ಪ್ರಚಲಿತ

ಬಿಗ್ ಬ್ರೇಕಿಂಗ್.! ಪ್ರಮಾಣವಚನ ದಿನದಂದೇ ಮಠಾಧೀಶರಿಗೆ ಎಚ್ಚರಿಸಿದ ಕುಮಾರಸ್ವಾಮಿ..! ಸಿದ್ದರಾಮಯ್ಯ ಹಾದಿ ಹಿಡಿದರೇ ಕುಮಾರಣ್ಣ..!

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ಹಿಂದೂಗಳ ಬಗ್ಗೆ ಕೀಳಾಗಿ ಮಾತನಾಡಿದ್ದು ಇಡೀ ರಾಜ್ಯಕ್ಕೆ ತಿಳಿದಿರುವ ವಿಚಾರ. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇವರಿಗೆ ಹರಕೆ, ಪೂಜೆ ಸಲ್ಲಿಸಿ ಚುನಾವಣೆಯಲ್ಲಿ ಗೆಲ್ಲುವಂತೆ ಬೇಡಿಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ಅಧಿಕಾರಕ್ಕೆ ಏರುತ್ತಿದ್ದಂತೆ ಅಹಂಕಾರದಿಂದ ಮತ್ತೆ ಹಿಂದೂಗಳ ಮತ್ತು ಮಠಾಧೀಶರ ವಿರುದ್ಧ ಹೇಳಿಕೆ ನೀಡಿದ್ದಾರೆ.

ನಮ್ಮ ಕುಟುಂಬ ದೇವರನ್ನು ನಂಬಿಕೊಂಡು ಬಂದಿದೆ, ಆ ದೇವರೇ ನನ್ನನ್ನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಿದ್ದಾರೆ ಎಂದು ನುಡಿದ ಕುಮಾರಸ್ವಾಮಿ ಅವರು, ರಾಜ್ಯದ ಮಠಾಧೀಶರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..!

ನಿಮ್ಮ ಉಪದೇಶ ಕೇವಲ ಮಠಗಳಿಗೆ ಸೀಮಿತ..!

ಇಂದು ಪ್ರಮಾಣವಚನ ಸ್ವೀಕರಿಸಿ ಇದೀಗ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಸ್ವಾಮೀಜಿಗಳು ಕೇವಲ ಮಠದಲ್ಲಿ ಉಪದೇಶ ಮಾಡಲಿ, ಅದು ಬಿಟ್ಟು ರಾಜಕೀಯ ಉಪದೇಶ ಮಾಡಿದರೆ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಗುವುದು, ನಿಮ್ಮ ನಿಮ್ಮ ಸಮುದಾಯದ ಜನರನ್ನು ಮಠಗಳಲ್ಲಿ ಹಿಡಿತದಲ್ಲಿ ಇಟ್ಟುಕೊಳ್ಳಿ , ಅದನ್ನೆಲ್ಲಾ ಬಿಟ್ಟು ನಮಗೆ ರಾಜಕೀಯ ಉಪದೇಶ ಮಾಡುವ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿಕೆ ನೀಡಿದ್ದಾರೆ..!

ಮಠಾಧೀಶರಿಗೆ ರಾಜಕೀಯದಲ್ಲಿ ಯಾವುದೇ ಅಧಿಕಾರ ಇಲ್ಲ, ಕೇವಲ ಮಠಗಳಿಗೆ ಬರುವ ನಿಮ್ಮ ಸಮುದಾಯದ ಜನರಿಗೆ ಉಪದೇಶ ನೀಡಿ ಸುಮ್ಮನಾಗಿ , ರಾಜಕಾರಣ ಮಾಡಲು ನಾವಿದ್ದೇವೆ ಎಂದು ಸ್ವಾಮೀಜಿಗಳಿಗೆ ಎಚ್ಚರಿಕೆ ನೀಡಿದ್ದಾರೆ..!

ಮಠಾಧೀಶರು ನೇರವಾಗಿ ರಾಜಕೀಯಕ್ಕೆ ಬನ್ನಿ..!

ಮಠಗಳಲ್ಲಿ ಕೂತು ತಮ್ಮ ಸಮುದಾಯದ ಜನರಿಗೆ ಉಪದೇಶ ನೀಡುವ ಸ್ವಾಮೀಜಿಗಳು ನಮಗೆ ರಾಜಕೀಯ ಉಪದೇಶ ನೀಡುವ ಅಗತ್ಯವಿಲ್ಲ ಎಂದು ಹಿಂದೂಗಳು ಪೂಜಿಸುವ ಸ್ವಾಮೀಜಿಗಳ ಬಗ್ಗೆ ಕೀಳಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಮಠಾಧೀಶರು ಉಪದೇಶ ನೀಡುವ ಬದಲು ನೇರವಾಗಿ ರಾಜಕೀಯಕ್ಕೆ ಬನ್ನಿ ಎಂದು ಸವಾಲು ಹಾಕಿದ್ದಾರೆ..!

ಕಳೆದ ಬಾರಿ ಜೆಡಿಎಸ್‌ ಪಕ್ಷದ ಕಾರ್ಯಕ್ರಮ ಒಂದರಲ್ಲಿ ಹಿಂದೂಗಳ ಪವಿತ್ರ ಸ್ಥಳವಾದ ದತ್ತಪೀಠಕ್ಕೆ ಹೋಗುವ ಮಾಲಾಧಾರಿ ಹಿಂದೂಗಳನ್ನು ಭಿಕ್ಷುಕರು ಎಂದು ಕೀಳಾಗಿ ಮಾತನಾಡಿದ್ದ ಕುಮಾರವ್ಯಾಸ ಇದೀಗ ಮತ್ತೆ ಹಿಂದೂ ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ..!

ಚುನಾವಣೆಗೂ ಮೊದಲು ಕಾಡಿ , ಬೇಡುತ್ತಿದ್ದ ಕುಮಾರಸ್ವಾಮಿ ಅವರು ಇದೀಗ ಅಧಿಕಾರ ಕೈಗೆ ಸಿಗುತ್ತಿದ್ದಂತೆ ಭಾರೀ ದರ್ಪ ಮೆರೆಯಲು ಪ್ರಾರಂಭಿಸಿದ್ದಾರೆ. ರಾಜ್ಯದ ಎಲ್ಲಾ ಮಠಾಧೀಶರು ಎಚ್ಚೆತ್ತುಕೊಂಡರೆ ಕುಮಾರಸ್ವಾಮಿ ಅವರ ಈ ವರ್ತನೆಗೆ ತಕ್ಕ ಪಾಠ ಕಲಿಸಬಹುದು..!

–ಅರ್ಜುನ್

Tags

Related Articles

Close