ಪ್ರಚಲಿತ

ಬಿಗ್ ಬ್ರೇಕಿಂಗ್! ಹೈಕಮಾಂಡ್ ವಿರುದ್ಧವೇ ರೊಚ್ಚಿಗೆದ್ದ ಕೈ ಶಾಸಕರು.! ಅತೃಪ್ತ ಶಾಸಕರ ಒಗ್ಗಟ್ಟಿಗೆ ಬೆಚ್ಚಿಬಿದ್ದ ಮೈತ್ರಿ ಸರಕಾರ..!

ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡ ದಿನದಿಂದಲೇ ಎರಡೂ ಪಕ್ಷಗಳ ಶಾಸಕರ ಭಿನ್ನಾಭಿಪ್ರಾಯ ಎದ್ದು ಕಾಣುತ್ತಲೇ ಇದೆ. ಆದರೂ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಸುಮ್ಮನಿದ್ದ ಶಾಸಕರು ಇದೀಗ ಪಕ್ಷದ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಮೈತ್ರಿ ಸರಕಾರದಲ್ಲಿ ಅಸಮಧಾನಗೊಂಡ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಕ್ಷದ ಮುಖಂಡರಿಗೆ ನುಂಗಲಾರದ ತುತ್ತು ಎಂಬಂತಾಗಿದೆ. ಸಚಿವ ಸಂಪುಟ ರಚನೆಯ ಬಗ್ಗೆ ಅಸಮಧಾನಗೊಂಡ ಶಾಸಕರು ಬಹಿರಂಗವಾಗಿಯೇ ಪಕ್ಷದ ವಿರುದ್ಧ ತೊಡೆತಟ್ಟಿದ್ದು, ಎಲ್ಲಾ ಶಾಸಕರು ಸೇರಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಒಂದೆಡೆ ಸಚಿವ ಸ್ಥಾನ ವಂಚಿತ ಶಾಸಕರು ಪಕ್ಷದ ವಿರುದ್ಧ ತೊಡೆತಟ್ಟಿದ್ದು ಮಾತ್ರವಲ್ಲದೆ ಯಾರ ಮಾತಿಗೂ ಬಗ್ಗುವುದಿಲ್ಲ ಎಂದು ಸವಾಲು ಕೂಡ ಹಾಕಿದ್ದಾರೆ.!

ಸಚಿವ ಸ್ಥಾನದ ಆಕಾಂಕ್ಷೆಗಳು ತಮ್ಮ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿದ್ದರೂ ಕೂಡ , ಯಾರ ಒತ್ತಡಕ್ಕೂ ಮಣಿಯದ ಹೈಕಮಾಂಡ್ ತಮಗೆ ಬೇಕಾದ ಶಾಸಕರಿಗೆ ಮಂತ್ರಿ ಪಟ್ಟ ದೊರಕುವಂತೆ ಮಾಡಿದೆ. ಆದ್ದರಿಂದ ರೊಚ್ಚಿಗೆದ್ದ ಶಾಸಕರು ನೇರವಾಗಿ ಪಕ್ಷದ ಮತ್ತು ಹೈಕಮಾಂಡ್ ವಿರುದ್ದವೇ ತಿರುಗಿ ಬಿದ್ದಿದ್ದಾರೆ.!

ಹೈಕಮಾಂಡ್ ವಿರುದ್ಧವೇ ಸಿಡಿದೆದ್ದ ಶಾಸಕರು..!

ಪಕ್ಷಕ್ಕಾಗಿ ದುಡಿದವರನ್ನು ಮೂಲೆಗುಂಪು ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಇದೀಗ ಆಕ್ರೋಶಗೊಂಡ ಶಾಸಕರು ನೇರವಾಗಿ ಬಂಡಾಯದ ಬಿಸಿ ಎಬ್ಬಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಮುಖಂಡ ಮತ್ತು ಶಾಸಕರಾಗಿರುವಂತಹ ಎಂಬಿ ಪಾಟೀಲ್ ಅವರವ ನೇತ್ರತ್ವದಲ್ಲಿ ಅತೃಪ್ತ ಶಾಸಕರ ಸಭೆ ನಡೆದಿದ್ದು, ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದವರನ್ನು ಕೇವಲ ಚುನಾವಣೆಗೆ ಮಾತ್ರ ಬಳಸಿಕೊಂಡ ಕಾಂಗ್ರೆಸ್ ಮಂತ್ರಿ ಸ್ಥಾನ ನೀಡದೆ ನಮ್ಮನ್ನು ವಂಚಿಸಿದೆ. ಆದ್ದರಿಂದ ಇದಕ್ಕೆ ಸೂಕ್ತ ರೀತಿಯ ತಿರುಗೇಟು ನಾವು ನೀಡುತ್ತೇವೆ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.!

ಎಂಬಿ ಪಾಟೀಲ್ ಜೊತೆ ಅನೇಕ ಶಾಸಕರು ಇದ್ದು, ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಮೈತ್ರಿ ಸರಕಾರದ ರಚನೆಗೆ ನಮ್ಮ ಅವಶ್ಯಕತೆ ಇತ್ತು, ಆದರೆ ಇದೀಗ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಅತೃಪ್ತ ಶಾಸಕರು, ರಾಜೀನಾಮೆ ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. !

ಹೈಕಮಾಂಡ್‌ನಿಂದಲೂ ಶಾಸಕರಿಗೆ ಖಡಕ್ ಎಚ್ಚರಿಕೆ..!

ರಾಜ್ಯದಲ್ಲಿ ನಡೆಯುತ್ತಿರುವ ಶಾಸಕರ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನ ಈಗಾಗಲೇ ನಡೆದಿದೆ ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅದ್ದರಿಂದ ನೇರವಾಗಿ ಹೈಕಮಾಂಡ್ ಶಾಸಕರಿಗೆ ಎಚ್ಚರಿಕೆ ನೀಡಿದೆ‌. ಪಕ್ಷ ವಿರೋಧಿ ಚಟುವಟಿಕೆ ನಡೆದಿದ್ದೇ ಆದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ಬಿಸಿ ಮುಟ್ಟಿಸಿದೆ. ಆದರೆ ಇತ್ತ ಎಂಬಿ ಪಾಟೀಲ್ ಅವರು ಹೈಕಮಾಂಡ್ ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಯಾರ ಮಾತಿಗೂ ಜಗ್ಗುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

Image result for mb pateel with congress mlas

ಮೊದಲ ಬಾರಿಗೆ ಸಭೆ ನಡೆಸಿದ ಶಾಸಕರಿಗೆ ಹೈಕಮಾಂಡ್ ಎಚ್ಚರಿಸಿದ್ದರೂ ಅದನ್ನೂ ಧಿಕ್ಕರಿಸಿ ಇದೀಗ ಎಂಬಿ ಪಾಟೀಲ್ ಅವರು ಮತ್ತೊಂದು ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಪಾಟೀಲ್, ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಅಷ್ಟೇ, ಸೆಕೆಂಡ್ ಕ್ಲಾಸ್ ಮಂತ್ರಿ ಅಲ್ಲ, ನನಗೆ ಎರಡನೇ ಸುತ್ತಿನಲ್ಲಿ ಸಚಿವ ಸ್ಥಾನ ನೀಡುವ ಅವಶ್ಯಕತೆ ಇಲ್ಲ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಆದ್ದರಿಂದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಅತೃಪ್ತ ಶಾಸಕರ ಆಕ್ರೋಶ ತಾರಕಕ್ಕೇರಿದ್ದು, ಮೈತ್ರಿ ಸರಕಾರ ಅಕ್ಷರಶಃ ಬೆಚ್ಚಿಬಿದ್ದಿದೆ. ಯಾಕೆಂದರೆ ಶಾಸಕರು ರಾಜೀನಾಮೆ ನೀಡಿದ್ದೇ ಆದಲ್ಲಿ ಸಮ್ಮಿಶ್ರ ಸರಕಾರ ಮುರಿದು ಬೀಳುವುದು ಗ್ಯಾರಂಟಿ..!

–ಅರ್ಜುನ್

Tags

Related Articles

Close