ಪ್ರಚಲಿತ

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

ಅಧ್ಯಾಯ 4: ಕೆಸರಿನ ಮಡು ಆಳವಾದಷ್ಟು ಅದರಲ್ಲಿ ಅರಳುವ ಕಮಲವು ಸುಂದರ !!!
2014 ರ ಲೋಕಸಭಾ ಚುನಾವಣೆಯ ಸಮಯ. ಕಾಂಗ್ರೆಸ್ ಪಾರ್ಟಿಯ ನೇತಾರ ರಾಹುಲ್ ಗಾಂಧಿ, ಪ್ರಚಾರ ಕೈಗೊಳ್ಳುತ್ತಿದ್ದ ಸಮಯದಲ್ಲಿ, ಬಿಜೆಪಿ ಹಾಗೂ ಆರೆಸ್ಸೆಸ್ ಅನ್ನು ಗುರಿ ಮಾಡಿಕೊಂಡು ಮತೊಂದನ್ನು ಹೇಳುತ್ತಾರೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಟ್ಟ ಕೊಡುಗೆ ಶೂನ್ಯ, ಎಂದು. ಗಾಂಧಿ ಕುಟುಂಬದ ಕುಡಿ ಅದ ಮಾತುಗಳನ್ನು ಹೇಳಿದ ಮೇಲೆ, ಪಕ್ಷದ ಇತರ ನಾಯಕರು ಹಿಂದೆ ಬೀಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ನ ಹಿರಿಯ ಕಿರಿಯ ನಾಯಕರೆಲ್ಲರೂ ಇದೇ ಮಾತುಗಳನ್ನು ಪುನರಾವರ್ತಿಸ ತೊಡಗಿದರು.ಚುನಾವಣೆಯ ಕಾವು ಏರಿಸಲು ಸಂಘದ ಬಗ್ಗೆ ತುಚ್ಚವಾದ ಮಾತುಗಳನ್ನು ಆಡಲಾಯಿತು.
ಸೈದ್ಧಾಂತಿಕವಾಗಿ ಗೆಲ್ಲಲಾಗದ ಪರಿಸ್ಥಿತಿ ಒದಗಿದಾಗ ಕೆಸರೆರಚಾಟಕ್ಕೆ ಇಳಿಯುವುದು, ರಾಜಕೀಯಕ್ಕೆ ಹೊಸತೇನಲ್ಲ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ಬಿಟ್ಟು ಬೇರೆ ಯಾರೂ ಭಾಗವಹಿಸಲಿಲ್ಲ ಎಂದೇ ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಇತರರನ್ನು ಹೀಯಾಳಿಸಿ ನುಡಿವುದು ಅಭ್ಯಾಸವೂ ಹೌದು.
ಕೆಲವು ಸತ್ಯಾಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ, ಕಾಂಗ್ರೆಸ್ ಪಕ್ಷ ಮಾಡಿದ ಆಪಾದನೆಗಳು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ನೀವೇ ನಿರ್ಧರಿಸಿ:
1930 ರಲ್ಲಿ, ಕಾಂಗ್ರೆಸ್ ಸಂಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಇಟ್ಟುಕೊಂಡು ಸಂಕಲ್ಪ ಪತ್ರವೊಂದನ್ನು ಬಿಡುಗಡೆಗೊಳಿಸಿದ ಸಮಯ. ಆಗಿನ್ನೂ ಸಂಘವು ಸ್ಥಾಪನೆಗೊಂಡು ಕೇವಲ ಐದು ವರ್ಷ ಕಳೆದಿತ್ತು. ಸಂಘಟನೆಯ ಕಾರ್ಯವಿನ್ನೂ ಜಾರಿಯಲ್ಲಿತ್ತು. ಕಾಂಗ್ರೆಸ್ ಜನವರಿ 26 ರಂದು ಸಂಪೂರ್ಣ ಸ್ವರಾಜ್ಯದ ಸಂಕಲ್ಪವನ್ನು   ಮುಂದಿಟ್ಟುಕೊಂಡು ಸ್ವಾತಂತ್ರ್ಯ ದಿನವನ್ನು ಆಚರಿಸುವುದಾಗಿ ಘೋಷಿಸಿತ್ತು. ಆಗ ಡಾಕ್ಟರ್ ಜೀ ಸ್ವಯಂಸೇವಕರನ್ನು ಕುರಿತು ಹೀಗೊಂದು ಪತ್ರವನ್ನು ಬರೆಯುತ್ತಾರೆ,
“ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯು ಸ್ವರಾಜ್ಯವೇ ನಮ್ಮ ಗುರಿ, ಧ್ಯೇಯ ಎಂದು ಘೋಷಿಸುತ್ತಾ 26 ಜನವರಿಯಂದು ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ನಂತಹ ದೇಶವ್ಯಾಪಿ ಪಕ್ಷವೊಂದು ಇಂತಹ ಸಂಕಲ್ಪ ಕೈಗೊಂಡಿರುವ ಬಗ್ಗೆ ನಮಗೆಲ್ಲರಿಗೂ ಸ್ವಾಭಾವಿಕವಾಗಿ ಸಂತೋಷ ದೊರೆತಿದ್ದು, ಸಂಪೂರ್ಣ ಸ್ವರಾಜ್ಯದ ಕನಸು ಇನ್ನೇನು ಕೈಗೂಡಲಿವೆ ಎಂಬ ಮಾತು ನೆಮ್ಮದಿಯನ್ನು ತಂದಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ರೀತಿಯ ಬೆಂಬಲ ಸೂಚಿಸಿ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಂಡು ಯಶಸ್ಸು ತರಬೇಕಾದದ್ದು ನಮ್ಮ ಕರ್ತವ್ಯ. ಹಾಗಾಗಿ ಪ್ರತಿಯೊಂದು ಶಾಖೆಯೂ  ಸಂಜೆ ಆರು ಗಂಟೆಗೆ ತೆರೆಯಬೇಕು ಹಾಗೂ ರಾಷ್ಟ್ರ ಧ್ವಜವಾದ ಭಗವಾ ಧ್ವಜಕ್ಕೆ ನಮಿಸುವುದರ ಮೂಲಕ ಕಾಂಗ್ರೆಸ್ ನ ಬೆಂಬಲದಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಅದರ ವರದಿಯನ್ನು ಕಳಿಸಿಕೊಡುವುದು”.
(ಡಾಕ್ಟರ್ ಜೀ ಬರೆದ ಪತ್ರ, ದಿನಾಂಕ 21 ಜನವರಿ 1930, ರಾಕೇಶ್ ಸಿನ್ಹಾರಿಂದ ಸಂಪಾದಿತ, ಡಾ ಕೇಶವ ಬಲಿರಾಮ್ ಹೆಡ್ಗೇವಾರ್, ಪುಟ 95, 2015)
ರಾಷ್ಟ್ರ ಧ್ವಜ ಭಗವಾ ಧ್ವಜ ಹೇಗೆ ಎಂಬ ಗೊಂದಲ ನಿಮ್ಮಲ್ಲಿ ಮೂಡಿದ್ದರೆ, ಅದರ ಹಿಂದಿನ ವ್ಯಾಖ್ಯಾನ ಇಲ್ಲಿದೆ.
ಡಾಕ್ಟರ್ ಜೀ ಭಗವಾ ಧ್ವಜವನ್ನು ರಾಷ್ಟ್ರ ಧ್ವಜ ಎಂದು ಸಂಭೋದಿಸಿದ್ದರ ಬಗ್ಗೆ ಹಲವಾರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಸತ್ಯಾಂಶ ಏನೆಂದರೆ, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯು, ರಾಷ್ಟ್ರ ಧ್ವಜವನ್ನು ಆಯ್ಕೆಮಾಡಲು ಸಮಿತಿಯೊಂದನ್ನು ರಚಿಸಿತು. ಮೌಲಾನ ಅಬುಲ್ ಕಲಾಂ ಆಜಾದ್ ಅದರ ಸದಸ್ಯರಾಗಿದ್ದರು. ಸಮಿತಿಯಲ್ಲಿ ಒಕ್ಕೊರಲಿನಿಂದ ದೇಶಕ್ಕಾಗಿ ಭಗವಾ(ಕೇಸರಿ)ಧ್ವಜವನ್ನು ರಾಷ್ಟ್ರ ಧ್ವಜ ಎಂದು ಘೋಷಿಸಲಾಯಿತು. ಸಮಿತಿ ಕೊಟ್ಟ ಕಾರಣ ಹೀಗಿದೆ.
“ರಾಷ್ಟ್ರ ಧ್ವಜವು ನಿರ್ದಿಷ್ಟವಾಗಿ, ಸರ್ವ ಮತಗಳಿಗೆ ಸಮಾನವಾಗಿ, ಈ ಭೂಮಿಯ ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ಬಿಂಬಿಸಬೇಕು. ಹಾಗಾಗಿ ಒಂದೇ ವರ್ಣವಿರುವ ಧ್ವಜ ನಮ್ಮದಾಗಬೇಕು. ಪ್ರತಿಯೊಬ್ಬ ಭಾರತೀಯನಿಗೂ ಹೊಂದುವಂತಹ, ದೇಶದ ಪ್ರಾಚೀನ ಇತಿಹಾಸವನ್ನು ಸಮರ್ಥವಾಗಿ ಪ್ರತಿನಿಧಿಸುವ ಕೇಸರಿ ವರ್ಣವೇ ಅತ್ಯಂತ ಸೂಕ್ತ ಎಂಬುದು ನಮ್ಮೆಲ್ಲರ ಅಭಿಮತ”.
ತ್ರೈ ಲೋಕನಾಥ್ ಚಕ್ರವರ್ತಿ, ಬಂಗಾಳದ ಕ್ರಾಂತಿಕಾರಿ ಇವರು ಡಾಕ್ಟರ್ ಜೀ ಯನ್ನು ಭೇಟಿಯಾದಾಗ, ತಮ್ಮ ಮುಂದಿನ ಪ್ರತಿಯೊಂದು ಕಾರ್ಯಾಚರಣೆಗೆ ಅವಶ್ಯಕವಾದ ಸಂಖ್ಯಾ ಬಲವನ್ನು ಸ್ವಯಂಸೇವಕರು ನೀಡಲಿದ್ದಾರೆ ಎಂಬ ತಮ್ಮ ವಾಗ್ದಾನವನ್ನು ಸಂಘವು ಉಳಿಸಿಕೊಂಡೇ ಬಂದಿತು.( ಸತ್ಯವ್ರತ ಘೋಷ್ ರವರ Remembering our revolutinaries ಎಂಬ Marxist Study Forum ನಿಂದ ಪ್ರಕಟಿತ ಪುಸ್ತಕದಿಂದ, ಪುಟ 57) ​ಕ್ರಾಂತಿಕಾರಿ ರಾಜಗುರು ತಲೆಮರೆಸಿಕೊಂಡಿದ್ದ ಸಮಯದಲ್ಲಿ ಅವರಿಗೆ ಆಶ್ರಯ ನೀಡಿದ್ದವರು ಸಂಘದ ಸ್ವಯಂಸೇವಕರು.
​Modern Review(1941) ಎಂಬ ಪುಸ್ತಕದಲ್ಲಿ, ಡಾಕ್ಟರ್ ಹೆಡ್ಗೇವಾರರು ತಮ್ಮ 51 ನೇ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡದ ಕಾರಣದಿಂದ ಕೊನೆಯುಸಿರೆಳೆದರು. ಅವರ ದೇಹಾಂತ್ಯಕ್ಕೆ ಕೇವಲ ಒಂದು ದಿನ ಮೊದಲಷ್ಟೆ, ನೇತಾಜಿ ಸುಭಾಷ್ ಚಂದ್ರಬೋಸ್ ಅವರನ್ನು ಭೇಟಿಯಾಗಲು ಬಂದಿದ್ದರು ಎಂಬ ದಾಖಲೆ ಇದೆ.
​ಡಾಕ್ಟರ್ ಜೀ ನಿಧನದ ನಂತರ ಗುರೂಜಿ ಗೋಳ್ವಲ್ಕರ್ ನೇತೃತ್ವದಲ್ಲಿ ಸ್ವಯಂಸೇವಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವಿಧರ್ಭದಲ್ಲಿ ನಡೆದ ಹೋರಾಟದಲ್ಲಿ ಬಹು ಮುಖ್ಯ ಪಾತ್ರವಹಿಸಿದವರು ಸ್ವಯಂಸೇವಕರು. ಆರೆಸ್ಸೆಸ್ ನ ಪ್ರಮುಖರಾಗಿದ್ದ ದಾದಾ ನಾಯಕ್, ಬಾಬುರಾವ್ ಬೇಗಡೆ ಮತ್ತು ಅಣ್ಣಾಜಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕ ಉದ್ಧವ ರಾವ್ ಕೊರೇಕರ್ ಒಡಗೂಡಿ ಕೆಚ್ಚೆದೆಯ ಹೋರಾಟವನ್ನೇ ಪ್ರದರ್ಶಿಸಿದರು. ಬಾಲಾಜಿ ರಾಯಪೂರ್ಕರ್ ಎಂಬ ಯುವ ಸ್ವಯಂಸೇವಕ ತನ್ನ ಪ್ರಾಣವನ್ನೇ ಆಹುತಿ ನೀಡಿ ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದನು.
​ಚಿಮೂರ್ ಅಸ್ಥಿ ಘಟನೆ ಎಂದೇ ಪ್ರಖ್ಯಾತವಾಗಿರುವ, ಚಿಮೂರ್ ಎನ್ಕೌಂಟರ್ ಸಮಯದಲ್ಲಿ ಬ್ರಿಟಿಷ್ ಸರಕಾರವು 125 ಸತ್ಯಾಗ್ರಹಿಗಳು ಹಾಗೂ ಸಾವಿರಾರು ಸ್ವಯಂಸೇವಕರನ್ನು ಬಂಧಿಸಿತು. ಹೇಮು ಕಾಲಾಣಿ ಹಾಗೂ ದಾದಾ ನಾಯಕ್ ರಿಗೆ 1943 ರಲ್ಲಿ ಬ್ರಿಟಿಷ್ ಸರ್ಕಾರವು ಗಲ್ಲು ಶಿಕ್ಷೆಗೆ ವಿಧಿಸಿತು. ​ಕ್ವಿಟ್ ಇಂಡಿಯಾ ಆಂದೋಲನದ ಸಮಯದಲ್ಲಿ, ಸರ್ಕಾರಿ ಭವನದ ಮೇಲೆ ರಾಷ್ಟ್ರ ಧ್ವಜರೋಹಣ ಮಾಡಲು ಪ್ರಯತ್ನಿಸಿದ 6 ಸ್ವಯಂಸೇವಕ ಮೇಲೆ ಬ್ರಿಟಿಷ್ ಪೊಲೀಸರು ಗುಂಡು ಹಾರಿಸಿದರು. ಅವರಲ್ಲಿ ದೇವಿಪದ ಚೌಧರಿ ಮತ್ತು ಜಗತ್ಪತಿ ಕುಮಾರರು ಹುತಾತ್ಮರಾದರು. ​ನಿರಂತರ ಹೋರಾಟ ಮಾತ್ರವಲ್ಲದೆ, ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದ ಅರುಣ ಅಸಫ್ ಅಲಿ ಹಾಗೂ ಅಚ್ಯುತ ರಾವ್ ಪಟವರ್ಧನ್, ಮತ್ತು ನಾನಾ ಪಾಟೀಲರಂತಹ ನಾಯಕರಿಗೆ ಆಶ್ರಯ ಒದಗಿಸುವಲ್ಲಿ ಆರೆಸ್ಸೆಸ್ ಸ್ವಯಂಸೇವಕರು ವಹಿಸಿದ ಪಾತ್ರ ಅತ್ಯಂತ ಮಹತ್ವದ್ದು.
​ಆಗಿನ ಗೃಹ ಇಲಾಖೆ ಹಾಗೂ ಬ್ರಿಟಿಷ್ ಪೊಲೀಸರು ಸಿದ್ಧಪಡಿಸಿದ ವರದಿಯಲ್ಲಿ ಸಂಘವನ್ನ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಪಣತೊಟ್ಟು ಬಲಿದಾನಕ್ಕೂ ಸಿದ್ಧರಾಗಿರುವ ಯುವಕರ ಸಮೂಹ ಎಂದೇ ಬಣ್ಣಿಸಲಾಗಿ ದೆ. 1943ರ ಒಂದು ವರದಿಯ ಪ್ರಕಾರ, ಆರೆಸ್ಸೆಸ್ ನ ಮುಖ್ಯ ಉದ್ದೇಶ ಬ್ರಿಟಿಷರನ್ನು ಭಾರತದಿಂದ ಹೊರಗೆ ಅಟ್ಟುವುದೆ ಆಗಿದೆ ಎಂದು ಬರೆದ ಸಾಕ್ಷಿಗಳಿವೆ
​1928 ರಲ್ಲಿ ಶ್ರೀ ವಿಠ್ಠಲ ಭಾಯ್ ಪಟೇಲ್ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್ ನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 1929 ರಲ್ಲಿ ಶ್ರೀ ಮದನ ಮೋಹನ ಮಾಳವೀಯರು ನಾಗ್ಪುರದ ಶಾಖೆಗೆ ಭೇಟಿ ನೀಡಿದ್ದರು. ಮಹಾತ್ಮ ಗಾಂಧಿ ಸ್ವತಃ ಅಪ್ಪಾಜಿ ಜೋಶಿ ಯವರ ಜೊತೆಗೂಡಿ ಡಿಸೆಂಬರ್ 25, 1934 ರಲ್ಲಿ ವಾರ್ಧಾದಲ್ಲಿ ನಡೆದ ಸಂಘದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದ ತರುವಾಯ ಡಾಕ್ಟರ್ ಜೀ ಯೊಂದಿಗೆ ಸುಧೀರ್ಘ ಚರ್ಚೆಯಲ್ಲಿ ಪಾಲ್ಗೊಂಡು ಆರೆಸ್ಸೆಸ್ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
​ಹಿರಿಯ ಕಾಂಗ್ರೆಸ್ ನಾಯಕರಾದ ರಾಧಾಕೃಷ್ಣ ಸೇಠ್ ನೆಹರೂ ಜೊತೆಗಿನ ತಮ್ಮ ಸಂಭಾಷಣೆಯಲ್ಲಿ ಆರೆಸ್ಸೆಸ್ ಎಂದರೆ ದೃಷ್ಟಿ ಧೃತಿ ಇಲ್ಲದ ಯುವಕರ ಸಮೂಹವಲ್ಲ. ದೇಶ ಸೇವೆಗೆ ಸದಾ ಕಾಲ ತುಡಿಯುವ ದೇಶಭಕ್ತ ಯುವಕರ ಸಂಘ ಎಂದಿದ್ದರ ಬಗ್ಗೆ ಒಪ್ಪಿಕೊಳ್ಳುತ್ತಾರೆ. ಭಾರತ ರತ್ನ ಡಾಕ್ಟರ್ ಭಗವಾನ್ ದಾಸ್ ಕಾಂಗ್ರೆಸ್ ನಾಯಕರನ್ನು ಸ್ವಯಂಸೇವಕರು ರಕ್ಷಿಸಿದ ಬಗ್ಗೆ ಹೀಗೆ ಬರೆಯುತ್ತಾರೆ, “ಮುಸ್ಲಿಂ ಲೀಗ್ ಎಲ್ಲಾ ಕಾಂಗ್ರೆಸ್ ನಾಯಕರನ್ನು ಒಂದೇ ಬಾರಿಗೆ ನಿರ್ನಾಮ ಮಾಡುವ ಕೆಲಸಕ್ಕೆ ಕೈಹಾಕಿತ್ತು. ಅಕ್ಟೋಬರ್ 1, 1948 ರಲ್ಲಿ ಈ ಮಾಹಿತಿ ಕಿವಿಗೆ ಬಿದ್ದ ತಕ್ಷಣ ಸ್ವಯಂಸೇವಕರು ನೆಹರೂ ಹಾಗೂ ಸರ್ದಾರ್ ಪಟೇಲರಿಗೆ ಮುಸ್ಲಿಂ ಲೀಗ್ ಸಶಸ್ತ್ರವಾಗಿ ನಡೆಸಲಿರುವ ಕುತಂತ್ರದ ಅರಿವು ಮಾಡಿಕೊಡದೆ ಹೋಗಿದ್ದರೇ, ಭಾರತ ಸರ್ಕಾರದ ನಾಯಕರುಗಳನ್ನು ನಿರ್ನಾಮ ಮಾಡಿ, ಮುಸ್ಲಿಂ ಲೀಗ್ ಕೆಂಪು ಕೋಟೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಿಯೇ ಬಿಡುತ್ತಿತ್ತು.”
ತಮ್ಮ ಪ್ರಾಣದ ಹಂಗು ತೊರೆದು ಈ ಮಾಹಿತಿಯನ್ನು ಸ್ವಯಂಸೇವಕರು ನೀಡದೆ ಹೋಗಿದ್ದರೇ ಅಂದೇ ಇಡಿಯ ಭಾರತ ದೇಶ ಪಾಕಿಸ್ತಾನವನ್ನು ಬಿಡುತ್ತಿತ್ತು.ಹಿಂದೂಗಳ ಮಾರಣೋಮಕ್ಕೆ ನಾಂದಿ ಹಾಡಿ, ಮುಸ್ಲಿಂ ಲೀಗ್ ಪುನಃ ಈ ದೇಶವನ್ನು ದಾಸ್ಯಕ್ಕೆ ತಳ್ಳಲು ಸನ್ನದ್ಧವಾಗಿತ್ತು” ಎಂದು ಬರೆಯುತ್ತಾರೆ. ವಿಪರ್ಯಾಸ ನೋಡಿ, ಭಗವಾನ್ ದಾಸರು ಈ ಸಾಲುಗಳನ್ನು ಬರೆಯುವಾಗ, ಸಹಸ್ರ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ತಮ್ಮದಲ್ಲದ ತಪ್ಪಿಗೆ ಕಾರಾಗೃಹ ಶಿಕ್ಷೆಗೆ ದೂಡಲಾಗಿತ್ತು. ಅದೊಂದು ಮಹಾಪರಾಧ, ಯಾವ ಸ್ವಯಂಸೇವಕನು ತನ್ನ ಕನಸಿನಲ್ಲೂ ಯೋಚಿಸದ ಘಟನೆಯೊಂದು ನಡೆದು ಹೋಗಿತ್ತು – ಗಾಂಧಿ ಹತ್ಯೆ.
ಯಾವ ನ್ಯಾಯಾಲಯವೂ, ಸಮಿತಿಯು ಸಂಘದ ಮೇಲೆ ಹೊರೆಸಲಾಗಿದ್ದ ಆಪಾದನೆ ನಿಜವೆಂದು ಹೇಳಲಿಲ್ಲ. ಅದು ಮಿಥ್ಯೆ ಎಂದು ಸಾಬೀತಾದರೂ ಇಂದಿನ ವರೆಗೂ ಸಂಘದ ಮೇಲಿನ ಕೆಸರೆರಚಾಟ ನಿಂತಿಲ್ಲ.
Chapter 1:https://postcardkannada.in/an-insight-into-rss-worlds-biggest-voluntary-organisation/
Chapter 2:https://postcardkannada.in/rss-how-the-organization-built-by-doctor-ji-grew-exponentially/
Chapter 3:https://postcardkannada.in/what-are-the-shakas-of-rss-heres-some-details-article-on-it/
-Dr.Sindhu prashanth
Tags

Related Articles

FOR DAILY ALERTS
Close