ಪ್ರಚಲಿತ

ಭಾರತೀಯರ ಜೀವನದ ಆಧಾರವಾದ ವೇದಗಳ ಕುರಿತು ನಮಗೆಷ್ಟು ಅರಿವಿದೆ..ನಾಲ್ಕು ವೇದಗಳ  ವಿಕಾಸದ ಕುರಿತು ತಿಳಿಯಿರಿ!

ಭಾರತೀಯ ದರ್ಶನ ಮತ್ತು ಹಿಂದೂ ಧರ್ಮದ ಮೂಲ ಆಧಾರವೇ ವೇದಗಳು.ಭಾರತೀಯ ಧರ್ಮದಲ್ಲಿ ಕಂಡುಬರುವ ಜೀವನಶಕ್ತಿಗೆ ವೇದವೇ ಮೂಲ ಕಾರಣವಾಗಿದೆ.ವೇದವು ವಿಚಾರಧಾರೆಗಳ ಕಲ್ಪವೃಕ್ಷವಾಗಿದೆ.ವಿಚಾರಧಾರೆಯು ಅದರಿಂದ  ಪ್ರವೃತ್ತವಾಗಿ ಭಾರತಭೂಮಿಯಲ್ಲಿ ನಿರಂತರವಾಗಿ ಫಲವನ್ನು ನೀಡುತ್ತದೆ.ಮತ್ತು ತನ್ನ ಸತ್ಯತ್ವದ ವಿಷಯದಲ್ಲಿ ವೇದವನ್ನು ಅವಲಂಬಿಸಿದೆ.ಇದು ಕೇವಲ ಭಾರತೀಯ ಸಾಹಿತ್ಯದ ಪ್ರಥಮ ಗ್ರಂಥವಷ್ಟೇ ಅಲ್ಲದೆ ವಿಶ್ವಸಾಹಿತ್ಯದಲ್ಲೂ ಇದಕ್ಕಿಂತ ಪ್ರಾಚೀನವಾದ ಗ್ರಂಥವು ಇನ್ನೂ ಲಭಿಸಿಲ್ಲ.ಭಾರತೀಯ ಧರ್ಮ ಮಾತು ತತ್ವಜ್ಞಾನದ ಆಕೃತಿ ಮತ್ತು ಪ್ರಕೃತಿ,ಉಗಮ ಹಾಗೂ ವಿಕಾಸ ಇವುಗಳನ್ನು ಚೆನ್ನಾಗಿ ತಿಳಿಯಬೇಕಾದರೆ ಈ  ಗ್ರಂಥರತ್ನಗಳ ಗಾಢವಾದ ಪರ್ಯಾಲೋಚನೆ ಅತ್ಯಾವಶ್ಯಕವಾಗಿರುತ್ತದೆ.ಆದರೆ ಶ್ರುತಿ ಸಮ್ಮತವಾದ ದಾರ್ಶನಿಕ ವಿಚಾರ ಧಾರೆಯ ವಿಷಯದಲ್ಲಿ ಸಂಪೂರ್ಣ ಮತಬೇಧವಿರುತ್ತದೆ.ವೇದಗಳನ್ನು ಇಂದು ಪ್ರಾಚೀನ ಪದ್ಧತಿ ಮತ್ತು ಅರ್ವಾಚೀನವಾದ ಪಾಶ್ಚಾತ್ಯರೀತಿಯೇನೆಂಬ ಎರಡು ವಿಧಗಳಲ್ಲಿ ಅಧ್ಯಯನ ನಡೆಸುತ್ತಾರೆ.ಪಾಶ್ಚಾತ್ಯ ಪದ್ದತಿಯ ವೇದಾರ್ಥವನ್ನು ಪರಿಶೀಲಿಸುವುದಕ್ಕೆ ಇತರ ದೇಶಗಳ ಸಾಹಿತ್ಯವನ್ನು ಅಪೇಕ್ಷಿಸುತ್ತದೆ.ಪ್ರಾಚೀನ ಪದ್ದತಿಯಾದರೋ ಇತಿಹಾಸ ಪುರಾಣಗಳನ್ನು ವೇದಾರ್ಥದ ವಿಸ್ತರಣಕ್ಕಾಗಿ ಸಹಾಯಕಗಳಾಗಿ ಆದರಿಸುತ್ತದೆ.ವೇದಗಳ ರಹಸ್ಯವನ್ನು ತಿಳಿಯಲು ಅವುಗಳ ಸಹಾಯವು ಬಹು ಅಮೂಲ್ಯ.ಈ ದೃಷ್ಟಿಭೇಧದ ವಿಚಾರ ಎರಡು ಮತಗಳಲ್ಲೂ ಭಿನ್ನ ಭಿನ್ನ ಪ್ರಾಕಾರದಿಂದಿದೆ.ಪಾಶ್ಚಾತ್ಯ ವಿಧ್ವಾಮ್ಸರು ವೇದಗಳಿಗೆ ಅಸಂಸ್ಕೃತ ಮ್ಸತ್ತು ಅರೆಸುಸಂಸ್ಕೃತರಾದ ಆರ್ಯ ಜನಾಂಗದವರ ವಿಲಕ್ಷಣವಾದ ಗಾಯನವೆಂದು ಭಾವಿಸುತ್ತಾರೆ.ಆದರೆ ಭಾರತೀಯ ಕಲ್ಪನಾನುಸಾರವಾಗಿ ವೇದವು ನಿತ್ಯವಾದುದು.ಸಮಸ್ತ ಜ್ಞಾನದ ಅಮೂಲ್ಯವಾದ ಭಂಢಾರ ಮತ್ತು ಧರ್ಮದ ಸಾಕ್ಷಾತ್ಕಾರವನ್ನು ಹೊಂದಿದ್ದ ಮಹರ್ಷಿಗಳು ಅನುಭವಕ್ಕೆ ತಂದುಕೊಂಡಿದ್ದ ಪರಮತತ್ವವನ್ನು ಪರಿಚಯ ಮಾಡಿಕೊಡುವುದು.ಇಷ್ಟ ಪ್ರಾಪ್ತಿ ಮತ್ತು ಅಮಿಷ್ಠದ ಪರಿಹಾರಗಳನ್ನು ತಿಳಿಸುವುದರಲ್ಲಿಯೇ ವೇದದ ವೇದತ್ವ ಇರುತ್ತದೆ.ಭಾರತೀಯರ ಈ ದೃಷ್ಟಿಕೋನವನ್ನು ಗಮನದಲ್ಲಿಟ್ಟು ಶ್ರುತಿಯಲ್ಲಿ ಪ್ರತಿಪಾದಿತವಾಗಿರುವ ಆಧ್ಯಾತ್ಮಿಕ ರಹಸ್ಯಗಳು ವಿಮರ್ಶಾತ್ಮಕವಾಗಿದೆ.

“ಮಂತ್ರ ಬ್ರಾಹ್ಮಣಾತ್ಮಕೋ ವೇದಹ’ ಎಂಬ ಮಂತ್ರದ ಪ್ರಕಾರ ವೇದದಲ್ಲಿ ಎರಡು ವಿಭಾಗಗಳಿವೆ ದೇವತಾ ವಿಶೇಷವೊಂದರ ಸ್ತೋತ್ರದಲ್ಲಿ ಹೇಳುವ ಅರ್ಥವನ್ನು ಸ್ಮರಣಿಸುವುದನ್ನು ಮಂತ್ರವೆಂದು ಹೇಳುತ್ತಾರೆ.ಯಜ್ಞದ ಅನುಷ್ಠಾನವನ್ನು ವಿಸ್ತಾರವಾಗಿ ವರ್ಣಿಸುವ ಗ್ರಂಥಕ್ಕೆ ಬ್ರಾಹ್ಮಣ ಎಂದು ಹೆಸರು.ಮಂತ್ರಗಳ ಸಮುದಾಯಕ್ಕೆ ಸಂಹಿತಾ ಎಂದು ಹೆಸರು.ಸಂಹಿತೆಗಳು ಋಕ್,ಯಜುಸ್,ಸಾಮ ಮತ್ತು ಅಥರ್ವ ಸಂಹಿತೆ ಎಂಬುದಾಗಿ ನಾಲ್ಕು ವಿಧಗಳಿವೆ.ಈ ನಾಲ್ಕು ವೇದಗಳನ್ನು ಮಹರ್ಷಿ ವೇದವ್ಯಾಸರು ಯಜ್ಞದ ಆವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಸಂಕಲಿಸಿದರೆಂದು ಪುರಾಣಗಳು ತಿಳಿಸುತ್ತವೆ.ಯಜ್ಞಾನುಷ್ಠಾನಕ್ಕೆ ಹೋತೃ,ಉದ್ಗಾತೃ,ಅಧ್ವರ್ಯು ಮತ್ತು ಬ್ರಹ್ಮ ಎಂಬುದಾಗಿ ನಾಲ್ಕು ಜನ ಋತ್ವಿಜರು ಅವಶ್ಯಕ ಹೋತೃವು ದೇವತೆಗಳ ಪ್ರಶಂಸಾತ್ಮಕವಾದ ಮಂತ್ರಗಳನ್ನು ಋಗ್ವೇದದಲ್ಲಿ ಸಂಕಲಿಸಲಾಗಿದೆ.ಉದ್ಗಾತೃವಿನ ಕೆಲಸವೂ ಋಗ್ವೇದದ ಮಂತ್ರವನ್ನು ಸ್ವರ ಸಹಿತವಾಗಿ ಮಧುರವಾಗಿ ಗಾನಮಾಡುವುದು.ಈ ಕಾರ್ಯಕ್ಕಾಗಿ ಸಾಮವೇದವು ಸಂಕಲಿತವಾಗಿದೆ.ಯಾಗದ ವಿವಿಧ ಅಂಗ ಮತ್ತು ಉಪಾಂಗ ಭೂತವಾದ ಅನುಷ್ಠಾನಗಳನ್ನು ವಿಧಿವತ್ತಾಗಿ ಮಾಡುವುದು ಅದ್ವ್ಯರುವಿನ ಉತ್ತರದಾಯೀ ಕರ್ತವ್ಯವಾಗಿರುತ್ತದೆ.ಅಧ್ವರ್ಯುವಿನ ಕರ್ಮಕ್ಕಾಗಿ ಯಜುಹಸಂಹಿತೆಯನ್ನು ಉಪಯೋಗಿಸುತ್ತಾರೆ.ಯಾಗದಲ್ಲಿ ಯಾವ ವಿಧವಾದ ಬಾಧೆಯೂ ಬಾರದಂತೆ ಮತ್ತು ಯಾಗವು ವಿಧಿವತ್ತಾಗಿ ನಡೆಯುವಂತೆ ನೋಡಿಕೊಳ್ಳುವುದೇ ಬ್ರಾಹ್ಮಣ ಮಹತ್ವಪೂರ್ಣ ಕರ್ತವ್ಯ.ಅಥರ್ವ ವೇದವು ಬ್ರಹ್ಮನಿಗೆ ಸಂಬಂಧಿಸಿದ ವಿಶಿಷ್ಟವಾದ ವೇದ.ಬ್ರಹ್ಮನು ಎಲ್ಲಾ ವೇದಗಳನ್ನೂ ಅರಿತವನು.ಈ ರೀತಿಯಾಗಿ ಯಜ್ಞವು ಚೆನ್ನಾಗಿ ನಡೆಯಲು ವಿಭಿನ್ನವಾದ ರಹುತ್ವಿಜರ ಉಪಯೋಗಕ್ಕಾಗಿ ಬೇರೆಬೇರೆ ಸಂಹಿತೆಗಳು ಸಂಕಲನವಾದವು..ವೇದಗಳಿಗೆ ತ್ರಯೀ ಎಂಬ ಹೆಸರೂ ಸಹ ಇದೆ.ಈ ಸಂಜ್ಞಾವಿಧಾನವು ಮಂತ್ರಗಳ ಉಪಯೋಗವನ್ನು ಅನುಸರಿಸಿಮಂತ್ರಗಳ ಸ್ವರೂಪವನ್ನು ಅವಲಂಬಿಸಿರುತ್ತದೆ.ಋಕ್ ಮಂತ್ರಗಳ ಗಾಯನಕ್ಕೆ ಸಾಮವೆಂದು ಹೆಸರು.ಇವೆರಡರಿಂದ ಬೇರೆಯಾದ ಗದ್ಯಾತ್ಮಕವಾದ ವಾಕ್ಯಗಳನ್ನು ಯಜುಸ್ ಎಂದು ಕರೆಯಲಾಗುತ್ತದೆ.ವೇದ ಪ್ರತಿಪಾದ್ಯವಾದ ಧರ್ಮವನ್ನು ತ್ರಯೀಧರ್ಮವೆಂದೂ ಧರ್ಮದ ರಹಸ್ಯವನ್ನರಿತ ಪಂಡಿತರನ್ನು ತ್ರೈವಿದ್ಯರ್ರಂದೂ ಕರೆಯುತ್ತಾರೆ.

ಸಂಹಿತೆ,ಬ್ರಾಹ್ಮಣ ಮತ್ತು ಅರಣ್ಯಕಗಳೆಂದು ವೇದದಲ್ಲಿ ಮೂರು ವಿಭಾಗಗಳಿವೆ.ಮಂತ್ರಗಳ ಸಮೂಹಕ್ಕೆ ಸಂಹಿತೆ ಎಂಬ ಹೆಸರಿದೆ.ಬ್ರಾಹ್ಮಣ ಗ್ರಂಥಗಳಲ್ಲಿ ಯಜ್ಞ ಯಾಗಾದಿಗಳ ಅನುಷ್ಠಾನ ಕ್ರಮವು ವಿಸ್ತಾರವಾಗಿ ವರ್ಣಿತವಾಗಿದೆ.ಈ ಗ್ರಂಥಗಳ ವಿಷಯದಲ್ಲಿ ಬ್ರಹ್ಮನೇ ಮುಖ್ಯವಾಗಿದ್ದಾನೆ.ಇವುಗಳಿಗೆ ಬ್ರಾಹ್ಮಣನೆಂದು ಹೆಸರಿದೆ.ಬ್ರಾಹ್ಮಣಗಳ ಅನಂತರ ಅರಣ್ಯಕಗಳು ಬರುತ್ತವೆ.ಅರಣ್ಯದಲ್ಲಿ ಅಧ್ಯಯನ ಮಾಡುವುದರಿಂದ ಇವುಗಳಿಗೆ ಆರಣ್ಯಕಗಳೆಂದು ಹೆಸರು.ಈ ಗ್ರಂಥಗಳಲ್ಲಿ ವಾನಪ್ರಸ್ಥಾಶ್ರಮಕ್ಕೆ ಉಪಯುಕ್ತವಾದಕ್ರಿಯಾಕಲಾಪಗಳು ವರ್ಣಿಸಲ್ಪಟ್ಟಿವೆ.ವಿಶೇಷವಾಗಿ ಯಾಗವಿಧಾನದ ಆಧ್ಯಾತ್ಮಿಕ ರಹಸ್ಯಗಳ ವಿಚಾರಗಳು ಈ ಗ್ರಂಥಗಳಲ್ಲಿ ಕಾಣಸಿಗುತ್ತವೆ.ಅರಣ್ಯಕಗಳ ಅಂತಿಮಭಾಗವೇ ಉಪನಿಷತ್ತು. ಉಪನಿಷತ್ತುಗಳಲ್ಲಿ ಆಧ್ಯಾತ್ಮಿಕ ವಿಷಯಗಳ ಮಹತ್ವಪೂರ್ಣವಾದ ಸಮಸ್ಯೆಗಳು ವಿದ್ವತ್ಪೂರ್ಣವಾಗಿ ವಿಚಾರ ಮಾಡಲ್ಪಟ್ಟಿದೆ.ಉಪನಿಷತ್ತುಗಳನ್ನೇ ವೇದಾಂತವೆಂದು ಕರೆಯಲಾಗುತ್ತದೆ.ಈ ರೀತಿಯಾಗಿ ಕರೆಯಲು ಎರಡು ಕಾರಣಗಳಿವೆ ಮೊದಲನೆಯ ಕಾರಣ ಇವು ವೇದದ ಕೊನೆಯಲ್ಲಿ ಬರುತ್ತದೆ.ವೇದದ ಅಂತ್ಯದಲ್ಲಿ ಬರುವುದೇ ವೇದಾಂತ  .ಎರಡನೆಯ ಕಾರಣ ಇವುಗಳಲ್ಲಿ ವೇದಗಳಲ್ಲಿ ನಿಶ್ಚಿತರೂಪದಲ್ಲಿ ಪ್ರತಿಪಾದ್ಯವಾದ ಸಿದ್ದಾಂತಗಳ ವಿವೇಚನೆ ಇರುತ್ತದೆ.ಆಧ್ಯಾತ್ಮ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿರುವ ನಿಮಿತ್ತದಿಂದಲೇ ಉಪನಿಷತ್ತುಗಳಿಗೆ ಬಹಳಷ್ಟು ಮಹತ್ವವಿದೆ.ಪ್ರತಿಪಾದಿತಗೊಂಡವಿಷಯಗಳ ದೃಷ್ಟಿಯಿಂದ ವೇದಗಳಲ್ಲಿ ಕರ್ಮಕಾಂಡ ಮತ್ತು ಜ್ಞಾನಕಾಂಡಗಳೆಂಬ ಎರಡು ವಿಭಾಗಗಳಿವೆ.ಸಂಹಿತೆ ಬ್ರಾಹ್ಮಣ ಮತ್ತು ಆರಣ್ಯಕಗಳಲ್ಲಿ ಪ್ರಧಾನವಾಗಿ ಕರ್ಮದ ವಿವೇಚನೆ ಇರುವುದರಿಂದ,ಇವುಗಳು ಕರ್ಮಕಾಂಡದಲ್ಲಿ ಸೇರಿತ್ತವೆ.ಜ್ಞಾನದ ವಿವೇಚನೆಯನ್ನೂ ಮಾಡುವುದರಿಂದ ಉಪನಿಷತ್ತುಗಳನ್ನು ಜ್ಞಾನಕಾಂಡವೆಂದು ಕರೆಯುತ್ತಾರೆ.ಭಾರತೀಯ ದರ್ಶನದ ಮೂಲ ಸಿದ್ಧಾಂತಗಳು ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗುತ್ತದೆ.ಮಹಾಭಾಷ್ಯದ ಅನುಸಾರ ಋಗ್ವೇದದಲ್ಲಿ  ೨೧ ಶಾಖೆಗಳೂ,ಯಜುರ್ವೇದದಲ್ಲಿ ೧೦೦ ಶಾಖೆಗಳೂ,ಸಾಮವೇದದಲ್ಲಿ ೧೦೦೦ ಶಾಖೆಗಳೂ, ಮತ್ತು ಅಥರ್ವವೇದದಲ್ಲಿ ೯  ಶಾಖೆಗಳೂ ಇದ್ದವು.ಆದರೆ ಒಟ್ಟು ೧೧೩೦ ಶಾಖೆಗಳಲ್ಲಿ ಈಗ ಲಭ್ಯವಿರುವುದು ಕೇವಲ ೧೨ ಶಾಖೆಗಳು ಮಾತ್ರ.ವಿಷಯಗಳ ದೃಷ್ಟಿಯಿಂದ ಎಲ್ಲಾ ಸಂಹಿತೆಗಳಿಗಿಂತಲೂ ಪ್ರಥಮವಾದದ್ದು ಮತ್ತು ಮಹತ್ವವಾದದ್ದುಋಗ್ವೇದ.ಋಗ್ವೇದದಲ್ಲಿ ಒಟ್ಟು ೧೦೨೮ ಸೂಕ್ತಗಳಿವೆ.ಇವುಗಳು ೧೦ ಮಂಡಲಗಳಲ್ಲಿ ವಿಭಜಿಸಲ್ಪಟ್ಟಿದೆ.ಸಂಪೂರ್ಣ ಋಗ್ವೇದದಲ್ಲಿ ಒಟ್ಟು ೬೪ ಅಧ್ಯಾಯಗಳಿವೆ…

Deepashree M
Tags

Related Articles

FOR DAILY ALERTS
Close