ಪ್ರಚಲಿತರಾಜ್ಯ

ಆರೆಸ್ಸೆಸ್ಸಿನತ್ತ ಅಣ್ಣಾಮಲೈ ಚಿತ್ತ? ಸಂಚಲನ ಮೂಡಿಸಿದ ಕರುನಾಡ ಸಿಂಗಂ ಅಣ್ಣಾ ಮಲೈ ರಾಜೀನಾಮೆ ನಡೆ.!

ಣ್ಣಾಮಲೈ… ಕರ್ನಾಟಕ ರಾಜ್ಯ ಕಂಡ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ. ಗೂಂಡಾಗಳಿಗೆ ತನ್ನ ಖಾಕಿ ಪವರ್ ತೋರಿಸಿ ಅನಧಿಕೃತ ಚಟುವಟಿಕೆಗೆ ಬ್ರೇಕ್ ಹಾಕಿದ್ದ ಅಣ್ಣಾಮಲೈ ನವತರುಣರ ಹಾಟ್ ಫೇವರೇಟ್. ಮಟ್ಕಾದಂಧೆ, ಗಾಂಜಾ ಹಾವಳಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿ ಯಶಸ್ವಿಯಾಗಿದ್ದ ಅಣ್ಣಾಮಲೈ ಅವರನ್ನು ಕಂಡರೆ ಅದೆಷ್ಟೋ ಯುವಕರಿಗೆ ತುಂಬಾನೇ ಪ್ರೀತಿ. ಇಂತಹಾ ಖಡಕ್ ಐಪಿಎಸ್ ಅಧಿಕಾರಿ ಇದೀಗ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅಣ್ಣಾಮಲೈ ಇಂದು ತನ್ನೆಲ್ಲಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಕಳೆದ 9 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಷ್ಟೆಯಿಂದ ಕೆಲಸ ಮಾಡಿ ಇದೀಗ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಣ್ಣಾ ಮಲೈ ಹೇಳಿಕೆ ಪ್ರಕಾರ ರಾಜೀನಾಮೆ ನಿರ್ಧಾರ ವ್ಯಯಕ್ತಿಕವಾಗಿದೆ. “ನನಗೆ ಪೊಲೀಸ್ ಇಲಾಖೆಯಲ್ಲಿ ತೃಪ್ತಿದಾಯಕ ಕೆಲಸ ಮಾಡಿದ ಸಂತಸವಿದೆ. ಆದರೆ ಕುಟುಂಬದೊಂದಿಗೆ ಬೆರೆಯಲು ಅವಕಾಶ ಸಿಗದಿದ್ದ ಕಾರಣ ರಾಜೀನಾಮೆ ನೀಡುತ್ತಿದ್ದೇನೆ. ಇನ್ನು ಮುಂದೆ ಕುಟುಂಬದೊಂದಿಗೆ ಕಾಲ ಕಳೆಯಲು ಇಚ್ಚಿಸುತ್ತಿದ್ದೇನೆ. ಹಿಮಾಲಯ ನನ್ನನ್ನು ಸೆಳೆಯುತ್ತಿದೆ. ಹೀಗಾಗಿ ಹಿಮಾಲಯಕ್ಕೆ ಭೇಟಿ ನೀಡಲು ಇಚ್ಚಿಸಿದ್ದೇನೆ” ಎಂದು ಹೇಳಿದ್ದಾರೆ.

ಆದರೆ ಮಾಧ್ಯಮಗಳಲ್ಲಿ ಸುದ್ಧಿಯಾದ ಪ್ರಕಾರ ಅಣ್ಣಾ ಮಲೈ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದೃಢತೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಅಣ್ಣಾ ಮಲೈ ಮೂಲತಃ ತಮಿಳುನಾಡಿನವರು. ಅಲ್ಲಿ ಸಂಘದ ಪ್ರಚಾರ ಕಡಿಮೆ ಇದೆ. ಕರ್ನಾಟಕದಂತೆಯೇ ತಮಿಳುನಾಡಿನಲ್ಲೂ ಸಂಘವನ್ನು ಗಟ್ಟಿಯಾಗಿ ಬೆಳೆಸಬೇಕೆಂಬುವುದು ಅಣ್ಣಾಮಲೈ ಇಚ್ಛೆ. ಸಂಘದಿಂದ ಅಣ್ಣಾಮಲೈ ಪ್ರಭಾವಿತರಾಗಿದ್ದು ನಿಜವಂತೆ. ಕೆಲ ತಿಂಗಳುಗಳ ಹಿಂದೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಅಣ್ಣಾಮಲೈ ಭೇಟಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಹಾಗೂ ಈ ವೇಳೆ ಸಂಘಟನೆ ಕಟ್ಟುವಂತೆ ಅಣ್ಣಾಮಲೈಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಅಣ್ಣಾ ಮಲೈ ರಾಜಕೀಯಕ್ಕೆ ಪಾದಾರ್ಪಣೆ ಮಾಡದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಅಣ್ಣಾಮಲೈ ತನ್ನ ಅಧಿಕಾರವಧಿಯಲ್ಲಿ ಹಿಂದೂ ಕಾರ್ಯಕರ್ತರಿಗೂ ಆದರ್ಶವಾಗಿದ್ದರು. ಗೋಕಳ್ಳತನವನ್ನು ಅಣ್ಣಾಮಲೈ ಮಟ್ಟಹಾಕಿದ್ದರು. ಹೀಗೆ ಅನೇಕ ವಿಚಾರದಲ್ಲಿ ಕಾನೂನಾತ್ಮಕವಾಗಿಯೇ ಹಿಂದೂಗಳ ಮನಗೆದ್ದಿದ್ದ ಅಣ್ಣಾಮಲೈ ಸಂಘದತ್ತ ಮುಖ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸುದ್ಧಿ ನಿಜವೇ ಆಗಿದ್ದರೆ ಸಂಘಟನೆಗೆ ಮತ್ತಷ್ಟು ಬಲ ಬರುವುದು ಖಚಿತ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close