ಪ್ರಚಲಿತ

ಕರ್ನಾಟಕದಲ್ಲಿ ಹಿಂದೂಗಳಿಗೆ ಚೆಂಬು: ‘ಕೈ’ ಕೊಟ್ಟ ಸಿದ್ದು ಸರ್ಕಾರಕ್ಕೆ ಹಿಡಿಶಾಪ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋ ಕಾಲ್ಡ್ ಉಚಿತಗಳಿಗೆ ಆಸೆ ಪಟ್ಟು ರಾಜ್ಯದ ಪರಿಸ್ಥಿತಿಯನ್ನು, ಬಹುಸಂಖ್ಯಾತ ಹಿಂದೂಗಳ ಪರಿಸ್ಥಿತಿಯನ್ನು ಸಮಸ್ಯೆಗಳ ಕೂಪಕ್ಕೆ ತಳ್ಳಿ ಹಾಕಿದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಎಂಬುದನ್ನು ಗಾಳಿಗೆ ತೂರಿ ಕೇವಲ ಅಲ್ಪಸಂಖ್ಯಾತರ ಉದ್ಧಾರಕ್ಕಾಗಿ ಪಣ ತೊಟ್ಟಂತಿದೆ.

ರಾಜ್ಯದ ಜನರು ಕಟ್ಟಿದ ತೆರಿಗೆ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಯ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರ ಬಳಕೆ ಮಾಡುವ ಮೂಲಕ ಅವರನ್ನು ಓಲೈಕೆ ಮಾಡುತ್ತಿದೆ. ಇತ್ತ ಕಾಂಗ್ರೆಸ್ ಪಕ್ಷವನ್ನು ನಂಬಿ ಮತ ನೀಡಿದ ಬಹುಸಂಖ್ಯಾತ ಹಿಂದೂಗಳಿಗೆ ಕಾಂಗ್ರೆಸ್ ಚೊಂಬು ಕೊಟ್ಟಿದ್ದು, ಇದು ಬಡ ಹಿಂದೂಗಳು ತಲೆ ಮೇಲೆ ಕೈ ಹೊತ್ತು ಕುಳಿತು ಸಿದ್ದು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯ ಆಶಯದ ಜೊತೆಗೆ ಟೊಂಕಕಟ್ಟಿ ದುಡಿಯುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಅವರ ಆಡಳಿತದಲ್ಲಿ ದೇಶದ ಆರ್ಥಿಕತೆ ವಿಶ್ವದ ನಂ.5 ಆರ್ಥಿಕತೆಗಳ ಸಾಲಿಗೆ ಸೇರಿದೆ. ಹಾಗಿದ್ದರೂ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮಾತ್ರ ರಾಜ್ಯ ಅಭಿವೃದ್ಧಿ ಹೊಂದದ ಹಾಗೆ ಏನೆಲ್ಲಾ ಮಾಡಬೇಕೋ, ಅದೆಲ್ಲವನ್ನೂ ಮಾಡಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ಮೇಲೆ ‘ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಹಣ ಕೊಡ್ತಾ ಇಲ್ಲ’ ಎಂದು ಗೂಬೆ ಕೂರಿಸುವ ನಾಟಕ ಮಾಡುತ್ತಿದೆ. ಕರ್ನಾಟಕದ ಜನರಿಗೆ ಕೈ ಕೊಟ್ಟು ಕೇವಲ ಅಲ್ಪಸಂಖ್ಯಾತರಿಗಾಗಿ ಮತ್ತು ತನ್ನ ಬಿಟ್ಟಿ ಯೋಜನೆಗಳನ್ನು ನೀಡಲು ಜನರ ತೆರಿಗೆ ಹಣ, ದೇಗುಲಗಳ ಹುಂಡಿ ಕಾಸನ್ನು ಬಳಕೆ ಮಾಡುತ್ತಿದೆ. ಆ ಮೂಲಕ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ.

ರಾಜ್ಯದ ಅಭಿವೃದ್ಧಿ ಈಗ ಇಪ್ಪತ್ತು ವರ್ಷಗಳಷ್ಟು ಹಿಂದೆ ಉಳಿದಿದೆ. ಕಾಂಗ್ರೆಸ್ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಚಿಂತೆ ಮಾಡುತ್ತಿಲ್ಲ. ಬದಲಾಗಿ ಇನ್ನೂ ಹೇಗೆಲ್ಲಾ ರಾಜ್ಯದ ಬಹುಸಂಖ್ಯಾತರಿಂದ ದೋಚಿ, ಅಲ್ಪಸಂಖ್ಯಾತರಿಗೆ ವ್ಯಯ ಅಥವಾ ವೇಸ್ಟ್ ಮಾಡಬಹುದು ಎಂದು ಯೋಚನೆ ಮಾಡುತ್ತಿದೆ. ಹಿಂದುಳಿದ ಜಾತಿ/ವರ್ಗಗಳ ಅಭಿವೃದ್ಧಿಯ ಬಳಕೆಗಾಗಿ ಇರುವ ಹಣವನ್ನು ಸಹ ಅಲ್ಪಸಂಖ್ಯಾತರಿಗೆಯೇ ಬಳಕೆ ಮಾಡುವ ಕಾಂಗ್ರೆಸ್ ಪಕ್ಷದ ನೀತಿ ಹಿಂದೂಗಳ ಸಂಕಟ ಮತ್ತು ಕೆಂಗಣ್ಣಿಗೆ ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಬಾರಿ ಸರ್ಕಾರದ ಬಜೆಟ್ ಮಂಡಿಸಿದ ಸಿಎಂ ಸಿದ್ದು ಅಲ್ಪಸಂಖ್ಯಾತರನ್ನು ಅಭಿವೃದ್ಧಿ ಮಾಡಲು ಹೋಗಿ ತಾವೆಷ್ಟು ಅಲ್ಪ, ತಮ್ಮ ಸರ್ಕಾರ ಎಂತಹ ಅಲ್ಪ ಎಂಬುದನ್ನು ಸಾಬೀತು ಮಾಡಿದ್ದಾರೆ. ಮುಸಲ್ಮಾನರು ಎಂಬ ಒಂದು ಕಣ್ಣಿಗೆ ಬೆಣ್ಣೆ, ಹಿಂದೂಗಳು ಎಂಬ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನಿಲುವು ಸಾಧಿಸಿರುವ ಸಿದ್ದು ಸರ್ಕಾರ, ಹಿಂದೂಗಳು ಸಹ ತಮಗೆ ಓಟು ನೀಡಿದ್ದಾರೆ. ಮಾತ್ರವಲ್ಲ, ಹಿಂದೂಗಳು ಸಹ ದೊಡ್ಡ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡುತ್ತಾರೆ ಎನ್ನುವುದನ್ನು ಮರೆತಿರುವುದು ದುರಾದೃಷ್ಟವೇ ಹೌದು.

ಒಟ್ಟಿನಲ್ಲಿ ರಾಜ್ಯದ ಹಿಂದೂ ಸಮಾಜದ ಜನತೆ ಬಿಟ್ಟಿ ಆಸೆಗೆ ಬಿದ್ದು ಕಾಂಗ್ರೆಸ್‌ಗೆ ಮತ ನೀಡಿ ತಮ್ಮ ಭವಿಷ್ಯವನ್ನೇ ಮೂರಾಬಟ್ಟೆ ‌ಮಾಡಿಕೊಂಡಿದ್ದಾರೆ. ಮುಂದಿನ ಬಾರಿಯಾದರೂ ಇಂತಹ ನಾಲಾಯಕ್ಕುಗಳ ಕೈಗೆ ರಾಜ್ಯವನ್ನು ನೀಡಿ, ನಮ್ಮ ಬದುಕಿಗೆ ನಾವೇ ಕೊಳ್ಳಿ ಇಡುವ ಪರಿಸ್ಥಿತಿ ತರದಿರುವ ಹಾಗೆ ಎಚ್ಚರ ವಹಿಸಬೇಕಿದೆ.

ಕಾಂಗ್ರೆಸ್ ಸರ್ಕಾರ ಅದರ ಪತನವನ್ನು ಇಂತಹ ಇಬ್ಬಂದಿ ಧೋರಣೆಯ ಮೂಲಕವೇ ಮಾಡಿಕೊಳ್ಳುವುದು ಶತಃಸಿದ್ಧ. ಹಿಂದೂಗಳೇ ಕಾಂಗ್ರೆಸ್ ಪಕ್ಷದ ಇಂತಹ ನಾ(ಲಾ)ಯಕರ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳದೇ ಹೋದಲ್ಲಿ ನಾವು ಮುಂದೆ ಪರಿತಪಿಸಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close