ಪ್ರಚಲಿತ

ಎಲ್ಲಾ ಮುಸಲ್ಮಾನರನ್ನು ಕೊಂದು ಹಿಂದೂ ರಾಷ್ಟ್ರ ಮಾಡಿ: ಮುಸ್ಲಿಂ ಮುಖಂಡನ ಮಾತು!

ಅನ್ಯ ಮತದವರು ಹಿಂದೂ‌ಗಳನ್ನು ಏನು ಬೇಕಾದರೂ ಮಾಡಬಹುದು. ಇದಕ್ಕೆ ಚಕಾರ ಎತ್ತುವವರಿಲ್ಲ. ಏನೇ ಅನ್ಯಾಯ ನಡೆಯಲಿ, ವಿರೋಧಿಸುವವರೂ ಇಲ್ಲ. ಅದೇ ಅನ್ಯ ಧರ್ಮ‌ಕ್ಕೆ ತಮ್ಮನ್ನು ಹಿಂದೂ ದೇವಾಲಯಗಳ ಸಮಾರಂಭಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಿದ್ದರೆ ಅಬ್ಬರಿಸಿ ಬೊಬ್ಬಿರಿಯುವ, ಇದು ಅನ್ಯಾಯ ಎಂದು ವಾದಿಸುವ ಅನೇಕ ಮಂದಿ ನ್ಯಾಯವಾದಿಗಳು ಹುಟ್ಟಿಕೊಂಡು ಬಿಡುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ‌ದ ಚಂಪಾ ಷಷ್ಠಿ ಮಹೋತ್ಸವದಲ್ಲಿ ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರ ಎಂಬ ಸುದ್ದಿ ಕೇಳಿ ಬಂದಿದ್ದು, ಇದಕ್ಕೆ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಮುಸ್ಲಿಮರನ್ನು ಕೊಂದು, ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ ಎಂಬುದಾಗಿ ಉದ್ದುದ್ದ ಭಾಷಣ ಬಿಗಿದಿದ್ದಾರೆ. ಮುಸ್ಲಿಮರ ವ್ಯಾಪಾರಕ್ಕೆ ವಿರೋಧ ಒಡ್ಡುವವರು ಮುಸ್ಲಿಂ ರಾಷ್ಟ್ರಗಳಿಂದ ಯಾವುದನ್ನು ಸಹ ಖರೀದಿ ಮಾಡಬೇಡಿ. ಒಂದು ಸಮಾಜ ಶಾಂತಿಯುತವಾಗಿ ಇರಬೇಕು ಎಂದಾದಲ್ಲಿ ಎಲ್ಲಾ ಜಾತಿಯವರೂ ಅನ್ಯಮಿತವಾಗಿರಬೇಕು. ಇದು ಅವಶ್ಯಕತೆ, ಅನಿವಾರ್ಯ‌ತೆ ಎರಡೂ ಹೌದು ಎಂದು ಖಾಲಿದ್ ಹೇಳಿದ್ದಾರೆ.

ಅಲ್ಲಾ ಸ್ವಾಮಿ, ಹಿಂದೂಗಳ ವಿರುದ್ಧ ‘ಶಾಂತಿ ಪ್ರಿಯ’ ಧರ್ಮದ ಕೆಲ ಜನರು ಅನ್ಯಾಯ, ಅಕ್ರಮ ಎಸಗುವಾಗ, ಹಿಂದೂ ಹೆಣ್ಮಕ್ಕಳನ್ನು ಲವ್ ಜಿಹಾದ್‌ಗೆ ಬಳಸಿ ಬಳಿಕ ನರ ರಕ್ಕಸರ ಹಾಗೆ ಕತ್ತರಿಸಿ ಹಿಂಸೆ ಮೆರೆಯುವಾಗ, ನಮ್ಮ ದೇಶದಲ್ಲೇ ಇದ್ದುಕೊಂಡು, ಭಯೋತ್ಪಾದನೆ, ದೇಶ ವಿರೋಧಿ ಕೃತ್ಯಗಳನ್ನು ಮಾಡುವಾಗ ಸೊಲ್ಲೆತ್ತದ ನೀವು, ಹಿಂದೂಗಳನ್ನು ಧಾರ್ಮಿಕ ನೆಲೆಯಲ್ಲಿ ಹತ್ಯೆ ಮಾಡುವಾಗ ಧ್ವನಿ ಎತ್ತದ ನೀವು, ಈಗ ಹಿಂದೂಗಳ ದೇವಾಲಯಗಳ ಸಮಾರಂಭಗಳ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶ ಕೇಳುತ್ತೀರಲ್ಲಾ.. ನಿಮಗೆ ಹಿಂದೂಗಳೆಂದರೆ ಅಲರ್ಜಿ ಇದೆ ಎಂದಾದ ಮೇಲೆ ಅವರೊಂದಿಗಿನ ವ್ಯಾಪಾರದ ಅವಶ್ಯಕತೆ ಆದರೂ ಏನು..?

ಧರ್ಮದ ಹೆಸರಿನಲ್ಲಿ ಹಿಂದೂ ದೇವಾಲಯಗಳ ಮೇಲೆ ನಿಮ್ಮವರು ಅತಿಕ್ರಮಣ ಮಾಡುವಾಗ ಸದ್ದೆತ್ತದ ನೀವು, ಈಗ ವ್ಯಾಪಾರ‌ಕ್ಕೆ ಅವಕಾಶ ನೀಡಬಾರದು ಎಂಬ ಮನವಿಗೆಯೇ ಬೆಚ್ಚಿ ಬಿದ್ದರೆ ಹೇಗೆ? ಇಷ್ಟು ಸಣ್ಣ ಕಾರಣಕ್ಕೆ ಮುಸ್ಲಿಮರನ್ನು ಕೊಂದು, ಹಿಂದೂ ರಾಷ್ಟ್ರ ಮಾಡಿ ಎನ್ನುವ ನೀವು, ಈ ದೇಶವನ್ನು, ಈ ದೇಶದ ಬಹುಸಂಖ್ಯಾತ ಸಜ್ಜನರನ್ನು ಏನೆಂದುಕೊಂಡಿದ್ದೀರಿ.

ಹಿಂದೂ ಸಂಸ್ಕೃತಿ ಹಿಂದೂಗಳಿಗೆ ಭಯೋತ್ಪಾದನೆ, ಅನ್ಯ ಧರ್ಮದ ಜನರನ್ನು ಕೊಚ್ಚಿ ಕೊಲ್ಲುವ ಸಂಸ್ಕೃತಿ ಕಲಿಸಿಲ್ಲ. ಬದಲಾಗಿ ಸಾಯುವವನನ್ನು ಸಾಧ್ಯವಾದರೆ ಉಳಿಸು ಎಂಬುದನ್ನು ಹೇಳಿಕೊಟ್ಟಿದೆ. ಆದ್ದರಿಂದಲೇ ಉಗ್ರರು, ನರ ಹಂತಕರು ಸಿಕ್ಕಿ ಬಿದ್ದಾಗಲೂ, ಅವರನ್ನು ಏಕಕಾಲಕ್ಕೆ ಕೊಲ್ಲದೆ, ಕಾನೂನಾತ್ಮಕ ಶಿಕ್ಷೆಯನ್ನೇ ನೀಡುವುದು. ಇದು ಭಾರತೀಯ ಸಂಸ್ಕೃತಿ ಸಂಸ್ಕಾರ. ಭಾರತದಲ್ಲಿದ್ದುಕೊಂಡೇ ನೀವು ಹಿಂದೂಗಳ ವಿರುದ್ಧ ಇಂತಹ ಹೇಳಿಕೆ ನೀಡುತ್ತಿದ್ದೀರಲ್ಲಾ.. ಇಂತಹ ಸಂಸ್ಕಾರ‌ವನ್ನೇ ನಿಮಗೆ ನಿಮ್ಮ ಧರ್ಮ ಹೇಳಿಕೊಟ್ಟಿರುವುದು?

ಮುಸ್ಲಿಂ ಸಮುದಾಯದ‌ಲ್ಲಿ ಯಾರೇ ತಪ್ಪು ಮಾಡಿದರೂ ನಾವು ಅವರ ಪರ ನಿಲ್ಲುವುದಿಲ್ಲ. ಮೌನವಾಗಿ ಇರುತ್ತೇವೆ ಎನ್ನುತ್ತೀರಲ್ಲಾ ಖಾಲಿದ್ ಅವರೇ, ಹಾಗಾದರೆ ಅದು ಅವರ ತಪ್ಪಿಗೆ ನಿಮ್ಮ‌ದೂ ಸಮ್ಮತಿ ಇದೆ ಎಂದಂತಾಗುವುದಿಲ್ಲವೇ.. ನೀವೇ ಆಲೋಚಿಸಿ, ಕೇವಲ ವ್ಯಾಪಾರಕ್ಕೆ ವಿರೋಧ ಹೇರಿದಾಗ ಹಿಂದೂಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ನೀವು, ಮುಸ್ಲಿಮರು ಅಷ್ಟೊಂದು ಅಕ್ರಮಗಳನ್ನು ನಡೆಸಿದಾಗಲೂ ಮೌನಕ್ಕೆ ಶರಣಾಗಿದ್ದೀರಿ ಎಂದರೆ, ಪರೋಕ್ಷವಾಗಿ ನೀವು ತಪ್ಪಿತಸ್ಥರ‌ನ್ನು ಬೆಂಬಲಿಸುತ್ತಾ ಇದ್ದೀರಿ ಎಂದೇ ಅರ್ಥವಲ್ಲವೇ.

ನಿಮ್ಮ ಆಲೋಚನಾ ಲಹರಿಯೇ ನಿಮ್ಮ ಬೌದ್ಧಿಕ ಮಟ್ಟದ ಪ್ರತಿಬಿಂಬವಾಗಿದೆ. ಹಿಂದೂ ಧರ್ಮ ಬೇರೊಂದು ಧರ್ಮವನ್ನು ನಾಶ ಮಾಡಿ ಧರ್ಮ ಸ್ಥಾಪನೆ ಮಾಡುವ ಸಂಸ್ಕಾರವನ್ನು ನಮಗೆ ನೀಡಿಲ್ಲ. ಅಂತಹ ಇನ್ನೊಬ್ಬರ‌ನ್ನು ಕೊಂದು ನಮ್ಮ ಧರ್ಮ‌ವನ್ನು ವಿಸ್ತರಿಸುವ ಆಲೋಚನೆಯೂ ನಮಗೆ ಬರುವುದಿಲ್ಲ. ಯಾಕೆಂದರೆ ನಾವು ‘ವಸುದೈವ ಕುಟುಂಬಕಂ’ ಎಂಬುದರಲ್ಲಿ ವಿಶ್ವಾಸ ಇಟ್ಟವರು. ನಿಮ್ಮ ತಲೆಯಲ್ಲಿ ಇಂತಹ ಆಲೋಚನೆ ಬಂತೆಂದರೆ, ನಿಮಗೆ ಎಂತಹ ಸಂಸ್ಕಾರ ದೊರೆತಿದೆ ಎಂಬುದನ್ನು ನೀವೇ ಅವಲೋಕಿಸಿ.

ನಿಮಗೆ ಹಿಂದೂ ಧರ್ಮದ ಜನರು, ಹಿಂದೂ ಧರ್ಮ, ಹಿಂದೂ ದೇವರುಗಳ ಮೇಲೆ ಗೌರವವಿಲ್ಲ‌. ಮತ್ತೆ ಹಿಂದೂ ದೇಗುಲಗಳಲ್ಲಿ ವ್ಯಾಪಾರವನ್ನೇಕೆ ಬಯಸುತ್ತೀರಿ..?

Tags

Related Articles

Close