ಪ್ರಚಲಿತ

ಬಿಗ್ ಬ್ರೇಕಿಂಗ್! ಬಂಧನದ ಭೀತಿಯಲ್ಲಿ ಕುಮಾರಸ್ವಾಮಿ..! ಪಟ್ಟ ಅಲಂಕರಿಸುತ್ತಲೇ ಜೈಲು ಸೇರಲಿದ್ದಾರ ಸಿಎಂ..?!

ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿ ಇದೀಗ ಬಹುಮತ ಸಾಬೀತು ಪಡಿಸಿದ ಕು-ಮಾರಸ್ವಾಮಿ ಅವರು ಈಗಾಗಲೇ ಹೇಳಿಕೊಂಡಿರುವ ಪ್ರಕಾರ ಈ ಹಿಂದಿನ ಸರಕಾರ ನಡೆಸಿದ ಯಾವುದೇ ಹಗರಣಗಳನ್ನು ನಾನು ಕೆದಕಲು ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಇನ್ನು ಮುಂದೆ ರಾಜ್ಯದಲ್ಲಿ ಹಗರಣಗಳನ್ನು ನಡೆಸಿದವರೂ ಮತ್ತು ನಡೆಸುವವರು ರಾಜಾರೋಷವಾಗಿ ತಿರುಗಾಡುವಂತಾಗಿದೆ. ಚುನಾವಣೆಗೂ ಮೊದಲು ನನ್ನ ಕೈಗೆ ಅಧಿಕಾರ ಸಿಕ್ಕರೆ ಎಲ್ಲಾ ಕಳ್ಳ ಖದೀಮರಿಗೂ ಶಿಕ್ಷೆ ನೀಡುವುದಾಗಿ ಹೇಳಿಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ಉಲ್ಟಾ ಹೊಡೆದಿದ್ದಾರೆ. ಕೇವಲ ಅಧಿಕಾರದ ಆಸೆಗಾಗಿಯೇ ಮುಗಿಬಿದ್ದಿದ್ದ ಕುಮಾರಸ್ವಾಮಿ ಅವರಿಗೇ ಇದೀಗ ಬಂಧನದ ಭೀತಿ ಎದುರಾಗಿದೆ..!

ಸಿಎಂಗೂ ಬಂತು ಭಾರೀ ಕುತ್ತು..!

ಕುಮಾರಸ್ವಾಮಿ ಅವರು ಇಂದು ವಿಧಾನಸೌಧದಲ್ಲಿ ತಮ್ಮ ಹಾಗೂ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ನ ಶಾಸಕರ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದು, ಮುಖ್ಯಮಂತ್ರಿ ಆಗಿ ನೇಮಕಗೊಂಡಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರೂ ಕೂಡಾ ಕುಮಾರಸ್ವಾಮಿ ಅವರಿಗೆ ಈ ಒಂದು ಆರೋಪದಿಂದ ಇನ್ನೂ ಪಾರಾಗಲಾಗಲೇ ಇಲ್ಲ. ಅಕ್ರಮವಾಗಿ ಸಂಪಾದಿಸಿದ ಆಸ್ತಿಯ ಬಗ್ಗೆ ಈ ಹಿಂದಿನಿಂದಲೇ ಆರೋಪಿಸಿಕೊಂಡು ಬಂದಿದ್ದ ಬಿಜೆಪಿ ಇದೀಗ ಮತ್ತಷ್ಟು ಗಂಭೀರವಾಗಿ ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಆರೋಪಿಸಿದೆ. ಕುಮಾರಸ್ವಾಮಿ ಅವರು ಹೋದಲ್ಲೆಲ್ಲಾ ತಾನು ರೈತರ ಪರವಾಗಿ ಎಂದು ಹೇಳಿಕೊಂಡು ಬರುತ್ತಿದ್ದು , ಇದೀಗ ವಿದೇಶದಲ್ಲಿ ಮಾಡಿಟ್ಟ ಆಸ್ತಿಯ ಬಗ್ಗೆ ಭಾರತೀಯ ಜನತಾ ಪಕ್ಷ ಗಂಭೀರವಾಗಿ ಆರೋಪಿಸಿದೆ. ಕುಮಾರಸ್ವಾಮಿ ಅವರು ಅಕ್ರಮವಾಗಿ ಆಸ್ತಿ ಸಂಪಾಧಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ದಾಖಲೆ ಸಮೇತ ಪ್ರಕರಣ ಎದುರಿಸುವುದಾಗಿ ಹೇಳಿಕೊಂಡಿದೆ.!

ಮಲೇಶಿಯಾದಲ್ಲಿ ಇರುವ ಆಸ್ತಿಗಳ ಬಗ್ಗೆ ಇಡಿ ಇಲಾಖೆಯಿಂದ ಮಾಹಿತಿ‌..!

ಕುಮಾರಸ್ವಾಮಿ ಅವರಿಗೆ ಈ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಈ ಬಗ್ಗೆ ಸರಿಯಾದ ತನಿಖೆ ನಡೆಯದೇ ಇದ್ದ ಕಾರಣ ಈ ಆರೋಪ ಮೂಲೆ ಸೇರಿತ್ತು. ಆದರೆ ಇದೀಗ ಮುಖ್ಯಮಂತ್ರಿ ಆದರೂ ಬಂಧನದ ಭೀತಿ ಮಾತ್ರ ತಪ್ಪಿಲ್ಲ. ಯಾಕೆಂದರೆ ವಿಧಾನಸೌಧದಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಗುಡುಗಿದ ಯಡಿಯೂರಪ್ಪನವರು ನಮ್ಮ ಮುಂದಿನ ಹೋರಾಟ ಅಪ್ಪ-ಮಗನ ವಿರುದ್ಧ ಎಂದು ಘರ್ಜಿಸಿದ್ದರು. ಅದೇ ರೀತಿ ಇಡಿ ಇಲಾಖೆ ಕಲೆ ಹಾಕಿರುವ ಮಾಹಿತಿಯ ಪ್ರಕಾರ ಆರೋಪ ಸಾಬೀತು ಆಗಿದ್ದೇ ಆದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೈಲು ಪಾಲಾಗುವುದು ಖಚಿತ..!

ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ೫೬ ಗಂಟೆಗಳಲ್ಲಿ ಅಧಿಕಾರದಿಂದ ಕೆಳಗಿಳಿದ ಯಡಿಯೂರಪ್ಪ ನವರು ಒಂದೆಡೆಯಾದರೆ, ಇತ್ತ ಈಗಾಗಲೇ ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಕುಮಾರಸ್ವಾಮಿ ಅವರೂ ಕುರ್ಚಿಯಿಂದ ಕೆಳಗಿಳಿಯುವ ಮುನ್ಸೂಚನೆ ದೊರಕಿದೆ..!

–ಅರ್ಜುನ್

Tags

Related Articles

Close