ಅಂಕಣರಾಜ್ಯ

ಪ್ರಧಾನಸೇವಕ ನರೇಂದ್ರ ಮೋದಿಜೀಗೆ ಅದ್ದೂರಿ ಸ್ವಾಗತ ಕೋರಲು ತಯಾರಾದ ಕರುನಾಡ ಜನತೆ! ವಿರೋಧಿಗಳ ಎಲ್ಲಾ ತಂತ್ರವನ್ನೂ ಛಿದ್ರ ಮಾಡಲು ಸಜ್ಜಾದ ಕಾರ್ಯಕರ್ತರು!

ನರೇಂದ್ರ ಮೋದಿ, ಹೆಸರಲ್ಲೇ ಒಂದು ರೀತಿಯ ಶಕ್ತಿ. ‌ಯಾವ ರೀತಿಯ ಶಕ್ತಿ ಎಂದರೆ ಕೇವಲ ಹೆಸರು ಕೇಳುತ್ತಿದ್ದಂತೆ ವಿರೋಧಿಗಳು ಒಮ್ಮೆ‌ ಹಿಂದೇಟು ಹಾಕುತ್ತಾರೆ, ಉರಿ ತಾಳಲಾರದೆ ವಿಲ ವಿಲ ಒದ್ದಾಡುತ್ತಾರೆ. ಸದ್ಯ ಇಂತಹ ಒಂದು ಘಟನೆ ನಮ್ಮ ರಾಜ್ಯದಲ್ಲೂ ಕಂಡು ಬರುತ್ತಿದೆ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ರಾಜ್ಯಾದ್ಯಂತ ಭರ್ಜರಿ ಸ್ವಾಗತ ಕೋರಲು ಬಿಜೆಪಿ ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ. ಆದರೆ ನರೇಂದ್ರ ಮೋದಿಯವರ ವಿರೋಧಿಗಳು ಪ್ರಧಾನಿಯವರ ಆಗಮನವನ್ನು ವಿರೋಧಿಸುತ್ತಿದ್ದು ಸಿಂಹದ ಆಗಮನದ ವೇಳೆ ನಾಯಿ ನರಿಗಳು ಬೊಗಳುವಂತೆ ಬೊಗಳಲು ಆರಂಭಿಸಿದ್ದಾರೆ. ಮೋದಿ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ, ದ್ರೋಹ ಮಾಡಿದ್ದಾರೆ ಎಂದು ಬೊಗಳುತ್ತಿರುವ ವಿರೋಧಿಗಳ ಎಲ್ಲಾ ಅಸ್ತ್ರವನ್ನು ಛಿದ್ರ ಮಾಡಲು ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಸಜ್ಜಾಗಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿರುವ ಪ್ರಧಾನಿ ಮೋದಿ, ಈಗಾಗಲೇ ಅನೇಕ ರಾಜ್ಯಗಳಲ್ಲಿ ಬಹಿರಂಗ ಸಮಾವೇಶ ನಡೆಸಿ ವಿರೋಧಿಗಳ ಜನ್ಮ‌ ಜಾಲಾಡಿಬಿಟ್ಟಿದ್ದಾರೆ. ಎಲ್ಲಾ ವಿರೋಧಿಗಳು ಸೇರಿ ಮಹಾಘಟಬಂಧನ ನಿರ್ಮಿಸಿದರೆ,‌ಮೋದಿ ಮಹಾಘಟಬಂಧನವನ್ನು ಮಹಾ ಕಲಬೆರಕೆ ಎನ್ನುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದರು. ಇದೀಗ ಕರ್ನಾಟಕದಲ್ಲೂ ಕೇಸರಿ ಪಡೆಯನ್ನು ಜಾಗೃತಗೊಳಿಸಲು ಬರುತ್ತಿರುವ ವಿಶ್ವನಾಯಕ, ಪ್ರಧಾನಸೇವಕ ಶ್ರೀ ನರೇಂದ್ರ ಮೋದಿಜೀಗೆ ಸ್ವಾಗತ ಕೋರಲು ಇಡೀ ರಾಜ್ಯವೇ ಸಿದ್ಧತೆ ನಡೆಸಿದೆ.!

ಗಂಡುಮೆಟ್ಟಿದ ನಾಡಿಗೆ ಆಗಮಿಸಲಿದ್ದಾರೆ ನಮೋ!

ಚುನಾವಣಾ ಪ್ರಚಾರಕ್ಕಾಗಿ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗಂಡುಮೆಟ್ಟಿದ ನಾಡು ಎಂದೇ ಕರೆಯಲ್ಪಡುವ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ರಸ್ತೆಗೆ ಆಗಮಿಸಲಿರುವ ಪ್ರಧಾನಿ ಮೋದಿ, ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದೇ ರೀತಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ಮೋದಿ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.

ಮೋದಿಯವರ ಸಮಾವೇಶಕ್ಕೆ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಚಿಕ್ಕೋಡಿ ಮತ್ತು ಉತ್ತರ ಕನ್ನಡ ಭಾಗಗಳಿಂದ ಸುಮಾರು 3 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಇದೇ ವೇಳೆ ಕೇಂದ್ರ ಸರಕಾರ ಈ ಹಿಂದೆ ಘೋಷಣೆ ಮಾಡಿರುವ ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಕರ್ನಾಟಕದಲ್ಲೂ ಇಂದಿನಿಂದಲೇ ಚುನಾವಣಾ ತಯಾರಿ ಆರಂಭಿಸಲಿದ್ದಾರೆ. ಕೇಂದ್ರ ಸಚಿವರು ಸೇರಿದಂತೆ ಸಂಸದರು ರಾಜ್ಯ ಬಿಜೆಪಿ ನಾಯಕರು ಭಾಗವಹಿಸಲಿದ್ದು, ರಾಜ್ಯದಲ್ಲೂ ಕಾಂಗ್ರೆಸ್ ಮತ್ತು ಇನ್ನಿತರ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ.!

ಒಂದೆಡೆ ವಿರೋಧಿ ಬಣಗಳು ಮೋದಿಯವರ ಬಗ್ಗೆ ಸುಳ್ಳು ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪೋಸ್ಟ್‌ಗಳನ್ನು ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇವೆಲ್ಲವನ್ನೂ ಸೆದೆಬಡಿಯುತ್ತಲೇ ಬಂದಿರುವ ಕಾರ್ಯಕರ್ತರು ಮೋದಿಯ ಇಂದಿನ ಕರ್ನಾಟಕ ಭೇಟಿಯನ್ನು ಬಹಳ ವಿಶೇಷವಾಗಿ ಪರಿಗಣಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ #KarnatakaWelcomes_Modi ಎಂಬ ಹೊಸ ಅಭಿಯಾನ ಆರಂಭಿಸಿದ್ದು, ದೇಶಾದ್ಯಂತ ಹೊಸ ಸುದ್ಧಿ ಮಾಡಲು ಹೊರಟಿದ್ದು, ಮೋದಿಯವರ ಇಂದಿನ ಭೇಟಿ ಬಹಳ ಕುತೂಹಲ ಕೆರಳಿಸಿದೆ. ಯಾಕೆಂದರೆ ವಿರೋಧಿಗಳು ಒಂದು ತಂತ್ರ ರೂಪಿಸಿದರೆ, ಆ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಮೋದಿ ಅಭಿಮಾನಿಗಳು ಟ್ವಿಟರ್ ನಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಪ್ರಧಾನಿ ನರೇಂದ್ರ ಇಂದಿನ‌ ಕರ್ನಾಟಕ ಭೇಟಿ ದೇಶಾದ್ಯಂತ ಕಾಂಗ್ರೆಸ್ ಗುಲಾಮರ ಮತ್ತು ಮೋದಿಯವರ ಭಕ್ತರ ನಡುವೆ ರಣರಂಗ ಸೃಷ್ಟಿಸಿದೆ ಎಂಬುದರಲ್ಲಿ ಸಂಶಯವಿಲ್ಲ.!

 

Tags

Related Articles

FOR DAILY ALERTS
Close