ಅಂಕಣ

ಚೀನಾ ಕೊರೊನಾ ಕೊಟ್ಟರೆ ಭಾರತ ಪರಿಹಾರ ಕೊಟ್ಟಿತು.!ರಾಕ್ಷಸಿ ವೈರಸ್‌ಗೆ ಸೆಟೆದು ನಿಂತ ದೈತ್ಯ ರಾಷ್ಟ್ರ.

ಕೊರೋನಾ ಎಂದ ಕೂಡಲೇ ಎಲ್ಲರೂ ಭಯಭೀತರಾಗುತ್ತಿದ್ದರೆ. ಈ ವೈರಸ್ ಬಂದರೆ ಸಾವು ನಿಶ್ಚಿತಾ ಅಂತಾನು ಕೆಲವರು ಅಂದುಕೊಂಡಿದ್ದರೆ. ಆದರೆ ಆ ಊಹೆ ತಪ್ಪು… ಅದೆಷ್ಟೋ ಜನ ಕೊರೋನೋ ವೈರಸ್‍ನಿಂದ ಗುಣಮುಖರಾದವರೂ ಇದ್ದಾರೆ. ಈ ರೋಗ ಬರುವುದಕ್ಕೆ ಮುಂಚಿತವಾಗಿಯೂ, ಬಂದ ನಂತರವೂ ಮುಂಜಾಗೃತ ಕ್ರಮವನ್ನು ಅನುಸರಿಸುವುದು ಒಳಿತು… ಇದರಿಂದ ಕೊರೋನಾ ವೈರಸ್‍ನಿಂದ ನಾವೂ ದೂರವಿರಬಹುದು ಇತರಿಗೂ ಹರಡದಿಂತೆ ಜಾಗೃತಿವಹಿಸಬಹುದು. ಇಡೀ ವಿಶ್ವದಲ್ಲೇ ಕೊರೋನಾ ವೈರಸ್ ಬಂದ ನಂತರ ಭಾರತೀಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಶೇಕ್ ಹ್ಯಾಂಡ್ ಮಾಡುತ್ತಿದ್ದವರೆಲ್ಲಾ, ಆಲಿಂಗನ ಮಾಡುತ್ತಿದ್ದವರೆಲ್ಲಾ ನಮಸ್ತೇ ಎಂದು ಕೈ ಮುಗಿದು ಮಾತಾನಾಡಿಸುತ್ತಿದ್ದಾರೆ. ಭಾರತದ ಸಂಸ್ಕøತಿಯನ್ನು, ಆಚಾರ ವಿಚಾರಗಳನ್ನು ನೋಡಿ ನಕ್ಕರಿಗೆಲ್ಲಾ ಇಂದು ಭಾರತದ ಸಂಸ್ಕøತಿ ಪಾಠ ಕಲಿಸಿದೆ. ಹೀಗೆ ಹಲವಾರು ಭಾರತೀಯ ಹಿಂದೂಗಳ ಜೀವನ ಕ್ರಮವನ್ನು ಇಡೀ ವಿಶ್ವ ಅನುಸರಿಸುತ್ತಿದೆ.

ಅದಲ್ಲದೆ ಕೊರೋನಾ ಹೋರಾಟದಲ್ಲಿ ಭಾರತದ ನೇತೃತ್ವವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ ಎಂಬುವುದು ಹಲವಾರು ರಾಷ್ಟ್ರಗಳು ಹೇಳುತ್ತಿದೆ. ಭಾರತಕ್ಕೆ ಕೊರೋನಾ ವೈರಸ್ ಕಾಲಿಟ್ಟ ಕೂಡಲೇ ಸರ್ಕಾರ ಭಾರೀ ಎಚ್ಚರಿಕೆಯ ನಡೆಯನ್ನಿಟ್ಟಿದೆ. ಕೊರೋನಾ ಭೀತಿಯಲ್ಲಿರುವ 1500ಕ್ಕಿಂತಲೂ ಹೆಚ್ಚು ಭಾರತೀಯರನ್ನು ಈಗಾಗಲೇ ಮೋದಿ ಸರ್ಕಾರ ಕರೆ ತಂದಿದೆ. ದೇಶವಲ್ಲದೆ ವಿದೇಶದಲ್ಲಿಯೂ ಭಾರತೀಯರು ತೊಂದರೆಗೆ ಸಿಲುಕಿದರೆ ಮೋದಿ ಸರ್ಕಾರ ತಕ್ಷಣ ಸ್ಪಂದಿಸುತ್ತಿರುವುದಕ್ಕೆ ಇಡೀ ವಿಶ್ವವೇ ಭಾರತದ ನಡೆಗೆ ಖುಷಿ ವ್ಯಕ್ತ ಪಡಿಸುತ್ತಿದೆ. ಇದೀಗ ಕಜಕೀಸ್ಥಾನ್ ಕೂಡಾ ಭಾರತದ ನಡೆ ಹೆಮ್ಮೆತರಿಸುತ್ತಿದೆ ಎಂದು ಹೇಳಿದೆ.

ಹೌದು… ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಹೆಚ್ಚಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ನೋಡಲು ಹೆಮ್ಮೆಯಾಗುತ್ತಿದೆ ಮತ್ತು ಮಾರಾಣಾಂತಿಕ ಸೋಂಕನ್ನು ಎದುರಿಸಲು ತಮ್ಮ ದೇಶವು ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ಭಾರತದ ಕಜಕೀಸ್ಥಾನ್ ರಾಯಭಾರಿ ಯೇರ್ಲಾನ್ ಅಲಿಂಬಾಯೆವ್ ಹೇಳಿದ್ದಾರೆ. ಒಟ್ಟಾರೆಯಾಗಿ ಕೊರೋನಾ ವೈರಸ್‍ನಿಂದಾಗಿ ಭಾರತದಲ್ಲಿ ಭಾರೀ ಮುಂಜಾಗೃತ ಕ್ರಮವನ್ನು ಕೈಗೊಳ್ಳುವುದಲ್ಲದೆ, ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸುತ್ತಿರುವುದು ಹಾಗೂ ವಿಶ್ವ ನಾಯಕರುಗಳ ಜೊತೆ ಕೊರೋನಾ ವೈರಸ್ ಹರಡದಂತೆ ಅದನ್ನು ತಡೆಗಟ್ಟುವ ಬಗ್ಗೆ ಭಾರತ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ ಎಲ್ಲರೂ ಮೆಚ್ಚುವಂತಹದ್ದು…

-Pavithra

Tags

Related Articles

FOR DAILY ALERTS
Close