ಪ್ರಚಲಿತ

ಯುಪಿಎಯ ಕರಾಳ ಮುಖ ಬಯಲು ಮಾಡಿದ ಮಾಜಿ ಡಿಐಜಿ !! ಇಶ್ರತ್ ಜಹಾನ್ ಪ್ರಕರಣದಲ್ಲಿ ಮೋದಿ ಹಾಗೂ ಅಮಿತ್ ಶಾರನ್ನು ಬಂಧಿಸಲು ನಿರ್ಧರಿಸಿತ್ತಾ ಸಿಬಿಐ?!

ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮಾಜಿ ಡಿಐಜಿ ಒಬ್ಬರು ನ್ಯಾಯಾಲಯಕ್ಕೆ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ!! ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬಂಧಿಸಲು ಸಿಬಿಐ ನಿರ್ಧರಿಸಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದೆ!!

ಇಶ್ರತ್ ಜಹಾನ್ ನಕಲಿ ಎನ್’ಕೌಂಟರ್ ಆರೋಪ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು!! ಈ ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಬಂಧನಕ್ಕೊಳಪಡಿಸಲು ಸಿಬಿಐ ಬಯಸಿತ್ತು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಇಶ್ರತ್ ಜಹಾನ್ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಡಿಐಜಿ ವಂಝಾರಾ ಅವರು ನ್ಯಾಯಾಲಯದ ಮುಂದೆ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಮೋದಿ ಹಾಗೂ ಅಮಿತ್ ಶಾ ಬಂಧಿಸಲು ನಡೆದಿತ್ತು ಹುನ್ನಾರ!!

ಇಶ್ರತ್ ಜಹಾನ್ ಪ್ರಕರಣದಲ್ಲಿ ಅಂದಿನ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಬಂಧಿಸಲು ಸಿಬಿಐ ನಿರ್ಧರಿಸಿದ್ದು ಎಂದು ವಂಜಾರಾ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.  ಇಶ್ರತ್ ಜಹಾನ್ ಪ್ರಕರಣದಿಂದ ತಮ್ಮ ಹೆಸರನ್ನು ಕೈ ಬಿಡುವಂತೆ ಕೋರಿ ವಂಝಾರಾ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತ ವಿಚಾರಣೆ ವೇಲೆ ವಂಝಾರಾ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದು, ವಂಝಾರಾ ಅವರ ಹೇಳಿಕೆ ಇದೀಗ ಭಾರೀ ಸಂಚಲನವನ್ನು ಮೂಡಿಸಿದೆ. ಮೋದಿ ಹಾಗೂ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಲು  ದಾಖಲೆಗಳನ್ನು ಸಲ್ಲಿಸಿದ್ದರು. ಮೋದಿಯವರು ಗುಜರಾತ್ ರಾಜ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಹಸ್ಯವಾಗಿ ಪ್ರಕರಣದ ಬಗ್ಗೆ ಅವರನ್ನು ವಿಚಾರಣಾ ದೃಷ್ಟಿಯಿಂದ ಪ್ರಶ್ನಿಸಲಾಗಿದ್ದು ಎಂದು ದಾಖಲೆ ಸಲ್ಲಿಸಿದ್ದರು. 2004ರ ಜೂನ್ ತಿಂಗಳಿನಲ್ಲಿ ಇಶ್ರತ್ ಜಹಾನ್ ಸೇರಿದಂತೆ ಒಟ್ಟು ನಾಲ್ವರನ್ನು ಶಂಕಿತ ಉಗ್ರರೆಂದು ಎನ್ ಕೌಂಟರ್ ಮಾಡಲಾಗಿತ್ತು..

Related image.

ಏನಿದು ಇಶ್ರತ್ ಜಹಾನ್ ಪ್ರಕರಣ ?

ಈಕೆ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯ್ಬಾದಲ್ಲಿ ಕೆಲಸ ಮಾಡಿದ್ದ ಓರ್ವ ಭಾರತೀಯಳಾಗಿದ್ದು, ಇಶ್ರತ್ ಜಹಾನ್ ಹಾಗೂ ಈಕೆಯ ಜೊತೆಗಿದ್ದ ಮೂವರು ಭಯೋತ್ಪಾದಕರಿಗೆ ಗುಜರಾತಿನ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರಭಾವಿ ಮಂತ್ರಿಯಾಗಿದ್ದ ಅಮಿತಾ ಷಾರನ್ನು ಕೊಲ್ಲುವ ಉದ್ದೇಶವೇ ಇವರದ್ದಾಗಿತ್ತು!! ಆದರೆ ಇಂಟೆಲಿಜೆನ್ಸ್ ಏಜೆನ್ಸಿಗಳು ಎಲ್.ಇ.ಟಿ ಯೋಜನೆಯ ಬಗ್ಗೆ ಮಾಹಿತಿ ಪಡೆದಿದ್ದಲ್ಲದೇ ಇವರ ಉಪಾಯವನ್ನು ಛಿದ್ರಗೊಳಿಸಿ ಅವರನ್ನು ಮಟ್ಟಹಾಕಲಾಯಿತು!!!

ಗುಜರಾತ್ ನಲ್ಲಿ ಬಿಜೆಪಿಯ ಪ್ರಾಮುಖ್ಯತೆ ಕ್ರಮೇಣವಾಗಿ ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ಭಾವಿಸಿತ್ತು. ಅಷ್ಟೇ ಅಲ್ಲದೇ, ಅಮಿತ್ ಷಾ ಅವರಿಗೆ ಗುಜರಾತ್ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಹಾಗಾಗಿ ಅವರ ರಾಜಕೀಯ ವೃತ್ತಿ ಜೀವನವೂ ಕೊನೆಗೊಳ್ಳುತ್ತದೆ ಎಂದು ತಿಳಿದಿದ್ದ ಭ್ರಷ್ಟ ರಾಜಕೀಯ ಪಕ್ಷದ,

ದುರ್ಬಲವಾದ ಆಶಯಗಳು ಮಾತ್ರ ಯಶಸ್ವಿಯಾಗಲಿಲ್ಲ!! ಮೋದೀಜೀ ಹಾಗೂ ಅಮಿತ್ ಶಾರನ್ನು ಹೇಗಾದರೂ ಮಾಡಿ ಮೂಲೆಗುಂಪು ಮಾಡಬೇಕೆಂಬುವುದೇ ಇವರ ಮುಖ್ಯ ಉದ್ಧೇಶವಾಗಿತ್ತು ಎಂಬುದಕ್ಕೆ ಬೇರೆ ಉದಾಹರಣೆ ಬೇಕಾ?.. ಆದರೆ ಮೋದಿಜೀ ಹಾಗೂ ಅಮಿತ್ ಶಾರವರು ಇಡೀ ದೇಶವನ್ನು ಅಭಿವೃದ್ಧಿಪಡಿಸುವವರು ಆದರೆ ಇಂತಹ ಕೃತ್ಯಕ್ಕೆ ಯಾವತ್ತೂ ಮಾಡುವವರಲ್ಲ… ಎಂಬುವುದು ಇಡೀ ದೇಶದ ಜನರಿಗೆ ಗೊತ್ತು!! ಸತ್ಯಕ್ಕೆ ಯಾವತ್ತೂ ಜಯವಿದೆ!!

source: www.kannadaprabha.com

  • ಪವಿತ್ರ
Tags

Related Articles

Close