ರಾಜ್ಯ

ಮುಖ್ಯಮಂತ್ರಿಗಳ “ಗೂಂಡಾ” ಹೇಳಿಕೆ ವಿರುದ್ಧ ದಂಗೆ ಎದ್ದ ರೈತರು! ರೈತರ ಆಕ್ರೋಶಕ್ಕೆ ಮಣಿದು ವಿಷಾದ ವ್ಯಕ್ತಪಡಿಸಿದ ಸಿಎಂ ಕುಮಾರಸ್ವಾಮಿ!

 

ರೈತರ ಹೆಸರು ಹೇಳಿಕೊಂಡು ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾನು ಮುಖ್ಯಮಂತ್ರಿ ಎಂಬ ಅಹಂಕಾರದಿಂದ ಇದೀಗ ರಾಜ್ಯದ ರೈತರನ್ನೇ ಗೂಂಡಾಗಳು ಎಂದು ಕರೆಯುತ್ತಾರೆ ಎಂದರೆ ನಮ್ಮನ್ನಾಳುವ ಸರಕಾರ ಯಾವ ರೀತಿಯ ಆಡಳಿತ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕುಮಾರಸ್ವಾಮಿ ಅವರು ಹೋದಲ್ಲೆಲ್ಲಾ ತಾನು ರೈತರ ಪರ ನಾನು ಮಣ್ಣಿನ ಮಗ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ರೈತರ ಪರ ಎನ್ನುವ ಸಿಎಂ ಕುಮಾರಸ್ವಾಮಿ ಅವರು ನಿಜವಾಗಿಯೂ ರೈತರ ಪರವಾಗಿ ಇದ್ದರೆ ಇಂದು ರಾಜ್ಯದ ರೈತರು ಸರಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ.

ಆದರೆ ತಮಗೆ ನ್ಯಾಯ ಕೊಡಿ ಸ್ವಾಮಿ ಎಂದು ಸರಕಾರಕ್ಕೆ ಮನವಿ ಮಾಡುವ ರೈತರನ್ನು ಮುಖ್ಯಮಂತ್ರಿಗಳು ಗೂಂಡಾಗಳು ಎಂದು ಕರೆಯುತ್ತಿದ್ದಾರೆ. ನನಗೆ ಅಧಿಕಾರ ಕೊಡಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ರೈತರಿಗೆ ಉಲ್ಟಾ ಹೊಡೆದಿದ್ದಾರೆ. ಆದರೆ ರೈತರನ್ನು ಎದುರು ಹಾಕಿಕೊಂಡರೆ ಪರಿಣಾಮ ಯಾವ ರೀತಿ ಇರುತ್ತದೆ ಎಂಬುದನ್ನು ಇದೀಗ ರಾಜ್ಯದ ರೈತರು ಸರಕಾರಕ್ಕೆ ಅರ್ಥ ಮಾಡಿಸಿದ್ದಾರೆ‌, ಮಾತ್ರವಲ್ಲದೆ ಸ್ವತಃ ಕುಮಾರಸ್ವಾಮಿ ಅವರೇ ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.!

ರೈತರನ್ನು ಗೂಂಡಾ ಎನ್ನುವ ಕುಮಾರಸ್ವಾಮಿ ಅವರು ಮಣ್ಣಿನ ಮಗನಾ?

ಹೌದು ಇಂತಹ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ ಏಕೆಂದರೆ ಕುಮಾರಸ್ವಾಮಿ ಅವರು ರೈತರ ಗೂಂಡಾಗಳು ಎಂದು ಹೇಳುತ್ತಾರೆ ಆದರೆ ರೈತರಿಗೆ ಕುಮಾರಸ್ವಾಮಿ ಅವರು ನೀಡಿದ ಕೊಡುಗೆ ಏನು? ಇದು ರಾಜ್ಯದ ಜನರಲ್ಲಿ ಮೂಡುವ ಪ್ರಶ್ನೆ. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೂಂಡಾಗಳು ಎಂದು ಕರೆದುಬಿಟ್ಟರು. ಮೊದಲೇ ಸರಕಾರದ ವಿರುದ್ಧ ಗರಂ ಆಗಿದ್ದ ರೈತರು ಕುಮಾರಸ್ವಾಮಿ ಅವರ ಈ ಹೇಳಿಕೆ ಕೇಳುತ್ತಿದ್ದಂತೆ ರೊಚ್ಚಿಗೆದ್ದಿದ್ದರು.

ಕುಮಾರಸ್ವಾಮಿ ಅವರು ತಾನು ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಾರೆ,ಆದರೆ ರೈತರ ಸಮಸ್ಯೆ ಆಲಿಸುವ ಬದಲು ನಮ್ಮನ್ನೇ ಗೂಂಡಾಗಳು ಎಂದು ಕರೆಯುತ್ತಾರೆ, ಹಾಗಾದರೆ ರೈತರು ಗೂಂಡಾಗಳೇ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ರೈತರು ಇಷ್ಟಕ್ಕೆ ಸುಮ್ಮನಾಗದೆ ನಮ್ಮ ಸಮಸ್ಯೆಯನ್ನು ಆಲಿಸದೇ ಇದ್ದರೆ ರಾಜ್ಯದಲ್ಲಿ ಏನೇ ಅವಘಡ ನಡೆದರೂ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.!

ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ!

ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಪ್ರತಿಭಟನಾ ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತು ಡಿಸಿಎಂ ಜಿ ಪರಮೇಶ್ವರ್ ಅವರು ಸ್ಥಳಕ್ಕಾಗಮಿಸಬೇಕೆಂದು ನಾವು ಕೇಳಿಕೊಂಡಿಲ್ಲ, ಆದರೆ ಈಗ ನಾವೇ ಬೆಂಗಳೂರಿಗೆ ಬಂದಿದ್ದೇವೆ ಆದರೂ ಇಲ್ಲಿ ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರ ರೈತರು, ಪ್ರತಿಭಟನಾ ಸ್ಥಳಕ್ಕೆ ಸಿಎಂ ಹಾಗೂ ಡಿಸಿಎಂ ಆಗಮಿಸದೇ ಇದ್ದರೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲಾ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಆ ನಂತರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಮಧ್ಯೆ ಸಿಎಂ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ನನ್ನ ಮಾತನ್ನು ರೈತರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನನ್ನ ವಿರುದ್ಧ ರೈತರು ಪ್ರತಿಭಟನೆಯಲ್ಲಿ ನಿಂದಿಸಿರುವುದು ನನಗೆ ಬೇಸರ ತಂದಿದೆ. ಆದ್ದರಿಂದ ಈ ಬೇಸರದಿಂದ ನಾನು ಒಂದು ರೈತರ ಬಗ್ಗೆ ಹೇಳಿಕೆ ನೀಡಿದ್ದೇನೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮತ್ತೊಮ್ಮೆ ಮಾತು ಬದಲಾಯಿಸಿದ್ದಾರೆ. ಆದರೆ ಯಾರ ಮಾತಿಗೂ ಬಗ್ಗದ ರೈತರು ತಮ್ಮ ಸಮಸ್ಯೆ ಬಗೆಹರಿಸದೇ ಇದ್ದರೆ ಸರಕಾರವನ್ನೇ ಬುಡಮೇಲು ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.!!

–ಅರ್ಜುನ್

Tags

Related Articles

FOR DAILY ALERTS
Close