ಅಂಕಣ

ಪಾಕಿಸ್ಥಾನ ಪರಮಾಣು ಶಕ್ತಿ ಗಳಿಸುವುದನ್ನು ಇಂದಿರಾ ಗಾಂಧಿ ತಪ್ಪಿಸಬಹುದಿತ್ತಾದರೂ ಆಕೆ ತಪ್ಪಿಸಲಿಲ್ಲ! ಯಾಕೆ ಗೊತ್ತೇ?!

ಭಾರತ ಮತ್ತು ಪಾಕಿಸ್ತಾನವು ಜಗತ್ತಿನ ಪ್ರಮುಖ ಪ್ರತಿಸ್ಪರ್ಧಿ ರಾಷ್ಟ್ರಗಳಲ್ಲಿ ಒಂದಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ ಕೂಡ, ಕಳೆದ ಏಳು ದಶಕಗಳ ನಡುವೆ ಈ ಎರಡು ದೇಶಗಳು 3 ಪ್ರಮುಖ ಯುದ್ದಗಳು ಮತ್ತು ಹತ್ತು ಹಲವಾರು ಸಣ್ಣಪುಟ್ಟ ಚಕಮಕಿಗಳನ್ನು ಎದುರಿಸಿವೆ!!! ಅದಷ್ಟೇ ಅಲ್ಲದೇ ಈ ಎರಡು ರಾಷ್ಟ್ರಗಳು ಕೂಡ ಪರಮಾಣು ಶಕ್ತಿಗಳು ಹೊಂದಿರುವ ರಾಷ್ಟ್ರಗಳಾಗಿದ್ದಲ್ಲದೇ ದಕ್ಷಿಣ ಏಷ್ಯಾವನ್ನು ನಾಶಪಡಿಸುವಷ್ಟು ಪರಮಾಣು ಬಾಂಬ್‍ಗಳನ್ನು ಹೊಂದಿದೆ!!

ಹೌದು… ಇಷ್ಟೆಲ್ಲಾ ಶಕ್ತಿ ಸಾಮಥ್ರ್ಯಗಳನ್ನು ತುಂಬಿರುವಾಗ, ನಮ್ಮ ಹಿಂದಿನ ಸರಕಾರಗಳು ಪಾಕಿಸ್ತಾನದಂತಹ ರಾಕ್ಷಸತ್ವ ತುಂಬಿರುವ ದೇಶವು ಪರಮಾಣು ಶಕ್ತಿಯಲ್ಲಿ ಉನ್ನತ ಸ್ಥಿತಿಯನ್ನು ತಲುಪಲು ಅವಕಾಶ ನೀಡಿದ್ದಾರೂ ಯಾಕೆ?? ಅಷ್ಟೇ ಅಲ್ಲದೇ, ಪಾಕಿಸ್ತಾನದ ಪರಮಾಣು ಶಕ್ತಿಯನ್ನು ಕೆಡವಲು ಹಿಂದೆ ಯಾವುದೇ ಅವಕಾಶಗಳು ಇದ್ದಿಲ್ಲವೇ? ಎನ್ನುವ ಪ್ರಶ್ನೆಗಳು ಅನೇಕರಲ್ಲಿ ಉದ್ಭವಿಸಿದೆ. ಆದರೆ ಇದಕ್ಕೆಲ್ಲ ಉತ್ತರ ನೀಡುವುದಾದರೆ, ಪಾಕಿಸ್ತಾನದ ಶಕ್ತಿಯನ್ನು ಕುಗ್ಗಿಸಲು ಹಾಗೂ ಮಟ್ಟಹಾಕಲು ಅವಕಾಶಗಳು ಇದ್ದವು!! ಆದರೆ ಕೇವಲ ಒಂದು ಅವಕಾಶವಲ್ಲ, ಬದಲಿಗೆ ಹಲವಾರು ಅವಕಾಶಗಳೇ ಇದ್ದವು!!

ಆದರೆ, ಈ ಬಗ್ಗೆ ಇತ್ತೀಚೆಗೆ ಯುಎಸ್ ಸ್ಟೇಟ್ ಡಿಪಾಟ್ರ್ಮೇಂಟ್‍ನಲ್ಲಿ, 1984-85ರಲ್ಲಿ ನಡೆದ ಘಟನೆಗಳ ಬಗ್ಗೆ ರಹಸ್ಯವಾದ ದಾಖಲೆಗಳನ್ನು ಬಹಿರಂಗಪಡಿಸಿದೆ!! ಆ ದಾಖಲೆಯಲ್ಲಿ ಪಾಕಿಸ್ತಾನದ ನ್ಯೂಕ್ಲಿಯರ್ ಪ್ರೋಗ್ರಾಂನ್ನು ಕೇಂದ್ರೀಕರಿಸಿರುವ ಬಗ್ಗೆಯೂ ಮಾಹಿತಿಯನ್ನು ಹೊರಹಾಕಲಾಗಿದೆ!! ಅಷ್ಟೇ ಅಲ್ಲದೇ, ಈ ರಹಸ್ಯ ದಾಖಲೆಗಳು ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಜನರಲ್ ಜಿಯಾ-ಉಲ್ಹಾಕ್ ಗೆ ಬರೆದಿರುವ ಪತ್ರದಲ್ಲಿ ಸಿಕ್ಕ ದಾಖಲೆಗಳಾಗಿವೆ. ಈ ದಾಖಲೆಗಳು ತೋರಿಸಿದಂತೆ, ಕಹುತಾದಲ್ಲಿರುವ ಪಾಕಿಸ್ತಾನಿ ಪರಮಾಣು ಅಣುಕೇಂದ್ರದ ಮೇಲೆ ಭಾರತೀಯ ಮಿಲಿಟರಿ ಪಡೆ ಸಂಭಾವ್ಯ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಯುಎಸ್, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ!!

ಆದರೆ ಈ ಬಗ್ಗೆ ಅಮೇರಿಕಾ ಮಾತ್ರವೇ ಎಚ್ಚರಿಕೆಯ ಕರೆಯನ್ನು ನೀಡಿಲ್ಲ ಬದಲಾಗಿ, ಸೋವಿಯತ್ ಒಕ್ಕೂಟವು ಈ ಬೆಳವಣಿಗೆಯ ಬಗ್ಗೆ ಹಾಗೂ ಅದರ ವಿಘಟಿತ ದಾಖಲೆಗಳ ಆಧಾರದ ಮೇಲೆ ಈ ಎಲ್ಲಾ ವಿಚಾರಗಳನ್ನು ಅರಿತುಕೊಂಡಿತ್ತು!! ರಷ್ಯಾಚೆಂಕೋ ಹೇಳುವ ಮಾಹಿತಿಯ ಪ್ರಕಾರ, ಹಂಗೇರಿಯನ್ ದಾಖಲೆಗಳು ತೋರಿಸುವಂತೆ, ಸೋವಿಯತ್ ರಾಷ್ಟ್ರವು ಹಂಗೇರಿಯನ್ನರೊಂದಿಗೆ ಭಾರತವು ಕಹುತಾವನ್ನು ಆಕ್ರಮಿಸುವ ಯೋಜನೆಗಳನ್ನು ಹಾಕಿಕೊಂಡಿದೆ ಎನ್ನುವುದನ್ನು ಮೊದಲೇ ಹಂಚಿಕೊಂಡಿತ್ತು ಎನ್ನುವುದನ್ನು ಈ ದಾಖಲೆಗಳಲ್ಲಿ ತೋರಿಸಿದೆ.

ಈ ಒಂದು ದಾಖಲೆಯೂ ಇಂತಹ ಬೆಳವಣಿಗೆಯ ರಹಸ್ಯಗಳ ಮಾಹಿತಿಗಳನ್ನು ಬಹಿರಂಗಪಡಿಸಿದ್ದಲ್ಲದೇ, ಮಾರ್ಚ್ 1982ರಲ್ಲಿ ಭಾರತೀಯ ಸೇನಾ ಸಲಹೆಗಾರರು ಈ ದಾಳಿಯ ಬಗ್ಗೆ ಪ್ರಸ್ತಾಪಿಸಿದಾಗ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಈ ದಾಳಿಯನ್ನು ತಿರಸ್ಕರಿಸಿದ್ದರು ಎಂದು ಹೇಳಿದೆ!!

ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಸೌಕರ್ಯಗಳ ಬಗ್ಗೆ ಒಪ್ಪಂದವನ್ನು ಮಾಡಿಕೊಳ್ಳಲು ತಿರ್ಮಾನಿಸಿತ್ತು!! 1985ರಲ್ಲಿ ಈ ಬಗ್ಗೆ ಮೊದಲ ಮಾತುಕತೆ ನಡೆಯಿತಲ್ಲದೇ, ತದನಂತರದಲ್ಲಿ 1988ರಲ್ಲಿ ಔಪಚಾರಿಕವಾಗಿ ಸಹಿ ಹಾಕಿದ್ದು, ಇದನ್ನು 1991ರಲ್ಲಿ ಅಂಗೀಕರಿಸಲಾಯಿತು!! ಹಾಗಾಗಿ 1992ರಿಂದ ಭಾರತ ಮತ್ತು ಪಾಕಿಸ್ತಾನಗಳು ಪ್ರತಿ ವರ್ಷ ಜನವರಿ 1 ರಂದು, ತಮ್ಮ ಪರಮಾಣು ಸೌಕರ್ಯಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ.

ಬಹಳ ಕುತೂಹಲಕಾರಿಯಾದ ಸಂಗತಿಯೆಂದರೆ, 1980ರ ದಶಕದಲ್ಲಿ ಕಹುತಾವನ್ನು ಭಾರತ ಆಕ್ರಮಣ ಮಾಡಲು ಎಷ್ಟು ಹತ್ತಿರವಾಗಿತ್ತು ಎಂದು ತಿಳಿದರೆ ಆಶ್ಚರ್ಯಕರವಾಗಬಹುದು !! ಹೌದು… ಆದರೆ 1981ರಲ್ಲಿಯೇ ಇಂತಹ ಆಕ್ರಮಣಕಾರಿಯಾದ ಯುದ್ದವನ್ನು ಭಾರತ ಯಾಕೆ ಯೋಜಿಸಿತ್ತು ಎಂದರೆ, ಜೂನ್ 7, 1981ರಲ್ಲಿ ಇಸ್ರೇಲ್, ಇರಾಕಿನ ಒಸಿರಾಕ್‍ನಲ್ಲಿರುವ ನಿರ್ಮಾಣ ಹಂತದ ಪರಮಾಣು ಅಣುಕೇಂದ್ರದ ಮೇಲೆ ದಾಳಿಯನ್ನು ನಡೆಸಿತ್ತು.

ಆ ಸಂದರ್ಭದಲ್ಲಿ ಇಸ್ರೆಲ್‍ನ ವಾಯುಪಡೆ ಏಯ್ಟ್ ಎಫ್-16 ವಿಮಾನಗಳು ಮೂರು ಶತ್ರು ರಾಷ್ಟ್ರಗಳ ಮೇಲೆ ತಾವು ನಿಂತ ಜಾಗದಿಂದ 600 ಮೈಲಿಗಿಂತಲೂ ಹೆಚ್ಚಿನ ದೂರಕ್ಕೆ ಗುರಿಯಾಗಿಸಿ ನಾಶಮಾಡಿ, ಸುರಕ್ಷತೆಯಿಂದ ಹಿಂತಿರುಗಿದ್ದರು ಅಲ್ಲದೇ, ಇದನ್ನು ಶತ್ರು ರಾಷ್ಟ್ರಗಳ ಮೇಲೆ ಸರ್ಜಿಕಲ್ ದಾಳಿ ಎಂದು ಪರಿಗಣಿಸಲಾಗಿದೆ !! ಈ ಪ್ರೇರಣೆಯನ್ನು ಪಡೆದುಕೊಂಡ ಭಾರತ ಸರಕಾರವು ಇದೇ ರೀತಿಯ ಕೆಲಸವನ್ನು ಮಾಡಲು ಯೋಜಿಸಿತ್ತು!!

ಹಾಗಾಗಿ, ಈ ಬಗ್ಗೆ ಜಾಗ್ವಾರ್ ಇಂಡಿಯನ್ ಏರ್ ಫೋರ್ಸ್(ಐಎಎಫ್) ಜೂನ್ 1981ರಲ್ಲಿ ಕಹತಾ ಪರಮಾಣು ಸ್ಥಾವರದ ಮೇಲೆ ಸರ್ಜಿಕಲ್ ದಾಳಿಯನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಸಂಕ್ಷಿಪ್ತ ಅಧ್ಯಯನವನ್ನು ನಡೆಸಿ, ಮಾಹಿತಿಯನ್ನು ಬಹಿರಂಗಪಡಿಸಿತ್ತು!! ಕಹುತಾವನ್ನು ಭಾರತ ಮಿಲಿಟರಿ ಪಡೆ ಬಹಳ ವಿಶ್ವಾಸದಿಂದ ” ಆಕ್ರಮಣ ಮತ್ತು ತಟಸ್ಥಗೊಳಿಸಬಹುದು” ಎಂದು ತಮ್ಮ ಅಧ್ಯಯನಗಳ ಮೂಲಕ ಒಂದು ತೀರ್ಮಾನಕ್ಕೆ ಬಂದಿದ್ದರು.

ಆದರೆ ರಾಜಕೀಯ ನಾಯಕರು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಪೂರ್ಣ ಯುದ್ದಕ್ಕೆ ಕಾರಣವಾಗಬಹುದೆಂಬ ಭೀತಿಯಿಂದ ಯಾವುದೇ ದುರ್ಘಟನೆ ನಡೆಯಲು ಬಿಡಲಿಲ್ಲ!! ಅಷ್ಟೇ ಅಲ್ಲದೇ ಪಾಕಿಸ್ತಾನವು ಪ್ರತೀಕಾರ ತೀರಿಸಲು ಭಾರತೀಯ ಪರಮಾಣು ಸೌಕರ್ಯಗಳ ಮೇಲೆ ದಾಳಿ ನಡೆಸಲು ಪ್ರೇರೆಪಿಸಬಹುದು ಎಂದು ಹೆದರಿದರು!!

ಗೌಪ್ಯ ದಾಖಲೆಗಳ ಪ್ರಕಾರ, ಕಹುತಾದ ಮೇಲೆ ಸರ್ಜಿಕಲ್ ದಾಳಿಯನ್ನು ನಡೆಸಲು ಮತ್ತು ವಾಯು ರಕ್ಷಣೆಯನ್ನು ತಟಸ್ಥಗೊಳಿಸಲು ಸಿದ್ದವಾಗಿತ್ತು!! ಅದಕ್ಕಾಗಿ ಎಲೆಕ್ಟ್ರಾನಿಕ್ ಯುದ್ದ ಸಾಧನಗಳನ್ನು ಖರೀದಿಸಲು ಭಾರತೀಯ ಮಿಲಿಟರಿ ಅಧಿಕಾರಿಗಳು ಫೆಬ್ರವರಿ 1983ರಲ್ಲಿ ರಹಸ್ಯವಾಗಿ ಇಸ್ರೇಲ್‍ಗೆ ಪ್ರಯಾಣ ಬೆಳೆಸಿದರು ಎಂದು ಕಂಡುಬಂದಿದೆ.

ಅಷ್ಟೇ ಅಲ್ಲದೇ ಮಿಗ್-23 ವಿಮಾನದ ಬಗ್ಗೆ ಕೆಲವು ವಿವರಗಳನ್ನು ಭಾರತೀಯರಿಗೆ ಒದಗಿಸಿದ್ದಲ್ಲದೇ, ಇಸ್ರೇಲ್ ಎಫ್-16 ವಿಮಾನದ ತಾಂತ್ರಿಕ ವಿವರಗಳನ್ನು ಭಾರತಕ್ಕೆ ನೀಡಿದೆ. ಸರ್ಜಿಕಲ್ ಕಾರ್ಯತಂತ್ರದ ವ್ಯವಹಾರ ತಜ್ಞರಾದ ಭರತ್ ಕಾರ್ನಾಡ್ ರವರ ಪ್ರಕಾರ, 1983ರ ಮಧ್ಯಭಾಗದಲ್ಲಿ ಇಂದಿರಾ ಗಾಂಧಿಯವರು ‘ಕಹುತಾದ ಮೇಲೆ ಐಎಎಫ್ ವಾಯುದಾಳಿಯನ್ನು ನಡೆಸಲು ಇನ್ನೊಂದು ಬಾರಿ ಯೋಜನೆಯನ್ನು ಮಾಡಿ ಎಂದಿದ್ದರು’ , ಎನ್ನುವುದನ್ನು ಹೇಳಿದ್ದಾರೆ.

ಆದರೆ ಪಾಕ್ ಪರಮಾಣು ವಿಜ್ಞಾನಿಯಾದ ಮುನಿರ್ ಅಹ್ಮದ್ ಖಾನ್ ವಿಯೆನ್ನಾದಲ್ಲಿ ನಡೆದ ಅಂತರರಾಷ್ಟ್ರೀಯ ಸಭೆಯಲ್ಲಿ ಭಾರತೀಯ ಪರಮಾಣು ಶಕ್ತಿ ಆಯೋಗದ ಚೀಫ್ ಡೆಸಿಗ್ನೇಟ್‍ಆದ ರಾಜಾ ರಾಮಣ್ಣ ಅವರನ್ನು ಭೇಟಿಯಾದ ನಂತರ ಈ ಕಾರ್ಯಚರಣೆಯನ್ನು ರದ್ದುಗೊಳಿಸಲಾಯಿತು. ಅಷ್ಟೇ ಅಲ್ಲದೇ, ಇಂತಹ ಯಾವುದೇ ಕ್ರಮವನ್ನು ಭಾರತ ಪ್ರಯತ್ನಿಸಿದರೆ ಟ್ರೋಂಬೆಯಲ್ಲಿನ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಮೇಲೆ ಮುಷ್ಕರ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ.

ತದನಂತರದಲ್ಲಿ 1984ರ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಕಹುತಾವನ್ನು ಆಕ್ರಮಿಸಲು ಭಾರತ ಗಂಭೀರವಾದ ನಿರ್ಧರವನ್ನು ತೆಗೆದುಕೊಂಡಿತ್ತು ಎಂದು ನಂಬಲಾಗಿದೆ. ಆ ಹೊತ್ತಿಗೆ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳ ಮಿತಿಯನ್ನು ದಾಟಿತ್ತು. ಆಗ ಅಮೆರಿಕದ ರಾಯಭಾರಿಯಾದ ಡೀನ್ ಹಿಂಟನ್ ಅವರು ಜಿಯಾಗೆ ಭಾರತವು ದಾಳಿ ನಡೆಸಲು ಸಿದ್ದವಾಗಿದೆಯೆಂದು ಎನ್ನುವ ಸೂಚನೆಯು ಸಿಕ್ಕೆದ್ದಲ್ಲದೇ, ತಕ್ಷಣವೇ ಈ ಬಗ್ಗೆ ಪಾಕಿಸ್ತಾನಕ್ಕೆ ಸೂಚನೆಯನ್ನು ನೀಡಿದ್ದರು!!

ಸೆಪ್ಟೆಂಬರ್ 22ರಂದು, ವಿದೇಶದ ವಿಶ್ವಾಸಾರ್ಹ ಮೂಲಗಳ ಪ್ರಕಾರ ಸಿಐಎ ಉಪನಿರ್ದೇಶಕ ಪಾಕಿಸ್ತಾನದ ಉನ್ನತ ಅಧಿಕಾರಿಗಳಿಗೆ ವರದಿ ನೀಡಿದ್ದು ಈ ಮೂಲಕ ಭಾರತೀಯ ವಿಮಾನದ ಮೇಲೆ ಮುಷ್ಕರ ನಡೆದಿತ್ತು ಎಂದು ಹೇಳಲಾಗಿದೆ.

ಅದೇ ದಿನ, ಎಸಿಬಿ ಟೆಲಿವಿಷನ್ ಕೂಡ ಪಾಕಿಸ್ತಾನಿ ಪರಮಾಣು ಸೌಕರ್ಯಗಳ ಮೇಲೆ ಭಾರತೀಯ ದಾಳಿ ಸನ್ನಿಹಿತವಾಗಿದೆ ಎಂದು ಹೇಳಿದ್ದಲ್ಲದೇ ಇದನ್ನು ಯುಎಸ್ ಸೆನೆಟ್‍ನ ಗುಪ್ತಚರ ಉಪಸಮಿತಿಯೊಂದಕ್ಕೆ ಸಿಐಎ ವರದಿಯನ್ನು ನೀಡಿದೆ ಎನ್ನುವ ಬಗ್ಗೆ ಮಾಹಿತಿ ರವಾನಿಸಿದೆ!! ಆದರೆ ಭಾರತವು ಕಹುತಾವನ್ನು ಆಕ್ರಮಿಸುವ ಯೋಜನೆ ಮಾಡಿತ್ತಾದರೂ, ಅದನ್ನು ಆಕ್ರಮಿಸುವ ಅಂಶಗಳು ಕಳೆದುಹೋಗಿತ್ತು!!

ಭಾರತದೊಂದಿಗೆ ಇಸ್ರೇಲ್ ವಾಯುಪಡೆ 1984ರಲ್ಲಿ ಕಹುತಾವನ್ನು ಆಕ್ರಮಣ ಮಾಡುವ ಯೋಜನೆಯನ್ನು ಹಾಕಿತ್ತು. ಯಾಕೆಂದರೆ ಪಾಕಿಸ್ತಾನದ ಅಭಿವೃದ್ದಿಯನ್ನು ಹೊಂದುವುದು ಹಾಗೂ “ಇಸ್ಲಾಮಿಕ್ ಬಾಂಬ್”ನ್ನು ನಿರ್ಮಿಸಿರುವುದನ್ನು ಅವರಿಂದ ಸಹಿಸಲಾಗಿರಲಿಲ್ಲ!! ಅಷ್ಟೇ ಅಲ್ಲದೇ, ಇಸ್ರೇಲ್ ಈ ದಾಳಿಯನ್ನು ಮುನ್ನಡೆಸಬೇಕಿತ್ತು. ಪಾಕಿಸ್ತಾನವನ್ನು ಮಟ್ಟ ಹಾಕಲು ಇಷ್ಟೊಂದು ಉಪಾಯಗಳು ಇದ್ದರೂ ಕೂಡ ಇಂದಿರಾ ಗಾಂಧಿಯವರು ಈ ಯುದ್ದವನ್ನು ನಿರಾಕರಿಸಿದರು. ಯಾಕೆಂದರೆ ಯು.ಎಸ್.ಎ ಪ್ರತೀದಾಳಿಯನ್ನು ನಡೆಸುವ ಸಾಧ್ಯತೆ ಇದೆ ಎಂದು ಹೆದರಿ ಈ ಯುದ್ದವನ್ನು ನಿರಾಕರಿಸಿದರು!!

ಹಾಗಾದರೆ ಇಂದಿರಾ ಗಾಂದಿಯವರನ್ನು ಒರ್ವ ಉಕ್ಕಿನ ಮಹಿಳೆ ಎಂದು ಪರಿಗಣಿಸಬಹುದೆ?? ಅಷ್ಟೇ ಅಲ್ಲದೇ ಈಕೆ ಪಾಕಿಸ್ತಾನದ ಪರಮಾಣು ಸ್ಥಾವರವನ್ನು ನಾಶಮಾಡಲು ಯಾಕೆ ಪ್ರಯತ್ನಿಸಲಿಲ್ಲ ಎಂಬುವುದು ಯಕ್ಷ ಪ್ರಶ್ನೆಯಾಗಿ ಉಳಿದಿದ್ದಲ್ಲದೇ, ಈ ಪರಮಾಣು ಶಕ್ತಿಯ ಕಾರಣದಿಂದಲೇ ಪಾಕಿಸ್ತಾನವು ಭಾರತಕ್ಕೆ ಅನೇಕ ಸಮಸ್ಯೆಗಳನ್ನು ಸೃಷ್ಟಿಮಾಡಿದ್ದಂತೂ ನಿಜ!!

-ಅಲೋಖಾ **

Tags

Related Articles

Close