ಅಂಕಣಇತಿಹಾಸಪ್ರಚಲಿತ

ದೇಶದ ಮಹಾನ್ ಶಕ್ತಿ ಪುಂಜ, ಹೆಸರಿಗೂ ಮುಂಚೆ ವೀರ ಎಂದು ಕರೆಸಿಕೊಳ್ಳುವ ವ್ಯಕ್ತಿ ಕಾಂಗ್ರೆಸಿಗರಿಗೆ ಮಾತ್ರ ಏನು ಅಲ್ಲ…!!!

ದೇಶದ ಇತಿಹಾಸದಲ್ಲಿ ಅನೇಕ ವೀರರು ಬಂದು ಹೋಗಿದ್ದಾರೆ, ಹಾಗೆಯೇ ಅವರ ಹೆಸರು ಅಜರಾಮರವಾಗಿ ಉಳಿದಿದೆ ಮತ್ತು ಕೆಲವು ವೀರರ ಹೆಸರು ಬೇಕಂತಲೇ ಮರೆಮಾಚುವ ಕೆಲಸ ನಡೆದಿದೆ, ಕಾರಣ ಇಷ್ಟೇ ಒಮ್ಮೆ ಅಂತ ವೀರರ ಬಗ್ಗೆ ಜನರು ತಿಳಿದುಕೊಂಡರೆ ಮಹಾನ್ ಹೋರಾಟಗಾರರು ಎಂದು ಇತಿಹಾಸದಲ್ಲಿ ಕಾಣಿಸಿಕೊಳ್ಳುವ ಅನೇಕ ಡೋಂಗಿ ನಾಯಕರ ಬಣ್ಣ ಬಯಲಾಗುವುದರಲ್ಲಿ ಸಂದೇಹವಿಲ್ಲ ಅಂತದ್ದೇ ಒಬ್ಬ ವೀರನ ಕಥೆ ನಮ್ಮಲ್ಲಿ ಮುಚ್ಚಿ ಹೋಗಿದೆ, ಇಂದು ಅವನ ಬಗ್ಗೆ ಅನೇಕರು ಅದರಲ್ಲೂ ಒಂದು ಕುಟುಂಬದ ರಾಜಕಾರಣವನ್ನು ದೇಶದ ರಾಜಮನೆತನ ಎಂದು ತಿಳಿದು ಮಿಕ್ಕ ಎಲ್ಲರನ್ನೂ ಅಷ್ಟಕ್ಕಷ್ಟೇ ಎನ್ನುವ ಒಂದು ಪಕ್ಷದ ಜನ ಹೀನವಾಗಿ ಇಲ್ಲ ಸಲ್ಲದ ವಿಷಯಗಳನ್ನು ಹೇಳುತ್ತ ಅವಮಾನಿಸುತ್ತ ದೇಶಕ್ಕೆ ಇದ್ದದ್ದು ಇಬ್ಬರೇ ಅವರಿಂದಲೇ ಸ್ವಾತಂತ್ಯ ಮಿಕ್ಕವರು ತೃಣಮೂಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ.
ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿ ಅನೇಕ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡಿದ ಹಾಗೂ ಕೆಲವು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಇದ್ದ ಸಮಯದಲ್ಲಿ ಕಾಂಗ್ರೆಸ್ಸಿನ ಕೇಂದ್ರ ಮಂತ್ರಿ ಮಣಿಶಂಕರ್ ಅಯ್ಯರ್ ಇನ್ನೂ ಒಂದೇ ಹೆಜ್ಜೆ ಮುಂದೆ ಹೋಗಿ ಹೇಡಿ ಮನುಷ್ಯ ಎಂದು ಹೇಳಿದ್ದ ಭೂಪ ಮತ್ತು ಇವರ ಜೊತೆ ಒಂದಷ್ಟು ಎಡ ಮನಸ್ಥಿತಿ ಇರುವ ಜನರಿಗೆ ಈ ವೀರ ಕೆಟ್ಟವನೆ, ಕಾರಣ ಇಷ್ಟೇ ಅವನು ಗಾಂಧೀವಾದ ಒಪ್ಪಲಿಲ್ಲ ಮತ್ತು ಈ ದೇಶ ಹಿಂಧೂಸ್ಥಾನ ಮತ್ತು ಇಲ್ಲಿರುವ ಎಲ್ಲರೂ ಹಿಂದೂಗಳೇ ಎಂದು ಹೇಳಿರುವುದು ಇವರೆಲ್ಲರಿಗೂ ಕೆಳಗೆ ಬೆಂಕಿ ಇಟ್ಟಂತೆ ಆಗಿದೆ ಮತ್ತು ಇವರ ಪೂರ್ವಜ ದೇಶ ಕಂಡ ದುರಂತ ಪ್ರಧಾನಿ ನೆಹರುಗೆ ಈ ಸಾವರ್ಕರ್ ಕಂಡರೆ ಕೋಪದ ಜೊತೆ ಭಯವೂ ಸಹ ಅದಕ್ಕೆ ಸರಿಯಾಗಿ ನಾಥೂರಾಮ ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದೆ ತಡ ಈ ಪ್ರಧಾನಿ ಸ್ವತಃ ನಿಂತು ಇದರಲ್ಲಿ ಸಾವರ್ಕರ್ ಅವರ ಕೈವಾಡ ಇದೆ ಮೊದಲು ಇವನನ್ನು ಜೈಲಿಗೆ ತಳ್ಳಿ ಎಂದು ಕಟ್ಟಾಜ್ಞೆ ಹೊರಡಿಸಿ ದೇಶಕ್ಕೆ ತನ್ನ ಸರ್ವಸ್ವವನ್ನೂ ಕೊಟ್ಟ ವೀರನನ್ನು ಸ್ವಾತಂತ್ರ್ಯ ಬಂದ ನಂತರವೂ ಜೈಲಿಗೆ ತಳ್ಳಿದರು ಕ್ರೂರ ಕಾಲಪನಿ ಅನುಭವಿಸಿದ್ದ ಈ ಸಂತನಿಗೆ ಜೈಲುವಾಸ ಅಷ್ಟು ಕಷ್ಟವಾಗಲಿಲ್ಲ ಇದನ್ನೆಲ್ಲ ಗಮನಿಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಸ್ವತಃ ಬಂದು ಸಾವರ್ಕರ್ ಅವರನ್ನು ಭೇಟಿಯಾಗಿ ಗಾಂಧಿ ಹತ್ಯೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಇದೆಲ್ಲ ನೇಹರುವಿನ ಕುಟಿಲತೆ ಎಂದು ತಿಳಿದು ಸಾವರ್ಕರ್ ಅವರನ್ನ ಬಂದ ಮುಕ್ತರನ್ನಾಗಿ ಮಾಡಲು ಯಶಸ್ವಿ ಆದರೂ, ಆದರೆ ಕಾಂಗ್ರೆಸ್ ಜನರ ಬುದ್ದಿ ಇಂದು ಸಹ ಲದ್ದಿ ತಿನ್ನುತ್ತಿದೆ ಅಪರಾಧ ಮುಕ್ತರಾದ ವೀರನನ್ನು ಗಾಂಧಿ ಹತ್ಯೆ ಮಾಡಿದ ಕೊಲೆಗಾರ ಎಂದು ಈಗಲೂ ಬಾಯಿ ಬಿಡುತ್ತಾ ದೇಶಕ್ಕೆ ತನ್ನ ಜೀವನ ಮತ್ತು ಸಂಸಾರವನ್ನು ಬಿಟ್ಟ ಅಗ್ರಗಣ್ಯ ಹೋರಾಟಗಾರರನ್ನು ಅವಮಾನಿಸುತ್ತಿದೆ.
ಹಾಗಿದ್ದರೆ ಯಾರು ಈ ಸಾವರ್ಕರ್??
See the source image
ವಿನಾಯಕ ದಾಮೋದರ ಸಾವರ್ಕರ್, ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಸ್ವಾತಂತ್ಯ ಭಾರತದ ಕನಸು ಕಂಡು ತಾಯಿ ಭಾರತೀಯ ಮುಂದೆ ಸ್ವಾತಂತ್ಯ ತಂದುಕೊಡುವ ಜವಾಬ್ದಾರಿ ನನ್ನದು ಅಲ್ಲಿಯ ತನಕ ನಾನು ಜೀವಂತವಾಗಿ ಇರುತ್ತೇನೆ ಎಂದು ಚಾಪೇಕರ್ ಸಹೋದರರ ಸಾವಿನ ನಂತರ ನೊಂದು ತಾಯಿ ಭಾರತಿಗೆ ಜೀವನವನ್ನು ಅರ್ಪಿಸಲು ಪಣ ತೊಟ್ಟ ವೀರನಿಗೆ ಅಂದು ಕೇವಲ 13ವರ್ಷ, ನಂತರ ಕಾರ್ಯಕ್ಕೆ ಇಳಿದ ವಿನಾಯಕ ಗೆಳೆಯರ ಗುಂಪು ಕಟ್ಟಿಕೊಂಡು ಮಿತ್ರಮೇಳ ಎಂಬ ಹೊಸ ಸಂಘಟನೆ ಶುರು ಮಾಡಿದ ಅದು ಚೆನ್ನಾಗಿಯೇ ನಡೆದು ಹೋಗುತ್ತಿತ್ತು ವಿಧಿಯಾಟ ಅವನಿದ್ದ ಊರಿನಲ್ಲಿ ಪ್ಲೇಗ್ ಮಾರಿ ಬಂತು ಅದರಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ನಂತರ ಮಲೇರಿಯಾ ಕಾಯಿಲೆಗೆ ಬಿದ್ದ ತಾಯಿಯು ಹೆಚ್ಚು ದಿನ ಉಳಿಯಲಿಲ್ಲ ಆದರೂ ಎದೆಗುಂದದ ವೀರ ಅಲ್ಲಿಂದ ತನ್ನ ಸಹೋದರರ ಜೊತೆ ನಾಸಿಕ್ ತಲುಪಿದ ಅಲ್ಲಿ ವಿಧ್ಯಾಭ್ಯಾಸ ಶುರುಮಾಡಿದ ಈ ಧೀರ ಮತ್ತೊಂದು ಹೊಸ ಯುವಪಡೆ ಕಟ್ಟಿದ ಅದುವೇ ಅಭಿನವ ಭಾರತ, ಇದರಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಎಲ್ಲ ಯುವಕರಲ್ಲಿ ದೇಶದ ಧೀರ ವೀರ ರಾಣಾ ಪ್ರತಾಪ್ ವೀರ ಶಿವಾಜಿ ಕಥೆಯನ್ನು ಹೇಳುತ್ತ ಕ್ರಾಂತಿ ಕಾರ್ಯವನ್ನು ಮಾಡಲು ಪ್ರೇರೇಪೀಸಿದ್ದು ಅಲ್ಲದೆ ವೀರ ಉತ್ಸವ ಮಾಡುತ್ತಾ ಬ್ರಿಟಿಷ್ ಸಾಮಗ್ರಿಗಳನ್ನು ತಂದು ಬೆಂಕಿ ಹಚ್ಚಿ ವಿದೇಶಿ ಹಟಾವೋ ಎನ್ನುವ ಘೋಷಣೆ ಜೊತೆ ಭಾಷಣ ಮಾಡುತ್ತಿದ್ದ ಚಿರ ಯುವಕ ಈ ಸಾವರ್ಕರ್, ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಸಾವರ್ಕರ್ ಅವರ ಬೆನ್ನಿಗೆ ನಿಂತಿದ್ದು ಬಾಲಗಂಗಾಧರ ತಿಲಕ್, ಈ ಸಮಯದಲ್ಲಿ ದೇಶದ ಮಹಾತ್ಮ ಆದವರು ಆಫ್ರಿಕಾ ದೇಶದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು.
ಮುಂದೆ ಬ್ರಿಟನ್ ದೇಶದ ಭಾರತ ಭವನದಲ್ಲಿ ಇದ್ದು ವಿದ್ಯೆ ಕಲಿಯುವ ದೇಶ ಪ್ರೇಮಿ ಯುವಕರಿಗೆ ಸ್ಕಾಲರ್ ಶಿಪ್ ನೀಡುವುದಾಗಿ ಪೇಪರ್ ಒಂದರಲ್ಲಿ ನೋಡಿದ್ದ ಸಾವರ್ಕರ್ ತಿಲಿಕರಿಂದ ಶಿಫಾರಸ್ಸು ಪತ್ರ ಪಡೆದು ದೇಶ ಕಾರ್ಯ ಮಾಡಲು ಭಾರತವನ್ನು ಉಗ್ರವಾಗಿ ನಡೆಸಿಕೊಳ್ಳುತ್ತಿದ್ದ ಬ್ರಿಟಿಷರ ನಾಡಿಗೆ ಸಿಂಹವೊಂದು ಬೇಟೆಯಾಡಲು ಹೋದಂತೆ ಹೋದವರು ಈ ನಮ್ಮ ಸಾವರ್ಕರ್, ಮಾರ್ಗ ಮಧ್ಯೆ ಹಡಗಿನಲ್ಲಿ ಇದ್ದ ಅನೇಕ ಭಾರತ ಯುವಕರನ್ನು ಮಾತನಾಡಿಸಿ ಅವರಲ್ಲಿ ಜಾಗೃತಿ ಮೂಡಿಸಿ ಮುಂದೆ ಭಾರತ ಕಾರ್ಯಕ್ಕೆ ಸಹಾಯ ಮಾಡುವಂತೆ ಪ್ರೇರಣೆ ನೀಡಿ ಹಡಗಿನಲ್ಲೇ ಅಭಿನವ ಭಾರತದ ಸಂಘಟನೆಗೆ ಸೇರಿಸಿಕೊಂಡರು.
See the source image
ಮುಂದೆ ಬ್ರಿಟನ್ ತಲುಪಿದ ಈ ವೀರ ಭಾರತ ಭವನ ಪ್ರವೇಶ ಮಾಡಿ ಅಲ್ಲಿದ್ದ ಅನೇಕ ಯುವ ಮನಸ್ಸನ್ನು ಭಾರತದ ಕಡೆ ತಿರುಗುವಂತೆ ಮಾಡಿದ್ದರು ಅದೇ ಸಮಯದಲ್ಲಿ ಭಾರತದ ಮೊದಲ ಪ್ರಧಾನಿ ನೆಹರೂ ಸಹ ಅಲ್ಲಿಯೇ ಬ್ಯಾರಿಸ್ಟರ್ ಪದವಿ ಪಡೆಯಲು ಹೋಗಿದ್ದರು, ಸಾವರ್ಕರ್ ಬ್ರಿಟನ್ ಸೇರಿದ್ದು ಮೋತೀಲಾಲರು ತಿಳಿದು ಯಾವುದೇ ಕಾರಣಕ್ಕೂ ನೀನು ಅವರನ್ನು ಸಂಪರ್ಕಿಸುವ ಕಾರ್ಯಕ್ಕೆ ಮುಂದಾಗ ಬೇಡ ಎಂದು ಒಬ್ಬನೇ ಮಗನಾದ ನೆಹರುಗೆ ಹೇಳಿದ್ದರು, ಬಹುಶಃ ನೆಹರೂ ಸಾವರ್ಕರ್ ಸಂಪರ್ಕಕ್ಕೆ ಬಂದಿದ್ದರೆ ನಮ್ಮ ದೇಶದ ಸ್ಥಿತಿ ಸುದಾರಿಸುತ್ತಿತ್ತೇನೋ, ಮುಂದೆ ಸಾವರ್ಕರ್ ಅವರ ಭಾಷಣ ಕೇಳಲು  ಹೆಚ್ಚು ಜನ ಬರಲು ಪ್ರಾರಂಭ ಮಾಡಿದರು ಅವರಲ್ಲಿ ಒಬ್ಬ ಮದನ್ ಲಾಲ್ ಧಿಂಗ್ರಾ, ಇವನು ವಿದೇಶಿ ಕರ್ಜನ್ ವೈಲಿಯನ್ನು ಸಾವರ್ಕರ್ ಅವರ ಪ್ರೇರಣೆ ಮೇಲೆ ಸಂಹರಿಸಿ ಬ್ರಿಟನ್ ದೇಶದಲ್ಲೇ ಗಲ್ಲಿಗೆ ಹೇರಿದ ಬೆಂಕಿ ಚೆಂಡು, ಸಾಯುವ ಮೊದಲು ಸಾವರ್ಕರ್ ಬರೆದುಕೊಟ್ಟಂತೆ ಒಂದು ಮಾತು ಹೇಳಿದ ” ನಮ್ಮ ಜನಕ್ಕೆ ಪ್ರಾಣ ತ್ಯಾಗ ಮಾಡುವುದು ಎಂದರೆ ಏನೆಂದು  ಗೊತ್ತಿಲ್ಲ ನಾನು ನನ್ನ ಪ್ರಣಕೊಡುವ ಮೂಲಕ ಅವರಿಗೆ ಇದರ ಅರಿವು ಮೂಡಿಸಲಾಗುತ್ತದೆ” ಎಂದು ಹೇಳಿಕೆ ಕೊಟ್ಟು ಉರುಳಿಗೆ ಮುತ್ತಿಟ್ಟಿ ಪ್ರಾಣ ಬಿಟ್ಟವನು ಧಿಂಗ್ರಾ.
ಇದೆ ರೀತಿ ಅನೇಕಾನೇಕ ದೇಶ ಪ್ರೇಮಿಗಳು ಸಾವರ್ಕರ್ ಅವರನ್ನು ಗುರುಗಳಂತೆ ನೋಡುತ್ತಿದ್ದರು ಅವರಲ್ಲಿ ಪ್ರಮುಖರು ಭಗತ್ ಸಿಂಗ್ ಚಂದ್ರಶೇಕರ್ ಆಜಾದ್, ಭಾರತ  ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸುಭಾಶ್ ಚಂದ್ರ ಬೋಸ್ ಇವರೆಲ್ಲ ಸಾವರ್ಕರ್ ಪ್ರೇರಣೆ ಪಡೆದ ವೀರ ಸಿಂಹಗಳು.ಇನ್ನ ಸಾವರ್ಕರ್ ಕೇವಲ ಭಾಷಣಕಾರ ಮಾತ್ರ ಅಲ್ಲ ಅತ್ಯದ್ಬುತ ಬರಹಗಾರ ಇವರ ಒಂದೊಂದು ಬರಹವು ಅಧ್ಬುತ ಹಾಗೂ ಮುಂದೆ ಇವರ ಬ್ರಿಟಿಷರ ಕೈಗೆ ಸಿಕ್ಕು ಅಂಡಮಾನ್ ಜೈಲಿನಲ್ಲಿ ಅನುಭವಿಸಿದ ಕಷ್ಟ ಇದಿಯಲ್ಲಾ ಅದನ್ನ ಯಾವ ಕಾಂಗ್ರೆಸ್ ನಾಯಕನೂ ಸ್ವಾತಂತ್ರ ಹೋರಾಟದ ಸಮಯದಲ್ಲಿ ಕಂಡಿಲ್ಲ.
-ಹೇಮಂತ್ ಸಿ ಶೇಖರ್
Tags

Related Articles

FOR DAILY ALERTS
Close