ಅಂಕಣಪ್ರಚಲಿತ

ವಿಶ್ವಸಂಸ್ಥೆ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದೆಯಾ ಅಥವಾ ಅರಳು ಮರುಳೆಂಬ ಸಂದೇಶ ಸಾರುತ್ತಿದೆಯಾ.? ಈ ವಿಚಾರಗಳಿಗೆ ಮಾತ್ರವೇ ಸೀಮಿತವಾಗಿದೆಯಾ ವಿಶ್ವಸಂಸ್ಥೆ.?

 ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕ ಒಂದು ಮುಂದುವರೆದ  ದೇಶ..ಬ್ರಿಟನ್ ಅಂತೂ ತಮಗಿಂತ ನಾಗರೀಕತೆ ಹೊಂದಿರುವ ದೇಶವೇ ಇಲ್ಲ ಎಂದು ಹೇಳಿಕೊಳ್ಳುತ್ತದೆ. ಚೈನವಂತೂ ಏಷ್ಯಾದಲ್ಲಿ ಬಲಿಷ್ಠ ರಾಷ್ಟ್ರ ಮತ್ತು ಜನಸಂಖ್ಯೆಯಲ್ಲೂ ದೊಡ್ಡ ರಾಷ್ಟ್ರ..ರಷ್ಯಾ ಕೂಡಾ ಅತ್ಯಂತ ಮುಂದುವರೆದ ರಾಷ್ಟ್ರ…ಹೀಗೆ ಬಲಿಷ್ಠ ರಾಷ್ಟ್ರಗಳು ಸೇರಿ ತಮ್ಮ ತಪ್ಪನ್ನು ಸರಿ ಎಂದು ಪ್ರಪಂಚದೆದುರಲ್ಲಿ ತೋರಿಸಲು ಕಟ್ಟಿದ ಸಂಸ್ಥೆಯೇ ವಿಶ್ವ ಸಂಸ್ಥೆ.ಇದೊಂದು ಹೌದಪ್ಪಗಳ ಸಂಸ್ಥೆ .. ಮೂರು ಕೊಟ್ಟರೆ ಮುತ್ತಪ್ಪನ ಕಡೆ ಆರು ಕೊಟ್ಟರೆ ರಾಮಪ್ಪನ ಕಡೆ. ಅಸಲಿಗೆ ಯಾವುದೇ ದೇಶವು ಇನ್ನೊಂದು ದೇಶದ ಮೇಲೆ ಯುದ್ಧ ಹೂಡುವಂತಿಲ್ಲ,ಅತಿಕ್ರಮಣ ಮಾಡುವಂತಿಲ್ಲ ಎಂದು ಪ್ರಪಂಚದ ಶಾಂತಿಯನ್ನು ಕಾಪಾಡಲು ೧೯೪೫ ರಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು..ಒಂದನೇ ಮಹಾಯುದ್ಧ ಎರಡನೇ ಮಹಾಯುದ್ಧ ಎಂದು ಜರ್ಮನಿ,ಜಪಾನ್,ಆಸ್ಟ್ರೇಲಿಯಾ ಇಟಲಿ ದೇಷಗಟ್ಟ ಬೆರಳು ತೋರಿಸುತ್ತಾ ವಿಶ್ವಸಂಸ್ಥೆಯನ್ನು ನಿರ್ಮಿಸಲಾಯಿತು. ಸರಿ ಸಂಸ್ಥಾಪಕ ಸದಸ್ಯರಾಗಿ ಮೇಲೆ ಹೇಳಿದ ರಾಷ್ಟ್ರಗಳಲ್ಲದೆ ಫ್ರಾನ್ಸ್ ಕೂಡ ಸೇರಿಕೊಂಡಿತ್ತು.ಆದರೆ ವಿಡಂಬನೆ ಏನು ಗೊತ್ತಾ? ವಿಶ್ವಸಂಸ್ಥೆ ಸ್ಥಾಪನೆಯಾಗುವಾಗ ಸ್ವತಃ ಬ್ರಿಟನ್ ಭಾರತದ ಮೇಲೆ ಅತಿಕ್ರಮಣ ನಡೆಸುತ್ತಿತ್ತು.ಚೈನಾ ಟಿಬೆಟ್ ದೇಶವನ್ನು ನುಂಗಿ ಹಾಕಲು ಹೊಂಚು ಹಾಕುತ್ತಿತ್ತು..
          ಭಾರತವೆಂಬ ಸುಸಂಸ್ಕೃತ ದೇಶವನ್ನು ಬಡತನದ ದವಡೆಗೆ ತಳ್ಳಿ ಇಲ್ಲಿನ ಸರ್ವ ಸಂಪತ್ತನ್ನು ಲೂಟಿ ಹೊಡೆದು ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ದೇಶವೆಂಬ ಪಟ್ಟಕ್ಕೆ ದೂಡಿದ ಕೀರ್ತಿ ಬ್ರಿಟನ್ ಗೆ ಸಲ್ಲುತ್ತದೆ. ಹಿಂದಿ ಚೀನೀ ಭಾಯಿ ಭಾಯಿ ಎಂದು ಹೇಳುತ್ತಾ ಬೆನ್ನಿಗೆ ಚೂರಿ ಹಾಕಿ ಇಂದಿಗೂ ಅರುಣಾಚಲದ ಮೇಲೆ ಕಣ್ಣಿಟ್ಟಿರುವ  ಚೈನಾ..ಭಾರತದಲೆಕ್ಕವಿಲ್ಲದಷ್ಟು ವಿಜ್ಞಾನಿಗಳನ್ನು ಸಾವಿನ ದವಡೆಗೆ ದೂಡಿ ಅಪ್ಪಟ ದೇಶಭಕ್ತ ಶಾಸ್ತ್ರೀಜಿಯನ್ನು ದಾರಿಯಿಂದ ಸರಿಸಿದ ಕುತಂತ್ರಿ ದೇಶ ರಷ್ಯಾ..ತನ್ನ ಬೆಲೆ ಬೇಯಿಸುವುದಕ್ಕಾಗಿ ರಷ್ಯಾವನ್ನು ದೊಡ್ಡಣ್ಣನಾಗದಂತೆ ದೂರವಿರಿಸಲು ಪಾಕಿಸ್ತಾನಕ್ಕೆ ಉಗ್ರಗಾಮಿಗಳ ನಿರ್ಮಾಣಕ್ಕಾಗಿ ಕೋಟಿಗಟ್ಟಲೆ ಡಾಲರ್ ಗಳನ್ನೂ ಹಿಂಬಾಗಿಲ ಮೂಲಕ ಸುರಿಯುತ್ತಿರುವ ಅಮೆರಿಕಾ… ಹೇಳಿ ಇವುಗಳಲ್ಲಿ ಯಾವುದಾದರೂ ಒಂದು ರಾಷ್ಟ್ರಕ್ಕೆ ಶಾಂತಿಯ ಕುರಿತು ಮಾತನಾಡುವ ನೈತಿಕತೆ ಇದೆಯಾ?.ಸ್ವತಃ ಇತರ ರಾಷ್ಟ್ರಗಳ ಮೇಲೆ ಕಾಲು ಕೆರೆದು ಯುದ್ಧಕ್ಕೆ ಹೋಗುವ ರಾಷ್ಟಗಳು ಜಗತ್ತಿಗೆ ಯಾವ ಸಹ ಬಾಳ್ವೆಯ ಪಾಠ ಮಾಡಬಲ್ಲವು? ಸ್ವತಃ ಅಮೆರಿಕಾಗೆ ಚೀನಾ ಮತ್ತು ರಷ್ಯಾವನ್ನು ಕಂಡರಾಗುವುದಿಲ್ಲ. ತಮ್ಮ ಶಕ್ತಿಯನ್ನು ತೋರಲು ,ಇತರ ರಾಷ್ಟ್ರಗಳ ಮೇಲಿನ ತಮ್ಮ ಹಿಡಿತವನ್ನು ಬಲಪಡಿಸಲು ಅಮೆರಿಕಾ ಮತ್ತು ರಷ್ಯಾಗಳು ಸಿರಿಯಾ,ಇರಾಕ್ ಮತ್ತು ಅಫಘಾನಿಸ್ತಾನವನ್ನು ಅಕ್ಷರಶಃ ನರಕವನ್ನಾಗಿಸಿವೆ..ಇನ್ನು ಅಲ್ಲಿ ತಮಗೇನೂ ಲಾಭವಿಲ್ಲ ಎಂದು ಅರಿವಾದಾಗ ಎರಡೂ ರಾಷ್ಟ್ರಗಳು ಅಲ್ಲಿಂದ ಕಾಲು ಕಿತ್ತಿವೆ..ಅಲ್ಲೀಗ ಬಡತನ ಯುದ್ಧವಲ್ಲದೆ ಮತ್ತೇನೂ ಉಳಿದಿಲ್ಲ.
          ತಾನೇ ಹಣ ನೀಡಿ ಯುದ್ಧ ಸಾಮಾಗ್ರಿಗಳನ್ನು ನೀಡಿ ಬೆಳೆಸಿದ ಉಗ್ರರು ತನ್ನದೇ ದೇಶದ ಅವಳಿ ಗೋಪುರಗಳ ಮೇಲೆ ದಾಳಿ ನಡೆಸಿದಾಗ ಅಮೆರಿಕಾ ಬೆಚ್ಚಿ ಬಿದ್ದಿತ್ತು. ಆಗ ವಿಶ್ವ ಸಂಸ್ಥೆಯೂ ಉಗ್ರಗಾಮಿಗಳನ್ನು ಮಟ್ಟಹಾಕಬೇಕೆಂಬ ಮಂತ್ರ ಪಠಿಸಲು ಪ್ರಾರಂಭಿಸಿತು..ಅಮೆರಿಕಾದ ನ್ಯಾಟೋ ಪಡೆಗಳು ಶಾಂತಿ ಸ್ಥಾಪನೆಗೆಂದು ಇರಾಕ್ ನಲ್ಲಿ ಇಳಿಯಿತು. ಮುಂದೆ ನಡೆದದ್ದು ಇತಿಹಾಸ..ಸಾಮಾನ್ಯ ಜನರ ಜೀವನ ನರಕ ಸದೃಶವಾಯಿತು.ವಿದ್ಯಾಭ್ಯಾಸ ವಸತಿ ಆಹಾರಾ ಯಾವುದೊಂದೂ ಇಲ್ಲದೆ ಅಲ್ಲಿಯ ಜನರು ಬೀದಿ ಪಾಲಾದರು.ಅಷ್ಟಕ್ಕೂ ಅಷ್ಟೊಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅಮೇರಿಕ ಮತ್ತು ರಷ್ಯಾದ ಸಹಾಯವಿಲ್ಲದೆ ಭಯೋತ್ಪಾದಕರಿಗೆ ಸಿಗಲು ಹೇಗೆ ಸಾಧ್ಯ ಎಂದು ವಿಶ್ವಸಂಸ್ಥೆ ಒಂದು ಬಾರಿಯೂ ಕೇಳಲಿಲ್ಲ.ಅಕ್ಷರಸಹ ಭಿಕ್ಷುಕ ದೇಶವಾಗಿರುವ ಪಾಕಿಸ್ತಾನಕ್ಕೆ ಉಗ್ರನಿಗ್ರಹದ ಹೆಸರಲ್ಲಿ ಕೋಟ್ಯಂತರ ಡಾಲರ್ ಸುರಿಯುತ್ತಿರುವ ಅಮೇರಿಕಾದ ಬಗ್ಗೆಯೂ ವಿಶ್ವಸಂಸ್ಥೆ ಸೊಲ್ಲೆತ್ತುವುದೇ ಇಲ್ಲ..
      ಭಾರತದ ಭೂಭಾಗವನ್ನು ಸ್ವತಃ ಆಕ್ರಮಿಸಿಕೊಂಡಿರುವ ಚೀನಾ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಹೇಳಿದ ತಕ್ಷಣ ವಿಶ್ವ ಸಂಸ್ಥೆ ಗೊತ್ತುವಳಿ ಮಂಡಿಸುವ ನಾಟಕವನ್ನು ನಡೆಸಿತು. ಅದೇ ಚೀನಾದ ಹಾಂಕಾಂಗ್ ನಲ್ಲೀಗ ಪ್ರತಿಭಟನೆ ನಡೆಯುತ್ತಿದೆ ಸಾವಿರಾರು ಜನ ರಸ್ತೆಗಿಳಿದಿದ್ದಾರೆ. ನೇಪಾಳದ ಪ್ರವಾಸದಲ್ಲಿರುವ ಚೀನಾದ ಅಧ್ಯಕ್ಷ ಬಹಿರಂಗವಾಗಿ ಪ್ರತಿಭಟನಾಕಾರರ ಮೂಳೆಯನ್ನು ಪುಡಿಗಯ್ಯಲಾಗುತ್ತದೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ..ಈಗ ಮಾತ್ರ ವಿಶ್ವಸಂಸ್ಥೆ ಫೆವಿಕೋಲ್ ನುಂಗಿರುವಂತೆ ಮೌನವಾಗಿ ಕುಳಿತಿದೆ.ಹಾಂಕಾಂಗ್ ನ ಪ್ರತಿಭಟನೆ ಚೀನಾದ ಆಂತರಿಕ ವಿಷಯವಾದರೆ ಕಾಶ್ಮೀರ ಹೇಗೆ ಅಂತರರಾಷ್ಟ್ರೀಯ ವಿಷಯವಾಗುತ್ತದೆ.ಭಾರತದ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಬೊಬ್ಬಿರಿಯುತ್ತಿರುವ ವಿಶ್ವ ಸಂಸ್ಥೆಗೆ ಪಾಕಿಸ್ಥಾನದಲ್ಲಿ ನರಳುತ್ತಿರುವ ಹಿಂದೂಗಳು ಕಾಣಿಸುವುದೇ ಇಲ್ಲ..ಹೋಗಲಿ ಪ್ರತಿನಿತ್ಯ ಇಲ್ಲವಾಗುವ ಮಸೀದಿಗಳು ಮತ್ತು ಕಾಣದಾಗುವ ಮುಸಲ್ಮಾನರೂ ಕಾಣಿಸುವುದಿಲ್ಲ.ಅಲ್ಲಿ ಮಾನವಹಕ್ಕುಗಳ ಪೂಜೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ ಭಾವಿಸಿದಂತಿದೆ.
        ಭಾರತ ಪಾಕಿಸ್ತಾನದ ಮೇಲೆ ತಿರುಗಿ ದಾಳಿ ನಡೆಸಿದಾಗ,ಕಾಶ್ಮೀರದಲ್ಲಿ ಗಲಭೆಕೋರ ಭಯೋತ್ಪಾದಕರನ್ನು ಕೊಂದಾಗ,ಇಸ್ರೇಲ್ ಸ್ವರಕ್ಷಣೆಗಾಗಿ ಗಾಝದ ಮೇಲೆ ಬಾಂಬ್ ಎಸೆದಾಗ ಮಾತ್ರ ಮೂಗು ತೂರಿಸಿ ಮಾನವ ಹಕ್ಕಿನ ರಾಗ ಎಳೆದು ಪ್ರತ್ಯಕ್ಷವಾಗುವ ವಿಶ್ವಸಂಸ್ಥೆ. ಅಫಗಾನ್ ನ ಮೇಲೆ ಟರ್ಕಿ ದಾಳಿ ಮಾಡುವಾಗ,ಕಾಶ್ಮೀರದ ಮೇಲೆ ನಿತ್ಯ ಪಾಕಿಸ್ತಾನ ದಾಳಿ ನಡೆಸಿ ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸುವಾಗ,ಇಸ್ರೇಲ್ ನ ಮೇಲೆ ಪ್ಯಾಲಸ್ತೇನ್ ದಾಳಿ ನಡೆಸುವಾಗ  ಮುಸುಕು ಹೊದ್ದು ಮಲಗಿರುತ್ತದೆ.ವಿಶ್ವಸಂಸ್ಥೆಯ ನ್ಯಾಯವೇನಿದ್ದರೂ ಅಮೇರಿಕ ಮತ್ತು ರಷ್ಯಾದ ಕೃಪಾಕಟಾಕ್ಷವಿರುವ ರಾಷ್ಟ್ರಗಳಿಗೆ ಮಾತ್ರ..ಇಂದೀಗ ಸ್ವತಃ ವಿಶ್ವಸಂಸ್ಥೆಯ ಬಳಿ ಹಣವಿಲ್ಲ. ವಿದ್ಯುತ್ ಬಿಲ್ ಕಟ್ಟಲೂ ಹಣವಿಲ್ಲದಿರುವ ದಯನೀಯ ಸ್ಥಿತಿಗೆ ವಿಶ್ವಸಂಸ್ಥೆ ತಲುಪಿದೆಯೆಂದರೆ ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ ಸ್ವತಹಾ ವಿಶ್ವಸಂಸ್ಥೆಯೇ.. ಹೆಚ್ಚಿನ ದೇಶಗಳಿಗೀಗ ವಿಶ್ವಸಂಸ್ಥೆಯ ಮೇಲೆ ನಂಬಿಕೆ ಹೊರತು ಹೋಗುತ್ತಿದೆ. ತಮಗೆ ಬೇಕಾದಾಗ ಬೇಕಾದ ರಾಷ್ಟ್ರವನ್ನು ಕಪ್ಪು ಪಟ್ಟಿಗೆ ಸೇರಿಸಿ ಉಳಿದ ರಾಷ್ಟ್ರಗಳ ಮೇಲೂ ಹಾಗೆಯೇ ಮಾಡುವಂತೆ ಒತ್ತಾಯವನ್ನು ವಿಶ್ವಸಂಸ್ಥೆಯ ಮೂಲಕ ಅಮೆರಿಕಾ ಮಾಡಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ..ಆ ಮೂಲಕ ಇತರ ದೇಶಗಳನ್ನು ತನ್ನ ಕಾಲಡಿಯಲ್ಲಿರಿಸಿಕೊಳ್ಳುವ ಅಮೆರಿಕಾದ ಬಳಿಯಯಲ್ಲಿರುವುದು “ ಬ್ಲಡ್ ಮನಿ” ಎಂಬುದು ಎಲ್ಲರಿಗೂ  ತಿಳಿದಿದೆ..ಅಂದ ಹಾಗೆ ವಿಶ್ವಸಂಸ್ಥೆಗೆ ಬರುವ ದೇಣಿಗೆಯಲ್ಲಿ ೨೨ ಶೇಕಡಾ ದೇಣಿಗೆಯನ್ನು ಅಮೆರಿಕಾ ನೀಡುತ್ತದೆ..ಸುಮ್ಮನೆ ಹೀಗೆ ನಿಮಗೆ ತಿಳಿದಿರಲಿ ಎಂದು ಹೇಳಿದೆ ಅಷ್ಟೇ!!!
-Deepashree M
Tags

Related Articles

FOR DAILY ALERTS
Close