ನರೇಂದ್ರ ಮೋದಿ ಎಂದರೆ ಸಾಕು ವಿರೋಧಿಗಳ ಎದೆಯಲ್ಲಿ ನಡುಕ ಉಂಟಾಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುತ್ತಲೇ ತನ್ನ ದಿಟ್ಟ ನಿರ್ಧಾರಗಳಿಂದ ಜಗತ್ತಿನಾದ್ಯಂತ ತನ್ನ ಹೆಸರನ್ನು ಪಸರಿಸಿದವರು. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಮೋದಿ ಯ ಮಾತಿಗೆ ಗೌರವ ಸಿಗುತ್ತಿದೆ ಎಂದರೆ ಮೋದಿಯ ತಾಕತ್ತು ಎಂಥಾದ್ದು ಎಂಬೂದು ಗೊತ್ತಾಗುತ್ತದೆ.
ನರೇಂದ್ರ ಮೋದಿ ಗೆ ಸದ್ಯ ಎದುರಾಳಿಯಾಗಿ ನಿಲ್ಲುವ ನಾಯಕ ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಇಲ್ಲ ಎಂಬೂದು ಗಮನಾರ್ಹ. ಯಾಕೆಂದರೆ ಮೋದಿ ವಿರುದ್ಧ ತೊಡೆತಟ್ಟಿದವರೆಲ್ಲಾ ಇದೀಗ ಬಾಲಮುದುಡಿಕೊಂಡು ಮೂಲೆಗುಂಪಾಗಿದ್ದಾರೆ. ಮೋದಿ ಸಂಪುಟದಲ್ಲಿ ಇರುವವರು ಇದೇ ರೀತಿಯಾಗಿ ಇದ್ದಾರೆ.
ತಮ್ಮ ಸರಕಾರವನ್ನು ಪ್ರಶ್ನಿಸುವ ವಿರೋಧಿಗಳಿಗೆ ತಕ್ಕ ಉತ್ತರ ನೀಡುವ ಸಚಿವರು ,ಅಧಿಕಾರಿಗಳು ಸದ್ಯ ಮೋದಿ ಟೀಂ ನಲ್ಲಿ ಇದ್ದು, ಸರಕಾರದ ದಿಟ್ಟ ನಿರ್ಧಾರಗಳನ್ನು ತಡೆಯುವ ಸಾಮಾರ್ಥ್ಯ ಯಾರಿಗೂ ಇಲ್ಲ ಎಂಬಾಂತಾಗಿದೆ.
ನರೇಂದ್ರ ಮೋದಿಯವರು ಯಾವುದೇ ಯೋಜನೆ ಅಥವಾ ನಿರ್ಧಾರ ತೆಗೆದುಕೊಂಡರೂ , ಕಾಂಗ್ರೆಸ್ ಮತ್ತು ಕೆಲ ವಿರೋಧಿ ಬಣಗಳು ಪ್ರಶ್ನಿಸುತ್ತವೆ, ಪ್ರತಿಯೊಂದು ಹೆಜ್ಜೆಗೂ ಅಡ್ಡಗಾಲು ಹಾಕುವ ಕಾಂಗ್ರೆಸ್ ಗೆ ಪ್ರತೀ ಬಾರಿಯೂ ಮೋದಿ ಸರಕಾರದ ಸಚಿವರು ತಕ್ಕ ತಿರುಗೇಟು ನೀಡಿದ್ದಾರೆ. ಆದರೆ ನಾಯಿ ಬಾಲ ಡೊಂಕು ಎಂಬ ಮಾತಿನಂತೆ ಕಾಂಗ್ರೆಸ್ ಮಾತ್ರ ತನ್ನ ಹಳೇ ಛಾಳಿಯನ್ನೇ ಮುಂದುವರೆಸಿದೆ.
ಮೋದಿ ಸರಕಾರವನ್ನು ಪ್ರಶ್ನಿಸಿದ ರಾಹುಲ್..!
ನರೇಂದ್ರ ಮೋದಿಯವರ ಎಲ್ಲಾ ನಡೆಗಳಿಗೂ ಅಡ್ಡಿಯುಂಟುಮಾಡುವ ಕಾಂಗ್ರೆಸ್ ಗೆ ಬಿಜೆಪಿ ಏಟು ನೀಡುತ್ತಿರುವುದು ಇದೇ ಮೊದಲಲ್ಲಾ. ಕರ್ನಾಟಕದ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕಿಳಿದ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಮೋದಿ ಸರಕಾರವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ.
ಮೋದಿ ಸರಕಾರದ ಎಲ್ಲಾ ಯೋಜನೆಗಳನ್ನು ಟೀಕಿಸುತ್ತಿರುವ ರಾಹುಲ್ ಗಾಂಧಿ , ಸದ್ಯ ಕರ್ನಾಟಕದಲ್ಲಿ ತನ್ನ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಮೋದಿಯವರನ್ನು ಪ್ರಶ್ನಿಸಿ ಹೋದಲ್ಲೆಲ್ಲಾ ಪೇಚೆಗೆ ಸಿಲುಕುತ್ತಿರುವ ರಾಹುಲ್ ಗಾಂಧಿ ಈ ಬಾರಿ ಭಾರೀ ಹಳ್ಳಕ್ಕೆ ಬಿದ್ದಿದ್ದಾರೆ. ಪ್ರಚಾರದ ಅಬ್ಬರದಲ್ಲಿ ಮಾತಿನ ದಿಕ್ಕು ಬದಲಾಯಿಸಿದ ರಾಹುಲ್ ಮೋದಿಯವರನ್ನು ಹೀಯಾಳಿಸಿದ್ದರು.
ಬಹಿರಂಗ ಸವಾಲೆಸೆದ ಫೈರ್ ಬ್ರಾಂಡ್..!
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಇರುವ ಎಲ್ಲಾ ಸಚಿವರು ಒಂದೊಂದು ರೀತಿಯಲ್ಲಿ ವಿಶೇಷವಾಗಿ ಗುರುತಿಸಕೊಂಡವರು. ಆದರೆ ಕಾಂಗ್ರೆಸ್ ನ್ನು ಹಿಗ್ಗಾ ಮುಗ್ಗ ಜಾಡಿಸಿಕೊಂಡು ಕಾಂಗ್ರೆಸ್ ನಾಯಕರ ಬಾಯಿಗೆ ಬೀಗ ಹಾಕಿದ್ದವರು ಮಾತ್ರ ಕೇಂದ್ರದ ಫೈರ್ ಬ್ರಾಂಡ್ ಸಚಿವೆ ಸ್ಮೃತಿ ಇರಾನಿ.
Perhaps @OfficeOfRG planning to sweep polls in Russia, Indonesia & Kazakhstan ?? #RahulWaveInKazakh https://t.co/xVanl2mKGh https://t.co/Yhl1oAGqOg
— Smriti Z Irani (@smritiirani) October 21, 2017
ಕಳೆದ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಭದ್ರ ಕೋಟೆ ಎಂದೇ ಪರಿಗಣಿಸಿರುವ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಕಾಂಗ್ರೆಸ್ ಗೆ ನಡುಕ ಹುಟ್ಟಿಸಿದ್ದರು. ಇದೀಗ ಮತ್ತೆ ರಾಹುಲ್ ಗಾಂಧಿ ವಿರುದ್ಧ ಗುಡುಗಿದ ಸ್ಮೃತಿ ಇರಾನಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು, ರಾಹುಲ್ ಗಾಂಧಿಯ ಬಂಡವಾಳವನ್ನೆಲ್ಲಾ ಬಯಲು ಮಾಡುವ ಸಮಯ ಸಮೀಪಿಸಿದೆ. ರಾಹುಲ್ ತನ್ನ ಪಕ್ಷದ ಸಮಾವೇಶದಲ್ಲಿ ಮಾಡಿದ ಭಾಷಣವನ್ನು ನನ್ನ ಮುಂದೆ ಮಾಡಲಿ , ಯಾವ ರೀತಿಯಲ್ಲಿ ಉತ್ತರಿಸಬೇಕೋ ನಮಗೆ ಗೊತ್ತಿದೆ , ರಾಹುಲ್ ಗೆ ತಾಕತ್ತಿದ್ದರೆ ನಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿಗೆ ನನ್ನೊಂದಿಗೆ ಚರ್ಚಿಸಲು ಭಯವಿದ್ದರೆ, ಇತರ ಯಾವುದೇ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಲಿ, ರಾಹುಲ್ ನ ಎಲ್ಲಾ ಜಾತಕ ನಾವು ಬಯಲು ಮಾಡುತ್ತೇವೆ ಎಂದ ಸ್ಮೃತಿ ಇರಾನಿ , ರಾಹುಲ್ ಗೆ ಚರ್ಚೆಗೆ ಆಹ್ವಾನಿಸಿದ್ದಾರೆ.
ಚರ್ಚೆಗೆ ಹೋಗುವುದಿಲ್ಲ, ರಾಹುಲ್..!
ಕಾಂಗ್ರೆಸ್ ಸಮಾವೇಶಗಳಲ್ಲಿ ಯಾರೋ ಬರೆದು ಕೊಟ್ಟ ಚೀಟಿ ಓದುವ ರಾಹುಲ್ ಗಾಂಧಿ, ಈವರೆಗೆ ಯಾವುದೇ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಆದರೆ ಹೋದಲ್ಲೆಲ್ಲಾ ಮೋದಿ ಸರಕಾರದ ವಿರುದ್ಧ ಮಾತನಾಡುವ ಕಾಂಗ್ರೆಸ್ ಮಹಾರಾಜ ಇದೀಗ ಬಿಜೆಪಿಯ ಸವಾಲಿಗೆ ತತ್ತರಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ನೀಡಿದ ಸವಾಲಿಗೆ ಕಂಗಾಲಾದ ರಾಹುಲ್ ತಾನು ಯಾವ ಚರ್ಚೆಯಲ್ಲೂ ಪಾಲ್ಗೊಳ್ಳುವುದಿಲ್ಲ, ನನಗೆ ಅದರ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ , ರಾಹುಲ್ ಗಾಂಧಿ ಚರ್ಚೆಗೆ ಬರುವುದು ಅನುಮಾನ, ಅವರಿಗೆ ಚರ್ಚೆಯಲ್ಲಿ ಮಾತನಾಡುವಷ್ಟು ಧೈರ್ಯವಿಲ್ಲ. ಯಾಕೆಂದರೆ ರಾಹುಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ದೇ ಆದರೆ ರಾಹುಲ್ ನ ನಿಜವಾದ ಬಂಡವಾಳ ಬಯಲಾಗಲಿದೆ. ತಾನು ಮಾಡಿರುವ ಎಲ್ಲಾ ಮೋಸವನ್ನು ನಾವು ಬಯಲಿಗೆಳೆಯುತ್ತೇವೆ ಎಂಬ ಭಯ ರಾಹುಲ್ ಗಿದೆ. ಆದ್ದರಿಂದಲೇ ಚರ್ಚೆಗೆ ಬರುವುದಿಲ್ಲ ಎಂದಿದ್ದಾರೆ.
ರಾಹುಲ್ ನನ್ನ ಜೊತೆ ಚರ್ಚೆಗೆ ಇಳಿಯದಿದ್ದರೂ ಪರವಾಗಿಲ್ಲ, ಭಾರತೀಯ ಜನತಾ ಪಕ್ಷದ ಯಾವುದೇ ನಾಯಕನ ಜೊತೆಗೂ ಚರ್ಚೆ ನಡೆಸಲಿ. ರಾಹುಲ್ ತೋರಿಸಿದ ವ್ಯಕ್ತಿಯ ಜೊತೆ ಚರ್ಚೆ ನಡೆಸಲು ನಾವು ಸಿದ್ಧ, ಆದರೆ ರಾಹುಲ್ ಗೆ ಧೈರ್ಯ ಇದೆಯೇ ಎಂದು ಸವಾಲು ಹಾಕಿದ್ದಾರೆ. ಈಗಾಗಲೇ ಕಾಂಗ್ರೆಸ್ ನ ಚಳಿ ಬಿಡಿಸಿರುವ ಫೈರ್ ಬ್ರಾಂಡ್ ಸ್ಮೃತಿ ಇರಾನಿ , ಇದೀಗ ಮತ್ತೊಂದು ಬಾಂಬ್ ಎಸೆದಿದ್ದಾರೆ.!
–ಅರ್ಜುನ್