ಪ್ರಚಲಿತ

ಕಮ್ಯುನಿಷ್ಟರ ನಾಡಿನಲ್ಲಿ ಮಿತಿ ಮೀರಿದ ಅಟ್ಟಹಾಸ.! ಗರ್ಭಿಣಿ ಹೆಂಗಸನ್ನೂ ಬಿಡದೆ ಕ್ರೌರ್ಯ ಮೆರೆದ ಜಿಹಾದಿಗಳು.! ಸಂಘಪರಿವಾರವನ್ನು ಕಂಡರೆ ಇವರಿಗ್ಯಾಕೆ ಇಷ್ಟೊಂದು ಕೋಪ.?

ನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಹೆತ್ತ ತಾಯಿ ಮತ್ತು ಹುಟ್ಟಿದ ನೆಲ ಸ್ವರ್ಗಕ್ಕಿಂತಲೂ ಮಿಗಿಲೆಂದು ಭಾವಿಸುವವರು ನಾವು.ದೇಶಕ್ಕಾಗಿ ಸೇವೆಸಲ್ಲಿಸಲು ಹಿಂದು ಮುಂದು ನೋಡದೆ ಉಟ್ಟ ಬಟ್ಟೆಯಲ್ಲಿ ಹೊರಡುವ ಅನೇಕರನ್ನು ನಾವು ನೋಡಿದ್ದೇವೆ..ಹಾಗೆ ಹೊರಟವರನ್ನು ಕೊಲ್ಲಲೆಂದೇ ಮಚ್ಚು ಹಿಡಿದು ತಿರುಗಾಡುವ ಜನರನ್ನು ನೀವು ಕಂಡಿದ್ದೀರಾ.? ಇಲ್ಲವಾದರೆ ದೇವರ ಸ್ವಂತ ನಾಡೆಂದು ಕರೆಸಿಕೊಳ್ಳುವ ಕೇರಳಕ್ಕೋ ಮಹಾ ದಾರ್ಶನಿಕರು ಜನಿಸಿದ ಪುಣ್ಯ ಭೂಮಿ ಪಶ್ಚಿಮ ಬಂಗಾಳಕ್ಕೋ ಭೇಟಿ ನೀಡಿ..ಅಲ್ಲಿ ಸಾಮಾನ್ಯ ದಿನಕ್ಕೋನದರಂತೆ ಅಲ್ಲದಿದ್ದರೂ,ವಾರಕ್ಕೊಂದರಂತೆ ಸ್ವಯಂ ಸೇವಕರ ಜೀವವು ಮಣ್ಣಾಗುವುದನ್ನು ಕಾಣಬಹುದು.ಈ ಎರಡು ರಾಜ್ಯಗಳು ಸಂಘದ ಕಾರ್ಯಕರ್ತರನ್ನು ಕೊಚ್ಚಿ ಹಾಕುವ ಕಟುಕರ ಕಾರ್ಖಾನೆಯಾಗಿರುವುದು ಖಂಡಿತಾ ಸುಳ್ಳಲ್ಲ..ಯಾರೋ ಒಬ್ಬ ಮುಸ್ಲಿಂ ಗುಂಪು ಥಳಿತಕ್ಕೊಳಗಾಗಿ ( ಅವನು ಕಳ್ಳ ಅತ್ಯಾಚಾರಿ ಎಂಬ ಕಾರಣಕ್ಕೆ ಅವನ ಸಮುದಾಯದ ಜನರೇ ಹೊಡೆದು ಕೊಂದರೂ ಮಾಧ್ಯಮ ಮತ್ತು ಬುದ್ದಿಜೀವಿಗಳ ಪ್ರಕಾರ ಹಿಂದುಗಳೇ ಅವನ ಸಾವಿಗೆ ಕಾರಣ ಮತ್ತು ಅವನು ಗೋಮಾಂಸ ಹೊಂದಿದ್ದ ಎಂಬ ಭ್ರಮೆ ! ಈ ಘಟನೆಯ ಮೂಲವಸ್ತು) ಸತ್ತು ಹೋದರೆ ತಿಂಗಳುಗಟ್ಟಲೆ ಟೌನ್ ಹಾಲ್ ನ ಮುಂದೆ ಎದೆಬಡಿದು ಬೊಬ್ಬಿರಿಯುವ ಯಾರೊಬ್ಬರೂ ಅನಾವಶ್ಯಕವಾಗಿ ಭೀಕರವಾಗಿ ಕೊಲೆಯಾದ ಸಂಘದ ಕಾರ್ಯಕರ್ತನ ಬಗ್ಗೆ ಸೊಲ್ಲೆತ್ತುವುದೂ ಇಲ್ಲ.ಖಂಡಿತವಾಗಿಯೂ ಪ್ರತಿಯೊಬ್ಬನ ಜೀವಕ್ಕೂ ಬೆಲೆ ಇದೆ ,ಮೃತನ ಕುಟುಂಬದ ಕಣ್ಣೀರಿಗೂ,ದುಃಖಕ್ಕೂ ಬೆಲೆ ಇದೆ..ಸುಳ್ಳು ಸುದ್ದಿಗೆ ಬಲಿಯಾದ ಸಾಮಾನ್ಯ ಮುಸಲ್ಮಾನನೊಬ್ಬನ ಜೀವಕ್ಕಿರುವಷ್ಟೇ ಬೆಲೆ ಸುಮ್ಮನೆ ಬಲಿಯಾದ ಸಂಘದ ಕಾರ್ಯಕರ್ತನ ಜೀವಕ್ಕೂ ಇದೆ ಎಂಬುದನ್ನು ಮಾತ್ರ ಮಾಧ್ಯಮಗಳು ಮತ್ತು ಬುದ್ದಿ ಜೀವಿಗಳು ಮರೆತುಬಿಡುತ್ತಾರೆ.

ಪಶ್ಚಿಮ ಬಂಗಾಳವೆಂಬ ದಾರ್ಶನಿಕರ ರಾಜ್ಯದಲ್ಲಿ ಇದುವರೆಗೂ ಲೆಕ್ಕವಿಲ್ಲದಷ್ಟು ಸಂಘದ ಕಾರ್ಯಕರ್ತರು ಕೊಲೆಯಾಗಿದ್ದಾರೆ. ಮೊದಲು ಕೇವಲ ಕಮಿನಿಸ್ಟರು ಮಾತ್ರ ಕಾರ್ಯಕರ್ತರನ್ನು ಮುಗಿಸಲು ಹೊರಟಿದ್ದಾರೆ ಈಗ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರೂ ತಾವೂ ಯಾವುದೇ ರಾಕ್ಷಸರಿಗೆ ಕಮ್ಮಿ ಇಲ್ಲವೆಂದು ಸಾಧಿಸಲು ಹೊರಟಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಎಷ್ಟೋ ಸಂಘ ಮತ್ತು ಬಿಜೆಪಿ ಕಾರ್ಯಕರ್ತರು ಕೊಲೆಯಾಗಿ ಹೋಗಿದ್ದಾರೆ. ಆದರೆ ಇಲ್ಲಿ ಕ್ರೌರ್ಯಕ್ಕೆ ಮಿತಿ ಮತ್ತು ಕೊನೆ ಎಂಬುದೇ ಇಲ್ಲ.ಇಡೀ ದೇಶವೇ ದಸರಾ ಹಬ್ಬದ ಸಂತೋಷದಲ್ಲಿದ್ದರೆ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಬೋಂಧುಗೋಪಾಲ್ ಪಾಲ್ ಎಂಬ ೩೫ ವರ್ಷ ವಯಸ್ಸಿನ ಸ್ವಯಂ ಸೇವಕ ತನ್ನ ಪುಟ್ಟ ಕುಟುಂಬದೊಂದಿಗೆ ಕಟುಕರ ಕೈಯ್ಯಲ್ಲಿ ಬಲಿಯಾಗಿದ್ದ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಗೋಪಾಲ್ ಅವರ ಗರ್ಭಿಣಿ ಪತ್ನಿ ಹಾಗು ೮ ವರ್ಷದ ಪುಟ್ಟ ಮಗನನ್ನು ಕೊಲೆಗಡುಕರು ಕೊಚ್ಚಿ ಕೊಂಡಿದ್ದರು. ಅಷ್ಟಕ್ಕೂ ಈ ಕುಟುಂಬದ ತಪ್ಪೇನು ಗೊತ್ತೇ?? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿರುವುದು..ವಿಜಯ ದಶಮಿಯನ್ನು ವಿಜೃಂಭಣೆಯಿಂದ ಆಚರಿಸುವ ಬಂಗಾಳದಲ್ಲಿ ಕುಟುಂಬವೊಂದು ಮನೆಯಿಂದ ಹೊರಗೆ ಬಾರದಿರುದನ್ನು ನೋಡಿ ಆಶ್ಚರ್ಯಗೊಂಡ ನೆರೆಹೊರೆಯವರು ನೋಡುವಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಪೂರ್ಣ ಕುಟುಂಬವನ್ನು ನೋಡಿ ಎಲ್ಲರಿಗೂ ಆಘಾತವಾಗಿತ್ತು.ಅಸಹಿಷ್ಣುತೆಯ ಬಗ್ಗೆ ಜ್ಞಾನವನ್ನು ಹಂಚುವ ಪ್ರಭಾವಿಗಳ್ಯಾರೂ ಈ ಕೊಲೆಯ ಕುರಿತಾಗಿ ಸೊಲ್ಲೆತ್ತುವುದಿಲ್ಲ..ಮಾಧ್ಯಮದವರಿಗೂ ಇದರಲ್ಲಿ ಯಾವುದೇ ಬ್ರೇಕಿಂಗ್ ನ್ಯೂಸ್ ಕಾಣಿಸುವುದಿಲ್ಲ.. ಗರ್ಭಿಣಿಯಾದ ಮಹಿಳೆಯೊಬ್ಬಳನ್ನು ಕಡಿದು ಕೊಲ್ಲುವ ಕ್ರೌರ್ಯವನ್ನು ತೋರಿದವರನ್ನು ಮನುಷ್ಯರೆಂದು ಹೇಗೆ ಕರೆಯಬಹುದು ??

ಹಾಗೆ ನೋಡಿದರೆ ಕಾಸರಗೊಡೊಂದು ನತದೃಷ್ಟ ಜಿಲ್ಲೆ. ಸಮೃದ್ಧ ಜಿಲ್ಲೆಯಾಗಿ ಎಲ್ಲಾ ಪ್ರಾಕೃತಿಕ ಸಂಪತ್ತನ್ನು ಹೊಂದಿಯೂ ಅವಗಣನೆಗೆ ಒಳಗಾದ ಜಿಲ್ಲೆ.. ಹೆತ್ತ ತಾಯಿಗೆ ಬೇಡವಾಗಿ ಮಲತಾಯಿಯಿಂದ ಪ್ರತಿನಿತ್ಯ ಶೋಷಿತವಾಗಿರುವ ಜಿಲ್ಲೆ. ಕನ್ನಡಿಗರೇ ಬಹುಸಂಖ್ಯಾತರಾಗಿರುವ ಜಿಲ್ಲೆಯು ಕೇರಳ ಸರ್ಕಾರಕ್ಕೆ ಬೇಡದ ಕೂಸು..ಕರ್ನಾಟಕಕ್ಕೇ ಸೇರಿಸಿಕೊಳ್ಳಿ ಕನ್ನಡಿಗರನ್ನು ರಕ್ಷಿಸಿ ಎಂದರೆ ಇತ್ತ ಕರ್ನಾಟಕದ ಕನ್ನಡ ಹೋರಾಟಗಾರರೂ ಕವಡೆ ಕಿಮ್ಮತ್ತೂ ಕೊಡುವುದಿರಲಿ ಕರುಣೆಯನ್ನೂ ತೋರಿಸುವುದಿಲ್ಲ..ಒಂದು ಕಾಲದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದ ಸುಸಂಸ್ಕೃತ ಜಿಲ್ಲೆಯಲ್ಲೀಗ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ.ರಾಜಕೀಯ ಪ್ರೇರಿತ ಕೊಲೆ ಮತ್ತು ಕೊಲೆಯತ್ನಗಳಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಕೇರಳ ರಾಜ್ಯದ ಮುಖ್ಯಮಂತ್ರಿಯ ತವರು ಜಿಲ್ಲೆ ಕಣ್ಣೂರಿನ ನೆರೆಯ ಜಿಲ್ಲೆಯಾಗಿರುವುದು ಕಾಸರಗೋಡಿನ ಇನ್ನೊಂದು ದುರಾದೃಷ್ಟ.ಕಾರಸಗೋಡು ಜಿಲ್ಲೆಯಲ್ಲಿ ಪ್ರಸಿದ್ದವಾದ ನಾಲ್ಕು ದೇವಾಲಯಗಳಿವೆ ಮಧೂರು ಸಿದ್ದಿವಿನಾಯಕ ದೇವಸ್ಥಾನ,ಮಲ್ಲ ದುರ್ಗಾ ಪರಮೇಶ್ವರಿ ದೇವಸ್ಥಾನ,ಕಣಿಪುರ ಕೃಷ್ಣ ದೇವಸ್ಥಾನ,ಅನಂತಪುರ ದೇವಸ್ಥಾನ..ಹೆದ್ದಾರಿ ರಚನೆಗಾಗಿ ಕಣಿಪುರ ದೇವಾಲಯವನ್ನು ಒಡೆಯಲಾಗುತ್ತದೆ ಎಂದು ತಿಳಿದಾಗ ದಾಖಲೆಯ ಸಂಖ್ಯೆಯಲ್ಲಿ ಜನರು ಹೊರಬಂದು ಹೋರಾಟವನ್ನೂ ನಡೆಸಿದ್ದರು.

ಹೀಗಿರುವ ಜಿಲ್ಲೆಯಲ್ಲಿ ರಾಜಕೀಯವಾಗಿ ನೋಡಿದರೆ ಎರಡು ಲೋಕಸಭೆ ಮತ್ತು ೩ ವಿಧಾನಸಭಾ ಕ್ಷೇತ್ರವನ್ನು ಕಾಸರಗೋಡು ಜಿಲ್ಲೆ ಹೊಂದಿದೆ.. ಮಲಯಾಳಿಗಳೇ ಅಧಿಕವಾಗಿರುವ ಉದುಮ ವನ್ನು ಹೊರತುಪಡಿಸಿದರೆ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಆದರೆ ಇಷ್ಟರವರೆಗೂ ಇಲ್ಲಿ ಭಾರತೀಯ ಜನತಾ ಪಕ್ಷ ಗೆದ್ದ ಇತಿಹಾಸವಿಲ್ಲ.ಆದರೆ ಪ್ರತಿ ಬಾರಿ ಚುನಾವಣಾ ನಡೆದಾಗಲೂ ಇಲ್ಲಿ ಭಾರತೀಯ ಜನತಾಪಕ್ಷದ ಮತಗಳಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.ಇದಕ್ಕಾಗಿ ಸಂಘದ ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಈ ಮತಗಳಿಕೆಯ ಹೆಚ್ಚಳವು ಕೇರಳದ ಕಮ್ಯುನಿಸ್ಟರನ್ನು ಹೊಟ್ಟೆಯುರಿಯುವಂತೆ ಮಾಡುತ್ತಿರುವುದಂತೂ ಸತ್ಯ.ಮೇ ೨೦೧೬ ರಲ್ಲಿ ನಡೆದ ಕೇರಳ ವಿಧಾನಸಭೆಯ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಕೇವಲ ೮೯ ಮತಗಳ ಅಂತರದಿಂದ ಮುಸ್ಲಿಂ ಲೀಗ್ ನ ಪಿ ಬಿ ಅಬ್ದುಲ್ ರಾಝಕ್ ರ ಎದುರು ಪರಾಭವವನ್ನು ಹೊಂದಿದ್ದರೆ,ಅದರ ಮೊದಲು ಮಂಜೇಶ್ವರ ಕ್ಷೇತ್ರದ ಶಾಸಕರಾಗಿದ್ದ ಕಮ್ಯುನಿಸ್ಟ್ ಪಕ್ಷದ ಕುಂಜಂಬು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು..ಆದರೆ ಸೋಲು ಖಾತರಿಯಿದ್ದ ಮುಸ್ಲಿಂ ಲೀಗ್ ಅಭ್ಯರ್ಥಿ ತನ್ನ ಪರವಾಗಿ ಕಳ್ಳ ಮತದಾನವನ್ನು ಮಾಡಿಸಿದ್ದಾರೆ ಎಂದು ಕೆ ಸುರೇಂದ್ರನ್ ಕೋರ್ಟ್ ನ ಮೆಟ್ಟಿಲೇರಿದ್ದರು.ಕೇರಳದ ಪ್ರಮುಖ ವಾರ್ತಾವಾತ್ರಿಕೆಗಳ ವರದಿಯ ಪ್ರಕಾರ ಮಂಜೇಶ್ವರದಲ್ಲಿ ೨೫೯ ಕಳ್ಳ ವೋಟುಗಳ ಮತದಾನ ನಡೆದಿತ್ತು.೨೬ ಮತದಾನರ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ೨೦ ಜನರು ಹೊರದೇಶಗಳಲ್ಲಿ ಇದ್ದ ವಿಷಯವೂ ಬೆಳಕಿಗೆ ಬಂದಿತ್ತು.

ಆದರೆ ನ್ಯಾಯಾಲಯದಲ್ಲಿ ವಿಷಯವು ಇತ್ಯರ್ಥವಾಗುವ ಮೊದಲೇ ಮುಸ್ಲಿಂ ಲೀಗ್ ಪಕ್ಷದಿಂದ ಚುನಾವಣೆಯಲ್ಲಿ ನಿಂತು ಶಾಸಕರಾದ ಅಬ್ದುಲ್ ರಝಕ್ ೨೦೧೮ ಅಕ್ಟೋಬರ್ ೨೦ ರಂದು ತೀರಿಕೊಂಡರು.. ಇದರಿಂದಾಗಿ ಈ ಕ್ಷೇತ್ರದಲ್ಲಿ ಈಗ ಉಪಚುನಾವಣೆಯು ಘೋಷಣೆಯಾಗಿದೆ ಮತ್ತು ಭಾರತೀಯ ಜನತಾ ಪಕ್ಷದಿಂದ ಕುಂಟಾರು ರವೀಶ್ ತಂತ್ರಿಯವರು ಸ್ಪರ್ಧಿಸುತ್ತಿದ್ದಾರೆ. ಕುಂಟಾರು ರವೀಶ್ ತಂತ್ರಿ ಇಲ್ಲಿಯ ಮತದಾರರಿಗೆ ಅಪರಿಚಿತರೇನೂ ಅಲ್ಲ.ಕಳೆದ ಬಾರಿ ಅವರು ಕಾಸರಗೋಡು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿದ್ದರು. ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಗೂಂಡಾಗಳು ಅವರ ಪ್ರಚಾರ ಯಾತ್ರೆಯ ಮೇಲೆ ಹಲ್ಲೆಯನ್ನು ಕೂಡಾ ನಡೆಸಿದ್ದರು. ಈ ಸಂದರ್ಭದಲ್ಲಿ ತಂತ್ರಿಗಳೊಂದಿಗಿದ್ದ ಅವರ ಸಹಚರರಾದ ಬಿಜೆಪಿ ಕಾರ್ಯಕರ್ತರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ೨೦೧೭ ರಲ್ಲಿ ಅಮಿತ್ ಶಾ ಅವರ ಯಾತ್ರೆಯ ಸಿದ್ಧತೆಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೋರಣವನ್ನು ನಿರ್ಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೂ ಕಮ್ಯುನಿಸ್ಟ್ ಗೂಂಡಾಗಳು ಹಲ್ಲೆ ನಡೆಸಿ ಮೂರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದರು.ಇದರ ಮುಂದುವರೆದ ಭಾಗವಾಗಿ ಈ ಬಾರಿ ದಡ್ಡನಂಗಡಿಯಲ್ಲಿ ಪ್ರಣಾಮ್ ಶೆಟ್ಟಿ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ದೇಶಕಾಯುವ ಸೈನಿಕನಾಗುವ ಹಂಬಲ ಹೊಂದಿದ್ದ ಪ್ರಣಾಮ್ ಶೆಟ್ಟಿ ತರಬೇತಿಗಾಗಿ ಮುಂಜಾನೆ ಜಾಗಿಂಗ್ ಮಾಡುವ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಮೂವರು ವ್ಯಕ್ತಿಗಳು ತಲವಾರಿನಿಂದ ಹಲ್ಲೆ ನಡೆಸಿದ ಪರಿಣಾಮವಾಗಿ ಮಾರಣಾಂತಿಕವಾಗಿ ಗಾಯಗೊಂಡ ಯುವಕನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಗಿದೆ.

ಸೋಲುವ ಭಯದಲ್ಲಿ ಕಮ್ಯುನಿಸ್ಟರು ಪ್ರಾಣತೆಗೆಯಲೂ ಹಿಂಜರಿಯುತ್ತಿಲ್ಲ. ಇನ್ನೂ ಎಷ್ಟು ಅಮಾಯಕರ ಜೀವನವನ್ನು ಬಲಿತೆಗೆದುಕೊಳ್ಳುತ್ತಾರೋ ದೇವರೇ ಬಲ್ಲ. ಕಾನೂನು ಕಾಪಾಡಬೇಕಾದ ಸರಕಾರವೇ ಅವರದ್ದಾಗಿರುವಾಗ ದೇವರನ್ನೂ ನಂಬದ ಅವರಿಗಿನ್ಯಾವ ಭಯ ಕಾಡಬೇಕು?? ಕೋಳಿ ಕುರಿಗಳನ್ನು ಕಡಿದಂತೆ ಅಮಾಯಕ ಕಾರ್ಯಕರ್ತರನ್ನು ಕೊಚ್ಚುವ ಗೂಂಡಾಗಳನ್ನು ರಕ್ಷಿಸುವವರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ.. ರಕ್ಷಕರೇ ಭಕ್ಷಕರಾಗಿರುವಾಗ ಯಾರಲ್ಲಿ ದೂರು ಹೇಳಬೇಕು??ಬಿಜೆಪಿ ಯ ಧ್ವಜ ಹಾರಬೇಕಾದರೆ ಇನ್ನೆಷ್ಟು ಬಲಿ ತೆಗೆದುಕೊಳ್ಳುತ್ತಾರೋ.?? ನಮ್ಮ ರಕ್ಷಣೆ ನಮ್ಮಕಯ್ಯಲ್ಲಿರಬೇಕಾದರೆ ಖಂಡಿತಾ ರಕ್ಷಕರು ನಮ್ಮವರಿರಬೇಕು..ಈ ಬಾರಿ ಮಂಜೇಶ್ವರದಲ್ಲಿ ಕಮಲವರಳುವುದು ಖಚಿತ..ಯಾಕೆಂದರೆ ಅದಕ್ಕಾಗಿ ನಮ್ಮವರನೇಕರು ರಕ್ತ ನೀಡಿದ್ದಾರೆ..ದೇವಾಲಯಗಳ ನಾಡಿನಲ್ಲಿ ತಂತ್ರಿಗಳು ಖಂಡಿತಾ ಕಮಲವನ್ನರಳಿಸಲಿ ..ಮತ್ತು ದಶಕಗಳಿಂದ ಅನ್ಯಾಯಕ್ಕೊಳಗಾದ ಕಾರ್ಯಕರ್ತರಿಗೆ ನ್ಯಾಯವನ್ನೂ ಒದಗಿಸಲಿ.

-Deepashree M

Tags

Related Articles

FOR DAILY ALERTS
Close