ಪ್ರಚಲಿತ

ಕಮ್ಯುನಿಸ್ಟರ ಪ್ರಮುಖ ಶಕ್ತಿ ಯಾರೆಂದು ಗೊತ್ತೇ?? ಪ್ರಗತಿಪರ ಮತ್ತು ಜಾತ್ಯಾತೀತ ಮುಖವಾಡದ ಹಿಂದೂಗಳು.

ಮಗೆಲ್ಲಾ ತಿಳಿದಿರುವಂತೆ ಕೇರಳವು ಅತ್ಯಂತ ಸಾಕ್ಷರ ರಾಜ್ಯ..ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳದ ಬಹಳಷ್ಟು ಜನರು ಉದ್ಯೋಗವನ್ನರಸಿ ಹೊರದೇಶಗಳಲ್ಲಿದ್ದಾರೆ.೨೦೧೩ ರ ವರದಿಯೊಂದರ ಪ್ರಕಾರ ಸುಮಾರು ೪೫ ಲಕ್ಷ ಮಲಯಾಳಿಗಳು ಹೊರದೇಶದಲ್ಲಿ ದುಡಿಯುತ್ತಾರೆ. ಕೇರಳಿಗರು ಹೆಮ್ಮೆಯಿಂದ ‘ನೀವು ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅಲ್ಲೊಬ್ಬ ಮಲಯಾಳಿ ಕಾಣಸಿಗುತ್ತಾನೆ’ ಎಂದು ಹೇಳುತ್ತಾರೆ.ಇವರಲ್ಲಿ ೩೫% ಜನರು ಯು ಎ ಯಿ ಯಲ್ಲಿ ಕೆಲಸ ಮಾಡುತ್ತಿದ್ದಾರಾದರೆ ೨೯.೫% ಜನರು ಸೌದಿ ಅರೇಬಿಯಾದಲ್ಲಿದ್ದಾರೆ.ಕತಾರ್ ನಲ್ಲಿ ೭.೯% ಜನರಿದ್ದರೆ,ಅಮೆರಿಕಾ ,ಕೆನಡಾ ಮತ್ತು ಯುರೋಪಿಯನ್ ದೇಶಗಳಲ್ಲಿ ಕೆಲಸಮಾಡುವುದು ಒಟ್ಟು ೧.೨% ಜನರು.ಇವರಲ್ಲಿ ೬೭.೮% ಜನರು ಅಧ್ಯಾಪನ,ಬ್ಯಾಂಕಿಂಗ್ ಮತ್ತು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.ಸಾಧಾರಣ ಸಾಫ್ಟವೆರ್ ಕ್ಷೇತ್ರದಲ್ಲಿರುವ ಉದ್ಯೋಗಿಗಳು ಬೆಂಗಳೂರಿನಲ್ಲಿದ್ದಾರೆ..ಇದೇಕೆ ಹೀಗೆ?ಕೇರಳದಲ್ಲಿ ಪ್ರತಿ ಬಾರಿ ಚುನಾವಣಾ ನಡೆದಾಗಲೂ ಹೊಸಪಕ್ಷ ಅಧಿಕಾರ ಪಡೆದುಕೊಳ್ಳುತ್ತದೆ.. ಯಾವುದೇ ಪಕ್ಷ ಸತತ ಎರಡುಬಾರಿ ಗದ್ದುಗೆ ಏರಿದ ಇತಿಹಾಸವೇ ಕೇರಳದಲ್ಲಿಲ್ಲ..

ಕೇರಳದಲ್ಲಿ ಎರಡು ಪ್ರಮುಖ ಪಕ್ಷಗಳಿವೆ ಒಂದು ಕಮ್ಯುನಿಷ್ಟ್ ಒಂದು ಮುಸ್ಲಿಂ ಲೀಗ್..ಬಿಜೆಪಿ ಗೆ ಕೇರಳದಲ್ಲಿ ಅಸ್ತಿತ್ವವಿಲ್ಲವೆಂದು ಕುಹುಕವಾಡುವ ಮೊದಲು ಕಾಂಗ್ರೆಸ್ ಕೂಡಾ ಅಲ್ಲಿ ಮುಸ್ಲಿಂ ಲೀಗ್ ನ ಸಹಾಯವಿಲ್ಲದೆ ಸರಕಾರ ರಚಿಸುವುದು ಸಾಧ್ಯವಿಲ್ಲವೆಂಬುದನ್ನು ನೆನಪಿಡಿ.ಈ ಕಮ್ಮಿನಿಷ್ಟರ ಸಿದ್ದಾಂತಗಳಿಗೆ ತಲೆಯೂ ಇಲ್ಲ ಬಾಲವೂ ಇಲ್ಲ..ಅವರದ್ದೇನಿದ್ದರೂ,ಚೀನಾ ಮತ್ತು ರಷ್ಯಾದ ಸಿದ್ಧಾಂತಗಳು..ಎಲ್ಲರೂ ಸಮಾನವಾಗಿರಬೇಕು,ಯಾರಲ್ಲೂ ಅಧಿಕ ಹಣವಿರಬಾರದು ಎಂದು ಇಂಕ್ವಿಲಾಬ್ ಹೇಳುತ್ತಾ ತಿರುಗಾಡುವುದು ಮರ್ಸಿಡಿಸ್ ಮತ್ತು ಬಿ ಎಂ ಡಬ್ಲ್ಯೂ ಕಾರಿನಲ್ಲಿ.ಪ್ರತಿಯೊಬ್ಬನ ಹೆಸರಿನಲ್ಲೂ ಇರಬೇಕಾದ ಉತ್ಪಾದಕ ಮತ್ತು ಅನುತ್ಪಾದಕ ಭೂಮಿಗಳಿಗೆ ನಿಗದಿಯಿದೆ..ಹೆಚ್ಚಾದಲ್ಲಿ ಅದು ಸರಕಾರಕ್ಕೆ ಸೇರುತ್ತದೆ..ಸರಕಾರವು ಅದನ್ನು ಏನು ಮಾಡುತ್ತದೆ ಎಂದು ಯಾರೂ ಕೇಳುವ ಹಾಗಿಲ್ಲ..

ದೇಶದಲ್ಲಿ ಅತ್ಯಂತ ಹೆಚ್ಚು ಬಂದ್ ನಡೆಯುವುದು ಕೇರಳದಲ್ಲಿ.ಒಂದು ಬಾರಿ ನ್ಯಾಯಾಲಯ ಬಂದ್ ನಡೆಸುವ ಹಾಗಿಲ್ಲ, ಒತ್ತಾಯ ಪೂರ್ವಕವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವುದು,ವಾಹನಗಳನ್ನು ತಡೆಯುವುದು ಮಾಡುವಂತಿಲ್ಲ ಎಂದು ತೀರ್ಪು ನೀಡಿತು.ಸರಿ ಅದರ ಬಳಿಕ ಕೇರಳದಲ್ಲಿ ಬಂದ್ ನಡೆಯುವುದೇ ಇಲ್ಲ..ನಡೆಯುವುದು ಹರತಾಳ ಮಾತ್ರ…ಇದು ಹಳೆಯ ಔಷಧಿಯನ್ನು ಹೊಸ ಬಾಟಲ್ ನಲ್ಲಿ ನೀಡಿದಂತಹಾ ವಿಚಾರ. ಬೆಳಗ್ಗೆ ೬ ಗಂಟೆಯಿಂದ ಸಂಜೆ ಆರುಗಂಟೆಯವರೆಗೆ ಹರತಾಳ ನಡೆಯುವಾಗ ಸಂಪೂರ್ಣ ಕೇರಳ ಸ್ಮಶಾನವಾಗಿರುತ್ತದೆ.ಇಂತಹ ಹರತಾಳ ತಿಂಗಳಲ್ಲಿ ೪ ೫ ೬ ಹೀಗೆ ಎಷ್ಟಾದರೂ ನಡೆಯಬಹುದು..ಇದು ಕಮ್ಯುನಿಸ್ಟರ ಒಂದು ಅವತಾರವಾದರೆ ಇನ್ನೊಂದು ಅವತಾರವಿದೆ..ಕೂಲಿಕಾರ್ಮಿಕರ ಮತ್ತು ಉದ್ಯೋಗಿಗಳ ಹೀಗೆ ಕಮ್ಯುನಿಸ್ಟರ ಸಂಘಗಳಿವೆ ಅದರ ಸದಸ್ಯರಾಗುವುದು ಕಡ್ಡಾಯ.

ಇವರ ಗುಂಡಾಗಿರಿಯ ವರ್ತನೆಗೆ ಒಂದು ಸಣ್ಣ ಉದಾಹರಣೆ ನೀಡುತ್ತೇನೆ..ನೀವು ರೈಲ್ವೆ ನಿಲ್ದಾಣದಲ್ಲಿ ಇಳಿದು ಕೂಲಿಯವನಲ್ಲಿ ಸಾಮಾನು ಸಾಗಿಸುವ ಶುಲ್ಕವನ್ನು ವಿಚಾರಿಸುತ್ತೀರಿ,ಅವರು ಹೇಳಿದ ಶುಲ್ಕ ನಿಮಗೆ ಹೆಚ್ಚಾಯಿತು ಎಂದು ನಿಮ್ಮ ಸಾಮಾನನ್ನು ನೀವೇ ಸಾಗಿಸಿ ಹೊರಗೆ ನಿಮ್ಮ ವಾಹನದಲ್ಲಿರಿಸುತ್ತೀರಿ..ಆದರೆ ಅವರು ಹೇಳಿದ್ದ ಶುಲ್ಕ ನೀಡದೆ ನೀವು ಹೋಗುವುದಕ್ಕೆ ಅವರು ಆಸ್ಪದ ನೀಡುವುದಿಲ್ಲ..ನೀವೇ ಸಾಮಾನು ತಂದದ್ದಾಗಿ ವಾದಿಸಿದರೂ ಅವರು ಬಹಳಷ್ಟು ಜನ ಒಗ್ಗೂಡಿ ಜಗಳಕ್ಕೆ ನಿಲ್ಲುತ್ತಾರೆ.ಯಾವ ಪೊಲೀಸರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ..ಕೊನೆಗೆ ಅವರು ಹೇಳಿದ್ದ ಹಣನೀಡಿ ನೀವು ಅಲ್ಲಿಂದ ಹೊರಬರುತ್ತೀರಿ..ಇದು ಕೇರಳದ ಅವಸ್ಥೆ..ನೀವೇ ಹೇಳಿ ಯಾರಾದರೂ ಕಂಪನಿ ಕಾರ್ಖಾನೆಗಳನ್ನು ಸ್ಥಾಪಿಸಿ ಇಂತಹದ್ದೆಲ್ಲಾ ನಡೆದರೆ ಇದರಿಂದಾಗುವ ನಷ್ಟವನ್ನು ಯಾರು ಭರಿಸುತ್ತಾರೆ?..ಬೇಕೆಂದಾಗ ಹರತಾಳ ನಡೆಸುತ್ತಾ ರಜೆ ಪಡೆದುಕೊಂಡರೆ ಕೆಲಸವಾದರೂ ಹೇಗೆ ನಡೆಯುತ್ತದೆ.?? ಇದು ಕೇರಳ ಮಾತ್ರವಲ್ಲ ಪಶ್ಚಿಮ ಬಂಗಾಳದಲ್ಲೂ ಇದೇ ಕಥೆ..

ಇದರೊಂದಿಗೆ ಹಲವರ ಗಮನಕ್ಕೆ ಬಾರದ ಇನ್ನೊಂದು ಕಥೆಯಿದೆ..ಇದು ನಿಜವಾಗಿ ಭಯ ಹುಟ್ಟಿಸುವ ಕಥೆ..ಕೇರಳದಲ್ಲಿ ರಾಜಕೀಯ ಪ್ರೇರಿತ ಕೊಲೆಗಳ ಬಗ್ಗೆ ಎಲ್ಲರಿಗೂ ಅರಿವಿದೆ..ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಈ ಕೊಲೆಗಳಲ್ಲಿ ಬಲಿಯಾಗುವುದು ಹಿಂದೂಗಳು..ಕಮ್ಯುನಿಸ್ಟರು ಆರೆಸ್ಸೆಸ್ ಬಿಜೆಪಿ ಯ ಮೇಲೆ ಆಗಾಗ ಆಕ್ರಮಣವನ್ನು ನಡೆಸುತ್ತಾ ಇರುತ್ತಾರೆ ಅದಕ್ಕೆ ಬಲಿಯಾಗುವುದು ಹಿಂದೂಗಳು ಎಂಬುದು ಸತ್ಯವಷ್ಟೇ? ಆದರೆ ಮುಸ್ಲಿಂ ಲೀಗ್/ಕಾಂಗ್ರೆಸ್ ಮತ್ತು ಕಮಿನಿಸ್ಟರ ನಡುವಿನ ಆಕ್ರಮಣಗಳಲ್ಲೂ ಅಂತಿಮವಾಗಿ ಹರಿಯುವುದು ಹಿಂದೂವಿನದ್ದೇ ರಕ್ತ.. ಕಮ್ಯುನಿಷ್ಟ್ ನಲ್ಲೂ ಮುಸಲ್ಮಾನರಿದ್ದಾರೆ,ಹೇಳಿಕೇಳಿ ಮುಸ್ಲಿಂ ಲೀಗ್ ಮುಸಲ್ಮಾನರದ್ದೇ ಆದ ಪಕ್ಷ..ಆದರೂ ಮಾರ್ಗದಲ್ಲಿ ಬೀಳುವುದು ಹಿಂದೂವಿನ ಹೆಣಗಳು..ಇದೇಕೆ ಹೀಗೆ?? ಕೇರಳದಲ್ಲಿನ ಕಮ್ಯುನಿಸ್ಟರ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಹಿಂದೂಗಳು ಗಂಧದ ಅಥವಾ ಕುಂಕುಮದ ತಿಲಕವನ್ನಿರಿಸುವಂತಿಲ್ಲ..ಆದರೆ ಮುಸಲ್ಮಾನರು ಬುರ್ಖಾ ಧರಿಸಬಹುದು..ಇದೇಕೆ ಹೀಗೆ?ಅದೆಲ್ಲೂ ಗಾಝ ದಲ್ಲೂ,ಇರಾನಿನಲ್ಲೂ ಆಕ್ರಮಣವಾದರೆ ಮೊದಲು ಮೆರವಣಿಗೆ ಹೊರಡುವುದು ಕಮ್ಯುನಿಸ್ಟರ ಕೇರಳ ಮತ್ತು ಬಂಗಾಳದಿಂದ..ಈ ಜಾತ್ಯಾತೀತತೆಯ ಢಂಗುರ ಸಾರುವವರ ಯುದ್ಧ ಹಿಂದೂಗಳ ಮೇಲೆಯೇ ನಡೆಯುವುದು.. ಹಿಂದೂಗಳಿಗೆ ದೇವಾಲಯಕ್ಕೆ ಹೋಗಬೇಡಿ ಅದು ಕಮ್ಯುನಿಸ್ಟ್ ತತ್ವದ ವಿರುದ್ಧ ಎನ್ನುವವರಿಗೆ ಮಸೀದಿಗೆ ಹೋಗಬೇಡಿ ಎನ್ನಲು ನಾಲಗೆ ಬರುವುದಿಲ್ಲ..ಅಯೋಧ್ಯೆಯಲ್ಲಿ ರಾಮಮಂದಿರವಿತ್ತೆಂದು ಸಿದ್ಧಗೊಳ್ಳುವಾಗ ಕಮ್ಯುನಿಸ್ಟರು ಅಲ್ಲಿ ಬೌದ್ಧ ದೇಗುಲವಿತ್ತೆಂದು ವಾದಿಸಲು ಪ್ರಾರಂಭಿಸಿದರು..ಉದ್ದೇಶ ಸ್ಪಷ್ಟ..ಹಿಂದೂಗಳನ್ನು ವಿರೋಧಿಸಬೇಕು..ಮುಸಲ್ಮಾನರನ್ನು ಎತ್ತಿಕಟ್ಟುವ ಸಂಚು ವಿಫಲವಾದಾಗ ಬೌದ್ಧರಾದರೂ ಆಗಬಹುದು ಹಿಂದೂಗಳಲ್ಲ ಎನ್ನುವ ಹೀನ ಮನಸ್ಥಿತಿ..

ಹಿಂದೂಗಳಿಗೆ ತಾವು ಜಾತ್ಯಾತೀತರು ಎಂದು ಹೇಳಿಕೊಳ್ಳುವುದರಲ್ಲಿ ಒಂದು ಬೇರೆಯೇ ವಿಧವಾದ ಆನಂದ ಸಿಗುತ್ತದೆ.. ಒಂದು ಅತ್ಯಾಚಾರ ಪ್ರಕರಣ ನಡೆದಾಗ ಅತ್ಯಾಚಾರಿ ಹಿಂದೂ ಎಂದಾದಲ್ಲಿ ಈ ಜಾತ್ಯಾತೀತರು,ಕಮ್ಯುನಿಸ್ಟರು, ಮುಸಲ್ಮಾನರು ಓಡೋಡಿ ಬರುತ್ತಾರೆ..ಹಿಂದೂಗಳೂ ಬರುತ್ತಾರೆ ಆದರೆ ಜಾತ್ಯಾತೀತರು ನಾಲ್ಕು ಹೆಜ್ಜೆ ಮುಂದೆ ಹೋಗಿ ಅವಾರ್ಡ್ ವಾಪಸಿಗಳಂತಹಾ ನಾಟಕಗಳನ್ನೂ ಮಾಡುತ್ತಾರೆ. ಅದೇ ಅತ್ಯಾಚಾರಿ ಮುಸಲ್ಮಾನರಾದರೆ.. ಕಮ್ಯುನಿಸ್ಟ್ ಪಕ್ಷವೂ ಇಲ್ಲ,ಯಾವೊಬ್ಬ ಸಾಮಾನ್ಯ ಮುಸಲ್ಮಾನನೂ ಅತ್ಯಾಚಾರಿಯ ವಿರುದ್ಧ ಮಾತು ಕೂಡಾ ಆಡುವುದಿಲ್ಲ. ಹಿಂದೂ ಧರ್ಮಗುರುಗಳ ಮೇಲೆ ಯಾವುದಾದರೂ ಆರೋಪ ಬಂದರೆ ಅವರನ್ನು ಹಿಂದೂ ಸಮಾಜವೇ ಖಂಡಿಸುತ್ತದೆ, ವಿರೋಧಿಸುತ್ತದೆ..ಆದರೆ ಮುಸಲ್ಮಾನ ಅಥವಾ ಕ್ರೈಸ್ತ ಧರ್ಮಗುರುಗಳ ಆರೋಪ ಸಾಬೀತಾದಾಜಿಸಲೂ ಜಾತ್ಯತೀತ ಕ್ರಿಶ್ಚಿಯನ್ನರಾಗಲೀ ಜಾತ್ಯಾತೀತ ಪ್ರಗತಿಪರ ಮುಸಲ್ಮಾನರಾಗಲೀ ಸೊಲ್ಲೆತ್ತುವುದನ್ನು ನೀವು ನೋಡಿದ್ದೀರಾ??ಈ ಕ್ರಾಂತಿಕಾರಿ ಕಮ್ಯುನಿಸ್ಟರಾಗಲಿ,ಆಕ್ರಮಣಕಾರಿ ಮುಸಲ್ಮಾನರಾಗಲಿ ಅಥವಾ ಮತಾಂತರಿಸುವ ಕ್ರಿಶ್ಚಿಯನ್ನರಾಗಲೀ ಇವರ ಮುಖ್ಯ ಸ್ಥಾಮಭವೇ ಪ್ರಗತಿಪರ ಮತ್ತು ಜಾತ್ಯಾತೀತರೆಂದು ಕರೆಸಿಕೊಳ್ಳುವ ಹಿಂದೂಗಳು..ಉದಾಹರಣೆ ನಾನು ಕೊಡಬೇಕಾಗಿಲ್ಲ ನಿಮಗೇ ಗೊತ್ತು ಅಂದುಕೊಳ್ಳುತ್ತೇನೆ..

-Deepashree M

Tags

Related Articles

FOR DAILY ALERTS
Close