ಪ್ರಚಲಿತ

23 ದಿನಗಳ ಕಾಲ ಕಲಾಪವನ್ನು ವ್ಯರ್ಥ ಮಾಡಿದ ಪ್ರತಿಪಕ್ಷಗಳ ಸದಸ್ಯರಿಂದ ಪೋಲಾದ ಬಡವರ ತೆರಿಗೆಯ ಹಣವೆಷ್ಟು ಎಂದು ತಿಳಿದರೆ ಖಂಡಿತಾ ದಂಗಾಗುವಿರಿ!!

ಬರೋಬ್ಬರಿ 23 ದಿನಗಳ ಕಾಲ ಕಲಾಪವನ್ನು ನಡೆಸಲು ಬಿಡದೆ ದೇಶಕ್ಕೆ ಆದ ಒಟ್ಟು ನಷ್ಟವೆಷ್ಟು ಗೊತ್ತೇ? ಈ ವಿಚಾರವನ್ನು ಯಾವ ಮೀಡಿಯಾಗಳೂ ತಿಳಿಸಲಾರವು. ನಾವೆಲ್ಲಾ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕೆಂಬ ತುಡಿತದಿಂದ ಸಂಸತ್‍ಗೆ ಆರಿಸಿ ಕಳಿಸುತ್ತೇವೆ. ಆದರೆ ಅವರೆಲ್ಲಾ ನಮ್ಮ ದೇಶದ ಸೇವೆ ಮಾಡುವುದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಗಾಗಿ ದೇಶದ ಹಿತವನ್ನೇ ಬಲಿಕೊಟ್ಟು ಬಿಡುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ದೌರ್ಭಾಗ್ಯದ ಸ್ಥಿತಿ ಬೇರೊಂದಿಲ್ಲ.

ಒಬ್ಬ ಸಂಸದ್ ಸದಸ್ಯನಿಗೆ ವೇತನ, ಭತ್ಯೆ ಸೇರಿ ತಿಂಗಳಿಗೆ ಸಿಗುವ ಒಟ್ಟು ಮೊತ್ತವೆಷ್ಟು ಗೊತ್ತೇ? ಲೋಕಸಭೆಯ ತನ್ನ ವೆಬ್‍ಸೈಟ್‍ನಲ್ಲಿ ಒಬ್ಬ ಸಂಸದ್ ಸದಸ್ಯನಿಗೆ ತಿಂಗಳಿಗೆ ಒಟ್ಟು ಸಿಗುವ ಹಣವೆಷ್ಟು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ದೇಶದ 545 ಸಂಸದ್ ಸದಸ್ಯರು, 250 ರಾಜ್ಯ ಸಭಾ ಸದಸ್ಯರಿಗೆ ತಿಂಗಳಿಗೆ ಸರಕಾರ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತದೆ. ಒಬ್ಬ ಸಂಸದ್ ಸದಸ್ಯ ಅಥವಾ ರಾಜ್ಯ ಸಭಾ ಸದಸ್ಯ ತನಗೆ ಸಿಗುವ ಮೊತ್ತಕ್ಕೂ ಮೀರಿ ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಆ ವೇತನಕ್ಕೆ ತಕ್ಕ ಬೆಲೆ ಸಿಗುತ್ತದೆ. ಆದರೆ ಮೋದಿಯೊಬ್ಬರನ್ನು ವಿರೋಧಿಸುವ ದೆಸೆಯಿಂದ ಇಡೀ ದೇಶಕ್ಕೆ ಕೋಟ್ಯಂತರ ಹಣವನ್ನು ನಷ್ಟ ಮಾಡಿದರೆ ಅದರ ಜವಾಬ್ದಾರಿಯನ್ನು ಯಾರು ಹೊರಬೇಕು ಎನ್ನುವುದನ್ನು ಪ್ರಜ್ಞಾವಂತ ನಾಗರಿಕರು ಅರ್ಥ ಮಾಡಿಕೊಳ್ಳಬೇಕು.

ಈ ಸದಸ್ಯರಿಗೆ ಸರಕಾರದಿಂದ ಏನೆಲ್ಲಾ ಸೌಲಭ್ಯ ಸಿಗುತ್ತದೆ ಗೊತ್ತೇ?

1. ಸಂಬಳ ಹಾಗೂ ಇತರ ಭತ್ಯೆ
2. ಸಂಚಾರ ಭತ್ಯೆ ಹಾಗೂ ಇತರ ಸಂಚಾರ ಸೌಲಭ್ಯ: ಬಸ್, ಕಾರ್, ರೈಲು, ವಿಮಾನ
3 ಇತರ ಸೌಕರ್ಯ: ವಸತಿ ಗೃಹ ಇತ್ಯಾದಿ
4. ಟೆಲಿಫೋನ್ ಭತ್ಯೆ
5. ನೀರು ಹಾಗೂ ವಿದ್ಯುತ್
6. ಆರೋಗ್ಯ ಸೌಲಭ್ಯ
7. ಮುಂಗಡ ಸಾಗಾಣಿಕೆ ಸೌಕರ್ಯ
8. ತೆರಿಗೆ ಸೌಕರ್ಯ
9. ಕಂಪ್ಯೂಟರ್ ಸೇರಿದಂತೆ ಇನ್ನಿತರ ಸೌಲಭ್ಯ
10. ಪರ್ಸನಲ್ ಆರ್‍ಎಫ್ ಟ್ಯಾಗ್ಸ್, ಕಾರ್ ಪಾರ್ಕಿಂಗ್ ಇತ್ಯಾದಿ ಪಾಸ್
ಹೀಗೆ ಇಷ್ಟೆಲ್ಲಾ ಸೌಕರ್ಯಗಳಿವೆ
ಇದರ ಜೊತೆಗೆ ಸಾಗಾಟ ಸೌಕರ್ಯಗಳಾದ ಟ್ಯಾಕ್ಸಿ, ಸ್ಕೂಟರ್ ಇವೆಲ್ಲಾ ಸಂಸತ್ ಸಮೀಪ ಪುಕ್ಕಟೆಯಾಗಿ ಸಿಗುತ್ತದೆ. ರೈಲ್ವೆ ಬುಕಿಂಗ್, ವಿಮಾನ ಬುಕಿಂಗ್ ವ್ಯವಸ್ಥೆ ಸುಲಭವಾಗಿ ಸಿಗುತ್ತದೆ. ಅದರೊಂದಿಗೆ ಬ್ಯಾಂಕ್ ಸೌಕರ್ಯ, ರಾಜತಾಂತ್ರಿಕ ಸೌಕರ್ಯ, ಎನ್‍ಡಿಎಂಸಿ, ಲೆಪಿಜಿ, ರಕ್ಷಣಾ ವ್ಯವಸ್ಥೆ, ವಸತಿ ಗೃಹದ ಸಮೀಪ ರಕ್ಷಣೆ, ಸೇನಾ ರಕ್ಷಣೆ, ಕ್ಯಾಟರಿಂಗ್, ಕೇಂದ್ರೀಯ ಬಂದರ್, ಸ್ಟೀಲ್ ಲಾಕರ್, ಮುದ್ರಣ ವೆಚ್ಚ, ಲೇಖನಿ ಸಾಮಗ್ರಿ, ಗ್ರೀಟಿಂಗ್ಸ್, ಕ್ಲಬ್ ಸೌಕರ್ಯ, ಪೋಸ್ಟಲ್ ಸೌಕರ್ಯ, ಫೋಟೋಗ್ರಾಫಿ ಹೀಗೆ ಹತ್ತು ಹಲವು ಸೌಕರ್ಯಗಳಿವೆ. ಇಷ್ಟೆಲ್ಲಾ ಸೌಲಭ್ಯ ಕೊಟ್ಟು ದೇಶದ ಅಭಿವೃದ್ಧಿಗೆ ಕೆಲಸ ಮಾಡಿದ್ದರೆ ಕೊಟ್ಟ ಹಣಕ್ಕೂ ಒಂದು ಫಲಿತಾಂಶ ಸಿಕ್ಕಿರುತ್ತಿತ್ತು. ಆದರೆ?

ಪ್ರತಿಯೊಬ್ಬ ಸದಸ್ಯನಿಗೂ ಇಷ್ಟಕ್ಕೇ ಪ್ರತಿ ದಿನ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತದೆ. ಇದರ ಜೊತೆಗೆ ಅವರಿಗೆ ಸಂಬಳ, ಭತ್ಯೆ, ಅಕಮಂಡೇಷನ್, ಸೇರಿ ಕೈಗೆ ಸಿಗುವ ಒಟ್ಟು ಹಣವೆಷ್ಟು ಗೊತ್ತೇ?

ರಾಜ್ಯ ಸಭಾ ಮತ್ತು ಲೋಕಸಭಾ ಸದಸ್ಯನಿಗೆ ಸಿಗುವ ಮಾಸಿಕ ವೇತನ ರೂ.- 50,000.00
ಡೈಲಿ ಅಲೊವೆನ್ಸ್ ಪ್ರತೀ ದಿನ ರೂ.- 2000.00
ಕಾಂಸ್ಟಿವೆನ್ಸಿ ಅಲೊವೆನ್ಸ್ ಮಾಸಿಕ ರೂ.- 45,000.00
ಆಫೀಸ್ ಎಕ್ಸ್‍ಪೆನ್ಸ್ ಮಾಸಿಕ ರೂ.- 45,000.000
ಹೀಗೆ ತಿಂಗಳಿಗೆ ಸಿಗುವ ಒಟ್ಟು ಹಣ ರೂ.- 1,42,000

ದೇಶದಲ್ಲಿ ಒಟ್ಟು 545 ಲೋಕಸಭೆ ಹಾಗೂ 250 ರಾಜ್ಯ ಸಭಾ ಸದಸ್ಯರಿದ್ದಾರೆ. ಹೀಗೆ 795 ಮಂದಿಗೆ ಸರಕಾರ ಖರ್ಚು ಮಾಡುವ ಒಟ್ಟು ಹಣ ರೂ. 11,28,90,000.00

23 ದಿನಗಳ ಕಾಲ ಕಲಾಪವನ್ನು ವ್ಯರ್ಥ ಮಾಡಿದ ಪರಿಣಾಮ ಸರಕಾರಕ್ಕೆ ಒಬ್ಬ ಸದಸ್ಯನಿಂದ ಒಟ್ಟು ನಷ್ಟ ತಿಂಗಳ ಸಂಬಳವನ್ನೇ ಲೆಕ್ಕ ಹಾಕಿದರೂ ಒಂದು ದಿನದ ನಷ್ಟ ಏನಿಲ್ಲವೆಂದೂ ರೂ. 6000 ಕ್ಕೂ ಅಧಿಕ.
ಈ ಮೊತ್ತವನ್ನು 23 ದಿನಗಳಿಗೆ ಗುಣಿಸಿದಾಗ ಆದ ನಷ್ಟ ರೂ. 1,38,000.00 ಅಂದಾಜಿಸಬಹುದು.

ಹಾಗಾದರೆ 795 ಮಂದಿಯಿಂದ 23 ದಿನಗಳ ಕಾಲ ಆದ ಒಟ್ಟು ನಷ್ಟ ಎಷ್ಟೆಂದರೆ ಏನಿಲ್ಲವೆಂದರೂ ಬರೋಬ್ಬರಿ ರೂ. 10,97,10,000.00. ಇಷ್ಟು ಹಣದ ನಷ್ಟವನ್ನು ತುಂಬುವವರು ಯಾರು? ಇದಲ್ಲದೆ ಮೇಲೆ ತಿಳಿಸಿದ ಇನ್ನಿತರ ಸೌಕರ್ಯಗಳು ಸೇರಿಸಿದರೆ ಒಟ್ಟು ನಷ್ಟ ಎಷ್ಟಾಗಿರಬಹುದೆಂದು ಅಂದಾಜಿಸಿದರೆ ಶಾಕ್ ಎನಿಸುವುದು ಗ್ಯಾರಂಟಿ.

ಎನ್‍ಡಿಎ ಸದಸ್ಯರು ಕಲಾಪ ವ್ಯರ್ಥಗೊಂಡ 23 ದಿನಗಳ ಕಾಲದ ವೇತನವನ್ನೇ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಪ್ರತಿಪಕ್ಷಗಳಿಗೆ ನಿಜವಾಗಿಯೂ ದೇಶದ ಮೇಲೆ ಅಭಿಮಾನ ಇದ್ದಿದ್ದರೆ ತಾವೂ ಕೂಡಾ 23 ದಿನಗಳ ವೇತನವನ್ನು ತೆಗೆದುಕೊಳ್ಳುವುದಿಲ್ಲ ಎಂದು ಧೈರ್ಯದಿಂದ ಹೇಳಿರುತ್ತಿದ್ದರು. ಆದರೆ ಇಷ್ಟು ಧೈರ್ಯ ಅವರಲ್ಲಿ ಇದೆಯೇ? ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ. ಈ ಹಣವನ್ನು ಬಡ ರೈತರಿಗಾದರೂ ಖರ್ಚು ಮಾಡಿದ್ದರೆ ಎಷ್ಟೋ ರೈತರ ಕಣ್ಣೀರನ್ನು ಒರೆಸಬಹುದಿತ್ತಲ್ಲವೇ?

 

ಆದರೆ 402 ಸಂಸದರಿರುವ ಬಿಜೆಪಿ 23 ದಿನಗಳ ವೇತನ, ಭತ್ಯೆ ತೆಗೆದುಕೊಳ್ಳದೆ ದೇಶದ ನಷ್ಟವನ್ನು ತುಂಬಿದೆ. ಇದರ ಒಟ್ಟು ಮೊತ್ತ ರೂ. 5,54,76,000.00 ಅಂದಾಜಿಸಬಹುದು. ಉಳಿದ ಹಣಕ್ಕೆ ಯಾರು ಹೊಣೆ?

source: http://164.100.47.194/loksabha/writereaddata/Updates/EventLSS_635627139100708482_English%20FACILITIES64p.pdf

ಚೇಕಿತಾನ

Tags

Related Articles

Close