ಅಂಕಣಪ್ರಚಲಿತ

ಕೇವಲ 7 ತಿಂಗಳಲ್ಲಿ 122 ಭಯೋತ್ಪಾದಕರನ್ನು ಸ್ವರ್ಗಕ್ಕೆ ಕಳುಹಿಸಿದ ಭಾರತೀಯ ಯೋಧರು. ಶತ್ರುಗಳಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ಭಾರತದ ತ್ರಿಮೂರ್ತಿಗಳು!!

ಒಂದು ಉದಾಹರಣೆಯ ಮೂಲಕ ಈ ವಿಚಾರವನ್ನು ಪ್ರಾರಂಭಿಸುತ್ತೇನೆ :

ಅದು ಸಪ್ಟೆಂಬರ್ 13, 2013. ಕರಾಚಿಯ ಸುತ್ತಮುತ್ತಲೂ ಭಾರತದ ಗುಪ್ತಚರ ಇಲಾಖೆ ತನ್ನ ಸೈನಿಕರನ್ನು ನಿಯೋಜಿಸಿ ತಯಾರಾಗಿತ್ತು. ಆದರೆ ದಾವೂದ್ ಇಬ್ರಾಹಿಮ್ ಅವರನ್ನು ಬಂಧಿಸುವ ಕಾರ್ಯಾಚರಣೆ ಸಫಲಗೊಳಿಸುವ ಕೆಲವೇ ಸಮಯಗಳ ಮುಂಚೆ ಅವರನ್ನು ಹಿಂದಕ್ಕೆ ಕರೆಸಲಾಯಿತು.

ಹಾಗಾದರೆ ಈ ಕಾರ್ಯಾಚರಣೆ ಸ್ಥಗಿತಗೊಂಡದ್ದು ಯಾಕೆ ?

ಉತ್ತರ ಬಹಳ ಸುಲಭ.

ರಾಜಕೀಯ ಇಚ್ಛಾಶಕ್ತಿ ಪ್ರಬಲವಾಗಿಲ್ಲದೇ ಇದ್ದುದು.

ಭಾರತೀಯ ಗುಪ್ತಚರ ಇಲಾಖೆ ಹಾಗೂ ಭಾರತೀಯ ಸೇನೆ ಶತ್ರುಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ಸನ್ನು ಪಡೆದೇ ಪಡೆಯುತ್ತಾರೆ ಅನ್ನುವುದು ನಿಶ್ಚಿತವೇ. ಇಲ್ಲಿ ಕೊರತೆಯಿದ್ದುದು ಭಾರತದ ರಾಜಕಾರಣಿಗಳ ರಾಜಕೀಯ ಇಚ್ಛಾಶಕ್ತಿ. 1962 ರ ನಡೆದ ಭಾರತ-ಚೀನಾ ಯುದ್ಧ, ಕಹುತಾ ಬ್ಲಂಡರ್ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಭಾರತ ಅತ್ಯಂತ ಕಳಪೆ ನಾಯಕತ್ವವನ್ನು ಪಡೆದಿತ್ತು. ಆದ ಕಾರಣವೇ ಭಾರತ ಸೋಲುವ ಪರಿಸ್ಥಿತಿ ನಿರ್ಮಾಣವಾಯಿತು.

ಆದರೆ ಈಗ ಆ ಚಿತ್ರಣ ಬದಲಾಗಿದೆ. ಭಾರತದ ತ್ರಿಮೂರ್ತಿಗಳ ನಿಜವಾದ ನಾಯಕತ್ವದಿಂದಾಗಿ ಭಾರತೀಯ ಸೇನೆಗೆ ಆನೆ ಬಲವನ್ನು ತಂದುಕೊಟ್ಟಿದ್ದಲ್ಲದೇ ಪ್ರತಿಯೊಂದು ಹಂತದಲ್ಲಿಯೂ ಭಾರತವನ್ನು ವಿಶ್ವವೇ ಗೌರವಿಸುವ ಮಟ್ಟಿಗೆ ಬೆಳೆದಿದು ನಿಂತಿದೆ.

ಶ್ರೀ ನರೇಂದ್ರ ಮೋದಿ – ಪ್ರಬಲ ಇಚ್ಛಾಶಕ್ತಿಯುಳ್ಳ ನಿರ್ಭಯತೆಯ ಪ್ರಚಂಡ ದಂಡನಾಯಕ!

ಪ್ರಸ್ತುತ ಭಾರತದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೋದಿಜೀಯವರು ಮತ ರಾಜಕಾರಣಕ್ಕೆ ತಲೆಬಾಗದೇ ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಟ್ಟಹಾಸ ಗೈಯ್ಯುತ್ತಿದ್ದ ಭಯೋತ್ಪಾದಕರನ್ನು ಮಟ್ಟಹಾಕಲು ಕೆಲವು ಕಠಿಣ ನಿರ್ಧಾರವನ್ನು ಕೈಗೊಂಡಿದ್ದಾರೆ.

ಶ್ರೀ ಅಜಿತ್ ದೋವಲ್ – ಭಾರತೀಯ ಸೇನೆಯ ಕಾರ್ಯಾಚರಣೆಯ ಪ್ರಮುಖ ತಂತ್ರಜ್ಞ!

ಭಾರತ ನಡೆಸಿದ ಅನೇಕ ಕಾರ್ಯಾಚರಣೆಯ ರೂವಾರಿ ಶ್ರೀ ಅಜಿತ್ ದೋವಲ್. ತನ್ನ ಸಾಮಥ್ರ್ಯವನ್ನು ಅನೇಕ ಬಾರಿ ಸಾಬೀತು ಪಡಿಸಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಶ್ರೀ ಬಿಪಿನ್ ರಾವತ್ – ಎಲ್ಲಾ ಯೋಜನೆಗಳ ಕರ್ತೃ!

ಭಾರತೀಯ ಸೇನೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅರ್ಹತೆಯ ಆಧಾರದ ಮೇಲೆ ಈ ಬಾರಿ ಸೇನಾ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗಿತ್ತು. ಅನೇಕ ಸೇನಾ ಕಾರ್ಯಾಚರಣೆಯಲ್ಲಿ ಉತ್ತಮವಾಗಿ ನಿರ್ವಹಿಸಿದ ಅನುಭವ ಇವರಿಗಿದೆ. ಅಲ್ಲದೇ ಬಹಳ ಚಾಣಾಕ್ಷ ನಡೆಯ ಮೂಲಕ ಜನಮನವನ್ನು ಗೆದ್ದವರು ಜನರಲ್ ರಾವತ್. ರಾವತ್ ಅವರ ನೇತೃತ್ವದಲ್ಲಿ ಭಾರತೀಯ ಸೇನೆ ಬಹಳಷ್ಟು ಕಾರ್ಯಾಚರನೆಯನ್ನು ಕೈಗೊಂಡು ಯಶಸ್ಸನ್ನು ಸಾಧಿಸಿವೆ.

1. ಪಾಕಿಸ್ತಾನ ಮೇಲೆ ಸೀಮಿತ ದಾಳಿ.
2. ಮಯಾನ್ಮಾರ್ ಮೇಲೆ ಸೀಮಿತ ದಾಳಿ.
3. ಕಳೆದ 7 ತಿಂಗಳಲ್ಲಿ ಸುಮಾರು 177 ಭಯೋತ್ಪಾದಕರನ್ನು ಭಾರತೀಯ ಸೇನೆ ಈ ಭೂಮಿಯಿಂದ ಬೀಳ್ಕೊಟ್ಟಿದ್ದಾರೆ.
4. ಡೋಕ್ಲಾನ್ ವಿಚಾರದಲ್ಲಿ ಸ್ಥಿರವಾದ ನಿರ್ಧಾರವನ್ನು ಕೈಗೊಂಡಿರುವುದು.

ಇದೆಲ್ಲ ವಿಚಾರಗಳನ್ನು ವಿಮರ್ಶಿಸಿದ ನಂತರ ಒಂದು ಸಂಗತಿಯಂತೂ ಸ್ಪಷ್ಟವಾಗಿ ಅರಿವಾಗುತ್ತದೆ. ಭಾರತೀಯ ಸೇನೆ ಇಂದು ಸಾಧಿಸುತ್ತಿರುವುದಕ್ಕೆ, ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸನ್ನು ಕಾಣುತ್ತಿರುವುದಕ್ಕೆ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿಯೇ ಕಾರಣ.

– postcard team

Tags

Related Articles

Close