ಕಲಿಸಿ ಕೊಟ್ಟಿದೆ. ಮೊಹಮ್ಮದ್ ಅಬ್ದುಲ್ಲಾ ನನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಿದ ಭಾರತೀಯ ಸೇನೆ ಆತನ ಕೈಯಲ್ಲಿ ಸಿಹಿ ತಿಂಡಿಯ ಪೊಟ್ಟಣ ಮತ್ತು ಆತನಿಗೆ ಒಂದು ಜೊತೆ ಹೊಸ ಬಟ್ಟೆ ಖರೀದಿಸಿ ಕೊಟ್ಟಿದೆ. “ಭಾರತೀಯ ಸೇನೆಯು ಮಾನವೀಯತೆಯೆ ಶಕ್ತಿಯಾಗಿರುವ ತನ್ನ ಸ್ವಭಾವದ ಮೇಲೆ ನಿಂತಿದೆ ಮತ್ತು ಮುಗ್ಧ ನಾಗರಿಕರ ಜೊತೆ ವ್ಯವಹರಿಸುವಾಗ ಸಂವೇದನೆಯನ್ನು ನಿರ್ವಹಿಸುತ್ತದೆ” ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಧನ್ಯೋಸ್ಮಿ!! ನಮ್ಮ ಸೇನೆ ನಮ್ಮ ಹೆಮ್ಮೆ!!

ಪಾಕಿಸ್ತಾನದಂತಹ ದೇಶ ಮಾನವೀಯತೆಗೆ ಲಾಯಕ್ಕಲ್ಲ, ಹಾಗಿದ್ದರೂ ಭಾರತ ಮಾತ್ರ ಎಂದಿಗೂ ತನ್ನ ಮಾನವೀಯತೆಯನ್ನು ಮರೆಯುವುದಿಲ್ಲ. ಎರಡು ದೇಶಗಳ ನಡುವಿನ ಶತೃತ್ವದ ಕಾರಣ ಸಾಮಾನ್ಯ ನಾಗರಿಕರಿಗೆ ತೊಂದರೆ ಕೊಡುವಂತಹ ವಿಕೃತ ಮನಸ್ಸು ಸೇನೆಯದಲ್ಲ. 2015 ರಲ್ಲಿ ಇದೇ ರೀತಿ ಸಮೀರ್ ಕಯಾನಿ ಎಂಬ ಬಾಲಕನೊಬ್ಬ ಗಡಿ ರೇಖೆ ದಾಟಿ ಬಂದಿದ್ದಾಗ ಆತನನ್ನೂ ಭಾರತೀಯ ಸೇನೆ ಪಾಕಿಸ್ತಾನಕ್ಕೊಪ್ಪಿಸಿತ್ತು. ಎರಡು ತಿಂಗಳ ಹಿಂದೆ ಮಾನಸಿಕ ಅಸ್ವಸ್ಥನೊಬ್ಬ ಗಡಿ ದಾಟಿ ಬಂದಿದ್ದ, ಆತನನ್ನೂ ಮರಳಿ ಪಾಕಿಸ್ತಾನಕ್ಕೆ ಕಳುಹಿಸಿತ್ತು ಸೇನೆ. ತಪ್ಪಿ ಬಂದವರನ್ನು ಮರಳಿ ಕಳುಹಿಸಿ ಸೇನೆ ತೆಪ್ಪಗೆ ಕುಳಿತಿರುವುದಿಲ್ಲ, ಬದಲಾಗಿ ಬಾಲಕರು ತಮ್ಮ ಮನೆಗೆ ಸುರಕ್ಷಿತವಾಗಿ ತಲುಪಿದ್ದಾರೆಯೋ ಇಲ್ಲವೋ ಎಂದು ಹಾಟ್ಲೈನ್ ಸಂದೇಶದ ಮೂಲಕ ಖಚಿತ ಪಡಿಸಿಕೊಳ್ಳುತ್ತದೆ!!

ಭಾರತೀಯ ಸೇನೆ ಭಾರತದ ಹೆಮ್ಮೆ. ತಮ್ಮ ಮಾನವೀಯ ಮುಖವನ್ನು ಅನಾವರಣಗೊಳಿಸುತ್ತಿರುವ, ಚಿನ್ನದಂತಹ ಹೃದಯ ಹೊಂದಿರುವ ಭಾರತೀಯ ಸೈನಿಕರಿಗೊಂದು ಸಲಾಂ… ನಿಶಸ್ತ್ರರ ಮೇಲೆ ಶಸ್ತ್ರ ಎತ್ತಬೇಡ ಎನ್ನುತ್ತದೆ ಸನಾತನ ಧರ್ಮ. ಸನಾತನ ಭಾರತದ ಮೂಲ ಬೇರುಗಳಿಗೆ ಅಂಟಿಕೊಂಡಿರುವ ಸೇನೆ ತನ್ನ ಈ ದೈವೀ ಗುಣಗಳಿಂದಾಗಿಯೆ ಸದಾ ಅಜೇಯವಾಗಿದೆ.

-ಶಾರ್ವರಿ

Tags

Related Articles

Close