ಪ್ರಚಲಿತ

ಅನ್ಯಾಯ, ಅನ್ಯಾಯ! ಕೇಂದ್ರ ಸರ್ಕಾರದ ಪ್ರತಿಯಬ್ಬರಿಗೂ ಐದು ಲಕ್ಷ ವಿಮೆ, “ಮೋದಿ ಕೇರ್” ನಿಂದ ಕರ್ನಾಟಕ ಹೊರಕ್ಕೆ

ಜನಕ್ಕೆ ಮುಂಚೆಯೇ ಗೊತ್ತಿದೆ! ಕೇಂದ್ರ ಸರಕಾರದ ಅದೆಷ್ಟೇ ಬಹು ನಿರೀಕ್ಷಿತ ಯೋಜನೆಗಳಿದ್ದರೂ ಸಹ, ಕನ್ನಡಿಗರಿಗೆ ಅದನ್ನು ಉದ್ದೇಶಪೂರ್ವಕವಾಗಿಯೇ ತಲುಪಿಸಲು ಹಿಂದೇಟು ಹೊಡೆಯುತ್ತಿದೆ ಕರ್ನಾಟಕ ರಾಜ್ಯ ಸರಕಾರ ಎಂಬುದು ಎಲ್ಲರಿಗೂ ಗೊತ್ತಿದೆ ಬಿಡಿ! ಇಲ್ಲದಿದ್ಧರೆ, ಮೋದಿ ಪ್ರಸ್ತುತ ಪಡಿಸಿದ ಯೋಜನೆಗಳನ್ನು ಬಾಯಿ ಮುಚ್ಚಿ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದರು! ಉಹೂಂ !! ಕನ್ನಡಿಗರ ದುರಾದೃಷ್ಟ! ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ದೊಡ್ಡದಾಗಿರುವುದು ಸ್ವ ಪ್ರತಿಷ್ಟೆ ಹೊರತು ಇನ್ನೇನಿಲ್ಲ!!

ಈಗ ಹೊಸತಾಗಿ ತಗಾದೆ ತೆಗೆದಿದೆ ರಾಜ್ಯ ಸರಕಾರ! ತುಘಲಕ್ ಪಾದ ನೆಕ್ಕುತ್ತಲೇ ಇದ್ದ ರಾಜ್ಯ ಕಾಂಗ್ರೆಸ್ ಈಗ ಪಶ್ಷಿಮ ಬಂಗಾಳದ ಮಮತಾ ಬ್ಯಾನರ್ಜೀಯ ಸೋಗಲಾಡಿ ನಿರ್ಧಾರವೊಂದಕ್ಕೆ ತಾನೂ ತಲೆದೂಗಿ ಅದೇ ಹಾದಿಯನ್ನು ಅನುಸರಿಸಿದೆ!

ಹಾ!! ಮೋದಿ ಕೇರ್ ಯೋಜನೆಯೊಂದು ಅದೆಷ್ಟು ಮಟ್ಟದಲ್ಲಿ ಪ್ರಜೆಗಳಿಗೆ ಆರೋಗ್ಯ ವಿಷಯದಲ್ಲಿ ವಿಮೆ ನೀಡಲು ನಿರ್ಧರಿಸಿದೆ ಎಂಬುದು ಗೊತ್ತೇ ಇದೆ! ಅದೆಷ್ಟೋ ಲಕ್ಷ ಕುಟುಂಬಗಳಿಗೆ ಐದು ಲಕ್ಷದಷ್ಟು ವಿಮೆ ಎಂದರೆ ತಮಾಷೆಯಾ?! ಬಜೆಟ್ ನಲ್ಲಿ, ಪ್ರಜೆಗಳ ಆರೋಗ್ಯದ ಬಗ್ಗೆಯೂ ಗಮನ ಹರಿಸಿರುವ ಪ್ರಧಾನ ಮಂತ್ರಿಯ ಯೋಜನೆಯಡಿ ಅದೆಷ್ಟೋ ಬಡ ಕುಟುಂಬಗಳಿಗೆ ಸಹಾಯವಾಗಲಿದೆ ಎಂಬುದು ಗೊತ್ತಿದ್ದರೂ ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಈ ಮೂರ್ಖತನದ ನಿರ್ಧಾರದಿಂದ ರಾಜ್ಯದ ಜನತೆ ಮತ್ತೆ ಕಣ್ಣೀರಲ್ಲಿ ಕೈ ತೊಳೆಯಬೇಕಾದ ಪರಿಸ್ಥಿತಿ!

ಕೇಂದ್ರ ಸರಕಾರದ ವಿಮೆ ಯೋಜನೆಗೆ ಸೇರಲು ಕರ್ನಾಟಕ ರಾಜ್ಯ ಕಾಂಗ್ರೆಸ್ ನಿರಾಕರಿಸಿದೆ! ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಆರೋಗ್ಯ ವಿಮೆ ಯೋಜನೆಯನ್ನು ಯುನಿಯನ್ ಬಜೆಟ್ಟಿನಲ್ಲಿ ಅರುಣ್ ಜೇಟ್ಲಿ 50 ಕೋಟಿ ಯಿಂದ 10 ಕೋಟಿಯವರೆಗಿನ ಬಡ ಕುಟುಂಬಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಯೋಜನೆಯದು! ಈ ವರ್ಷದ ಕೊನೆಯ ಮುಂಚೆ, ಯೋಜನೆಯನ್ನು ಕಾರ್ಯಗತಗೊಳಿಸಲಿರುಗ ಸರಕಾರ, ವರ್ಷಕ್ಕೆ ಐದು ಲಕ್ಷ ಹಣವನ್ನು ಪ್ರತಿ ಕುಟುಂಬದ ವಿಮಾ ಯೋಜನೆಗೆ ಬಳಸಲಾಗುವಂತೆ ಗುರಿ ಇಟ್ಟುಕೊಂಡಿದೆ!

ಅದರಲ್ಲಿ, ಈಗ ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಕಾಲಘಟ್ಟ! ಎಲ್ಲಿ, ಕೇಂದ್ರದಿಂದ ಸಹಾಯ ತೆಗೆದುಕೊಂಡರೆ ಬಿಜೆಪಿಗೆ ಕ್ರೆಡಿಟ್ಟು ಹೋಗಿ ಬಿಡುತ್ತದೇನೋ ಎನ್ನುವ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರಕಾರಗಳು ಹುಚ್ಚು ಹಿಡಿದ ಹಾಗೆ ಆಡುತ್ತಿರುವಾಗ, ಜನರ ಅಭಿವೃದ್ಧಿ ಮಾತ್ರ ಕಣ್ಣಿಗೆ ಗೋಚರಿಸುತ್ತಿಲ್ಲ!!

ಅದರಲ್ಲೂ, ನಮ್ಮ ಸರಕಾರವೇ 5 ಮಿಲಿಯನ್ ಬಡ ಜನಕ್ಕೆ ವಿಮೆ ನೀಡುತ್ತಿರುವಾಗ, ನನಗೆ ಮೋದಿ ಸರಕಾರದ ಮೋದಿ ಕೇರ್ ನ ಅಗತ್ಯವೇ ಇಲ್ಲ ಎಂದು ಸೊಕ್ಕು ತೋರಿಸಿ ನಡೆದದ‌್ದೇ ನಮ್ಮ ರಾಜ್ಯದ ಸಿದ್ಧರಾಮಯ್ಯರವರು ಕೂಡಾ ಅದನ್ನೇ ಪರಮಭಾಗ್ಯವೆಂದು ತಿಳಿದು ಅನುಸರಿಸಿದ್ದಾರೆ! ಅಂದರೆ, ಮೋದಿ ಕೇರ್ ನಿಂದ ಹೊರಗುಳಿದಿದೆ ನಮ್ಮ ಶ್ರೀಮಂತ ಕಾಂಗ್ರೆಸ್ ಸರಕಾರದ ಮಂತ್ರಿ ವಲಯ!

ನಮ್ಮ ರಾಜ್ಯದ ಆರೋಗ್ಯ ಸಚಿವರಾದ ರಮೇಶ ಕುಮಾರ್, “ನಾವೀಗಾಗಲೇ ಮೋದಿಗಿಂತ ಮುಂದಿದ್ದೇವೆ! ನಮ್ಮಲ್ಲಿ ಮೋದಿ ಕೇರ್ ಗಿಂತ ಮುಂಚೆಯೇ ಆರೋಗ್ಯ ಯೋಜನೆಗಳು ಬಿಡುಗಡೆಯಾಗಿವೆ!” ಎಂದು ಪುಂಗಿ ಊದಿದ್ದಲ್ಲದೇ, ಮೋದಿ ಕೇರ್ ನನ್ನು ಕಾಪಿ ಮಾಡಿ ನೆಪ ಮಾತ್ರಕ್ಕೆ ತಮಟೆ ಒಡೆದ ಸಿದ್ಧರಾಮಯ್ಯನವರ ಸರಕಾರವೊಂದರ ಬೆನ್ನನ್ನು ಅವರವರೇ ತಟ್ಟಿಕೊಳ್ಳಬೇಕಾಗಿದೆ ಬಿಡಿ!

ಅದೇನೋ, ಯಶಸ್ವಿನಿ ಆರೋಗ್ಯ ಸುರಕ್ಷಾ ಯೋಜನೆಯೊಂದನ್ನು ಸಿದ್ಧರಾಮಯ್ಯ ಸರಕಾರ ಮಾಡಿದ್ದರೂ ಸಹ, ತೀರಾ ಬಡ ಕುಟುಂಬಗಳಿಗೆ ತಲುಪಿಯೂ ಇಲ್ಲ! ಅದಲ್ಲದೇ, ಯಶಸ್ವಿನಿ ಸೌಲಭ್ಯ ಎಲ್ಲಾ ಆಸ್ಪತ್ರೆಗಳಲ್ಲಿಯೂ ಲಭ್ಯವಿಲ್ಲ! ಅಷ್ಟಾಗಿಯೂ, ಸೊಕ್ಕು ಮೆರೆದಿರುವ ರಮೇಶ್ ಕುಮಾರ್, “ನಮಗೆ ಕೇಂದ್ರ ದಿಂದ ತೆಗೆದುಕೊಳ್ಳುವುದು ಯಾವುದೂ ಬೇಕಿಲ್ಲ! ಬದಲಿಗೆ, ಕೇಂದ್ರವೇ ಬೇಕಾದರೆ ನಮ್ಮ ಯೋಜನೆಯನ್ನು ಕಾಪಿ ಮಾಡಬಹುದು!” ಎಂದಿದ್ದಕ್ಕೆ ನಿರ್ಜೀವವಾಗಿರುವ ಮೈಕುಗಳೂ ಪಿಕಿಪಿಕಿ ನಕ್ಕಿದ್ದಾವೆ!

ಯಾವಾಗ, ಮಾಧ್ಯಮಗಳು, ಕರ್ನಾಟಕದಲ್ಲಿ ಬಡ ಕುಟುಂಬಗಳಿಗೆ ಐದು ಲಕ್ಷದಷ್ಟು ವಿಮೆ ನೀಡಲು ಸಾಧ್ಯವಿದೆಯೇ ಎಂದಿದ್ದಕ್ಕೆ, ಇದೇ ರಮೇಶ್ ಕುಮಾರ್, “Insurance ಎಲ್ಲ ಮೋದಿ ಸರಕಾರದ್ದು! ನಮ್ಮದು, ಏನಿದ್ದರೂ Assurance” ಎಂದಿದ್ದಕ್ಕೆ ಅಬ್ಬೋ! ಬಿಡಿ! ಭೂಮಿ ಬಾಯ್ಬಿರಿದಿದೆ!

Assurance ಅಂತೆ ಮಣ್ಣಾಂಗಟ್ಟಿ! ಈ ರಾಜ್ಯ ಸರಜಾರ Assurance ನೀಡಿದ್ದಕ್ಕೇ, Insurance ಇಲ್ಲದೇ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು?! ಅದೆಷ್ಟೋ ಜನ, ಆಸ್ಪತ್ರೆಯಲ್ಲಿ ಹೇಳ ಹೆಸರಿಲ್ಕದಂತೆ ಬಿದ್ದಿರುವುದು?! ರಮೇಶ ಕುಮಾರ್ ರವರ ಆರೋಗ್ಯ ಭಾಗ್ಯವೊಂದೇ ಅಲ್ಲ,ಯಾಮಾರಿದರೆ ಸಾವಿನ ಭಾಗ್ಯವೂ ಇದೆ ಬಿಡಿ!

– ಪೃಥು ಅಗ್ನಿಹೋತ್ರಿ

Tags

Related Articles

Close