ಪ್ರಚಲಿತ

ನಿಜವಾಗಿಯೂ LIC ಯನ್ನು ಮಾರಾಟ ಮಾಡಲಾಗುತ್ತದೆಯೇ? ಯಾರಿಗೆ ಮಾರಲಾಗುತ್ತದೆ? ಇದರ ಕುರಿತಾದ ಸಂಕ್ಷಿಪ್ತ ಲೇಖನ ಓದಿ!

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ವರ್ಷ 2020-21 ನೆಯ ಬಜೆಟ್ ಅನ್ನು ಮಂಡನೆ ಫೆಬ್ರವರಿ ತಿಂಗಳ 1ನೆಯ ತಾರೀಖಿನಂದು ಲೋಕಸಭೆಯಲ್ಲಿ ಮಂಡನೆ ಮಾಡಿದರು. ಯಥಾ ಪ್ರಕಾರ ವಿರೋಧ ಪಕ್ಷಗಳು ಇದೊಂದು ನೀರಸ ಬಜೆಟ್ ಎಂದು ಬಿಟ್ಟರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಗುಲಾಮರು ಅತೀ ಮೇಧವಿಯಂತೆ ಅರ್ಥಶಾಸ್ತ್ರ ಅರಿದು ಕುಡಿದಿರುವ ರೀತಿ ಮಾತನಾಡುತ್ತಿದ್ದಾರೆ. ಕೆಲವರಂತೂ LIC (Life Insurance Corporation) ಭಾರತೀಯ ಜೀವ ವಿಮಾ ನಿಗಮ ಮರುತ್ತಾರಂತೆ ಎಂದು ಗುಲ್ಲೆಬ್ಬಿಸಿದ್ದಾರೆ.
ಅಷ್ಟಕ್ಕೂ, ನಿಜವಾಗಿಯೂ LIC ಯನ್ನು ಮಾರಾಟ ಮಾಡಲಾಗುತ್ತದೆಯೇ? ಯಾರಿಗೆ ಮಾರಲಾಗುತ್ತದೆ? ಇದರ ಕುರಿತಾದ ಸಂಕ್ಷಿಪ್ತ ಲೇಖನ ಓದಿ.

LIC ಮಾರುತ್ತಾರೆ ಅಂತೆ, ಹೌದಾ?

ಮೇಲೆ ತಿಳಿಸಿದಂತೆ LIC ಯನ್ನು ಯಾರಿಗೂ ಮಾರುವುದಿಲ್ಲ. ಬದಲಿಗೆ ಕೇಂದ್ರ ಸರ್ಕಾರ Initial Public Offerings (IPO) ಮೂಲಕ LIC ಯ ಸ್ವಲ್ಪ ಪಾಲನ್ನು Disinvestment ಮಾಡುವ ನಿರ್ಧಾರವನ್ನು ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಿದೆ.

IPO ಅಂದರೆ ಷೇರು ಮಾರುಕಟ್ಟೆ ಪ್ರವೇಶಿಸುವ ಮೊದಲು ಅದರ ಷೇರು ಮೌಲ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಮುಂದಿನ ಹಣಕಾಸು ವರ್ಷದ (ಅಂದರೆ 2020) ಜೂನ್ ತಿಂಗಳಲ್ಲಿ LIC ಷೇರು ಮಾರುಕಟ್ಟೆ ಪ್ರವೇಶಿಸಲಿದೆ.

ಏಷ್ಯಾದ ಎರಡನೇ ಅತೀ ದೊಡ್ಡ ಕಂಪನಿಯಾಗಿ ಹೊರಹೊಮ್ಮಲಿರುವ LIC
ಹೌದು, ಕೇಂದ್ರ ಸರ್ಕಾರದ ಒಡೆತನದ LIC ಷೇರು ಮಾರುಕಟ್ಟೆಯಲ್ಲಿ ಪ್ರವೇಶಿಸುವ ಮೂಲಕ ಭಾರತದ ಅತೀ ದೊಡ್ಡ ಕಂಪೆನಿಯಾಗುವ ಸಾಧ್ಯತೆ ಇದೆ ಮತ್ತು ಈ ಮೂಲಕ ಪ್ರಸ್ತುತ ಅತೀ ದೊಡ್ಡ ಕಂಪನಿಗಳೆಂದು ಕರೆಸಿಕೊಳ್ಳುವ ಟಾಟಾ ಮತ್ತು ರಿಲಯನ್ಸ್ ಅನ್ನು ಹಿಂದಿಕ್ಕಲಿದೆ. ಇದಕ್ಕೆ ಕಾರಣ ಟಾಟಾ ಕಂಪನಿಯ ಮಾರ್ಕೆಟ್ ಕ್ಯಾಪಿಟಲ್ ಸುಮಾರು 9 ಲಕ್ಷ ಕೋಟಿ ರೂಪಾಯಿ ಆಗಿದ್ದರೆ, ರಿಲಯನ್ಸ್ ಮಾರ್ಕೆಟ್ ಕ್ಯಾಪಿಟಲ್ ಸುಮಾರು 10 ಲಕ್ಷ ಕೋಟಿ ರೂಪಾಯಿಗಳಾಗಿರುತ್ತದೆ ಆದರೆ LIC ಯ ಮಾರ್ಕೆಟ್ ಕ್ಯಾಪಿಟಲ್ ಸುಮಾರು 31 ಲಕ್ಷ ಕೋಟಿ ರೂಪಾಯಗಳು. ಹಾಗಾಗಿ LIC ಕೇವಲ ಭಾರತ ಮಾತ್ರವಲ್ಲ ಏಷ್ಯಾದ ಷೇರು ಮಾರುಕಟ್ಟೆಯ ಕಿಂಗ್ ಪಿನ್ ಆಗಿ ಹೊರಹೊಮ್ಮಲಿದೆ.

IRCTC ಕಥೆ ಏನಾಯ್ತು ಗೊತ್ತಾ?

ಭಾರತೀಯ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಶನ್ (IRCTC) ಕೂಡ ಪ್ರಸ್ತುತ ಹಣಕಾಸು ವರ್ಷದಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿತು. ಇನ್ನು ಇದರ IPO ಪ್ರತೀ ಶೇರಿಗೆ 320 ರೂಪಾಯಿ ದರ ನಿಗದಿಯಾಗಿತ್ತು. ಇದೇ ಕಳೆದ 2019ರ ಅಕ್ಟೋಬರ್ ತಿಂಗಳಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ ದಿನ 630 ರೂಪಾಯಿಗೆ ಷೇರಿನ ಬೆಲೆ ನಿಗದಿಯಾಗಿತ್ತು. ಇಂದು ಪ್ರಸ್ತುತ (ಫೆಬ್ರವರಿ 5, 2020) IRCTC ಒಂದು ಷೇರಿನ ಬೆಲೆ ಸುಮಾರು 1500 ರೂಪಾಯಿಗೆ ಏರಿಕೆ ಆಗಿದೆ.

ಯಾರ್ಯಾರು LIC ಷೇರು ಪಡೆದುಕೊಳ್ಳಬಹುದು?

LIC ಯ IPO ಒಂದು ಸಾವಿರ ರೂಪಾಯಿಗೂ ಹೆಚ್ಚು ದರದಲ್ಲಿ ಲಿಸ್ಟ್ ಆಗಲಿದ್ದು, ಇದನ್ನು ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ (FII), ಡೊಮೆಸ್ಟಿಕ್ ಇನ್ಸ್ಟಿಟ್ಯೂಷನಲ್ (DII), ದೊಡ್ಡ ಷೇರು ಬಂಡವಾಳ ಹೂಡಿಕೆದಾರು ಸೇರಿದಂತೆ ಸಾಮಾನ್ಯ ಡಿ ಮ್ಯಾಟ್ ಖಾತೆ ಹೊಂದಿರುವ ಯಾರು ಬೇಕಾದರೂ ಖರೀದಿಸಬಹುದಾಗಿದೆ.

Tags

Related Articles

FOR DAILY ALERTS
Close