ಪ್ರಚಲಿತ

ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುತ್ತೇವೆಂದು ಪತ್ರ ಬರೆದ ಪಾಕ್ ಉಗ್ರರು.! ಕರ್ನಾಟಕದಲ್ಲೇ ಹರಡಿದೆಯಾ ಉಗ್ರ ಜಾಲ?

ಪ್ರಧಾನಿ ನರೇಂದ್ರ ಮೋದಿ ಯವರನ್ನು ಕೊಲೆ ಮಾಡುವ ಬೆದರಿಕೆ ಪತ್ರವೊಂದು ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದು ಕಾರ್ಯಕರ್ತರಲ್ಲಿ ತೀವ್ರ ಆತಂಕ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರ್ನಾಟಕ ಭೇಟಿಗೂ ಮುನ್ನ ಈ ಘಟನೆ ನಡೆದಿದೆ.

ಪೊಲೀಸ್ ವರಿಷ್ಠಾಧಿಕಾರಿ ಕಛೇರಿಗೆ ಆ ಪತ್ರದಲ್ಲಿ ‘ಪ್ರಧಾನಿ ಮೋದಿ ಸರಕಾರ ಏನೂ ಕೆಲಸ ಮಾಡಿಲ್ಲ.ನಾವು ಪಾಕಿಸ್ತಾನದ ಭಯೋತ್ಪಾದನೆ ಸಂಘಟನೆಯವರು, ನಿಮ್ಮನ್ನು ಫೀನೀಶ್ ಮಾಡದೆ ಬಿಡಲ್ಲ. ನಮ್ಮ ಟಾರ್ಗೇಟನ್ನು ಖಂಡಿತವಾಗಿಯೂ ಮುಟ್ಟುತ್ತೇವೆ’ ಎಂದು ಬರೆದಿದ್ದಾರೆ ಎನ್ನಲಾಗಿದೆ.

ಆದರೆ ಅಕ್ಷರಗಳನ್ನು ಅಸ್ಪಷ್ಟವಾಗಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.ಹಾವೇರಿಯಿಂದ ಧಾರವಾಡ ಎಸ್ಪಿ ಕಚೇರಿಗೆ ಈ ಬೆದರಿಕೆ ಪತ್ರ ಬಂದಿದ್ದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಪ್ರಧಾನಿ ಮೋದಿ ಅವರ ಹುಬ್ಬಳ್ಳಿಯ ಪ್ರವಾಸದ ಸಂದರ್ಭದಲ್ಲಿಯೇ ಈ ಪತ್ರ ಆಗಮಿಸಿರುವುದು ಇನ್ನಷ್ಟು ಭದ್ರತೆ ಹೆಚ್ಚಳ ಮಾಡುವಂತೆ ಮಾಡಿದೆ.

ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ರುವ ಧಾರವಾಡ ಎಸ್ಪಿ ಉಪನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶೀಘ್ರವಾಗಿ ಈ ಪತ್ರದ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲು ಪಡಿಸುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿರುವ ಉಪನಗರ ಪೊಲೀಸರು ತನಿಖೆ ನಡೆಸಲು ತಂಡ ರಚಿಸಿದ್ದಾರೆ. ಈ ತನಿಖಾ ತಂಡ ಹಾವೇರಿಗೆ ತೆರಳಿದ್ದು, ಪತ್ರದ ಜಾಡು ಬೆನ್ನ ಹತ್ತಲಿದೆ.

 

Tags

Related Articles

FOR DAILY ALERTS
Close