ಪ್ರಚಲಿತ

ಆರ್ಯರ ಆಕ್ರಮಣ ಭಾರತದ ಮೇಲೆ ನಡೆಯಿತೇ? ಅಥವಾ ಸರಸ್ವತೀ ನದಿ ನಾಗರೀಕತೆ ಹೊಂದಿದ್ದ ಭಾರತೀಯರು ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋಗಿ ಅಲ್ಲಿ ನಾಗರೀಕತೆಯನ್ನು ನಿರ್ಮಿಸಿದ್ದರೆ?? ನಿಜವಾದ ಸತ್ಯ ನಿಮಗೆ ಗೊತ್ತೇ?

ಮ್ಮ ದೇಶ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಸಮೃದ್ಧ ದೇಶ. ಹಲವಾರು ಪರಕೀಯರ ಆಕ್ರಮಣವನ್ನು ಎದುರಿಸಿಯೂ, ಆಡಳಿತಕ್ಕೆ ಒಳಪಟ್ಟೂ ನಾವು ನಮ್ಮತನವನ್ನು ಇಂದಿಗೂ ಕಳೆದುಕೊಂಡಿಲ್ಲ. ಭಾರತೀಯರ ಭ್ರಾತೃತ್ವ,ಒಗ್ಗಟ್ಟು ಮತ್ತು ಸಹನೆ ನಮ್ಮನ್ನು ಹಲವಾರು ವರುಷ ಆಳಿದ್ದ ಬ್ರಿಟೀಷರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆದರೆ ಕುತಂತ್ರಗಾರಿಕೆಯಲ್ಲಿ ಎತ್ತಿದ ಕಯ್ಯಾಗಿದ್ದ ಬ್ರಿಟೀಷರಿಗೆ ಇದಕ್ಕೊಂದು ಪರಿಹಾರ ಹುಡುಕುವುದೇನೂ ಕಷ್ಟಕರವಾಗಲಿಲ್ಲ. ಇದಕ್ಕಾಗಿ ಅವರು ಆರಿಸಿಕೊಂಡದ್ದು ‘ಒಡೆದು ಆಳುವ ನೀತಿ’ಯನ್ನು . ಹಿಂದೂ ಮುಸ್ಲಿಂ ಎಂಬ ಭೇದವನ್ನು ಹುಟ್ಟುಹಾಕಿ ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸಿದ ಬಳಿಕವೂ ಹಿಂದುಸ್ತಾನ ಬಲಿಷ್ಠ ರಾಷ್ಟ್ರವಾಗುತ್ತಿರುವುದು ಅವರಿಗೆ ಸಹಾಯವಾಗುತ್ತಿಲ್ಲ. ಅವರು ನೆಟ್ಟು ಹೋದ ಕ್ರಿಶ್ಚಿಯಾನಿಟಿ ಎಂಬ ಬೀಜ ಒಡೆದು ವೃಕ್ಷವಾಗಿದ್ದರೂ ಹೆಮ್ಮರವಾಗಿಲ್ಲವೆಂಬುದು ವ್ಯಾಟಿಕನ್ ನ ತಲೆನೋವಿಗೆ ಕಾರಣವಾಗಿದೆ. ಅದಕ್ಕೆಂದೇ ಅವರು ಒಡೆದು ಆಳುವ ನೀತಿಯ ಇನ್ನೊಂದು ಮಜಲನ್ನು ತೆರೆದಿಟ್ಟರು ಅದುವೇ ದಕ್ಷಿಣ ಭಾರತೀಯರು ದ್ರಾವಿಡರೆಂದೂ ಉತ್ತರ ಭಾರತೀಯರು ಆರ್ಯರೆಂದೂ, ಭಾರತ ಮೂಲತಃ ದ್ರಾವಿಡರ ದೇಶವೆಂದೂ ಆರ್ಯರು ಯುರೋಪಿನಿಂದ ಆಗಮಿಸಿ ಆಕ್ರಮಣ ನಡೆಸಿದರೆಂದೂ ಕಥೆಯನ್ನು ಹೆಣೆದು ಭಾರತವನ್ನು ಒಡೆಯುವುದು. ಇದರ ಇನ್ನೊಂದು ಬದಿ ಭಾರತೀಯರು ಮೂಲತಃ ಅನಾಗರೀಕರು, ಅವರ ಸಂಸ್ಕೃತಿ ಮೂಲ ವಿಜ್ಞಾನ ವೇದಗಳೆಲ್ಲವೂ ಯುರೋಪಿಯನ್ನರ ( ವಲಸೆ ಬಂದ ಆರ್ಯರ) ಕೊಡುಗೆ ಎಂದು ಸಿದ್ದ ಪಡೆಸುವುದುದಾಗಿತ್ತು. ಆದರೆ ಇತ್ತೀಚಿಗೆ ಎರಡು ಶತಮಾನಗಳಿಂದ ನಡೆದ ಸಂಶೋಧನೆಗಳ, ಉತ್ಖನನಗಳ ಪುರಾವೆಗಳನ್ನು ಸರಿಯಾಗಿ ಗಮನಿಸಿದಲ್ಲಿ ಸತ್ಯವೇನೆಂದು ಅರಿವಾಗುತ್ತದೆ.. ನಿಮಗೂ ಸತ್ಯವನ್ನು ಅರಿಯುವ ಆಸಕ್ತಿ ಇದೆಯೇ?

ಇತಿಹಾಸದ ಕುರಿತು ನಡೆದ ಹಲವಾರು ಸಂಶೋಧನೆಗಳು ಆರ್ಯರ ಆಕ್ರಮಣ ಎಂಬ ವಾದವನ್ನು ಮಾತ್ರವಲ್ಲದೆ, ಭಾರತೀಯ ಆರ್ಯರು ‘ ಇಂಡೋ-ಯುರೋಪಿಯನ್’ ಜನಾಂಗದ ಶಾಖೆಯಾಗಿದ್ದರು ಎಂಬ ಇತಿಹಾಸಜ್ಞರ ವಾದವನ್ನೂ ನಿಸ್ತಾರಗೊಳಿಸುತ್ತದೆ.ಇದರ ವಿರುದ್ಧವಾಗಿ ಇಂಡೋ-ಯುರೋಪಿಯನ್ ಎಂದು ಕರೆಯಲಾಗುವ ವೃಕ್ಷದ ಮೂಲ ಬೀಜವೇ ಆರ್ಯರು.ಆರ್ಯರಿಂದ ಆಕ್ರಮಣ ನಡೆಯಿತು ಎಂಬುದು ಸುಳ್ಳು.ಬದಲಾಗಿ ಭಾರತ ಖಂಡದಿಂದಲೇ ಹಲವಾರು ಸಮುದಾಯಗಳು ಇತರೆಡೆಗೆ ವಲಸೆ ಹೋದರು ಎನ್ನಲು ಅನೇಕ ಆಧಾರಗಳಿವೆ.ರಾಜಕೀಯ ಕ್ಷೋಭೆಗಳು,ಪ್ರಾಕೃತಿಕ ವೈಪರೀತ್ಯಗಳು ಎರಡೂ ಈ ವಲಸೆಗಳಿಗೆ ಕಾರಣವಾದವು.ಜನಸಂಖ್ಯೆಯ ಒತ್ತಡವು ಬಹಳಷ್ಟು ಹೆಚ್ಚಿದಾಗ ಇಂತಹಾ ಸನ್ನಿವೇಶ ಏರ್ಪಡುತ್ತವೆ ಎಂಬುದನ್ನು ನಾವು ಇತಿಹಾಸಗಳಲ್ಲಿ ಓದಿದ್ದೇವೆ.ಈ ವಲಸೆಗೆ ಹಲವಾರು ಸಾಕ್ಷ್ಯಗಳಿವೆ.ಸಿರಿಯಾದ ಮಿಟ್ಟಿನಿ ಜನಾಂಗದಲ್ಲಿಯೂ ಟರ್ಕಿಯ ಹಿಟೈಟ್ ಜನಾಂಗದಲ್ಲಿಯೂ ಕ್ರಿಸ್ತ ಪೂರ್ವ ೧೫ ನೇ ಶತಮಾನದಲ್ಲೇ ಭಾರತೀಯ ಮೂಲದ ಹೆಸರುಗಳು ಇದ್ದುದನ್ನು ಗಮನಿಸಿದ್ದ ಎಫ್.ಇ ಪಾರ್ಗಿಟರ್ ಈ ರೀತಿ ಹೇಳಿದ್ದಾರೆ “ ಇಂತಹಾ ಅನೇಕ ಸಾಕ್ಷ್ಯಗಳಿಂದ ಹೊರಪಡುವ ಸಂಗತಿಗಳು ೧)ಭಾರತದಿಂದ ಕ್ರಿಸ್ತಪೂರ್ವ ೧೫ ನೇ ಶತಮಾನಕ್ಕೂ ಹಿಂದೆಯೇ ಜನಸಮೂಹಗಳು ವಲಸೆ ಹೋಗಿದ್ದವು.೨)ಆರ್ಯದೇವತೆಗಳ ಕಲ್ಪನೆಯನ್ನು ಅವರು ಭಾರತದಿಂದ ಒಲಿದಿದ್ದರೂ೩)ಹೀಗೆ ಕ್ರಿಸ್ತಪೂರ್ವ ೧೬ನೆ ಶತಮಾನಕ್ಕೆ ಪೂರ್ವದಲ್ಲಿಯೇ ಭಾರತದಲ್ಲಿ ಆರ್ಯಜನಾಂಗವೂ ಆ ದೇವತೆಗಳ ಕಲ್ಪನೆಗಳೂ ಇದ್ದಿರಬಹುದು.೪) ಆರ್ಯರು ಅದಕ್ಕೂ ಬಹಳ ಹಿಂದೆಯೇ ಭಾರತದಲ್ಲಿ ನೆಲೆಸಿದ್ದಿರಬೇಕು.ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಆರ್ಯರು ವಾಯುವ್ಯದಿಂದ ಭಾರತವನ್ನು ಆಕ್ರಮಿಸಿದರು ಎಂಬ ವಾದ ನಿರಾಧಾರವೆಂದು ಸಿದ್ದವಾಗುತ್ತದೆ.ಆದರೆ ಇಲ್ಲಿನ ಜನತೆ ವಾಯುವ್ಯ ಭಾರತದಿಂದ ಪರಾಭವಗೊಂಡು ಬೇರೆಡೆಗೆ ವಲಸೆ ಹೋದರೆಂಬ ಭಾರತದ ಪಾರಂಪರಿಕ ಕಥನವನ್ನು ಈ ಸಂಗತಿಗಳುಸಮರ್ಥಿಸುತ್ತವೆ.”

ಪಾರ್ಗಿಟರ್ ಅವರು ೧೯೨೨ ರಲ್ಲೇ ಈ ರೀತಿಯಾಗಿ ಬರೆದಿದ್ದರು.ವಿವಿಧ ಪ್ರಾಚೀನ ಘಟನಾವಳಿಗಳ ಕುರಿತಂತೆ ತರ್ಕಗಳು ಸರಿಯಾಗಿದ್ದರೂ ಅವರು ಊಹಿಸಿದ್ದ ಕಾಲನಿರ್ಣಯದಲ್ಲಿ ವ್ಯತ್ಯಾಸಗಳಿವೆ.ಅವರು ಲೇಖನಗಳನ್ನು ಬರೆದದ್ದು ಸುಮಾರು ೧೦೦ ವರ್ಷಗಳಿಗೂ ಮೊದಲು ಆ ಸಮಯದಲ್ಲಿ ಪ್ರಮುಖ ಪುರಾತತ್ವ ಶೋಧಗಳು ನಡೆದಿರಲಿಲ್ಲ,ಉಪಗ್ರಹಗಳಿಂದ ತೆಗೆಯಲ್ಪಟ್ಟ ಚಿತ್ರಗಳೂ ಲಭ್ಯವಿರಲಿಲ್ಲ.ಪಶ್ಚಿಮ ಏಷ್ಯಾದ ಹಲವೆಡೆಗಳಲ್ಲಿ ಆರ್ಯರು ಇದ್ದರೆಂಬುದನ್ನು ಸೂಚಿಸುವ ಸಿರಿಯಾದ ಮಿಟ್ಟನಿ ದಾಖಲೆಗಳು ಕ್ರಿಸ್ತಪೂರ್ವ ೧೫ ಶತಮಾನವಾದ ಕಾರಣ ಮಾಂಧಾತೃವಿನಿಂದ ದೃಹ್ಯುಗಳು ಪರಾಭವ ಹೊಂದಿದ್ದು ಇದೇ ಕಾಲಘಟ್ಟದಲ್ಲಿ ಎಂಬ ಊಹೆಯಂತೆ ಪಾರ್ಗಿಟರ್ ಅದನ್ನು ಮಹಾಭಾರತ ಯುದ್ಧವು ಕ್ರಿಸ್ತಪೂರ್ವ ೯೫೦ ರ ಸಮಯದಲ್ಲಿ ನಡೆಯಿತು ಎಂದು ತರ್ಕಿಸುತ್ತಾರೆ.ಪ್ರಾಚೀನ ವಿಧ್ವಾಮ್ಸರಲ್ಲಿ ಕಾಲಘಟ್ಟಗಳ ಕುರಿತಾದ ಗೊಂದಲಗಳು ಸಾಮಾನ್ಯವಾಗಿದೆ. ಉದಾಹರಣೆಗೆ ಪ್ರಾಚೀನ ರಾಜವಂಶಗಳ ಕಾಲಾವಧಿಯನ್ನು ನಿರ್ಣಯಿಸುವಾಗ ವಿಧ್ವಾಮ್ಸರು ಮಧ್ಯಯುಗದ ಮೊಘಲ ಅರಸರ ಸರಾಸರಿ ಆಳ್ವಿಕೆಯ ಅವಧಿಯನ್ನು ಆಧಾರವಾಗಿ ಬಳಸಿದ್ದಾರೆ.ಆದರೆ ಇತಿಹಾಸದಲ್ಲಿ ದೆಹಲಿಯ ಮೊಘಲ ದೊರೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವರು ತಮ್ಮ ಉತ್ತರಾಧಿಕಾರಿಗಳಿಂದ ಕೊಲೆಗೀಡಾದರು,ಆದ್ದರಿಂದ ಅವರ ಆಳ್ವಿಕೆಯ ಅವಧಿ ಸಂಕ್ಷಿಪ್ತವಾಗಿರುತ್ತಿತು. ಆದರೆ ಹಿಂದೂ ರಾಜಮನೆತನಗಳಲ್ಲಿ ಇಂತಹಾ ಕೃತ್ಯಗಳು ಇಂದಿಗೂ ನಡೆದಿಲ್ಲ.ಇಂತಹಾ ವ್ಯತ್ಯಾಸಗಳಿಂದ ಮತ್ತು ಅಲಭ್ಯವಾದ ಆಧುನಿಕ ವೈಜ್ಞಾನಿಕ ಸೌಕರ್ಯಗಳ ಕಾರಣದಿಂದಾಗಿ ಅವರ ಕಾಲನಿರ್ಣಯದಲ್ಲಿ ವ್ಯಾಯಾಸಗಳು ಕಂಡು ಬಂದವು.

ಋಗ್ವೇದದ ಕಾಲದಲ್ಲಿ ಎಂದರೆ ಕ್ರಿಸ್ತಪೂರ್ವ ೩೨೦೦ ರ ಹಿಂದೆ ದೇಶದ ಅತಿ ದೊಡ್ಡ ಸಮೃದ್ಧ ನದಿಯಾಗಿದ್ದ ಸರಸ್ವತಿ ಈಗಿನ ರಾಜಸ್ಥಾನದ ನಡುವೆ ಹರಿಯುತ್ತಿತ್ತು.ಆಗ ಉತ್ತರಭಾರತವಷ್ಟೂ ಫಲವತ್ತಾದ ಭೂಮಿಯಾಗಿತ್ತು.ಆಗ ಥಾರ್ ಮರುಭೂಮಿ ಇರಲಿಲ್ಲವಾದದ್ದರಿಂದ ಉತ್ತರಭಾರತದ ಭೂಪ್ರಸಾರ ಅಖಂಡವಾಗಿತ್ತು. ಕ್ರಮೇಣ ಸರಸ್ವತೀ ನದಿ ಕೃಶವಾಗತೊಡಗಿತು.ಮಹಾಭಾರತ ಯುದ್ಧದ ಸಮಯದಲ್ಲೇ ನದಿಯು ಮರುಭೂಮಿಯಲ್ಲಿ ಅದೃಶ್ಯವಾಗಿತ್ತು.ಈ ಪರಿವರ್ತನೆಯ ಒಂದು ಪರಿವರ್ತನೆಯ ಒಂದು ಪರಿಣಾಮವೆಂದರೆ ಜನಸಮುದಾಯವು ಪೂರ್ವ ಮತ್ತು ಪಶ್ಚಿಮ ಎಂದು ಬೇರೆಬೇರೆಯಾಗಿದ್ದು.ಈ ಭಿನ್ನತೆ ವೇದಸಾಹಿತ್ಯದಲ್ಲಿಯೂ ಕಾಣಸಿಗುತ್ತದೆ.ಇವುಗಳ ಪೈಕಿ ಪೂರ್ವಭಾಗದ ಜನಸಮುದಾಯವು ಮೊದಲು ಕುರುಪಾಂಚಾಲಪ್ರಾಂತ್ಯದಲ್ಲಿ ನೆಲೆಸಿ ಅನಂತರ ಮಗಧದೇಶಕ್ಕೆ ಸ್ಥಳಾಂತರಗೊಂಡು ಧರ್ಮಶಾಸ್ತ್ರ,ತತ್ವಶಾಸ್ತ್ರಗಳನ್ನು ವಿಕಸಿತಗೊಳಿಸಿತು.ವೇದಯುಗದ ಹರಪ್ಪ ಜನಾಂಗವು ವಿಕಾಸಗೊಳಿಸಿದ ಭೌತವಿಜ್ಞಾನಗಳೇ ಪಾಶ್ಚಾತ್ಯ ನಾಗರೀಕತೆಯ ಬೀಜವಾದವು.ಸೈಡನ್ಬರ್ಗ್ ಸಿದ್ಧಪಡಿಸಿರುವಂತೆ ಈಜಿಪ್ಷಿಯನ್ ಬೆಬಿಲೋನಿಯನ್ ಮತ್ತು ಗ್ರೀಕ್ ಗಣಿತಶಾಸ್ತ್ರವೆಲ್ಲ ನಿಷ್ಪನ್ನವಾದದ್ದು ವೈದಿಕ ಶಲ್ಪಸೂತ್ರಗಳಿಂದಲೇ ಎಂಬುದನ್ನು ಅಲ್ಲಿ ದೊರೆತ ಮುದ್ರಿಕೆಗಳು ಸಾಕ್ಷ್ಯಪಡಿಸುತ್ತವೆ.ಹೀಗೆ ಮಾನವಜನಾಂಗದ ಎರಡು ಪ್ರಮುಖ ಅನ್ವೇಷಣೆಗಳಾದ ಗಣಿತಶಾಸ್ತ್ರ ಮತ್ತು ವರ್ಣಮಾಲೆಗಳು ವೇದಮೂಲದವು.ಹರಪ್ಪ ಮುದ್ರಿಕೆಗಳಲ್ಲಿ ಬಳಸಿರುವ ವರ್ಣಮಾಲೆಯು ಪ್ರಾಚೀನ ಸಂಸ್ಕೃತಭಾಷೆಗೆ ಸದೃಶವಾಗಿದೆ.ಪ್ರಾಚ್ಯ ತತ್ವಶಾಸ್ತ್ರ,ಧರ್ಮಶಾಸ್ತ್ರ,ಉಪನಿಷತ್ತುಗಳು,ಬೌಧ ಧರ್ಮ,ಜೈನ ಧರ್ಮ ಮಾತ್ರವಲ್ಲದೆ ಪಾರಸಿಕರ ಜತುರಾಷ್ಟ್ರ ಧರ್ಮ ಕೂಡ ಉಗಮಗೊಂಡಿದ್ದು ನಮ್ಮ ವೇದಭೂಮಿಯಲ್ಲಿಯೇ.ಇಂತಹಾ ಯಾವುದೇ ಧರ್ಮ ಪಾಶ್ಚಾತ್ಯ ಜಗತ್ತಿನಲ್ಲಿ ಉದಿಸಿದ ದಾಖಲೆಯಿಲ್ಲ.

ಹರಪ್ಪ ಜನಾಂಗದವರು ವೈದಿಕ ಆರ್ಯರು ಮಾತ್ರವಲ್ಲ,ವೇದಯುಗದ ಅಂತ್ಯಭಾಗಕ್ಕೆ ಸೇರಿದವರು.ಪ್ರಾಚ್ಯ ತತ್ವಶಾಸ್ತ್ರ,ಪಾಶ್ಚಾತ್ಯ ವಿಚಾರವಾದ ಎರಡರ ಮೂಲವನ್ನೂ ವೈದಿಕ ಪರಂಪರೆಯಲ್ಲೇ ಗುರುತಿಸಬಹುದು.ವೇದಗಳು ಈಜಿಪ್ಟ್,ಸುಮೇರಿಯ,ಸಿಂಧೂ ಕಣಿವೆ ಮೊದಲಾದ ಎಲ್ಲ ನಾಗರೀಕತೆಗಳಿಗಿಂತಲೂ ಪ್ರಾಚೀನವಾದುದು.ಈ ಆರ್ಯ ಸಂಸ್ಕೃತಿಯೇ ಮುಂದೆ ಯುರೋಪ್ ಮತ್ತಿತರ ರಾಷ್ಟ್ರಗಳಿಗೆ ಹರಡಿದ್ದು.ಇದೀಗ ಸರಿಯಾದ ಸಮಯ ಆರ್ಯ ದ್ರಾವಿಡ ಸಿದ್ದಾಂತ ಮತ್ತು ಆರ್ಯರ ಆಕ್ರಮಣವೆಂಬ ಸುಳ್ಳುಗಳ ಕಂತೆಯ ನೈಜ ಸತ್ಯವನ್ನು ಜಗತ್ತಿಗೆ ಹರಡಲು.ಹೆಮ್ಮಿಯಿಂದ ಹೇಳಿ ನಾನೊಬ್ಬ ಹಿಂದೂ.

ಆಕರ ಸಾಹಿತ್ಯ : ನವರತ್ನ ಏಸ್ ರಾಜಾರಾಮ್

-Deepashree M

Tags

Related Articles

FOR DAILY ALERTS
Close