ಪ್ರಚಲಿತ

ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಆಗಿ ಕಣಕ್ಕಿಳಿಯುವರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ? ಮಗ ಪ್ರಧಾನಿಯಾಗಬೇಕೆಂದು ಕನಸು ಕಾಣುತ್ತಿರುವ ರಾಜಮಾತೆಯ ಕನಸನ್ನು ನುಚ್ಚು ನೂರು ಮಾಡುವರೆ ದಾದಾ?

ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಗಾಗುವ ಸಂಭವ ಇದೆ ಎನ್ನುತ್ತದೆ ರಾಜಕೀಯ ವಿಶೇಷಜ್ಞರ ಪಡಸಾಲೆ!! 2019 ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಶತಾಯಗತಾಯ ಸೋಲಿಸಬೇಕೆಂದು ಪಣ ತೊಟ್ಟಿರುವ ಮೋದಿ ವಿರೋಧಿ ಪಕ್ಷಗಳು ಈಗಾಗಲೆ ‘ಮಹಾ ಗಠ್ ಬಂಧನ್’ ಹೆಸರಿನಲ್ಲಿ ತೃತೀಯ ರಂಗವನ್ನು ಸ್ಥಾಪಿಸಿವೆ. ಆದರೆ ತೃತೀಯ ರಂಗಕ್ಕಿರುವ ಬಹು ದೊಡ್ಡ ತಲೆ ನೋವು ಯೋಗ್ಯ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೆ ಆಗಿದೆ. ತೃತೀಯ ರಂಗದ ಅಷ್ಟೂ ಪಕ್ಷಗಳ ನಾಯಕರು ತಾವೇ ಪ್ರಧಾನ ಮಂತ್ರಿ ಆಗುತ್ತೇವೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲದ ಮಾತು ಎನ್ನುವುದು ಅವರಿಗೂ ತಿಳಿದಿದೆ.

ಮೇಡಮ್ ಜಿ ತನ್ನ ಮಗ ಮಂದ ಬುದ್ದಿಯೆ ಮುಂದಿನ ಪ್ರಧಾನಿ ಎಂದು ಮನಸಿನಲ್ಲಿ ಮಂಡಿಗೆ ತಿನ್ನುತ್ತಿದ್ದರೆ, ಮಮತಾ ಈಗಾಗಾಲೆ ನಾನು ಪ್ರಧಾನ ಮಂತ್ರಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ದಳಿದ್ದೇನೆ ಎಂದು ಬೊಂಬಾಡಾ ಬಜಾಯಿಸಿದ್ದಾರೆ. ಇತ್ತ ದೊಡ್ಡ ಗೌಡರು, ಕಾಂಗ್ರೆಸ್ ಜೊತೆ ನಾನೂ ನೀನೂ ದೋಸ್ತಿ ಎಂದು ಕೈ ಮಿಲಾಯಿಸಿ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಆಗಿ ಗದ್ದುಗೆ ಮೇಲೆ ಕೂರುವ ಆಸೆಯಲ್ಲಿದ್ದಾರೆ. ಅತ್ತ ಮುಲಾಯಂ ಸಿಂಗ್ ಯಾದವ್ ನಾನೂ ಇದ್ದೇನೆ ಎನ್ನುತ್ತಾ ಪ್ರಧಾನಿ ಪಟ್ಟಕ್ಕೇರುವ ತಿರುಕನ ಕನಸು ಕಾಣುತ್ತಿದ್ದಾರೆ. ಇಡಿಯ ದೇಶವೆ ತೃತೀಯ ರಂಗವನ್ನು ನೋಡಿ ಬಿದ್ದು ಬಿದ್ದು ನಗುತ್ತಿದೆ. ಒಂದು ಪಟ್ಟಕ್ಕೆ ಹನ್ನೊಂದು ಪ್ರಧಾನಿ ಅಭ್ಯರ್ಥಿಗಳು ಎಂದು ಮುಸಿ ಮುಸಿ ನಗುತ್ತಿದೆ. ಆದರೆ ಇದೆಲ್ಲದರ ಮಧ್ಯೆಯೆ ಒಂದು “ಸ್ನೈಪರ್ ” ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸುತ್ತಲಿವೆ.

ಆ ಸ್ನೈಪರ್ ಬೇರಾರೂ ಅಲ್ಲ, ಬದಲಿಗೆ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ!! ಇಂದಿರಾ ಗಾಂಧಿ ಕಾಲದಿಂದಲೂ ರಾಜಕಾರಣದಲ್ಲಿ “ಕೈ” ಆಡಿಸಿರುವ ಪ್ರಣಬ್ ದಾದಾ ರಾಜಕಾರಣದ ಎಲ್ಲಾ ಪಟ್ಟುಗಳನ್ನೂ ಬಲ್ಲರು. ರಾಜಕಾರಣದಲ್ಲಿ ಭಾಜಪ “ಚಾಣಕ್ಯ”ರನ್ನೂ ಮೀರುವಂತಹ ಬುದ್ದಿಮತ್ತೆ ಪ್ರಣಬ್ ದಾ ಅವರಲ್ಲಿ ಇದೆ ಎನ್ನುವುದರಲ್ಲಿ ಸಂಶಯವೆ ಇಲ್ಲ. ಕಾಂಗ್ರೆಸಿನ ಅತ್ಯಂತ ಸ್ವಚ್ಚ ರಾಜಕಾರಣಿ ಯಾರು ಎಂದು ಕೇಳಿದರೆ ಎಂದರೆ ಪ್ರಣಬ್ ದಾ ಎನ್ನಬಹುದು. ಆ ಮಟ್ಟಿಗೆ ಅವರು ಹಗರಣಗಳಿಂದ ಮತ್ತು ವಿವಾದಗಳಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ನಿಜವಾಗಿ ನೋಡಿದರೆ ನಾಮಧಾರಿ ಗಾಂಧಿಗಳಿಂತ ಹೆಚ್ಚು ಚಾಣಾಕ್ಷ ಮತಿ ಪ್ರಣಬ್, ಪ್ರಧಾನಿ ಆಗುವುದಕ್ಕೆ ಯೋಗ್ಯತೆ ಮತ್ತು ಅರ್ಹತೆ ಎರಡನ್ನೂ ಹೊಂದಿದ್ದರು.

ಆದರೆ ನೆಹರೂ ಕುಟುಂಬದ ಚಾಪಲೂಸಿ ಮಾಡುವುದಿಲ್ಲ ಎಂಬ ಒಂದೆ ಒಂದು ಕಾರಣಕ್ಕಾಗಿ ಪ್ರಣಬ್ ದಾ ಅವರನ್ನು ಮೂಲೆಗುಂಪಾಗಿಸಲಾಯಿತು ಎನ್ನುವುದು ದೇಶಕ್ಕೆ ತಿಳಿದ ಸತ್ಯ. ಈವತ್ತಿನಿಂದಲ್ಲ, ಬದಲಾಗಿ ಹಲವಾರು ವರ್ಷಗಳಿಂದ ಪ್ರಣಬ್ ದಾ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿದ್ದರು ಎನ್ನುವ ಗುಸು ಗುಸು ರಾಜಕಾರಣದ ಪಡಸಾಲೆಗಳಲ್ಲಿ ಕೇಳಿ ಬರುತ್ತಿದೆ. ಈಗ ದೇಶದ ಎಲ್ಲಾ ಪಕ್ಷಗಳನ್ನು ಒಟ್ಟು ಸೇರಿಸಿ ತೃತೀಯ ರಂಗ ಮಾಡುವ ಮಾಸ್ಟರ್ ಪ್ಲಾನ್ ತಯಾರಿಸಲು ಪ್ರಣಬ್ ಕಾರಣ ಎನ್ನಲಾಗುತ್ತಿದೆ. ಎಲ್ಲಾ ಪಕ್ಷದ ನಾಯಕರ ಜೊತೆ ಸೌಹಾರ್ದ ಹೊಂದಿರುವ ಪ್ರಣಬ್ ಒಳಗೊಳಗೆ ಪ್ರಧಾನಿ ಆಗುವ ಕನಸು ಕಾಣುತ್ತಿರಬಹುದು, ಇದನ್ನು ಅಲ್ಲಗಳೆಯಲಾಗುವುದಿಲ್ಲ. 2004 ಮೇಡಮ್ ಜಿ ಪ್ರಧಾನಿ ಪಟ್ಟವನ್ನು “ತ್ಯಾಗ” ಮಾಡಿದಾಗ ಪ್ರಣಬ್ ಅವರೆ ಪ್ರಧಾನಿ ಮಂತ್ರಿ ಆಗಬಹುದೆಂದು ಹಲವರು ಊಹಿಸಿದ್ದರು.

ಆದರೆ ತನ್ನ ತಾಳಕ್ಕೆ ಪ್ರಣಬ್ ಕುಣಿಯುವುದಿಲ್ಲ ಎಂದು ತಿಳಿದಿದ್ದ ಮೇಡಮ್ ಜಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿಬಿಟ್ಟರು. ಇದರಿಂದ ಪ್ರಣಬ್ ಕುಪಿತರಾದರೂ ಮೇಲೆ ತೋರಿಸಿಕೊಳ್ಳಲಿಲ್ಲ. 2009ರಲ್ಲಿ ಮತ್ತೆ ಯೂಪಿಎ ಅಧಿಕಾರಕ್ಕೆ ಬಂದಾಗ ಈ ಬಾರಿಯಾದರೂ ತನ್ನನ್ನೆ ಪ್ರಧಾನಿಯಾಗಿ ಘೋಷಿಸುತ್ತಾರೆ ಎನ್ನುವ ಪ್ರಣಬ್ ಆಸೆಗೆ ಮೇಡಮ್ ಮತ್ತೊಂದು ಬಾರಿ ತಣ್ಣೀರೆರಚಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಸೀಮಿತಗೊಳಿಸಿದರು. ತನಗಾದ ಅಪಮಾನವನ್ನು ತುಟಿಕಚ್ಚಿ ಸಹಿಸಿಕೊಂಡ ಪ್ರಣಬ್ ದಾ ಮುಂದೆ ರಾಷ್ಟ್ರಪತಿಯಾಗಿ ಯೂಪಿಎಗೆ ಸರಿಯಾಗೇ ಪಾಠ ಕಲಿಸಿದರು. ಮೇಡಮ್ ಜಿಯ ಯಾವ ಅಹವಾಲುಗಳಿಗೂ ಕಿವಿ ಕೊಡದೆ ದೇಶ ಹಿತದ ನಿರ್ಧಾರಗಳನ್ನು ತೆಗೆದುಕೊಂಡು ಜನ ಮೆಚ್ಚುಗೆಗೆ ಪಾತ್ರರಾದರು. ಅವರ ಈ ನಿರ್ಧಾರಗಳಿಂದಾಗಿಯೆ ಇವತ್ತು ತೃತೀಯ ರಂಗದಲ್ಲಿ ಮಾತ್ರವಲ್ಲ, ದೇಶದಲ್ಲಿಯೆ ಅವರ ಬಗ್ಗೆ ಗೌರವಾದರಗಳಿವೆ. ಮೇಡಮ್ ಜಿ ಯ ಹಿಂದೂ ದ್ವೇಷವನ್ನು ಬಯಲಿಗೆಳೆದಿರುವುದರಿಂದ ಹಿಂದೂಗಳ ಮನಸ್ಸಿನಲ್ಲಿಯೂ ದಾದಾ ಬಗ್ಗೆ ಅಭಿಮಾನವಿದೆ.

ಈಗ ಪ್ರಣಬ್ ದಾ ಅವರು ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಒಪ್ಪಿಗೆ ನೀಡಿರುವುದು ಪ್ರಣಬ್ ಅವರು ಎಂತಹ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸುತ್ತಿದೆ. ದಾದಾ ಗೆ ತಾನು ರಾಷ್ಟ್ರವಾದಿ ಎಂದು ತೋರಿಸಿಕೊಳ್ಳುವ ಹಂಬಲ ಒಂದೆಡೆಯಾದರೆ, ತನಗೆ ಅಪಮಾನ ಮಾಡಿದ ಕಾಂಗ್ರೆಸಿಗೆ ಪಾಠ ಕಲಿಸುವ ದುರ್ದು ಮತ್ತೊಂದೆಡೆ. ಕಾಂಗ್ರೆಸ್ ನಖಶಿಖಾಂತ ದ್ವೇಷಿಸುವ ಸಂಘಟನೆಯಾದ ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಪ್ರಣಬ್ ಬರುತ್ತಾರೆ ಎನ್ನುವುದನ್ನು ತಿಳಿದು ರಾಷ್ಟ್ರವಾದಿಗಳು ಕುಣಿದು ಕುಪ್ಪಳಿಸಿದರು. ಕಾಂಗ್ರೆಸಿಗೆ ಇದು ಮುಗಜರ ತರಿಸಿದರೆ, ಆರ್.ಎಸ್.ಎಸ್ ಗೆ ಇದು ಸಮ್ಮಾನದ ವಿಚಾರವಾಯಿತು. ಈ ವಿಚಾರದಲ್ಲಿ ಎಡ-ಬಲಗಳ ಹಗ್ಗ ಜಗ್ಗಾಟ ನಡೆಯುತ್ತಿದ್ದರೆ ಪ್ರಣಬ್ ದಾ ಮಾತ್ರ ಮನಸಿನಲ್ಲೆ ನಗುತ್ತಿದ್ದಾರೆ. ಕಲ್ಲು ಹೊಡೆದಾಗಿದೆ ಇನ್ನು ಕಾಯಿ ಬೀಳುವುದಷ್ಟೆ ಬಾಕಿ! ಇತ್ತ ಅಪ್ಪ-ಮಗ ಸೇರಿ ಅಮ್ಮ-ಮಗನನ್ನು ಮುಳುಗಿಸುತ್ತಾರೆ, ಅತ್ತ ಅಮ್ಮ-ಮಗ ಸೇರಿ ಅಪ್ಪ-ಮಗನನ್ನು ಮುಳುಗಿಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸುತ್ತಾ ಕಾಲ ಕಳೆಯುತ್ತಿರುವ ಕಾರ್ಯಕರ್ತರಿಗೆ ತೆರೆಮರೆಯಲ್ಲಿ ನಿಂತು ತಣ್ಣನೆ ರಣ ತಂತ್ರ ಹೆಣೆಯುತ್ತಿರುವ ಪ್ರಣಬ್ ಮುಖರ್ಜಿ ಎನ್ನುವ ಸ್ನೈಪರ್, ಅಮ್ಮ,ಮಗ, ಅಪ್ಪ, ಅಜ್ಜ, ದೀದಿ, ಬೂವಾ, ಚಾಚಾ, ಮಾಮ ಎಲ್ಲರನ್ನೂ ಒಂದೇ ಏಟಿಗೆ ಮುಗಿಸಲಿದ್ದಾರೆ ಎನ್ನುವ ಪರಿವೆಯೆ ಇಲ್ಲ.

ಪ್ರಣಬ್ ಮುಖರ್ಜಿ ಪ್ರಧಾನಿ ಆಗುತ್ತಾರೋ ಇಲ್ಲವೋ ಅಥವಾ ತನ್ನ ಬದಲಿಗೆ ಬೇರೊಬ್ಬನನ್ನು ಪ್ರಧಾನಿ ಮಾಡುತ್ತಾರೋ ಗೊತ್ತಿಲ್ಲ. ಆದರೆ ತೃತೀಯ ರಂಗದ ಪಾಲಿಗೆ ಪ್ರಣಬ್ ದಾ “ಕಿಂಗ್ ಮೇಕರ್” ಆಗುವುದಂತೂ ಸತ್ಯ! ತೃತೀಯ ರಂಗದ ಪೃಷ್ಠ ಭೂಮಿ ತಯಾರಿಸಿದ ಪ್ರಣಬ್ ಮನಸಿನ್ನಲ್ಲಿ ಏನೋ ಲೆಕ್ಕಾಚಾರ ಅಡಗಿದೆ ಎನ್ನುವುದಂತೂ ನಿಶ್ಚಿತ. ಪ್ರಣಬ್ ತನ್ನ ಬಹುಕಾಲದ ಕನಸನ್ನು ನನಸಾಗಿಸುವರೋ, ಮೇಡಮ್ ಜಿಯಿಂದ ತನಗಾದ ಅಪಮಾನದ ಸೇಡನ್ನು ಆಕೆಯ ಮಗನ ಪ್ರಧಾನಿ ಪಟ್ಟ ತಪ್ಪಿಸುವ ಮೂಲಕ ತೀರಿಸಿಕೊಳ್ಳುವರೋ, ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೆ ಉತ್ತರಿಸುವುದು. ಪ್ರಣಬ್ ದಾ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟರೆ, 2019ರ ಚುನಾವಣೆ ಮೋದಿಯವರ ಪಾಲಿಗೆ ಕಬ್ಬಿಣದ ಕಡಲೆಯಾಗುವುದಂತೂ ನಿಶ್ಚಿತ.

-ಶಾರ್ವರಿ

Tags

Related Articles

Close