ರಾಜ್ಯ

ಬಾಂಬ್ ಸ್ಫೋಟ ನಡೆಸಿದ ಉಗ್ರನಿಗೆ ಬೆಂಬಲವಾಗಿ ನಿಂತ ಡಿಕೆಶಿ! ಸ್ಫೋಟದ ಹಿಂದಿದೆಯೇ ಕೈ ವಾಡ?

ಕಾಂಗ್ರೆಸ್ ಪಕ್ಷ ಉಗ್ರಗಾಮಿ‌ಗಳ ಪರ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡುವ ಮತ್ತೊಂದು ಹೇಳಿಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಂದ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ದಾಳಿ ನಡೆಸಿದ ಉಗ್ರಗಾಮಿ ಶಾರಿಕ್‌ನ ಬಗ್ಗೆ ಮೃದು ಮಾತುಗಳನ್ನಾಡುವ ಮೂಲಕ, ತಾವು ಭಯೋತ್ಪಾದಕರ ಪರ ಎಂಬುದನ್ನು ಸಾಬೀತು ಮಾಡಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಅಟೋ ರಿಕ್ಷಾ ಒಂದರಲ್ಲಿ ಕುಕ್ಕರ್ ಬಾಂಬ್ ದಾಳಿ ನಡೆಸಿ, ಪೊಲೀಸರ ವಶವಾಗಿದ್ದ ಉಗ್ರ ಶಾರಿಕ್‌ನನ್ನು ‘ಉಗ್ರ’ ಎಂದು ಸಂಬೋಧನೆ ಮಾಡಿದ ಬಗ್ಗೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ತನಿಖೆಯನ್ನು ನಡೆಸದೆಯೇ ಶಾರಿಕ್‌ನನ್ನು ಉಗ್ರ ಎಂಬುದಾಗಿ ಹೇಗೆ ಘೋಷಣೆ ಮಾಡಲಾಗಿದೆ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಮುಂಬೈ ದಾಳಿ, ಪುಲ್ವಾಮಾ ದಾಳಿ, ಕಾಶ್ಮೀರದಂತೆ ನಡೆದಿಲ್ಲ. ಕುಕ್ಕರ್ ಬಾಂಬ್ ಸ್ಪೋಟವನ್ನಿಟ್ಟುಕೊಂಡು ವೋಟರ್ ಐಡಿ ಹಗರಣವನ್ನು ಬಿಜೆಪಿ ಮುಚ್ಚಿ ಹಾಕಿತು. ಯಾವುದೇ ತನಿಖೆ ನಡೆಸದೆಯೇ ಈ ಸ್ಪೋಟ ನಡೆಸಿದ ಶಾರಿಕ್‌ನನ್ನು ಉಗ್ರ ಎಂಬುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ‌ರು ಅದು ಹೇಗೆ, ಅಷ್ಟು ಶೀಘ್ರ‌ವಾಗಿ ಟ್ವೀಟ್ ಮೂಲಕ ಘೋಷಣೆ ಮಾಡಿದರು ಎಂಬುದಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಓಟರ್ ಐಡಿ ಹಗರಣವನ್ನು ತಿರುಗು ಮುರುಗು ಮಾಡುವ ದೃಷ್ಟಿಯಿಂದ ಬಿಜೆಪಿ ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣವನ್ನು ಹೈಲೈಟ್ ಮಾಡಿದೆ. ಶಿವಮೊಗ್ಗ, ಮಂಗಳೂರು, ಮಲೆನಾಡು ಭಾಗಕ್ಕೆ ಈ ವಿಚಾರ‌ವಾಗಿ ಯಾವುದೇ ತನಿಖೆಗೆ ಹೋಗಿಲ್ಲ. ಎಲ್ಲಾ ತನಿಖೆ ಬೆಂಗಳೂರಿನಲ್ಲೇ ನಡೆಯುತ್ತಿದೆ. ಇದೆಲ್ಲವನ್ನೂ ನೋಡುತ್ತಿರುವ ಜನರೇನು ದಡ್ಡರೇ?, ಜನರ ಭಾವನೆಗಳ ಮೇಲೇಕೆ ಸರ್ಕಾರ ಆಟವಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಉಗ್ರಗಾಮಿ‌ಗಳಿಗೆ ಬೆಂಬಲ ನೀಡುತ್ತಿದೆ ಎನ್ನುವುದಕ್ಕೆ ಡಿಕೆಶಿ ಅವರ ಈ ಹೇಳಿಕೆ ಸಾಕ್ಷಿ ನುಡಿವಂತಿದೆ. ಓರ್ವ ವ್ಯಕ್ತಿಯನ್ನು ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆಯೇ ಪೊಲೀಸ್ ಇಲಾಖೆ ಉಗ್ರ ಎಂದು ಘೋಷಿಸುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಸಹ ಡಿಕೆ ಶಿವಕುಮಾರ್ ಅವರಿಗೆ ಇಲ್ಲದೇ ಹೋದದ್ದು ದುರಾದೃಷ್ಟ‌ವೇ ಸರಿ.

ಈ ಹಿಂದೆಯೂ ಒಂದು ಧರ್ಮ‌ದ ಉಗ್ರರನ್ನು ತನ್ನ ಸಹೋದರರು ಎಂದು ಹೇಳಿಕೊಳ್ಳುವ ಮೂಲಕವೂ ಡಿಕೆಶಿ ಅವರು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜನರು ಟ್ರೆಂಡ್ ಮಾಡಿದಾಗಲೂ, ಮತ್ತೊಂದು ಬಾರಿ ಹೌದು ಅವರೆಲ್ಲರೂ ನನ್ನ ಸಹೋದರರು ಎನ್ನುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಉಗ್ರಗಾಮಿ‌ಗಳಿಗೆ ಬೆಂಬಲ ನೀಡುವ ಪಕ್ಷ ಎಂಬುದನ್ನು ತೋರಿಸಿಕೊಂಡಿದ್ದರು. ಇದೀಗ ಉಗ್ರ ಶಾರಿಕ್ ಪರ ಮಾತನಾಡುವ ಮೂಲಕ ಕಾಂಗ್ರೆಸ್ ಉಗ್ರರಿಗೆ ಬಹಿರಂಗ ಬೆಂಬಲ ನೀಡುವ ಪಕ್ಷ ಎಂಬುದನ್ನು ಸಾಬೀತು ಮಾಡಿದೆ. ಆ ಮೂಲಕ ಈ ಕೃತ್ಯದ ಹಿಂದೆ ಕಾಂಗ್ರೆಸ್ ‘ಕೈ’ವಾಡದ ಬಗೆಗೂ ಸಾರ್ವಜನಿಕ ವಲಯದಲ್ಲಿ ಸಂದೇಹ ಮೂಡುವಂತಾಗಿದೆ.

ಕಾಂಗ್ರೆಸ್ ಆಡಳಿತದಲ್ಲೇ ಉಗ್ರರಿಗೆ ಬೆಂಬಲ ನೀಡಿದ ಅದೆಷ್ಟೋ ಘಟನೆಗಳು ನಮ್ಮ ಮುಂದಿವೆ. ಈಗ ಅಧಿಕಾರ ಇಲ್ಲದಿದ್ದರೂ, ಕಾಂಗ್ರೆಸ್‌ನ ಉಗ್ರ ನಿಲುವಿಗೆ ಜನರು ಅವರನ್ನು ಮನೆಗೆ ಕಳುಹಿಸಿದರೂ ಅವರ ಉಗ್ರಪ್ರೇಮವಿನ್ನೂ ಕೊನೆಯಾಗದಿರುವುದು ವಿಪರ್ಯಾಸ‌ವೇ ಸರಿ. ಮಂಗಳೂರು ಘಟನೆಯ ಶಾರಿಕ್‌ ಎಂಬ ಉಗ್ರ‌ನಿಗೆ ಬಿಜೆಪಿ ಸರ್ಕಾರ ಇರುವ ಕಾರಣಕ್ಕೆ ಶಿಕ್ಷೆ‌ಯಾಗುತ್ತಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ, ಉಗ್ರ ಶಾರಿಕ್‌ನನ್ನು ಅಮಾಯಕ, ಅನಕ್ಷರಸ್ಥ ಎಂಬುದಾಗಿ ಹೇಳಿ ಇವನಿಗೆ ಜೀವನಕ್ಕೆ ಬೇಕಾದ ಅನುಕೂಲ‌ಗಳನ್ನು ನೀಡಿ ಮನೆಗೆ ಕಳುಹಿಸುತ್ತಿತ್ತು ಎನ್ನುವುದಕ್ಕೆ ಡಿಕೆಶಿ ಅವರ ಈ ಮಾತುಗಳೇ ಪುಷ್ಟಿ ನೀಡುತ್ತಿದೆ.

Tags

Related Articles

Close