ಪ್ರಚಲಿತ

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

ಅಧ್ಯಾಯ 14: ಪ್ರತಿಯೊಂದು ಕೈಗಳಿಗೂ ಬಲ, ಪ್ರತಿಯೊಂದು ಭೂಮಿಗೂ ನೀರು, ಇದು ನಾನಾಜಿ ಕೊಟ್ಟ ಕರೆ!

ಚಂಡಿಕಾದಾಸ್ ಅಮೃತ್​ರಾವ್ ದೇಶಮುಖ್. ಹೀಗೆಂದರೆ ಬಹಳಷ್ಟು ಜನರಿಗೆ ಯಾರೆಂದು ತಿಳಿಯಲಿಕ್ಕಿಲ್ಲ. ಅದೇ ನಾನಾಜಿ ದೇಶಮುಖ್ ಎಂದರೆ, ಹಲವರಿಗೆ ಥಟ್ಟನೆ ಚಿತ್ರವೊಂದು ಕಣ್ಮುಂದೆ ಹಾಯುತ್ತದೆ. ಹಲವರಿಗೆ ಯೋಗಿಯಂತೆ ಭಾಸವಾಗುತ್ತಾರೆ ನಾನಾಜಿ. ರಾಜಕೀಯ ವಿರೋಧವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಸತ್ತಿನ ಕಲಾಪಕ್ಕೇ ತಡೆಯೊಡ್ಡುವ, ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಪರಿಹರಿಸಿಕೊಳ್ಳದೆ ಸಂಸತ್ತಿನ ಆಚೆಗೂ ಅದನ್ನು ಒಯ್ಯುವ ಇಂದಿನ ನಾಯಕರನ್ನು ಕಂಡಾಗ ನಾನಾಜಿ ದೇಶಮುಖರು ಬಹುವಾಗಿ ನೆನಪಾಗುತ್ತಾರೆ. ಈ ಒಂದೆರಡು ಘಟನೆಗಳನ್ನು ಗಮನಿಸಿದರೆ ಬಹುಶಃ ನಾನಾಜಿ ವ್ಯಕ್ತಿತ್ವದ ಎಂತಹದು ಎಂದು ತಿಳಿದುಕೊಳ್ಳಲು ಸಾಧ್ಯವಾಗಬಹುದು.1970ರ ದಶಕದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಅಂದಿನ ಇಂದಿರಾ ಆಡಳಿತದ ವಿರುದ್ಧ ದನಿಯೆತ್ತಿದ್ದರು.

ಚುನಾವಣಾ ಅಕ್ರಮದ ಕಾರಣಕ್ಕೆ, 1971ರ ಚುನಾವಣೆಯಲ್ಲಿ ಇಂದಿರಾ ಆಯ್ಕೆ ಅಸಿಂಧು ಎಂದು ಅಲಹಾಬಾದ್ ಹೈಕೋರ್ಟ್ ಯಾವಾಗ ಘೊಷಿಸಿತೋ, ಭಾರತದ ರಾಜಕೀಯದಲ್ಲಿ ಊಹಿಸಲಸಾಧ್ಯ ತಿರುವುಗಳು ಘಟಿಸಲಾರಂಭಿಸಿಬಿಟ್ಟವು. ಇಂದಿರಾ ರಾಜೀನಾಮೆ ನೀಡಬೇಕು ಎಂದು ಜೆಪಿ ಪಟ್ಟುಹಿಡಿದರು. ಈ ಇಕ್ಕಟ್ಟಿನಿಂದ ಪಾರಾಗಲು ಇಂದಿರಾ ಗಾಂಧಿ ಭರ್ಜರಿ ಉಪಾಯವನ್ನೇ ಕಂಡುಕೊಂಡುಬಿಟ್ಟರು. ಅದುವೇ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ. ಹಿಂದೆಂದೂ ಕಂಡಿಲ್ಲದ ಕರಾಳ ಅಧ್ಯಾಯವೊಂದು ಧುತ್ತನೆ ಎದುರಾಗಿಬಿಟ್ಟಿತ್ತು. ಜೆಪಿ ಮುಂತಾದವರು ಚಳವಳಿಯನ್ನು ತೀವ್ರಗೊಳಿಸಿದರು. ಒಮ್ಮೆ ಅಂಥದೇ ಒಂದು ಬೃಹತ್ ಪ್ರತಿಭಟನಾ ಮೆರವಣಿಗೆ ಪಟನಾದಲ್ಲಿ ನಡೆಯುತ್ತಿತ್ತು. ನೇತೃತ್ವ ಎಂದಿನಂತೆ ಜೆಪಿಯವರದ್ದೇ. ಯಥಾಪ್ರಕಾರ ಇಲ್ಲೂ ಪೊಲೀಸರು ಲಾಠಿಪ್ರಹಾರ ನಡೆಸಿದರು. ಆಗ ಜೆಪಿ ವಯಸ್ಸು 72. ಇಷ್ಟಕ್ಕೆಲ್ಲ ಜಗ್ಗುವ ಜಾಯಮಾನವೇ ಅಲ್ಲ ಜೆಪಿ ಅವರದ್ದು.

ಪೊಲೀಸರ ಗುರಿ ಜೆಪಿ ಎಂಬುದು ಮೆರವಣಿಗೆಯಲ್ಲಿದ್ದವರಿಗೆ ತಿಳಿದು, ಅವರನ್ನು ರಕ್ಷಿಸಲು ಮುಂದಾದರು. ನಾಯಕನ ನೆರವಿಗೆ ಧಾವಿಸಿದ ವ್ಯಕ್ತಿಯೊಬ್ಬರ ಮೇಲೆ ಲಾಠಿಗಳು ಏಟಿನ ಮಳೆಗರೆಯಲು ಆರಂಭಿಸಿದರು ಪೊಲೀಸರು. ಪರಿಣಾಮ ಆ ವ್ಯಕ್ತಿಯ ಕೈ ಮೂಳೆ ಮುರಿತ ಆಯಿತಾದರೂ ಧೃತಿಗೆಡಲಿಲ್ಲ. ಅವರೇ ನಾನಾಜಿ ದೇಶಮುಖ್. ಗುರಿಸಾಧನೆಯ ದಾರಿಯಲ್ಲಿ ಏನೇ ಅಡ್ಡಬಂದರೂ ಎದುರಿಸುವುದು ಅಂದರೆ ಇದೇ ಇರಬೇಕು.ನಾನಾಜಿ ದೇಶಮುಖರು ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿದ್ದು, ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದವರು. ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್ ಬೇರನ್ನು ಗಟ್ಟಿಗೊಳಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ನಂತರದಲ್ಲಿ ಭಾರತೀಯ ಜನ ಸಂಘಕ್ಕೆ ಸೇರ್ಪಡೆಗೊಂಡರು. ಮುಂಚೆ ಆರೆಸ್ಸೆಸ್ ಪ್ರಚಾರಕಾರ್ಯದಲ್ಲಿ ತೊಡಗಿದ್ದರಿಂದ ಉತ್ತರ ಪ್ರದೇಶದ ನಿಕಟ ಪರಿಚಯ ಅವರಿಗಿತ್ತು ಮಾತ್ರವಲ್ಲ ನಾನಾಜಿ ಎಂದರೆ ಅಲ್ಲಿ ಅಪಾರ ಗೌರವವೂ ಇತ್ತು. ಹೀಗಾಗಿ ಭಾರತೀಯ ಜನಸಂಘಕ್ಕೆ ಅಲ್ಲಿ ಜನಬೆಂಬಲ ಗಳಿಸುವುದು ಸಾಧ್ಯವಾಯಿತು. ತುರ್ತು ಪರಿಸ್ಥಿತಿಯ ನಂತರದಲ್ಲಿ 1977ರಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಬಲರಾಮಪುರ ಲೋಕಸಭಾ ಕ್ಷೇತ್ರದಿಂದ ನಾನಾಜಿಯವರು ಸಂಸದರಾಗಿ ಆರಾಮಾಗಿ ಆರಿಸಿಬಂದರು.

ಇಂದಿರಾ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದ ಜೆಪಿ ಮತ್ತು ಪ್ರಧಾನಿಯಾಗಿ ಆಯ್ಕೆಯಾದ ಮುರಾರ್ಜಿ ದೇಸಾಯಿ ಅವರಿಗೆ ನಾನಾಜಿ ದೇಶಮುಖರ ಜನಪರ ಕಳಕಳಿ, ಕಾರ್ಯ ಸಾಮರ್ಥ್ಯದ ಪರಿಚಯ ಚೆನ್ನಾಗಿಯೇ ಇತ್ತು. ಹೀಗಾಗಿ ಸಚಿವ ಸಂಪುಟ ಸೇರುವಂತೆ ಖುದ್ದು ಜೆಪಿ ಮತ್ತು ಮುರಾರ್ಜಿ ಆಹ್ವಾನಿಸಿದರು. ಸಂಪುಟ ದರ್ಜೆ ನೀಡಿ ಕೈಗಾರಿಕಾ ಖಾತೆ ನೀಡುವುದಾಗಿ ಹೇಳಿದರು. ಆದರೆ ನಾನಾಜಿ ಬಿಲ್​ಕುಲ್ ಒಪ್ಪಲಿಲ್ಲ. ಈಗಿನ ಕಾಲಕ್ಕೆ ಹೀಗೊಂದು ಸುದ್ದಿಯನ್ನು ನಂಬುವುದೇ ಕಷ್ಟ. ಸಂಪುಟ ದರ್ಜೆ ಅತ್ಲಾಗಿರಲಿ, ರಾಜ್ಯ ಮಂತ್ರಿಯಾದರೂ ಸಾಕೆಂದು ಏನೆಲ್ಲ ಕಸರತ್ತು ನಡೆಸುವುದನ್ನು ನೋಡಿ ಬಲ್ಲ ನಮಗೆ ನಾನಾಜಿ ದೇಶಮುಖರ ಈ ವರ್ತನೆ ನಂಬಲಸಾಧ್ಯವೆನ್ನುವಂತೆ ಕಾಣದಿದ್ದೀತೆ?

ಹುಡುಕಿಕೊಂಡು ಬಂದ ಮಂತ್ರಿ ಸ್ಥಾನವನ್ನು ಬೇಡವೆಂದ ನಾನಾಜಿ, 60 ವರ್ಷವಾದಾಗ ರಾಜಕೀಯದಿಂದಲೇ ನಿವೃತ್ತರಾಗಿಬಿಟ್ಟರು! ನಾನಾಜಿ ವ್ಯಕ್ತಿತ್ವವೇ ಹಾಗೆ. ರಾಜಕೀಯ ಸಾಕೆಂದ ಅವರು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಗ್ರಾಮೀಣ ಶಿಕ್ಷಣ ಮುಂತಾದ ಸಮಾಜಸೇವಾ ಚಟುವಟಿಕೆಗಳಲ್ಲಿ ತಲ್ಲೀನರಾಗಿ ಬಿಟ್ಟರು. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾಮಾಜಿಕ ಪುನರ್​ನಿರ್ವಣದ ರೂವಾರಿಯಾದರು. ಮೋದಿ ಸರ್ಕಾರ ಸಂಸದರ ಆದರ್ಶ ಗ್ರಾಮ ಯೋಜನೆ ತಂದಿದ್ದನ್ನು ಗಮನಿಸಿದಾಗ ನಾನಾಜಿ ದೇಶಮುಖರು ಹಲವರ ಮನಃಪಟಲದಲ್ಲಿ ಮೂಡಿದ್ದಂತೂ ನಿಜ.ನಾನಾಜಿ ದೇಶಮುಖ್, ಮಹಾರಾಷ್ಟ್ರದ ಕಡೋಲಿ­ಯಲ್ಲಿ 1916ರಲ್ಲಿ ಜನಿಸಿದ ನಾನಾಜಿ ಅವರು ಶಿಕ್ಷಣದ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿ­ಕೊಂಡರು.ಲೋಕಮಾನ್ಯ ತಿಲಕರ ವಿಚಾರ­ಗಳಿಂದ ಪ್ರಭಾವಿತ­­ರಾದ ನಾನಾಜಿ, ಆರೆಸ್ಸೆಸ್‌ ವೈಚಾರಿಕತೆಯತ್ತ ಆಕರ್ಷಿತ­ರಾದರು. ಜನಸಂಘದ ಆರಂಭದ ಕಾಲದಿಂದಲೂ ಅದರ ಜೊತೆಗಿದ್ದ ಇವರು ಆ ಪಕ್ಷದ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿದ್ದವರು. ಸಂಶೋಧನೆ­ಯಲ್ಲಿ ಆಸಕ್ತಿ ಇದ್ದ ಇವರು ದೆಹಲಿಯಲ್ಲಿ ದೀನದಯಾಳು ಸಂಶೋಧನ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಮದುವೆ­ಯಾಗದೆ ಉಳಿದ ನಾನಾಜಿ, ‘ರಾಷ್ಟ್ರಧರ್ಮ್’, ‘ಪಾಂಚಜನ್ಯ’ ಮತ್ತು ‘ಸ್ವದೇಶಿ’ ಪತ್ರಿಕೆಗಳು ಆರಂಭವಾದಾಗ ವಾಜಪೇಯಿ ಅದರ ಸಂಪಾದಕರಾದರು ಮತ್ತು ನಾನಾಜಿ ಮಾರ್ಗ­ದರ್ಶಕ­ರಾದರು.

1967ರಲ್ಲಿ ಉತ್ತರಪ್ರದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ಕಾರಣರಾದರು. ಚೌಧರಿ ಚರಣ ಸಿಂಗ್‌ ಮತ್ತು ಡಾ.ಲೋಹಿಯಾ ಅವರು ನಾನಾಜಿ ಅವರಿಗೆ ನಿಕಟವರ್ತಿಯಾಗಿದ್ದರು. ಅವರು ಒಮ್ಮೆ ಡಾ.ಲೋಹಿಯಾ ಅವರನ್ನು ಜನಸಂಘದ ಕಾರ್ಯ­ಕರ್ತರ ಸಮ್ಮೇಳನಕ್ಕೆ ಆಹ್ವಾನಿಸಿ­ದರು. ಅಲ್ಲಿ ಡಾ.ಲೋಹಿಯಾ ಮತ್ತು ಜನಸಂಘದ ಹಿರಿಯ ನಾಯಕ ದೀನದಯಾಳು ಉಪಾಧ್ಯಾಯ ಅವರನ್ನು ಭೇಟಿಮಾಡಿ­ಸಿದರು. ಇದರಿಂದ ಕಾಂಗ್ರೆಸ್ಸೇತರ ರಾಜಕೀಯ ಶಕ್ತಿಗಳ ಹೊಂದಾಣಿಕೆಗೆ ಮುನ್ನುಡಿ ಬರೆದಂತೆ ಆಯಿತು.ವಿನೋಬಾ ಅವರ ಭೂದಾನ ಚಳವಳಿ ಮತ್ತು ಜೆಪಿಯವರು ಕರೆಕೊಟ್ಟ ಸಂಪೂರ್ಣ ಕ್ರಾಂತಿ ಹೋರಾಟ­ಗಳಲ್ಲಿ ಸಂಪೂರ್ಣವಾಗಿ ನಾನಾಜಿ ತಮ್ಮನ್ನು ತೊಡಗಿಸಿ­ಕೊಂಡರು.ಹಳ್ಳಿಗಳ ವಿಕಾಸದಲ್ಲಿ ನಂಬಿಕೆ ಇದ್ದ ಅವರು ಉತ್ತರ­ಪ್ರದೇಶದ ಚಿತ್ರಕೂಟದಲ್ಲಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ ಸ್ಥಾಪಿಸಿ ಅದರ ಮೊದಲ ಕುಲಪತಿಯಾದರು. ಇದು ದೇಶದ ಮೊದಲ ಗ್ರಾಮೀಣ ವಿ.ವಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಕ್ಷೇತ್ರ­ಗಳಲ್ಲಿ ಕೊಡುಗೆ ನೀಡಿದ್ದು ಇವರ ವೈಶಿಷ್ಟ್ಯ.

ಎರಡು ದಾರಿ, ಎರಡು ಧ್ಯೇಯ ಮತ್ತು ಎರಡು ವಿಭಿನ್ನ ಅಂತ್ಯ!:
ಹಿರಿಯ ಆರೆಸ್ಸೆಸ್ ಕರ್ಮಯೋಗಿ ನಾನಾಜಿ ದೇಶಮುಖ್ ಅವರು ವನವಾಸಿಗಳ ಅಭ್ಯುದಯಕ್ಕಾಗಿ ತಮ್ಮ ಜೀವನದ ಬಹುತೇಕ ಸಮಯವನ್ನು ಮುಡಿಪಾಗಿಟ್ಟವರು. ಬದುಕಿನುದ್ದಕ್ಕೂ ಇತರರಿಗೆ ನೆರವಾಗಿದ್ದ ಅವರು ಮರಣಾನಂತರವೂ ತಮ್ಮ ದೇಹದಾನ ಮಾಡುವ ಮೂಲಕ ಆದರ್ಶಪ್ರಾಯರಾದರು. ವನವಾಸಿಗಳಿಗಾಗಿ ಬದುಕಿದ ನಾನಾಜಿ ಈ ರೀತಿ ನಮ್ಮ ನಿಷ್ಠೆಯನ್ನು ಮೆರೆದರೆ ನಕ್ಸಲ್ ಚಳುವಳಿಯ ರೂವಾರಿಯೆಂದೇ ಹೇಳಲಾಗುವ ಕಾನು ಸನ್ಯಾಲ್ ಅಂತ್ಯ ಇನ್ನೊಂದು ರೀತಿ. ತನ್ನ ಜೀವನದಲ್ಲಿ ಯಾವ ಅರ್ಥವನ್ನೂ ಕಾಣದ ಕಾನು, ತಿಂಗಳ ಹಿಂದೆ ೭೮ರ ವೃದ್ಧಾಪ್ಯದಲ್ಲಿ ಆತ್ಮಹತ್ಯೆಗೆ ಶರಣಾದರು. ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಬದುಕಿದ ವ್ಯಕ್ತಿ ಸಾವಿನಲ್ಲೂ ಆದರ್ಶವನ್ನು ಮೆರೆದರೆ, ಬುಡಕಟ್ಟು ಜನರ ಕೈಗೆ ಬಂದೂಕು ಕೊಟ್ಟ ವ್ಯಕ್ತಿ ಜೀವನದಲ್ಲಿ ಸೋತು ಹೀನಾಯ ಸಾವನ್ನು ಪಡೆದಿದ್ದು ವಿಪರ್ಯಾಸ.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

-Dr.Sindhu Prashanth

Tags

Related Articles

FOR DAILY ALERTS
Close