ಪ್ರಚಲಿತ

ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವನ್ನು ಹೊಂದಿರುವ ನ್ಯಾಯದರ್ಶನ ಪಂಥದ ಆಚಾರ್ಯರ ಬಗ್ಗೆ ತಿಳಿಯಬೇಕೇ?ಇಲ್ಲಿದೆ ಮಾಹಿತಿ!

ಭಾರತದ ಇತಿಹಾಸದಲ್ಲಿ ಅನೇಕ ಆಚಾರ್ಯರು ಅತ್ಯುತ್ತಮ ಗ್ರಂಥಗಳನ್ನು ರಚಿಸಿದ್ದಾರೆ. ಹಲವು ಗ್ರಂಥಗಳ ಉಲ್ಲೇಖಗಳು ಇತರ ಗ್ರಂಥಗಲ್ಲಿ ಕಂಡುಬಂದರೂ ಗ್ರಂಥಗಳು ಅಲಭ್ಯವಾಗಿದೆ..ಹೀಗಿರುವ ಗ್ರಂಥಗಳಲ್ಲಿ ನ್ಯಾಯದರ್ಶನವೆಂಬ ಶ್ರೇಷ್ಠ ದರ್ಶನಕ್ಕೆ ಸಂಬಂಧಿಸಿದ ಅನೇಕ ಗ್ರಂಥಗಳು ಲಭ್ಯವಿದೆ.ವಿಕ್ರಮ ನಾಮ ಸಂವತ್ಸರದ ೫ ನೇ ಶತಮಾನಕ್ಕೂ ಹಿಂದಿನಿಂದಲೇ ರಚಿಸಿದ ಗ್ರಂಥಗಳೂ ಲಭ್ಯವಿವೆ.ನ್ಯಾಯದರ್ಶನದ ಇತಿಹಾಸವು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಾಗಿದೆ.ಅದರಲ್ಲಿ ವಿಕಾಸದ ಎರಡು ಪ್ರಕಾರದ ಧಾರೆಗಳು ಕಾಣಿಸುತ್ತವೆ.ಹದಿನಾರು ಪದಾರ್ಥಗಳ ಯಥಾರ್ಥನಿರೂಪಣೆಯಿಂದ ಪದಾರ್ಥ ಮೀಮಾಂಸಕ ಪ್ರಣಾಳೀ ಎಂಬ ಸೂತ್ರಕಾರನಾದ ಗೌತಮರಿಂದ ಪ್ರಾರಂಭವಾದದ್ದು ಮೊದಲನೆಯದಾದರೆ ಗಂಗೇಶ  ಉಪಾಧ್ಯಾಯನು ತನ್ನ ತತ್ವಚಿಂತಾಮಣಿಯಲ್ಲಿ ಪ್ರತಿಪಾದಿಸಿರುವ ಪ್ರಮಾಣ ಮೀಮಾಂಸಕ ಪ್ರಣಾಳೀ ಎಂಬುದು ಎರಡನೆಯದು .ಮೊದಲನೆಯದನ್ನು ಪ್ರಾಚೀನ ನ್ಯಾಯ ಎಂದೂ ಎರಡನೆಯದನ್ನು ನವ್ಯನ್ಯಾಯ ಎಂದೂ ಕರೆಯುತ್ತಾರೆ..ಹಿಂದೂಧರ್ಮದಿಂದ ಉದಯಿಸಿದ ಪಂಥಗಳಲ್ಲಿ ಅನೇಕ ವ್ಯತಾಸಗಳಿದ್ದವು ಮತ್ತು ವ್ಯತ್ಯಾಸವು ಸಾಮಾನ್ಯ ವಿಷಯವಾಗಿತ್ತು.ವ್ಯತ್ಯಾಸಗಳನ್ನು ಗ್ರಂಥಗಳ ಮೂಲಕ ವಿಮರ್ಶಾತ್ಮಕವಾಗಿ ಮತ್ತು ತಾರ್ಕಿಕವಾಗಿ ಹೇಳುವ ಸಸಂಸ್ಕ್ರುತ ಪದ್ದತಿಯನ್ನು ಪ್ರಾಚೀನ ಭಾರತದಲ್ಲಿ ಪಾಲಿಸಲಾಗುತ್ತಿತ್ತು.ಇದರಲ್ಲಿ ಯಾವುದೇ ವಿಷಯವನ್ನು ಇನ್ನೊಂದು ಪಂಥವು ವಿರೋಧಿಸುವುದಾದರೆ ಅದನ್ನು ಖಂಡಿಸುವ ಕೃತಿಯನ್ನು ಇನ್ನಿಒಂದು ಪಂಥದ ಪಂಡಿತರು ರಚಿಸುತ್ತಿದ್ದರೇ ಹೊರತಾಗಿ ಕೊಲ್ಲುವ ಮತ್ತು ದಂಡಿಸುವ ರೀತಿಯ ವಿರೋಧಗಳನ್ನು ತೋರುತ್ತಿರಲಿಲ್ಲ.

ಗೌತಮ:

ನ್ಯಾಯಸೂತ್ರಗಳನ್ನು ರಚಿಸಿದವರ ಹೆಸರು ಗೋತ್ರನಾಮ ಗೌತಮ ಅಥವಾ ಗೋತಮ ಎಂದು..ವ್ಯಕ್ತಿಗತವಾದ ಹೆಸರು ಅಕ್ಷಪಾದನೆಂದು.ವಿಧ್ವಾಮ್ಸರುಗಳ ಅಭಿಪ್ರಾಯಗಳ ಪ್ರಕಾರ ಇವರು ಮಿಥಿಲಾದೇಶದ ನಿವಾಸಿಯಾಗಿದ್ದರು.ನ್ಯಾಯಸೂತ್ರವು ೫ ಅಧ್ಯಾಯಗಳಲ್ಲಿ ಮತ್ತು ಪ್ರತಿಯೊಂದು ಅಧ್ಯಾಯವೂ ಎರಡು ಆಹ್ನಿಕಗಳಲ್ಲಿ ವಿಭಕ್ತವಾಗಿದೆ.ಇವುಗಳಲ್ಲಿ ಹದಿನಾರು ಪದಾರ್ಥಗಳ ಹೆಸರು,ಪ್ರಮಾಣ,ಪ್ರಮೇಯ,ಸಂಶಯ,ಪ್ರಯೋಜನ,ದೃಷ್ಟಾಂತ,ಸಿದ್ದಾಂತ,ಅವಯವ,ತರ್ಕ,ನಿರ್ಣಯ,ವಾದ,ಜಲ್ಪ,ವಿತಂಡಾ,ಹೇತ್ವಾಭಾಸ,ಛಲ,ಜಾತಿ ಮತ್ತು ನಿಗ್ರಹಸ್ಥಾನ,ವಾದಿ ಮತ್ತು ಪ್ರತಿವಾದಿಗಳ ದ್ವಾರಾ ಸಿದ್ದಾಂತದ ನಿರ್ಮಾಣಕ್ಕಾಗಿ ಈ ಪದಾರ್ಥಗಳನ್ನು ಉಪಯೋಗಿಸುತ್ತಾರೆ.ನ್ಯಾಯಸೂತ್ರಗಳ ರಛ್ನಾಕಾರ ಗೌತಮರ ಸಮಯವನ್ನು ವಿಕ್ರಮ ನಾಮ ಸಂವತ್ಸರದ ಪೂರ್ವ ನಾಲ್ಕನೇ ಶತಮಾನವೆಂದು ಅಂಗೀಕರಿಸಬಹುದಾಗಿದೆ.

 ವಾತ್ಸ್ಯಾಯನ:

ವಾತ್ಸ್ಯಾಯನರು ವಿಕ್ರಮ ಪೂರ್ವ ಮೊದಲನೆಯವರಾಗಿರುತ್ತಾರೆ.ನ್ಯಾಯಸೂತ್ರಗಳಿಗೆ ವಿಸ್ತಾರವಾದ ವ್ಯಾಖ್ಯಾನವನ್ನು ಬರೆದಿರುತ್ತಾರೆ.ಸೂತ್ರಗಳಲ್ಲಿನ ಗಾಢವಾದ ಅರ್ಥಗಳ ರಹಸ್ಯಗಳನ್ನು ಅರಿಯಲು ಭಾಷ್ಯಕ್ಕಿಂತ ಪ್ರಾಮಾಣಿಕ ಗ್ರಂಥ ಇನ್ನೊಂದಿಲ್ಲ.ಇದಕ್ಕಿಂತಲೂ ಮೊದಲು ವ್ಯಾಖ್ಯಾಗ್ರಂಥವೊಂದಿತ್ತೆಂಬುದು ಭಾಷ್ಯದ ಅಧ್ಯಯನದಿಂದ ಗೊತ್ತಾಗುತ್ತದೆ.

ಉದ್ಯೋತಕರ:

ಉದ್ಯೋತಕರ ರು ಆರನೇ ಶತಮಾನದವರು ಎಂದು ಇತಿಹಾಸದಿಂದ ಅರಿಯುತ್ತದೆ. ಇವರು ನ್ಯಾಯವಾರ್ತಿಕಾ ಎಂಬ ಗ್ರಂಥದ ಕರ್ತರಾಗಿದ್ದಾರೆ.ದಿಗ್ ನಾಗನ ಖಂಡನೆಯಿಂದ ಕ್ಷೀಣವಾದ ಪ್ರಭಾವವನ್ನು ಹೊಂದಿದ್ದ ನ್ಯಾಯವಿದ್ಯೆಯ ವಿಮೂಲ ಪ್ರಕಾಶವು ಸರ್ವತ್ರ ಹರಡುವಂತೆ ಮಾಡಿ ಉದ್ಯೋತಕರನು ತನ್ನ ಹೆಸರನ್ನು ಸಾರ್ಥಕಗೊಳಿಸಿದನು.ಈ ಗ್ರಂಥವು ಪ್ರೌಢ ಹಾಗೂ ಪಾಂಡಿತ್ಯಪೂರ್ಣವಾಗಿದೆ.ಬೌದ್ಧ ನ್ಯಾಯದಲ್ಲಿ ಉದ್ಯೋತಕರಣ ವಿದ್ವತ್ ಬಹಳ ಶ್ಲಾಘನೀಯವಾಗಿದೆ.

 ವಾಚಸ್ಪತಿ ಮಿತ್ರ:

೯ ನೇ ಶತಮಾನದವರಾದ ವಾಚಸ್ಪತಿಮಿಶ್ರರು ಉತ್ತಮ ಪಂಡಿತರಾಗಿದ್ದರು.ವಾಚಸ್ಪತಿಮಿಶ್ರನ ಸಮಯದಲ್ಲಿ ಪಂಡಿತಮಂಡಳಿಯ ಉದಾಸೀನದಿಂದ ನ್ಯಾಯವಾರ್ತಿಕದ ಗೂಡಾರ್ಥವು ಅರಿಯಲು ಕಷ್ಟವಾಗಿತ್ತು ಉದ್ಯೋತಕರ ‘ಅತಿಜರತೀ’ ಎಂಬ ಮಾತನ್ನು ಅರ್ಥಮಾಡಿಕೊಳ್ಳಲು ವಾಚಸ್ಪತಿಯು ತಾತ್ಪರ್ಯತೀಕಾ ಎಂಬ ಗ್ರಂಥವನ್ನು ರಚಿಸಿದರು.ಇವನ ನ್ಯಾಯಸೂಚೀನಿಬಂಧ ವು ವಿಕ್ರಮಪೂರ್ವ ೮೯೮ ರಲ್ಲಿ ರಚಿತವಾಯಿತು..ಆದುದರಿಂದ ಇವನ ಸಮಯವು ೯ ನೇ ಶತಮಾನದ ಮಧ್ಯಭಾಗವಾಗಿರುತ್ತದೆ.ಇವನು ಮಿಥಿಲಾದೇಶದ ನಿವಾಸಿಯಾಗಿದ್ದನು.ತನ್ನ ಅಲೌಕಿಕವಾದ ಪಾಂಡಿತ್ಯದಿಂದ ಸರ್ವತಂತ್ರಸ್ವತಂತ್ರನೆಂಬ ಬಿರುದನ್ನೂ ಹೊಂದಿದ್ದನ್ನು.ವೈಶೇಷಿಕ ದರ್ಶನವನ್ನು ಬಿಟ್ಟು ಉಳಿದ ಐದು ದರ್ಶನಗಳ ಮೇಲೆ ಇವನು ರಚಿಸಿರುವ ವ್ಯಾಖ್ಯಾನಗಳು ಪ್ರಾಮಾಣಿಕ,ಪ್ರೌಢ ಹಾಗೂ ಪಾಂಡಿತ್ಯಪೂರ್ಣವಾಗಿರುತ್ತದೆ.ತಾತ್ಪರ್ಯತೀಕಾ ಗ್ರಂಥವು ನ್ಯಾಯದ ಪ್ರಮೇಯಗಳನ್ನು ಹಾಗೂ ವಾರ್ತಿಕಗಳ ರಹಸ್ಯಗಳನ್ನೂ ತಿಳಿಯುವುದಕ್ಕೆ ಅತ್ಯಂತ ಸಹಕಾರಿಯಾದುದರಿಂದ ತಾತ್ಪರ್ಯಆಚಾರ್ಯಾ ಎಂಬ ಹೆಸರಿನಿಂದಲೂ ನ್ಯಾಯಾಜಗತ್ತಿನಲ್ಲಿ ಪ್ರಸಿದ್ಧನಾಗಿದ್ದಾನೆ.

ಜಯಂತಭಟ್ಟ:

ನ್ಯಾಯಮಂಜರಿಯಲ್ಲಿ ವಾಚಸ್ಪತಿ ಮಿಶ್ರ ಮತ್ತು ಆನಂದವರ್ಧನ ಇವರನ್ನು ಉಲ್ಲೇಖಿಸುವುದರಿಂದ ಇವನ  ಸಮಯವು ೯ ನೇ ಶತಮಾನದ ಉತ್ತರಾರ್ಧವಾಗುತ್ತದೆ.ಇವನು ರಚಿಸಿರುವ ನ್ಯಾಯಮಂಜರೀ ಗ್ರಂಥವು ಗೌತಮಸೂತ್ರಗಳಲ್ಲಿ ಆರಿಸಿದ ಕೆಲವು ಸೂತ್ರಗಳ ಮೇಲೆ ಬಹು ಪ್ರಮೇಯಗಳಿಂದ ಕೂಡಿರುವ ವೃತ್ತಿ.ವಿರೋಧೀ ಮತಾವಲಂಬಿಗಳನ್ನು ಪ್ರಬಲ ಹಾಗೂ ಪಾಂಡಿತ್ಯಪೂರ್ಣವಾದ ಯುಕ್ತಿಗಳ ದ್ವಾರಾ ಬಹು ಸುಂದರವಾದ ಸಾಹಿತ್ಯಕ ಭಾಷೆಯಲ್ಲಿ ಖಂಡನೆ ಮಾಡಿರುತ್ತಾರೆ.ಅನಂತಭಟ್ಟರು ೯ ನೇ ಶತಮಾನದವರು ಎಂದು ಇತಿಹಾಸ ಹೇಳುತ್ತದೆ.

ಭಾಸರ್ವಜ್ಞ:

ರತ್ನಿಕೀರ್ತಿ ಎಂಬ ಕ್ರಿಸ್ತಶಕ ೧೦ ನೇ ಶತಮಾನದ ಪಂಡಿತರು ತಮ್ಮ ಅಪೋಹಸಿದ್ದಿ ಎಂಬ ಗ್ರಂಥದಲ್ಲಿ ಭಾಸರ್ವಜ್ಞರ ನ್ಯಾಯಭೂಷಣವೆಂಬ ಗ್ರಂಥವನ್ನು ಉದಾಹರಿಸಿದ್ದಾರೆ.ಮತ್ತು  ವಿರುದ್ಧವ್ಯಭಿಚಾರಿ ಎಂಬ ದೋಷವನ್ನು ತನ್ನ ಗ್ರಂಥದಲ್ಲಿ ಸ್ವೀಕರಿಸಿದ್ದಾನೆ.ಆದ್ದರಿಂದ ಇವರ ಸಮಯವು ೯ ನೇ ಶತಮಾನದ ಕೊನೆಯ ಭಾಗವಾಗಿತ್ತೆಂದು ಹೇಳಬಹುದು..ಇವರ ಒಂದೇ ರಚನೆಯಾದ ನ್ಯಾಯಸಾರ ಎಂಬ ಗ್ರಂಥವು ನ್ಯಾಯಾಜಗತ್ತಿನಲ್ಲಿ ಇವರ ಹೆಸರನ್ನು ಅಮರಗೊಳಿಸಿತು.ಸ್ವಾರ್ಥ ಮತ್ತು ಪರಾರ್ಥಾನುಮಾನಗಳ ವರ್ಣನೆ,ಉಪಮಾನದ ಖಂಡನೆ,ಬೌದ್ಧರ ಸಮಾನ ಪಕ್ಷಾಭಾಸ ಮತ್ತು ದೃಷ್ಟಾಂತಆಭಾಸಗಳ ವರ್ಣನೆ ಹಾಗೂ ಆತ್ಮನ ನಿರತಿಶಯ ಆನಂದೋಪಲಬ್ಡಿ ರೂಪವಾದ ಮುಕ್ತಿಯ ಕಲ್ಪನೆ ಇವರ ಈ ಕೆಲವು ಸಿದ್ಧಾಂತಗಳು ನ್ಯಾಯ ಜಗತ್ತಿನಲ್ಲಿ ಅಪೂರ್ವವಾದವು.

ಉದಯನಾಚಾರ್ಯ:

ಉದಯರ ಸಮಯವು ೧೦ ನೇ ಶತಮಾನದ ಉತ್ತರಾರ್ಧವಾಗಿದೆ.ಲಕ್ಷಣಾವಳಿಯ ರಚನೆಯ ಕಾಲ ಶಕಾಬ್ದಾ೯೦೬ ಅಂದರೆ ಕ್ರಿಸ್ತಶಕ ೯೮೪.ತಾತ್ಪರ್ಯ ಪರಿಶುದ್ಧಿ ಎಂಬ ಗ್ರಂಥವು ತಾತ್ಪರ್ಯಟೀಕಾಗ್ರಂಥದ ಬಹು ಮಹತ್ವವಾದ ವ್ಯಾಖ್ಯಾನವಾಗಿರುತ್ತದೆ.ಆದರೆ ಸ್ವತಂತ್ರವಾದ ಸಮೀಕ್ಷೆಯೇ ಇವರ ವೈಶಿಷ್ಟ್ಯವಾಗಿತ್ತು.ಆತ್ಮತತ್ವವಿವೇಕ ಮತ್ತು ನ್ಯಾಯಕುಸುಮಾಂಜಲೀ ಎಂಬುದು ಇವರ ಪ್ರಸಿದ್ಧ ಗ್ರಂಥಗಳು.ಮೊದಲ ಗ್ರಂಥದಲ್ಲಿ ಕ್ಷಣಭಂಗ ಹಾಗೂ ಶೂನ್ಯವಾದಗಳನ್ನು ಖಂಡನೆ ಮಾಡಿ ನ್ಯಾಯಸಮ್ಮತವಾದ ಆತ್ಮತತ್ವದ ವಿಸ್ತಾರವಾದ ನಿರೂಪಣೆ ಇರುತ್ತದೆ.ಉದಯನರ ಗ್ರಂಥಗಳಲ್ಲಿ ನ್ಯಾಯಕುಸುಮಾಂಜಲಿಯು ಸರ್ವಶ್ರೇಷ್ಠವಾದುದಾಗಿದೆ.ಇದರಲ್ಲಿ ಸಾಂಖ್ಯ ಇತ್ಯಾದಿ ವೈದಿಕ,ಬೌದ್ಧ ಮೊದಲಾದ ವೇದಬಾಹ್ಯ ದರ್ಶನಗಳಲ್ಲಿ ಈಶ್ವರನನ್ನು ನಿರಾಕರಿಸುವ ಪ್ರಮಾಣಗಳನ್ನು ನ್ಯಾಯಸಮ್ಮತವಾದ ರೀತಿಯಲ್ಲಿ ಮಾರ್ಮಿಕ ಹಾಗೂ ವಿದ್ವತ್ಪೂರ್ಣವಾಗಿ ಖಂಡಿಸಲಾಗುತ್ತದೆ.ಈಶ್ವರ ಸಿದ್ದಿಯ ವಿಷಯದಲ್ಲಿ ತರ್ಕಪ್ರಧಾನವಾದ ಈ ಗ್ರಂಥವು ನ್ಯಾಯ ಜಗತ್ತಿನಲ್ಲಿ ಅದ್ವಿತೀಯವಾಗಿದೆ.

ಗಂಗೇಶ:

ಗಂಗೇಶರ ಕಾಲವು ೧೩ ನೇ ಶತಮಾನವೆಂದು ಇತಿಹಾಸದಿಂದ ತಿಳಿದುಬರುತ್ತದೆ.ಉದಯನಾಚಾರ್ಯರ ಅನಂತರದಲ್ಲಿ ಮಿಥಿಲಾ ದೇಶವು ಪ್ರಾಚೀನ ನ್ಯಾಯವನ್ನು ಬದಲಾಯಿಸಿ ‘ನವ್ಯನ್ಯಾಯ‘ ಎಂಬ ಹೊಸ ಪಂಥವನ್ನು ಪ್ರವರ್ತಿಸಿದ ನ್ಯಾಯಾಯಿಕ ರತ್ನವನ್ನು ನೀಡಿತು.ಇವರೇ ಗಂಗೇಶೊಪಾಧ್ಯಾಯರು.ಇವರ ರಚನೆಯಾದ ತತ್ವಚಿಂತಾಮಣಿ ಎಂಬ ಗ್ರಂಥವು ನ್ಯಾಯದ ಇತಿಹಾಸದಲ್ಲಿ ವಾಸ್ತವವಾಗಿ ನವೀನವಾದ ಯುಗವೊಂದನ್ನು ಪ್ರವರ್ತಿಸಿತು.ಪ್ರಾಚೀನವಾದ ಪದಾರ್ಥಶಾಸ್ತ್ರವನ್ನು ಗಂಗೇಶನು ಸಂಪೂರ್ಣವಾಗಿ ಪ್ರಮಾಣ ಶಾಸ್ತ್ರವನ್ನಾಗಿ ಪರಿವರ್ತಿತಗೊಳಿಸಿದರು.ತತ್ವ ಚಿಂತಾಮಣಿ ಗ್ರಂಥದ ಭಾಷೆಯೂ ಕೂಡ ಇದೇ ರೀತಿಯಾಗಿ ತನ್ನ ವೈಶಿಷ್ಟ್ಯಕ್ಕಾಗಿ ಪ್ರಸಿದ್ಧವಾಗಿದೆ.ಗಂಗೇಶನು ಅವಚ್ಛೇದಕ,ಅವಚ್ಛೇದ್ಯ,ನಿರೂಪಕ,ನಿರೂಪಿಯಾ,ಅನುಯೋಗಿ ಮತ್ತು ಪ್ರತಿಯೋಗೀ ಮುಂತಾದ ವಿಚಾರಮಾಪಕವಾದ ನೂತನ ಶಬ್ದಾವಳಿಯನ್ನು ಪ್ರಯೋಗಿಸಿ ಭಾಷೆಯ ಶಾಸ್ತ್ರೀಯ ವಿಶುದ್ಧ ರೂಪವನ್ನು ನಿರ್ಧರಿಸಿದ್ದು ಒಂದು ಉತ್ಕೃಷ್ಟ ವಿಚಾರವಾಗಿದೆ.ಗಂಗೇಶರು ಖಂಡನಖಂಡಖ್ಯಾದ್ಯಕಾರನಾದ ಶ್ರೀಹರ್ಷ ರ ಮತವನ್ನು ಉಲ್ಲೇಖಿಸಿ ಅದನ್ನು ಖಂಡಿಸುತ್ತಾರೆ.೧೩ ನೇ ಶತಮಾನದ ಕೊನೆಯ ಜಯದೇವರು ಈ ತತ್ವ ಚಿಂತಾಮಣಿಗೆ ಅಲೋಕವೆಂದು ವ್ಯಾಖ್ಯಾನವನ್ನು ಬರೆದಿರುತ್ತಾರೆ.ಈ ವಿಧವಾಗಿ ಗಂಗೇಶರು ಹದಿಮೂರನೆಯ ಶತಮಾನದ ಮಧ್ಯಭಾಗದವರೆಂದು ತಿಳಿದುಬರುತ್ತದೆ.

ಉದಯನ ಮತ್ತು ಗಂಗೇಶರ ಪಾಂಡಿತ್ಯಪೂರ್ಣವಾದ ಗ್ರಂಥಗಳ ಮೇಲೆ ವ್ಯಾಖ್ಯಾನವನ್ನು ರಚಿಸುವುದೇ ಪಾಂಡಿತ್ಯದ ಪರೀಕ್ಷೆಯಾಗಿತ್ತೆಂಬುದು ಅಂದು ಪ್ರಚಲಿತದಲ್ಲಿತ್ತು.ಗಂಗೇಶರ ಮಗನಾದ ವರ್ಧಮಾನ ಉಪಾಧ್ಯಾಯನು ತಂದೆಗೆ ಸಮಾನವಾದ ಪ್ರಕಾಂಡ ನೈಯಾಯಿಕನಾಗಿದ್ದನು.ಇವರು ಮೊದಲು ಉದಯನರ ಗ್ರಂಥಗಳು,ಗಂಗೇಶರ ತತ್ವಚಿಂತಾಮಣಿ ಮತ್ತು ವಲ್ಲಭಾಚಾರ್ಯರ “ನ್ಯಾಯ ಲೀಲಾವತೀ” ಎಂಬ ಗ್ರಂಥಗಳ ಮೇಲೆ ಪ್ರಕಾಶ ಎಂಬ ವ್ಯಾಖ್ಯಾನವನ್ನು ರಚಿಸಿದರು.ಜಯದೇವರ ಸಮಯದಲ್ಲಿ ವಿದ್ವಂಮಂಡಳಿಯಲ್ಲಿ ಅವರಿಗೆ ಪ್ರತಿಸ್ಪರ್ಧಿಯಾರೂ ಇರಲಿಲವೆಂಬುದಾಗಿ ಇತಿಹಾಸವು ಹೇಳುತ್ತದೆ.ಯಾವ ಸಿದ್ಧಾಂತವನ್ನಾದರೂ ತೆಗೆದುಕೊಂಡು ಒಂದು ಪಕ್ಷದ ವರೆಗೆ ಸಮರ್ಥನೆ ಮಾಡುತ್ತಿದ್ದ ಕಾರಣದಿಂದ ಜಯದೇವರು ಪಕ್ಷಾಧಾರ ಮಿಶ್ರರೆಂದು ಪ್ರಸಿದ್ದರಾಗಿದ್ದರು.ಇವರು ಚಿಂತಾಮಣಿ ಗ್ರಂಥಕ್ಕೆ ಅಲೋಕವೆಂಬ ವ್ಯಾಖ್ಯಾನವನ್ನು ರಚಿಸಿದರು.ಇವರ ಶಿಷ್ಯರಾದ ರುಚಿದತ್ತನೂ ಅತ್ಯಂತ ಗೌರವಾನ್ವಿತ ಪಂಡಿತರಾಗಿದ್ದು ಮಕರಂದ ಹಾಗೂ ಪ್ರಕಾಶಗಳೆಂಬ ವ್ಯಾಖ್ಯಾನಗಳನ್ನೂ ರಚಿಸಿದ್ದರು

Deepashree. M.

Tags

Related Articles

FOR DAILY ALERTS
Close