ಪ್ರಚಲಿತ

ಜ್ಞಾನ ದೇಗುಲದ ಮೇಲೆಯೂ ‘ಕೈ’ಯಾಡಿಸಲು ಹೊರಟ ಅಜ್ಞಾನಿ ಸರ್ಕಾರ

ಇರಲಾರದೆ ಇರುವೆ ಬಿಟ್ಕೊಂಡ ಎಂಬ ಗಾದೆ ಮಾತು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿ ಮಾಡಿಸಿದ ಹಾಗಿದೆ. ಸದಾ ಕಾಲ ಒಂದಿಲ್ಲೊಂದು ಅತಿರೇಖಗಳನ್ನು ಪ್ರದರ್ಶಿಸಿ, ಅವಶ್ಯಕವಲ್ಲದ ಕೆಲಸಗಳಿಗೆ ಕೈ ಹಾಕಿ ಛೀಮಾರಿ ಹಾಕಿಸಿಕೊಳ್ಳುವುದರಲ್ಲೇ ‌ಕಾಂಗ್ರೆಸ್ ತನ್ನ ಆಡಳಿತವನ್ನು ಮುಗಿಸುವ ಅಂದಾಜು ಕಾಣುತ್ತಿದೆ.

ಶಾಲೆಗಳ ಗೋಡೆಗಳಲ್ಲಿ ಬರೆದ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎನ್ನುವ ಅರ್ಥಪೂರ್ಣ ವಾಕ್ಯ ವನ್ನು ಅರ್ಥ ಮಾಡಲು ಹೊರಟು ಕುವೆಂಪು ವಾಣಿಗೆ ಅನ್ಯಾಯ ಎಸಗಲು ಮುಂದಾಗಿದೆ. ಕೈ ಮುಗಿದು ಒಳಗೆ ಬಾ ಎನ್ನುವ ಬದಲಿಗೆ ಧೈರ್ಯವಾಗಿ ‌ಪ್ರಶ್ನಿಸು ಎನ್ನುವುದನ್ನು ಸೇರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆ ಮೂಲಕ ಮತ್ತೆ ಸಾರ್ವಜನಿಕ ವಲಯದಲ್ಲಿ ಕಾಂಗ್ರೆಸ್ ಛೀಮಾರಿ ಹಾಕಿಸಿಕೊಂಡಿದೆ.

ತಪ್ಪು ನಡೆಯುವಾಗ ಶಾಲೆಗಳಲ್ಲಿ ಪ್ರಶ್ನೆ ಮಾಡಿದವರ ಪರಿಸ್ಥಿತಿ ಏನಾಗುತ್ತದೆ?, ಅವರಿಗೆ ಕಾಂಗ್ರೆಸ್ ಸರ್ಕಾರ ಏನು ಕೊಡುಗೆ ನೀಡುತ್ತದೆ ಎನ್ನುವುದಕ್ಕೆ ಮೊನ್ನೆ ಮೊನ್ನೆಯಷ್ಟೇ ಮಂಗಳೂರಿನ ಜೆರೋಸಾ‌ ಶಾಲೆಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಬಹುದು. ಸಾಮಾನ್ಯ ಶಿಕ್ಷಣ ನೀಡಬೇಕಾದ ಶಾಲೆಯಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಮುಂದಾದ ಶಿಕ್ಷಕಿಯೊಬ್ಬರ ವಿರುದ್ಧ, ಹಿಂದೂ ದೇವರುಗಳ, ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಶಿಕ್ಷಕಿಯೊಬ್ಬರ ವಿರುದ್ಧ ವಿದ್ಯಾರ್ಥಿಗಳೇ ರೊಚ್ಚಿಗೆದ್ದು, ಅವರ ನಡೆಯನ್ನು ಪ್ರಶ್ನೆ ಮಾಡಿದ್ದಕ್ಕೆ, ಅವರ ಜೊತೆ ನಿಂತ ಪೋಷಕರಿಗೆ ಕಾಂಗ್ರೆಸ್ ಸರ್ಕಾರ ಯಾವ ರೀತಿ ನ್ಯಾಯ ಒದಗಿಸಿತು? ಎಂಬುದನ್ನು ನಾವು ವಿಮರ್ಶೆ ಮಾಡಬೇಕಿದೆ.

ಆಗ ಪ್ರಶ್ನೆ ಮಾಡಿದ್ದ ವಿದ್ಯಾರ್ಥಿಗಳ ಪರ ನಿಲ್ಲದ ಕಾಂಗ್ರೆಸ್ ಸರ್ಕಾರ, ಆಗ ಶಾಲೆಗಳಲ್ಲಿ ಗೋಡೆ ಬರಹ ಬದಲಾಯಿಸಲು ಹೊರಟಿರಿವುದು ಹಾಸ್ಯಾಸ್ಪದ. ಸರಿಪಡಿಸಲು ಸಮಾಜದಲ್ಲಿ ಹಲವಾರು ಅಂಕುಡೊಂಕುಗಳಿವೆ. ಅಷ್ಟೇ ಏಕೆ ಕಾಂಗ್ರೆಸ್ ಸರ್ಕಾರದಲ್ಲೇ ‌ಸರಿಯಿಲ್ಲದ, ತಲೆಬುಡವಿಲ್ಲದ ಹಲವಾರು ಸಂಗತಿಗಳಿವೆ. ಸಮಾಜಘಾತುಕ ವಿಚಾರ ಗಳಿವೆ. ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಇದೆಲ್ಲವನ್ನು ‌ಸರಿಪಡಿಸುವುದು ಬಿಟ್ಟು, ವಿದ್ಯಾ ದೇಗುಲದ ಅರ್ಥಪೂರ್ಣ ವಾಕ್ಯದ ಮೇಲೆ ‘ಕೈ’ ಯಾಡಿಸಲು ಹೊರಟ ಸಿದ್ದು ಆಂಡ್ ಟೀಂ, ತಮ್ಮದು ನಾಲಾಯಕ್ಕು ಸರ್ಕಾರ ಎಂದು ಆಗಾಗ ಸಾಬೀತು ಮಾಡುತ್ತಲೇ ಇದೆ.

ಕಾಂಗ್ರೆಸ್ ಅಧಿಕಾರದ ಅಡಿಯಲ್ಲಿ ರಾಜ್ಯದಲ್ಲಿ ಶೂನ್ಯ ಅಭಿವೃದ್ಧಿಯಾಗುತ್ತಿದೆಯಾದರೂ, ಸಮಾಜದಲ್ಲಿ ಅಹಿತಕರ ಘಟನೆಗಳು ಮಾತ್ರ ಬೇಕಾದಷ್ಟು ನಡೆಯುತ್ತಿವೆ. ವಿನಾ ಕಾರಣ ಅಗತ್ಯ ಇಲ್ಲದ್ದನ್ನೆಲ್ಲಾ ಸಾಧಿಸಲು ಹೋಗಿ ಜನರ ಕೆಂಗಣ್ಣಿಗೆ ಕಾಂಗ್ರೆಸ್‌ ಗುರಿಯಾಗುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವರು ತಮ್ಮ ಮತ ವ್ಯರ್ಥವಾಯ್ತು ಎಂದು ಕಾಂಗ್ರೆಸ್‌ಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾಂಗ್ರೆಸ್ ‌ನ ಸಿಎಂ ಸಿದ್ದು ಸರ್ಕಾರದ ಈ ನಡೆಯಿಂದ ಮುಂದಿನ ದಿನಗಳಲ್ಲಿ ರಾಜ್ಯದಿಂದಲೇ ಕಾಂಗ್ರೆಸ್‌ಗೆ ಜನತೆ ಗೇಟ್ ಪಾಸ್ ನೀಡಿ, ಟಾಟಾ ಬಾಯ್ ಎಂದು ಪಕ್ಷವನ್ನು ಮಂಗಮಾಯ ಮಾಡುವ ದಿನ ದೂರವಿಲ್ಲ ಎನ್ನುವುದು ನಿಸ್ಸಂಶಯ.

Tags

Related Articles

Close