ಪ್ರಚಲಿತ

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನ್ನಾಡುವ ಸಂಕ್ರಾಂತಿಯ ಆಚರಣೆಯಿಂದ ಆಗುವ ಲಾಭಗಳೇನು?

ತರ ಮತಗಳಿಗಿಂತ ಹಿಂದೂ ಧರ್ಮ ವಿಶಿಷ್ಟವಾಗಿದೆ..ನಮ್ಮ ಪ್ರತಿಯೊಂದು ಹಬ್ಬವಾಗಲೀ ಆಚರಣೆಗಾಗಲಿ ಪ್ರೇರಣೆಯು ಪ್ರಕೃತಿಯೇ ಹೊರತಾಗಿ ಮನೋರಂಜನೆಯಲ್ಲ.. ಪ್ರತಿಯೊಂದು ಆಚರಣೆಯಲ್ಲೂ ಪ್ರಾಕೃತಿಕ ಬದಲಾವಣೆಯ ಹಿನ್ನಲೆ ಇರುತ್ತದೆ.ಉದಾಹರಣೆಗೆ ನಮ್ಮ ಹೊಸವರ್ಷ ಪ್ರಾರಂಭವಾಗುವುದು ಯುಗಾದಿಯಂದು..ಆಗ ಪ್ರಕೃತಿಯಲ್ಲಿ ಬಹಳಷ್ಟು ಸುಂದರ ಬದಲಾವಣೆಗಳಾಗುವುದನ್ನು ನಾವೆಲ್ಲರೂ ನೋಡಿದ್ದೇವೆ..ಸಂಕ್ರಾಂತಿಯೂ ಅಂತಹದೇ ಒಂದು ಹಬ್ಬ..”ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂಬುದು ಹಿರಿಯರು ಹೇಳುವ ಮಾತು.ಸಂಕ್ರಾಂತಿಯಂದು ಎಳ್ಳು ಬೀರುವುದು..ಅಂದರೆ ಎಳ್ಳನ್ನು ಹಂಚುವುದು ಸಂಪ್ರದಾಯ.ಸಂಕ್ರಾಂತಿಯಂದು ಸೂರ್ಯದೇವರ ರಥವು ಮಕರ ರಾಶಿಯನ್ನು ಪ್ರವೇಶಿಸುತ್ತದೆ.ರಾಶಿ ಚಕ್ರದ ಹೊಸ ಚಿನ್ಹೆಯನ್ನು ನಮೂದಿಸುವ ಪ್ರಕ್ರಿಯೆಯು ಪ್ರತೀ ತಿಂಗಳೂ ನಡೆಯುವ ಸಾಮಾನ್ಯ ಪ್ರಕ್ರಿಯೆ ಅದೆರಲ್ಲೇನು ವಿಶೇಷವಿದೆ ಅಂದುಕೊಳ್ಳಬೇಡಿ..ಈ ತಿಂಗಳಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ಒಂದು ವಿಶಿಷ್ಟವಾದ ಶ್ರೇಷ್ಠ ಅವಧಿಯು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಸತ್ವಗುಣ ವನ್ನು ವಿಶೇಷವಾಗಿ ಸೂರ್ಯ ಕಿರಣಗಳು, ವರ್ಧಿಸುತ್ತವೆ ಮತ್ತು ರೋಗಗಳ ಕಡೆಗೆ ಪ್ರತಿರೋಧವನ್ನು ಹೆಚ್ಚಿಸುವ ಅಂಶಗಳನ್ನು ಪಡೆದುಕೊಳ್ಳುತ್ತವೆ.

ಈ ಸಂಪೂರ್ಣ ಮಾಘ ಮಾಸದಲ್ಲಿ ಗಂಗೆಯಲ್ಲಿ ಮೀಯುವ ಪ್ರತಿಜ್ಞೆಯನ್ನೂ ಕೆಲವರು ಕೈಗೊಳ್ಳುತ್ತಾರೆ.ಆದ್ದರಿಂದಲೇ ಈ ಸಂಪೂರ್ಣ ಮಾಸವೇ ಹಬ್ಬ ಎಂಬುದಾಗಿ ಪರಿಗಣಿಸಲ್ಪಡುತ್ತದೆ.ಇತರ ದಿನಗಳಲ್ಲಿ ನಾವು ಗಂಗಾ ನದಿಯಲ್ಲಿ ಮಿಂದ ಫಲವನ್ನು ಈ ಮಾಸದಲ್ಲಿ ಇತರ ಜಲಾಶಯಗಳಲ್ಲಿ ಮಿಂದರೂ ಪಡೆಯಬಹುದಾಗಿದೆ.ಅಂದರೆ ಮಾಘ ಮಾಸದಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲಿರುವ ಎಲ್ಲಾ ನೀರನ್ನು ಗಂಗೆಯಂತೆಯೇ ಶುದ್ಧ ಮತ್ತು ಪಾವನವನ್ನಾಗಿಸುತ್ತದೆ.ಹಿಂದೂಗಳ ಕ್ರಮಗಳನ್ನು ಅವೈಜ್ಞಾನಿಕವೆಂದೂ ಮೂಢನಂಬಿಕೆಗಳೆಂದೂ ಜರಿಯುತ್ತದ್ದವರು ಇಂದೀಗ ಸೂರ್ಯನ ಕಿರಣಗಳ ಮೇಲೆ ಪ್ರಯೋಗಗಳನ್ನು ನಡೆಸಿ ಅದರ ಪ್ರಯೋಜನವನ್ನು ಅರಿತುಕೊಂಡು ಅದನ್ನು ವೈದ್ಯಕೀಯ ಕ್ಷೇತ್ರಗಳಲ್ಲೂ ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ.ಡಾ.ಹೆಜ್ ಹಿಕಿ “ಸೂರ್ಯನ ಕಿರಣಗಳು ಔಷಧಿಗಳಿಗಿಂತ ಹೆಚ್ಚು ಪ್ರಯೋಜನಕಾರಿ.ಔಷಧಿಗಳು ಹಾನಿಕಾರಕ ಬ್ಯಾಕ್ಟೀರಿಯಾಗಳ ಜೊತೆಯಲ್ಲಿ ಶರೀರಕ್ಕೆ ಅವಶ್ಯವಾಗಿರುವ ಉಪಯುಕ್ತ ಬ್ಯಾಕ್ಟೀರಿಯಾಗಳನ್ನೂ ನಾಶಪಡಿಸುತ್ತದೆ” ಎಂದು ಹೇಳುತ್ತಾರೆ. ಡಾ.ಹೆಜ್ ಹ್ಯಾಂಡ್ರಿಕ್ ಅವರು ಸೂರ್ಯನ ಕಿರಣಗಳು ವೇಗವಾಗಿ ದೇಹದೊಳಕ್ಕೆ ಪ್ರವೇಶಿಸುತ್ತವೆ ಮತ್ತು ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಬಣ್ಣದ ಕೊರತೆಗಳಿಂದ ಉಂಟಾಗುವ ಹಲವು ಖಾಯಿಲೆಗಳಿಗೆ ಸೂರ್ಯ ಕಿರಣಗಳೇ ಔಷಧ ಎಂಬುದನ್ನು ತಜ್ಞ ಚರ್ಮ ವೈದ್ಯರೂ ಅಂಗೀಕರಿಸುತ್ತಾರೆ. ಗಾರ್ಡನರ್ ರೋನಿ ಎಂಬ ವಿಜ್ಞಾನಿ “ಸೂರ್ಯನ ಚಿಕಿತ್ಸೆಯಿಂದ ಎಷ್ಟು ಪ್ರಯೋಜನಗಳಿವೆ ಅಂದರೆ ದೇಹವು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತಾನೇ ಹೊರಹಾಕಿ ತನ್ನ ರಕ್ಷಣೆಯನ್ನು ಮಾಡುವಷ್ಟು ಸಮರ್ಥವೂ ಬಲಶಾಲಿಯೂ ಆಗುತ್ತದೆ” ಎಂಬುದನ್ನು ಕಂಡುಕೊಂಡಿದ್ದಾರೆ.

ಮಹಾಭಾರತದಲ್ಲೂ ಭಗವಾನ್ ಶ್ರೀಕೃಷ್ಣ ಪುತ್ರನಾದ ಸಾಂಬನು ಚರ್ಮ ಮತ್ತು ಜೀರ್ಣಕ್ರಿಯೆಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾಗ ಶ್ರೀ ಕೃಷ್ಣನು “ನಾನು ಸೂರ್ಯನನ್ನು ಆರಾಧಿಸುವ ಮೂಲಕ ಉತ್ತಮ ಆರೋಗ್ಯ ಮತ್ತು ಇತರ ಹಲವಾರು ಪ್ರಯೋಜನಗಳನ್ನು ಪಡೆದಿದ್ದೇನೆ.ನೀನು ಸಹಾ ಸೂರ್ಯ ಸ್ನಾನ,ಸೂರ್ಯ ನಮಸ್ಕಾರ ಮತ್ತು ಭಾರೀಕುಟಿಯಲ್ಲಿ ಸೂರ್ಯನನ್ನು ಧ್ಯಾನಿಸು” ಎಂದು ಹೇಳಿದನು ..ಅದರಂತೆಯೇ ಸಾಂಬನು ಮಾಡಲಾಗಿ ತನ್ನ ಆರೋಗ್ಯವನ್ನು ಮರಳಿ ಪಡೆದನು .ಇಂದು ವಿಜ್ಞಾನಿಗಳು ಹಲವಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ವರ್ಷಗಟ್ಟಲೆ ಪ್ರಯೋಗಗಳನ್ನು ಮಾಡಿ ಏನನ್ನು ಸಾಧಿಸಿದ್ದಾರೆಯೋ,ಅದನ್ನು ಐದು ಸಾವಿರ ವರ್ಷಗಳಿಗೂ ಮುನ್ನವೇ ಶ್ರೀಕೃಷ್ಣನು ಯಾವುದೇ ಆಧುನಿಕ ಪ್ರಯೋಗಗಳಿಲ್ಲದೆಯೇ ಹೇಳಿದ್ದನು.ನಮ್ಮ ಹಿರಿಯರು,ತಪಸ್ವಿಗಳು ಸೂರ್ಯ ಕಿರಣಗಳು ನೀಡುವ ವಾರಗಳ ಬಗ್ಗೆ ತಿಳುವಳಿಕೆಯನ್ನೂ ಜ್ಞಾನವನ್ನೂ ನೀಡಿದ್ದಾರೆ.ಆದ್ದರಿಂದಲೇ ಸಂಕ್ರಾಂತಿಯಂದು ಮತ್ತು ಉತ್ತರಾಯಣದಲ್ಲಿ ಸೂರ್ಯನನ್ನು ಪೂಜಿಸುತ್ತಾರೆ.ಸೂರ್ಯ ನಮಸ್ಕಾರವನ್ನು ಮುಂಜಾನೆ ಮಾಡುವುದರ ಉದ್ದೇಶವೂ ಕೂಡ ಸ್ಪಷ್ಟವಿದೆ.ಆದರೆ ಹಿಂದೂಗಳ ಸಂಪ್ರದಾಯವನ್ನು,ಆಚಾರ ವಿಚಾರಗಳನ್ನು ಸುಳ್ಳು ಮತ್ತು ಮೂಢನಂಬಿಕೆಗಳೆಂದು ಲೇವಡಿ ಮಾಡುವವರಿಗೆ ಇದೆಲ್ಲ ಅರಿವಾಗುವುದಿಲ್ಲ..ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ..? ಉತ್ತರಾಯಣದಲ್ಲೇ ಯಾಕೆ ಸೂರ್ಯ ಪೂಜನ ದಕ್ಷಿಣಾಯಣದಲ್ಲೂ ಮಾಡಬಹುದಲ್ಲವೇ ಎಂಬ ಮೂರ್ಖ ಪ್ರಶೆಗಳಿಗೂ ಉತ್ತರವಿದೆ..ವೈಜ್ಞಾನಿಕವಾಗಿ ನೋಡುವುದಾದರೂ ಸೂರ್ಯನು ಉತ್ತರಾಯಣದಲ್ಲಿ ಬಹುಸಮಯ ಲಭ್ಯನಾಗುತ್ತಾನೆ.ಅಂದರೆ ದೀರ್ಘವಾದ ಹಗಲು ಮತ್ತು ಸಣ್ಣ ರಾತ್ರೆಯು ಉತ್ತರಾಯಣದ ವಿಶೇಷ.

ಸಂಕ್ರಾಂತಿಗೆ ಮುಖ್ಯವಾಗಿ ಎಳ್ಳು,ಬೆಲ್ಲ ಮತ್ತು ನೆಲಗಡಲೆಯನ್ನು ಹಂಚಲಾಗುತ್ತದೆ .ಬೆಲ್ಲವು ಸಿಹಿ ಮಾತ್ರವಲ್ಲ ಸಿಹಿಯೊಂದಿಗೆ ಕಾಲ್ಸಿಯಂ,ಕಬ್ಬಿಣ ಮತ್ತು ಪ್ರೊಟೀನ್,ಕೊಬ್ಬಿನ ಅಂಶವನ್ನೂ ಹೊಂದಿದ್ದು ಆರೋಗ್ಯಕರವಾಗಿದೆ.ನೆಲಕಡಲೆಯಲ್ಲಿ ಎಣ್ಣೆಯ ಅಂಶವಿರುವುದು ನಮಗೆಲ್ಲರಿಗೂ ತಿಳಿದಿದೆ.ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತಾ ಜೀರ್ಣಶಕ್ತಿಯನ್ನು ವೃದ್ಧಿಗೊಳಿಸಿ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ.ಎಳ್ಳಿನಲ್ಲಿ ಖನಿಜ ಮತ್ತು ಎಣ್ಣೆಯ ಅಂಶಗಳಿವೆ.ಎಳ್ಳು ಕ್ಯಾಲ್ಸಿಯಂ ಹೊಂದಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು ಬಲಶಾಲಿಯಾಗಿಸುತ್ತದೆ.ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಮಲಬದ್ದತೆಯನ್ನು ನಿವಾರಿಸುತ್ತದೆ.ಹೀಗೆ ಚಳಿಗಾಲದಲ್ಲಿ ದೇಹಕ್ಕೆ ಅವಶ್ಯವಿರುವ ಎಲ್ಲಾ ಅಂಶಗಳನ್ನೂ ಎಳ್ಳು ಬೆಲ್ಲ ಮತ್ತು ನೆಲಕಡಲೆಗಳು ನೀಡುತ್ತವೆ.ಅದಕ್ಕೆಂದೇ ಹಿರಿಯರು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಅಂದದ್ದು.ಉತ್ತರಾಯಣದ ಪುಣ್ಯ ಫಲಕ್ಕಾಗಿ ಪಿತಾಮಹ ಭೀಷ್ಮರು ೫೮ ದಿನಗಳ ಕಾಲ ಶರಶಯ್ಯೆಯಲ್ಲಿ ಮಲಗಿದ್ದರು.ಉತ್ತರಾಯಣದಲ್ಲಿ ಶರೀರ ತ್ಯಜಿಸುವುದು ಭಾಗ್ಯ ಎಂಬುದು ಹಿರಿಯರ ನಂಬಿಕೆ.

ಪಂಜಾಬ್ನಲ್ಲಿ ಲೋಹರಿ,ರಾಜಸ್ಥಾನದಲ್ಲಿ ಸಂಕ್ರಾಂತಿ,ಗುಜರಾತ್ ನಲ್ಲಿ ಉತ್ತರಾಯಣ್,ಉತ್ತರ ಪ್ರದೇಶದಲ್ಲಿ ಕಿಚೆರಿ,ಮಹಾರಾಷ್ಟ್ರದಲ್ಲಿ ಮಕರ ಸಂಕ್ರಾಂತಿ,ಪಶ್ಚಿಮ ಬಂಗಾಳದಲ್ಲಿ ಪಾಶ್ ಪೊರ್ಬೊನ್,ಅಸ್ಸಾಮ್ ನಲ್ಲಿ ಮಾಘ ಬಿಹು,ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲ್ಪಡುವ ಈ ಹಬ್ಬ ಪ್ರತಿಯೊಬ್ಬ ಹಿಂದೂವಿಗೂ ಮಹತ್ವವಾಗಿದೆ.ಪಂಜಾಬ್ ನಲ್ಲಿ ಚಳಿಗಾಲದ ಫಸಲನ್ನು ಕೊಯ್ಯುವ ಹಬ್ಬವಾಗಿ ಆಚರಿಸುತ್ತಾರಾದರೆರಾಜಸ್ಥಾನದಲ್ಲಿ ಮುತ್ತೈದೆಯರು ಇತರ ೧೩ ಮುತ್ತೈದೆಯರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಮತ್ತು ವಿವಾಹಿತಳಾದ ಮಗಳನ್ನು ತವರಿಗೆ ಆಹ್ವಾನಿಸುವ ಮೂಲಕ ಆಚರಿಸುತ್ತಾರೆ.ಗುಜರಾತಿನಲ್ಲಿ ಗಾಳಿಪಟವನ್ನು ಹಾರಿಸುತ್ತಾರಾದರೆ ಉತ್ತರ ಪದೇಶದಲ್ಲಿ ಗಂಗೆಯಲ್ಲಿ ಮೀಯುವ ಮೂಲಕ ಆಚರಿಸುತ್ತಾರೆ.ಮಹಾರಾಷ್ಟ್ರದಲ್ಲಿ ಎಳ್ಳು ಬೆಲ್ಲದ ಲಡ್ಡುವನ್ನು ಹಂಚುವುದರ ಮೂಲಕ ಆಚರಿಸುತ್ತಾರಾದರೆ ಬಂಗಾಳದಲ್ಲಿ ಸಿಹಿ ಹಂಚುವ ಮೂಲಕ ಆಚರಿಸುತ್ತಾರೆ.ಭಾಷೆ ಹೆಸರು ಮತ್ತು ಆಚರಣೆಯ ರೀತಿಯು ಭಿನ್ನವಾದರೂ ಮಕರ ಸಂಕ್ರಾಂತಿಯು ಎಲ್ಲರಿಗೂ ಒಂದೇ.ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು..

-Deepashree M

Tags

Related Articles

FOR DAILY ALERTS
Close