ಯಾವಾಗ ಮೋದಿ ಸರಕಾರ ಈಶಾನ್ಯ ರಾಜ್ಯಗಳಲ್ಲಿ ಗೆಲುವು ಸಾಧಿಸಿತೋ, ಯಾವಾಗ ಈಶಾನ್ಯ ರಾಜ್ಯಗಳಲ್ಲಿ ಎಡಪಂಥೀಯರ ಸರಕಾರವೊಂದು ಮಕಾಡೆ ಮಲಗಿತೋ, ಯಾವಾಗ ಈಶಾನ್ಯ ರಾಜ್ಯಗಳಲ್ಲಿ ೨೫ ವರ್ಷದ ನಂತರ, ಮೋದಿ ಎಂಬ ಕೂಗು ಕೇಳಿಸಿತೋ, ಅದು ಕರ್ನಾಟಕದ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯರವರಿಗೆ ನೇರವಾಗಿ ನಾಟಿದೆ!! ಮೋದಿ ಮೋದಿ ಎಂಬ ಕೂಗಿ ಈಶಾನ್ಯದಲ್ಲ ಕೇಳಿ ಬಂದಿದ್ದೇ, ಇತ್ತ ಕರ್ನಾಟಕ ಮುಖ್ಯಮಂತ್ರಿಗೆ ಬಿಸಿ ತಾಕಿದೆ!! ಉರಿ ತಾಳಲಾರದೇ, ಭಯಂಕರವಾಗಿ ಅಬ್ಬರಿಸಿರುವ ಸಿದ್ಧರಾಮಯ್ಯರವರು ಈ ಸಲ ಹುಲಿ ಬೋನಿಗೆ ಕೈ ಹಾಕುವ ಸಾಹಸಕ್ಕಿಳಿದಿದ್ದಷ್ಟೇ! ಕನ್ನಡಿಗರು ಮರ್ಯಾದೆ ತೆಗೆದಿದ್ದಾರೆ!! ಮುಖ್ಯಮಂತ್ರಿಯೆಂಬ ಯಾವ ಸೌಜನ್ಯವನ್ನೂ ಇಟ್ಟುಕೊಳ್ಳದೆ, ನಿಮ್ಮದು ಅತಿ ದರಿದ್ರ ಸರಕಾರ ಎಂದಿರುವ ಕನ್ನಡಿಗರು ಬಹುಷಃ ಸಿದ್ಧರಾಮಯ್ಯ ಸರಕಾರಕ್ಕೆ ಈ ಸಲ ಸೋಲಿನ ರುಚಿ ತೋರಿಸುವುದು ಬಹುತೇಕ ಖಚಿತವಾಗಿದೆ!!
“ತ್ರಿಪುರಾದ ಚುನಾವಣಾ ಫಲಿತಾಂಶ ನೇರವಾಗಿ ಕರ್ನಾಟಕ ಚುನಾವಣೆಗೂ ಸಹ ಫಲಿತಾಂಶ ನೀಡಲಿದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ!! ೨೦೧೪ ರ ಲೋಕಸಭಾ ಫಲಿತಾಂಶದಿಂದ, ಭಾರತೀಯ ಜನತಾ ಪಕ್ಷ ವಿಧಾನಸಭಾದಲ್ಲಿ ೫೦ ಕ್ಷೇತ್ರಗಳನ್ನು ಕಳೆದುಕೊಂಡಿತಲ್ಲದೇ, ಗೆದ್ದಿದ್ದು ಕೇವಲ ೨ ಕ್ಷೇತ್ರಗಳನ್ನು ಮಾತ್ರ!
ಆದ್ದರಿಂದ, ನಮ್ಮ ಆಲೋಚನೆಯನ್ನೇನೂ ಬದಲಿಸುವುದು ಬೇಡ! ಕರ್ನಾಟಕದಲ್ಲಿ ಯಾವ ಮೋದಿ ಅಲೆಯೂ ಇಲ್ಲ!”
- Post-Tripura results there is excitement in media about the results’ implications for Karnataka. Since 2014 Lok Sabha results BJP has lost Assembly segments in over 50 Lok Sabha Seats & has won only about 2 LS seats. So let us not lose perspective: there is no Modi wave here
Post #Tripura results there is excitement in media about the results’ implications for Karnataka.
Since 2014 Lok Sabha results #BJP has lost Assembly segments in over 50 Lok Sabha Seats & has won only about 2 LS seats.
So let us not lose perspective: there is no Modi wave here
— Siddaramaiah (@siddaramaiah) March 4, 2018
ವ್ಹಾ!! ಇದು ನಮ್ಮ ಕರ್ನಾಟಕ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಯ ಅಂಬೋಣ! ಬಿಜೆಪಿ ಈಗಾಗಲೇ ೨೨ ರಾಜ್ಯಗಳಲ್ಲಿ ಅಧಿಪತ್ಯ ಸ್ಥಾಪಿಸಿದ್ದರೂ ಸಹ ಮೋದಿ ಅಲೆ ಇಲ್ಲ ಎಂಬ ಮಾತನ್ನು ಸಿದ್ಧರಾಮಯ್ಯ ಹೇಳುತ್ತಿದ್ದಾರೆಂದರೆ ನಿಮ್ಮ ಊಹೆ ಸರಿ!! ಸಿದ್ಧರಾಮಯ್ಯ ಇನ್ನೂ ಕನಸು ಕಾಣುತ್ತಿದ್ದಾರೆ!! ಮೋದಿ ಅಲೆಯೊಂದು ಕರ್ನಾಟಕಕ್ಕೆ ಅಪ್ಪಳಿಸಿದೆ ಎಂಬುದು ಖಚಿತವಾಗುತ್ತಿದ್ದಂತೆ, ತಮ್ಮ ಅಸುರಕ್ಷತೆಗೆ ತೇಪೆ ಹಚ್ಚಿ ಮುಚ್ಚಲು ಸಿದ್ಧರಾಮಯ್ಯನವರು ಈ
ನಾಟಕವನ್ನಾಡುತ್ತಿದ್ದಾರಾದರೂ ಸಹ, ಕನ್ನಡಿಗರು ಸೂಕ್ಷ್ಮವಾಗಿಯೇ ಸಿದ್ಧರಾಮಯ್ಯರವರಿಗೆ ಉತ್ತರ ನೀಡಿದ್ದಾರೆ!!
ಈ ಟ್ವೀಟು ಸಿದ್ಧರಾಮಯ್ಯನವರ ಕೀಳರಿಮೆಯ ಫಲಿತಾಂಶವಷ್ಟೇ!! ಅಲ್ಲವೇ ಮತ್ತೆ?!
ಅಕಸ್ಮಾತ್ ಏನಾದರೂ, ಕರ್ನಾಟಕದಲ್ಲಿ ಮೋದಿ ಅಲೆ ಏನಾದರೂ ಇಲ್ಲವೆಂದಾದರೆ, ಟ್ವೀಟ್ ಯಾಕೆ ಮಾಡಬೇಕಿತ್ತು ಮುಖ್ಯಮಂತ್ರಿಗಳೇ?!
- If there is no Modi wave in Karnataka, Mr CM Siddaramaiah, why are you so worried? Why you are tweeting on it?
If there is no modi wave in Karnataka, Mr, cm siddharamaiya why you are worrying? Why you are writing tweet.
— Padmakar Kale (@padmakar_kale) March 5, 2018
ಸಿದ್ಧರಾಮಯ್ಯನವರ ಸರಕಾರ, ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಬಿಟ್ಟು ಬೇರೇನನ್ನೂ ಮಾಡಿಲ್ಲ! ಇದು ಕೇವಲ ಟೆಕ್ಕಿಯೊಬ್ಬರ ಅಭಿಪ್ರಾಯವಲ್ಲ! ಬಹುತೇಕ ಕನ್ನಡಿಗರ ಅಭಿಪ್ರಾಯ!
- Sir, we techies won’t vote for you because you did nothing for us since last 5 yrs of your governance. Now you are making roads and footpaths but still not able to reduce traffic. If we vote, you will again do nothing for next 5 yrs again, other than corruption.
Sir, we techies won't vote for u becoz u did nothing for us for the first 4.5 yrs of ur governance. Now u r making roads & footpaths but still not able to reduce traffic.
If v vote u again u will not do anything for next 4.5 yrs again other than corruption.— Ashwatthama (@_Ashwatthama_) March 4, 2018
ಬಹುಷಃ ಸಿದ್ಧರಾಮಯ್ಯನವರು ಯಾವುದೇ ಕಾರಣಕ್ಕೂ, ತಮ್ಮ ಟ್ವೀಟ್ ಗೆ ಬಂದ ಪ್ರತ್ಯುತ್ತರವನ್ನು ನೋಡಲಾರರೇನೋ! ಯಾಕೆ ಗೊತ್ತಾ?! ಒಂದು ನೂರು ಪ್ರತ್ಯುತ್ತರಗಳಲ್ಲಿ ಸಿದ್ಧರಾಮಯ್ಯ ಸರಕಾರದ ಮೇಲೆ ಆರೋಪ ಹೊರಿಸಿ ೯೦ ಟ್ವೀಟ್ ಗಳೇ ಸಿಗುವಾಗ, ವಾಸ್ತವ ಏನೆಂದು ಅರಿವಾಗಬೇಕಿತ್ತು! ಆದರೆ, ದುರಾದೃಷ್ಟ! ಕರ್ನಾಟಕ ಸಿದ್ಧರಾಮಯ್ಯನವರು ೨೦೧೪ ರ ಚುನಾವಣೆಯ ಫಲಿತಾಂಶದ ಗುಂಗಿನಲ್ಲಿಯೇ ಇದ್ದಾರಷ್ಟೇ!! ಕೇವಲ ಅದೊಂದೇ ಅಲ್ಲ, ಅವತ್ತೇನೋ ಸಿದ್ಧರಾಮಯ್ಯ ಸರಕಾರದ ಗ್ರಹಚಾರ ನೆಟ್ಟಗಿತ್ತಲ್ಲದೇ, ಅದೇನೋ ಆಮಿಷ ಒಡ್ಡಿ ಕರ್ನಾಟಕವನ್ನು ಗೆದ್ದದ್ದಷ್ಟೇ!! ಆದರೆ, ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದು ಸರಕಾರ ಸ್ಥಾಪಿಸಿದ ನಂತರ ಸತತ ಗೆಲುವನ್ನು ಕಂಡ ಮತ್ತದೇ ಮೋದಿ, ಹಿಂದೂಗಳ ಸಂಖ್ಯೆಯೇ ತೀರಾ ಕಡಿಮೆಯಿರುವ
ಈಶಾನ್ಯ ರಾಜ್ಯಗಳಲ್ಲಿ ಗೆಲುವು ಕಂಡರಲ್ಲವೇ?! ಅದೇನು ಸುಲಭವೇ?! ಹಿಂದೂಗಳೆನ್ನಿಸಿಕೊಂಡವರು ಲೆನಿನ್ ಪಾದ ನೆಕ್ಕುವಾಗ, ಹಿಂದೂ ಸರಕಾರವನ್ನು
ಸ್ಥಾಪಿಸುವುದು ಸುಲಭದ ಮಾತಲ್ಲ! ಆ ತಾಕತ್ತೆಲ್ಲ ಕಾಂಗ್ರೆಸ್ಸಿಗಿರದಿದ್ದರೂ ಸಹ, ಸಿದ್ಧರಾಮಯ್ಯನವರಿಗೆ ಇವೆಲ್ಲ ತೃಣಮಾತ್ರ!! ಯಾಕೆ ಹೇಳಿ?!! ಸ್ವತಃ ತಮ್ಮ ಸ್ವಂತದ್ದನ್ನೇ ಕಳೆದುಕೊಂಡರೂ ತಲೆಕೆಡಿಸಿಕೊಳ್ಳದೇ, ಮತ್ತದೇ ಪಾಪಕೃತ್ಯಕ್ಕೆ ಇಳಿದವರಿಗೆ ಎಲ್ಲಿಯ ಭಯ ಅಲ್ಲವೇ?! ನಿಮಗೆ ಗೊತ್ತಾ?!! ಯಾವತ್ತಿದ್ದರೂ ಪಾಪಿ ಚಿರಾಯು!!
Your thoughts are backed by insecurity feelings !
Your fear is invariably a symptom of neurotic insecurity???— Lotta (@Lotta01611099) March 4, 2018
ಸಿದ್ಧರಾಮಯ್ಯ ಎಷ್ಟೇ ತನಗೆ ಯಾವುದೇ ಭಯವಿಲ್ಲ ಎಂದು ತೋರಿಸಿಕೊಂಡರೂ ಸಹ, ಈ ಟ್ವೀಟೊಂದನ್ನು ಮುಖ್ಯಮಂತ್ರಿಯವರು ಭಯ ಅಥವಾ,
ತಿರಸ್ಕಾರದಿಂದ ಹಾಕಿರುವಂತಹದ್ದು ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುವಾಗ, ಈ ಮುಖ್ಯಮಂತ್ರಿಯವರ ಟ್ವೀಟಿಗೆ ಯಾರಾದರೂ ಬೆಲೆ ಕೊಡುತ್ತಾರೆಯೇ?! ಖಂಡಿತಾ ಇಲ್ಲ!! ಮಜಾ ಏನು ಗೊತ್ತೇ?! ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ, ನಮ್ಮ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಂದಾಗ, ನಮ್ಮ ಸ್ವಾಭಿಮಾನಿ ಕನ್ನಡಿಗರು ಸ್ವಾಗತಿಸಿದ್ದು, “ಮೋದಿ ಮೋದಿ” ಎಂದು ಘೋಷಣೆ ಕೂಗುತ್ತಲೇ! ಹು! ಅಷ್ಟಾದರೂ ಸಹ ಕರ್ನಾಟಕದ ಸಿದ್ಧರಾಮಯ್ಯರವರಿಗೆ ಮೋದಿ ಅಲೆ ಕಣ್ಣಿಗೆ ರಾಚುತ್ತಿಲ್ಲವೋ ಅಥವಾ, ರಾಚಿದ್ದು ಹೆಚ್ಚಾಗಿ, ಕಣ್ಣೇ ಕುರುಡಾಗಿದೆಯೋ ಗೊತ್ತಿಲ್ಲ!
Look at Modi wave pic.twitter.com/30k6SwDncL
— Vinay (@vinayhub1) March 4, 2018
ಇದೇ ಸಿದ್ಧರಾಮಯ್ಯನವರು ಹೆದರಿ, ದಕ್ಷಿಣ ಬೀದರ್ ನ ಎಮ್ ಎಲ್ ಎ ಆಗಿರುವ ಅಶೋಕ್ ಖೇಣಿ ಜೊತೆ ಕೈ ಜೋಡಿಸಿದ್ದಾರೆ! ಸ್ವತಃ ಕರ್ನಾಟಕದ ಕಾಂಗ್ರೆಸ್ ನಾಯಕರೇ ಸಿದ್ಧರಾಮಯ್ಯನವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ!! ಅದರಲ್ಲೂ, ಸಹ ಅಶೋಕ್ ಖೇಣಿಯವರಿಗ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇರದಿದ್ದರೂ ಸಹ, ಸಿದ್ಧರಾಮಯ್ಯನವರು ರೌಡಿಗಳ ಬಲ ಮತ್ತು ಹಣ ಬಲ ಇದ್ದವರಿಗೆ ಮಾತ್ರ ಚುನಾವಣೆಗೆ ಅವಕಾಶ ನೀಡುತ್ತಿರುವುದು ವಿಪರ್ಯಾಸವೂ ಮತ್ತು, ಸಿದ್ಧರಾಮಯ್ಯನವರು ಗೂಂಡಾಗಳಿಗೆ, ಭ್ರಷ್ಟರಿಗೆ ಬೆಂಬಲ ನೀಡುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ! ಅದರಲ್ಲೂ, ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬದಲಾವಣೆಯೂ ಸಹ ಸಾಕ್ಷಿಯಾಗಿ ನಿಂತಿದೆ!!
but certainly there is no wave for you, only drubbing. You Tipu sultan heir, we all Hindus will teach you such a lesson that u will be forgotten after elections,, then only omelt toppi gathi?
— Ramakrishna UR (@ramakirao) March 4, 2018
I dont know whether, modi wave is there or not in K’taka,But Everytime u r Chanting modi modi modi ??
You will loose undoubtedly ?— Naveen Chandra ⛳️ (@NaveenChandra87) March 4, 2018
ಇದೇ ಸಿದ್ಧರಾಮಯ್ಯ ಸರಕಾರ, ವರ್ಷದ ಹಿಂದೆ ಲೆಜಿಸ್ಲೇಟಿವ್ ಕಮಿಟಿ ರಚಿಸಿ, ಖೇಣಿಯವರ ಕಂಪೆನಿಯಲ್ಲಾಗುತ್ತಿರುವ ಅಕ್ರವ ವ್ಯವಹಾರಗಳ ಬಗ್ಗೆ ಸಂಪೂರ್ಣ ತನಿಖೆ ಮಾಡಲು ಆಜ್ಞೆ ಹೊರಡಿಸಿತ್ತಲ್ಲದೇ, ಅಶೋಕ್ ಖೇಣಿ ಎನ್ನುತ್ತಿದ್ದ ಹಾಗೆ ಉರಿದು ಬೀಳುತ್ತಿತ್ತಷ್ಟೇ!! ಇದೇ ಕಾಂಗ್ರೆಸ್ ನಾಯಕರು, ಅಶೋಕ್ ಖೇಣಿಗೆ ಜೈಲಾಗಬೇಕೆಂದು ಆಗ್ರಹ ವ್ಯಕ್ತ ಪಡಿಸಿತ್ತಲ್ಲದೇ, ನೈಸ್ ರಿಂಗ್ ರೋಡಿನಲ್ಲಿಯೂ ಖೇಣಿ ಭ್ರಷ್ಟಚಾರವೆಸಗಿದ್ದಾರೆ ಎಂದು ಆರೋಪಿಸಿ, ಈ ತಕ್ಷಣವೇ ಬಂಧಿಸಿ ತನಿಖೆ ನಡೆಸಬೇಕು ಎಂದು ಪ್ರತಿಭಟಿಸಿತ್ತು! ದುರಾದೃಷ್ಟವಶಾತ್, ಇವತ್ತು ಮತ್ತದೇ ಸರಕಾರ ಖೇಣಿಯವರ ಜೊತೆ ಕೈ ಜೋಡಿಸುತ್ತಿದೆ!!
It is said that the scam amounts to Rs 1 lakh crore. The Congress leaders had also demanded jail term for Kheny in allegations for grabbing precious farmlands for his road project and had accused him of diverting land for private illegal townships along the NICE Ring Road, which circles southern and western parts of the city, said reports.
ಖೇಣಿಯವರ ಮೇಲಿದ್ದದ್ದು, ಬರೋಬ್ಬರಿ ಒಂದು ಲಕ್ಷ ಕೋಟಿ ರೂಗಳನ್ನು ಲೂಟಿ ಹೊಡೆದ ಆರೋಪ!! ಆದರೆ, ಇವತ್ತು ಸಿದ್ಧರಾಮಯ್ಯ ಇದರ ಬಗ್ಗೆ ತುಟಿಪಿಟಿಕ್ ಎನ್ನುತ್ತಿಲ್ಲ! ಯಾಕೆ ಗೊತ್ತಾ!? ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ತಾಕತ್ತೂ ಇಲ್ಲ! ಸ್ವತಃ ತಾನೇ ಭ್ರಷ್ಟನಾಗಿರುವಾಗ ಬುದ್ಧಿ ಹೇಳುವ ನೈತಿಕತೆಯೂ ಇಲ್ಲ!! ಇಲ್ಲಿಗೆ, ಸಾಬೀತಾಯಿತಲ್ಲವೇ?! ಭ್ರಷ್ಟರಾದರೂ ಪರವಾಗಿಲ್ಲ! ವೈಯುಕ್ತಿಕ ಮತಗಳಿದೆ ಎಂದಾದರೆ, ಗೆಲ್ಲುವ ಕುದುರೆ ಎಂದಾದರೆ ಟಿಕೆಟ್ ಕೊಡುವ ಸಿದ್ಧರಾಮಯ್ಯ ಸರಕಾರ ಕರ್ನಾಟಕವನ್ನು ಗುಡಿಸಿ ಸಾರಿಸಿದ್ದು ಸುಳ್ಳಲ್ಲ!!
– ಪೃಥು ಅಗ್ನಿಹೋತ್ರಿ