ಪ್ರಚಲಿತ

ಗಡಿ ರಕ್ಷಣೆಯಾಯಿತ್ತು, ಈಗ ಪಾಪ ಕಳೆಯುವ ಗಂಗೆಯ ರಕ್ಷಣೆಗೆ ನಿಂತಿದ್ದಾರೆ ಭಾರತೀಯ ಯೋಧರು!! 

“ಮಾತೆ ಗಂಗೆಯ ಸೇವೆ ಸಲ್ಲಿಸುವುದು ನನ್ನ ಪುಣ್ಯ” ಎಂದು 2014ರ ಮೇ ತಿಂಗಳಿನಲ್ಲಿ ಉತ್ತರ ಪ್ರದೇಶದ ಗಂಗಾ ನದಿ ತಟದಲ್ಲಿರುವ ವಾರಣಾಸಿಯಿಂದ ಸಂಸತ್ತಿಗೆ ಆಯ್ಕೆಯಾದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ ಮಾತಿದು!! ಆದರೆ ಇದೀಗ, ಭಾರತೀಯ ಜೀವನದಿ, ಹಿಂದೂಗಳ ಶ್ರದ್ಧಾ ಭಕ್ತಿಯ ಪುಣ್ಯ ನದಿ ಗಂಗಾ ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಭಾರತೀಯ ರಕ್ಷಣಾ ಪಡೆಯ ನಿವೃತ್ತ ಯೋಧರು ಮುಂದಾಗಿದ್ದಲ್ಲದೇ ವಿಶೇಷ ತಂಡವನ್ನು ರಚಿಸಿಕೊಂಡಿದ್ದಾರೆ!!

ಈಗಾಗಲೇ ತಮ್ಮ ಜೀವನದ ಪ್ರಮುಖ ಘಟ್ಟವನ್ನು ದೇಶದ ಗಡಿ ಕಾಯುವುದರಲ್ಲಿ ಕಳೆದಿದ್ದ ಯೋಧರು, ಸೇವೆಯಿಂದ ನಿವೃತ್ತಿಯಾದರೂ ಕೂಡ ಅವರೀಗ ವಿಶ್ರಾಂತ ಜೀವನವನ್ನು ಅನುಭವಿಸುತ್ತ ಹಾಯಾಗಿ ಕಾಲ ಕಳೆಯುತ್ತಿಲ್ಲ. ಬದಲಾಗಿ ಪವಿತ್ರ ನದಿ ಗಂಗಾ ರಕ್ಷಣೆ ಕೈಂಕರ್ಯಕ್ಕೆ ಟೊಂಕ ಕಟ್ಟಿದ್ದಾರಲ್ಲದೇ ಈ ಮೂಲಕ ತಮ್ಮ ತನು ಮನ ಸದಾ ದೇಶ ಸೇವೆಗೆ ಮೀಸಲು ಎಂಬ ಸಂದೇಶವನ್ನೂ ಸಾರುತ್ತಿದ್ದಾರೆ.

ಭಾರತದಲ್ಲಿ ಹಿಂದೂ ಜನರು ಗಂಗಾ ನದಿ ನೀರನ್ನು ಬ್ರಹ್ಮ ದಿವ್ಯ ಅಥವಾ ದೈವಾಮೃತ ಎಂದು ನಂಬುತ್ತಾರೆ. ಗಂಗಾ ನದಿ ನೀರಿನಲ್ಲಿ ಮುಳುಗೆದ್ದರೆ ಪಾಪಗಳೆಲ್ಲಾ ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ. ಜೀವನದ ಹುಟ್ಟು-ಸಾವಿನ ಚಕ್ರದಿಂದ ಮುಕ್ತಿ ಸಿಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಇಂತಹ ಪವಿತ್ರ ಗಂಗೆಯ ನೀರು ಕಾನ್ಪುರದಲ್ಲಿ ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿರುವ ಚರ್ಮ ಸಂಸ್ಕರಣಾ ಘಟಕಗಳಿಂದಾಗಿ ಗಂಗಾ ನದಿಗೆ ಅಗಾಧ ಪ್ರಮಾಣದ ವಿಷ ಸೇರ್ಪಡೆಗೊಳ್ಳುತ್ತಿರುವ ಪರಿಣಾಮ ಗಂಗೆಯ ನೀರು ಕಲುಷಿತ ಗೊಂಡಿದೆ. 

ನದಿಯನ್ನು ರಕ್ಷಿಸಲು ಭಾರತೀಯ ಸೇನೆ ರಚಿಸಿದೆ ವಿಶೇಷ ಟಾಸ್ಕ್  ಫೋರ್ಸ್!!

ಈಗಾಗಲೇ ಕೇಂದ್ರ ಸರಕಾರವು ಗಂಗಾ ಶುದ್ಧೀಕರಣಕ್ಕಾಗಿ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ‘ಕ್ಲೀನ್ ಗಂಗಾ’ ಯೋಜನೆ ರೂಪಿಸಲಾಗಿದ್ದು, ಸುಮಾರು 100 ಪ್ರದೇಶಗಳಲ್ಲಿ ನಮಾಮಿ ಗಂಗಾ ಯೋಜನೆ ಅಡಿಯಲ್ಲಿ 231 ಯೋಜನೆಗಳು ಜಾರಿಗೊಂಡಿವೆ. ನದಿ ಶುದ್ಧೀಕರಣಕ್ಕಾಗಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಅನಿಯಂತ್ರಿತ ನೀರಿನ ಹರಿವು ನಿಯಂತ್ರಣ ಸೇರಿದಂತೆ ಒಟ್ಟಾರೆ 300 ಯೋಜನೆಗಳು ‘ನಮಾಮಿ ಗಂಗೆ’ಯಲ್ಲಿ ಸೇರಿರುವ ವಿಚಾರ ಗೊತ್ತೇ ಇದೆ!!

ಆದರೆ ಇದರ ಬೆನ್ನಲ್ಲೇ, ವಾರಾಣಾಸಿ, ಪ್ರಯಾಗ ಹಾಗೂ ಕಾನ್ಪುರದಲ್ಲಿ ಗಂಗಾ ನದಿ ತಟದಲ್ಲಿ ಕಸ ಹಾಕುವವರಿಂದ ನದಿಯನ್ನು ರಕ್ಷಿಸಲು ಭಾರತೀಯ ಸೇನೆ ವಿಶೇಷ ಟಾಸ್ಕ್ ಫೆÇೀರ್ಸ್ ರಚಿಸಿದ್ದು, ಗಂಗಾ ಟಾಸ್ಕ್ ಫೋರ್ಸ್ ಎಂದು ನಾಮಕರಣ ಮಾಡಲಾಗಿದೆ. ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸಿರುವ ಮಾಜಿ ಯೋಧರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳುವ ಸ್ವಾಭಾವಿಕ ಆಯ್ಕೆಯಾಗಿದೆ. ಗಂಗಾ ಶುದ್ಧೀಕರಣದಲ್ಲಿ ಹೆಚ್ಚಿನ ಜನರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಮಣ್ಣಿನ ಸವೆತ ತಡೆಗಟ್ಟಲು ದಡದಲ್ಲಿ ಮರ ನೆಡುವುದರಲ್ಲೂ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಗಂಗಾ ಶುದ್ಧೀಕರಣ ಅಭಿಯಾನದ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ತಿಳಿಸಿದ್ದಾರೆ.

ಹೌದು… ಗಂಗಾ ನದಿ ರಕ್ಷಣೆ ಉದ್ದೇಶದಿಂದ ಭಾರತೀಯ ಸೇನೆ, 9 ಅಧಿಕಾರಿಗಳು ಹಾಗೂ 29 ಜೆಸಿಒಗಳು ಸೇರಿದಂತೆ 532 ಮಾಜಿ ಸೈನಿಕರನ್ನೊಳಗೊಂಡ ‘ಗಂಗಾ ಟಾಸ್ಕ್ ಫೋರ್ಸ್’ ಹೆಸರಿನ ಬೆಟಾಲಿಯನ್‍ನ್ನು ರಚಿಸಿದೆ. ಗಂಗೆಯ ರಕ್ಷಣೆಗಾಗಿ ನಿಯೋಜನೆಗೊಳ್ಳಲಿರುವ ಈ ಮಾಜಿ ಯೋಧರು ಅಲಹಾಬಾದ್, ವಾರಾಣಸಿ ಮತ್ತು ಕಾನ್ಪುರ್‍ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ದೇವನದಿಯ ರಕ್ಷಣೆ, ಸ್ವಚ್ಛತೆಯ ಹೊಣೆ ಹೊರಲಿರುವ ಇವರು, ಜನರು ನದಿಯಲ್ಲಿ ಕಸ ಎಸೆಯದಂತೆ ಎಚ್ಚರಿಸುವ ಕೆಲಸವನ್ನು ಸಹ ಮಾಡಲಿದ್ದಾರೆ. ಸದ್ಯ 200 ಮಾಜಿ ಸೈನಿಕರಿಗೆ ಅಲಹಾಬಾದ್‍ನಲ್ಲಿ ತರಬೇತಿ ನೀಡಲಾಗುತ್ತಿದೆ.

ಲಕ್ಷ ಸಸಿಗಳನ್ನೊಳಗೊಂಡ ನರ್ಸರಿಯನ್ನು ಅಭಿವೃದ್ಧಿ ಪಡಿಸಿದ ಟಾಸ್ಕ್ ಫೋರ್ಸ್!!

ತರಬೇತಿ ಮೂಲಕ ನಿಯೋಜನೆಗೊಳ್ಳುವ ಯೋಧರು ‘ಗಂಗಾ ಟಾಸ್ಕ್ ಫೋರ್ಸ್’ನಲ್ಲಿ 3 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ‘ಎಂಥ ಕಠಿಣ ಸನ್ನಿವೇಶಗಳಲ್ಲಿ ಸಹ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿರುತ್ತಾರೆ ಎಂಬ ಕಾರಣಕ್ಕೆ ಸೈನಿಕರನ್ನು ಗಂಗಾ ರಕ್ಷಣೆ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ’ ಎಂದು ಸ್ವಚ್ಛ ಗಂಗಾ ರಾಷ್ಟ್ರೀಯ ಅಭಿಯಾನದ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ತಿಳಿಸಿದ್ದಾರೆ.

ಸ್ವಚ್ಛ ಗಂಗಾ ಅಭಿಯಾನದಡಿಯಲ್ಲಿ ಜಿಲ್ಲಾ ಸಮಿತಿಗಳೊಂದಿಗೆ ಯೋಧರು ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ನಿಯೋಜನೆಗೊಂಡಿರುವ ಅಲಹಾಬಾದ್ ಟಾಸ್ಕ್ ಫೋರ್ಸ್ ಅಂದಾಜು ಒಂದು ಲಕ್ಷ ಸಸಿಗಳನ್ನೊಳಗೊಂಡ ನರ್ಸರಿಯನ್ನು ಅಭಿವೃದ್ಧಿ ಪಡಿದ್ದು, 15 ಲಕ್ಷ ಬೀಜದ ಚೆಂಡು (ಸೀಡ್ ಬಾಲ್) ಗಳನ್ನು ಸಿದ್ಧಪಡಿಸಿದೆ. ಯೋಧರ ನಿಯೋಜನೆ ಯಾತ್ರಾರ್ಥಿಗಳಲ್ಲಿ ಶಿಸ್ತು ತರುವುದರಲ್ಲಿ ಅನುಮಾನವಿಲ್ಲ ಎನ್ನುವ ಮಿಶ್ರಾ, ಬದಲಾವಣೆಯ ಭರವಸೆ ವ್ಯಕ್ತ ಪಡಿಸುತ್ತಾರೆ. 

Related image

ಒಟ್ಟಿನಲ್ಲಿ, ಹಿಂದೂಗಳ ಪವಿತ್ರ ನದಿಯೆಂದೇ ಪ್ರಖ್ಯಾತಿ ಪಡೆದಿರುವ ಗಂಗಾ ನದಿ ನೀರನ್ನು ಬ್ರಹ್ಮ ದಿವ್ಯ ಅಥವಾ ದೈವಾಮೃತ ಎಂದು ನಂಬುತ್ತಾರೆ. ಗಂಗಾ ನದಿ ನೀರಿನಲ್ಲಿ ಮುಳುಗೆದ್ದರೆ ಪಾಪಗಳೆಲ್ಲಾ ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಿರುವ ಅಸಂಖ್ಯಾತ ಜನರು, ತಮ್ಮ ಜೀವನದ ಹುಟ್ಟು-ಸಾವಿನ ಚಕ್ರದಿಂದ ಮುಕ್ತಿ ಸಿಗುತ್ತದೆ.ಎಂದೂ ನಂಬಿದ್ದ ಕಾಲಾವೊಂದಿತ್ತು. ಆದರೆ ಆ ಕಾಲ ಇದೀಗ ಈ ಟಾಸ್ಕ್ ಫೋರ್ಸ್‍ನ ಮೂಲಕ ಮತ್ತೆ ಮರುಕಳಿಸಲಿರುವುದೇ ಸಂತಸದ ವಿಚಾರ!!

ಮೂಲ: https://tulunadunews.com/tnn14098

– ಅಲೋಖಾ

Tags

Related Articles

Close