ಪ್ರಚಲಿತ

ಮಸೀದಿಯ ಕಂಬ ಕಂಬಗಳಲ್ಲಿಯೂ ಕಾಣುತಿಹನು ಹನುಮ!! ಟಿಪ್ಪುವಿನ ಕ್ರೂರತನಕ್ಕೆ ಸಾಕ್ಷಿಯಾಯಿತು ಈ ಮಸೀದಿ!!

ಹಿಂದೂ ರಾಷ್ಟ್ರವಾಗಿದ್ದ ಭಾರತದಲ್ಲಿ ಮೊಘಲರ ದಾಳಿಯಿಂದಾಗಿ ಅದೆಷ್ಟೋ ಹಿಂದೂಗಳು ಮತಾಂತರಗೊಂಡರಲ್ಲದೇ, ಅದೆಷ್ಟೋ ದೇವಾಲಯಗಳು ಮಸೀದಿಗಳಾಗಿ ಪರಿವರ್ತನೆಗೊಂಡು ಹಿಂದೂ ಧರ್ಮವನ್ನು ಬುಡಸಮೇತ ಕಿತ್ತೊಗೆಯಲು ನಾನಾ ವಾಮಮಾರ್ಗಗಳನ್ನು ಮಾಡಿದರೂ ಹಿಂದೂ ಧರ್ಮವನ್ನು ಅವರಿಂದ ಕಿತ್ತೊಗೆಯಲು ಆಗಲೇ ಇಲ್ಲ!! ಆದರೆ ಭಾರತದಲ್ಲಿರುವ ಪುರಾತನ ಮಸೀದಿಗಳೆಲ್ಲವೂ ಹಿಂದೂ ದೇವಾಲಯಗಳಾಗಿದ್ದವು ಎನ್ನುವುದಂತೂ ಅಕ್ಷರಶಃ ನಿಜ. 

ಯಾಕೆಂದರೆ ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದಾಗ ಅದೆಷ್ಟು ಸತ್ಯ ಸಂಗತಿಗಳು ಹೊರಬೀಳುತ್ತೆ ಎಂದರೆ, ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಿ ಆತನ ಜಯಂತಿಯನ್ನು ಆಚರಿಸುವವರು ಒಂದು ಸಲ ದಂಗಾಗಿ ಹೋಗುವಂತೆಯೂ ಮಾಡುತ್ತೆ!! ಹೌದು.. ಇತಿಹಾಸದ ಕಾಲಗರ್ಭದಲ್ಲಿ ಮರೆತು ಮರೆಯಾಗಿ ಹೋಗಿರುವಂತಹ ಸತ್ಯ ಸಂಗತಿಯೊಂದು ಇದೀಗ ಹೊರಬಿದ್ದಿದ್ದು, ಟಿಪ್ಪು ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣದಲ್ಲಿರುವ ಜುಮ್ಮಾ ಮಸೀದಿಯ ಇತಿಹಾಸವನ್ನು ಪುರಾತತ್ವ ಇಲಾಖೆ ಪುಷ್ಟೀಕರಿಸುವಂತಹ ಸಾಕ್ಷ್ಯಾಧಾರಗಳು ಗೋಚರಿಸಿರುವ ಮೂಲಕ ಟಿಪ್ಪು ಸುಲ್ತಾನನ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ!!

ಹೌದು… ಟಿಪ್ಪು ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣದಲ್ಲಿರುವ ಜುಮ್ಮಾ ಮಸೀದಿಯು ಹನುಮನ ದೇಗುಲವಾಗಿದ್ದು, ಟಿಪ್ಪು ಸುಲ್ತಾನ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಭರದಲ್ಲಿ ಹಿಂದೂ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಿಸಿದ ಎನ್ನುವುದಕ್ಕೆ ಇದೊಂದು ಸಾಕ್ಷಿ ಸಿಕ್ಕಂತಾಗಿದೆ. ಅಷ್ಟೇ ಅಲ್ಲದೇ ಶ್ರೀರಂಗಪಟ್ಟಣದಲ್ಲಿರುವ ಜುಮ್ಮಾ ಮಸೀದಿಯನ್ನು ಹನುಮನ ದೇಗುಲವನ್ನು ಕೆಡವಿ ನಿರ್ಮಿಸಲಾಗಿತ್ತೆಂಬ ಪುರಾತತ್ವ ಇಲಾಖೆ ವರದಿ ಪುಷ್ಟೀಕರಿಸುವಂತೆ ಸಾಕ್ಷ್ಯಾಧಾರಗಳು ಗೋಚರಿಸಿವೆ. ಈ ಮೂಲಕ ಗತಕಾಲದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಒಡಲಲ್ಲಿಟ್ಟುಕೊಂಡಿರುವ ಈ ಪಟ್ಟಣದ ಹನುಮ ದೇಗುಲ ರಹಸ್ಯ ಶತಮಾನದ ಬಳಿಕ ಬಯಲಾಗಿದೆ.

ಅಷ್ಟಕ್ಕೂ ಮಸೀದಿಯನ್ನು ಹನುಮನ ದೇಗುಲ ಎಂದು ಹೇಳಲು ಕಾರಣವಾದರೂ ಏನು ಗೊತ್ತೇ??

ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದಾಗ ಭಾರತ ಹಿಂದೂ ಧರ್ಮದ ಪುಣ್ಯ ಬೀಡು, ಕಲೆ ಸಂಸ್ಕೃತಿಗಳ ತವರೂರು ಎಂಬಿತ್ಯಾದಿ ಮಾಹಿತಿಗಳು ಸಿಗುತ್ತಾ ಹೋಗುತ್ತದೆಯಲ್ಲದೇ ದೇಶದುದ್ದಕ್ಕೂ ಸುಂದರವಾದ ದೇವಾಲಯಗಳು, ಕೆತ್ತನೆಗಳೇ ರಾರಾಜಿಸುತ್ತಿರುವ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ!! ಅದೇ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಂತಹ ಹನುಮನ ಮಂದಿರ ಟಿಪ್ಪುಸುಲ್ತಾನ ಕಾಲದಲ್ಲಿ ನಾಶವಾಗಿ ಹೋಯಿತು ಎಂದು ಹೇಳುತ್ತಾರೆಯೇ ವಿನಃ ಇದೇ ದೇಗುಲ ಮಸೀದಿಯಾಗಿ ಪರಿವರ್ತನೆಗೊಂಡಿದೆ ಎನ್ನುವ ವಿಚಾರವನ್ನು ಯಾರೂ ಕೂಡ ಹೇಳುವ ಗೋಜಿಗೆ ಹೋಗಲೇ ಇಲ್ಲ!!

ಆದರೆ, ಶ್ರೀರಂಗಪಟ್ಟಣದಲ್ಲಿರುವ ಜುಮ್ಮಾ ಮಸೀದಿಯ ಗೋಡೆ, ಕಂಬಗಳಲ್ಲಿ ಪದ್ಮಾವತಿ, ಶಾರ್ದೂಲ, ನಾಗಬಂಧ ಗೋಚರಿಸಿರುವುದು ಹನುಮ ದೇಗುಲದ ಕುರಿತಂತೆ ಪುರಾತತ್ವ ಇಲಾಖೆಯ ವರದಿಗೆ ಪುಷ್ಟಿ ನೀಡಿದೆ. ಮೈಸೂರು ಪುರಾತತ್ವ ಇಲಾಖೆ ಸ್ವಾತಂತ್ರ್ಯಕ್ಕೂ 12 ವರ್ಷ ಮೊದಲೇ 1935ರಲ್ಲಿ ಮುದ್ರಿಸಿರುವ ವಾರ್ಷಿಕ ವರದಿಯ ಪುಟ 61ರಲ್ಲಿ ಜುಮ್ಮಾ ಮಸೀದಿ ಇರುವ ಜಾಗದಲ್ಲಿ ಹನುಮ ಮಂದಿರವಿತ್ತೆಂಬುವುದು ಉಲ್ಲೇಖವಾಗಿದೆ.

ಹೌದು…. ಈ ಮಸೀದಿಯ ಎಡಭಾಗದ ಕಂಬದಲ್ಲಿ ನಾಗಬಂಧ ಈಗಲೂ ಗೋಚರಿಸುತ್ತದೆ. ಬಲಭಾಗದ ಕಂಬದಲ್ಲಿ ಪದ್ಮಾವತಿ ಚಕ್ರವಿದೆ. ಸುಣ್ಣ ಬಳಿದಿರುವ ಕಂಬದ ಮೇಲೆ ಶಾರ್ದೂಲ ಚಿತ್ರ ಕಾಣುತ್ತದೆ. ಹಿಂದೂ ದೇಗುಲಗಳನ್ನು ಹೋಲುವ ಗರ್ಭಗುಡಿ ಅಸ್ತಿತ್ವ ಇಂದಿಗೂ ಇದೆ. ಈ ಮೊದಲು ಕೆಲ ಸಂಶೋಧಕರು, ಇತಿಹಾಸಕಾರರು ಹನುಮ ದೇಗುಲದ ವಿವರ ಉಲ್ಲೇಖಿಸಿದ್ದರು. ಇದೀಗ ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿಯಲ್ಲೂ ಉಲ್ಲೇಖವಾಗಿರುವುದು ಚರ್ಚೆಗೆ ಕಾರಣವಾಗಿದೆ. ಸದ್ಯ ಕೇಂದ್ರ ಪುರಾತತ್ವ ಇಲಾಖೆ ಜುಮ್ಮಾ ಮಸೀದಿಯನ್ನು ಐತಿಹಾಸಿಕ ಸ್ಮಾರಕ ಎಂದು ಪರಿಗಣಿಸಿ ತನ್ನ ಸುಪರ್ದಿಯಲ್ಲಿಟ್ಟುಕೊಂಡಿದೆ. ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗಿದ್ದರೂ ಈಗಲೂ ಒಂದು ಧರ್ಮದ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.

ಅಷ್ಟಕ್ಕೂ ಇತಿಹಾಸ ಏನು ಹೇಳುತ್ತದೆ ಗೊತ್ತೇ?? 

ಟಿಪ್ಪು ಸುಲ್ತಾನ್ ಬಾಲಕನಾಗಿದ್ದಾಗ “ನೀನು ಮಂದಿರವನ್ನು ನೆಲಸಮ ಮಾಡಿ ಮಸೀದಿ ನಿರ್ಮಿಸು. ಇದರಿಂದ ಮತ್ತಷ್ಟು ಖ್ಯಾತಿಗಳಿಸುತ್ತೀಯ” ಎಂದು ಫಕೀರನೊಬ್ಬ ಹೇಳಿದ್ದನಂತೆ. ಅದನ್ನು ಪಾಲಿಸಿದ್ದ ಟಿಪ್ಪು 1787ರಲ್ಲಿ ಶ್ರೀರಂಗಪಟ್ಟಣದ ಆಂಜನೇಯ ದೇಗುಲ ಧ್ವಂಸಗೊಳಿಸಿ ಅದರ ಮೇಲೆಯೇ ಎರಡು ಗೋಪುರದ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿಯಲ್ಲಿ ಉಲ್ಲೇಖವಾಗಿದೆ. ನೆಲಸಮಗೊಂಡ ದೇಗುಲದಲ್ಲಿದ್ದ ಆಂಜನೇಯ ಮೂರ್ತಿಯನ್ನು ಸ್ಥಳೀಯರು ರಕ್ಷಿಸಿ, ಟಿಪ್ಪು ಮರಣದ ನಂತರ ಪುಟ್ಟ ಮನೆಯೊಂದರಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದೇ ಮೂರ್ತಿ ಇಂದು ಮೂಡಲ ಆಂಜನೇಯ ಸ್ವಾಮಿಯಾಗಿ ಖ್ಯಾತಿ ಪಡೆದಿದೆ.

ಆದರೆ ಹನುಮ ಮಂದಿರ ನಾಶ ಮಾಡಿದ್ದ ಟಿಪ್ಪುವಿಗೆ “ನೀನು ನನ್ನ ಕಣ್ಣೆದುರಲ್ಲಿ ಸಾಯ್ತೀಯ” ಎಂದು ಆಂಜನೇಯ ಸ್ವಾಮಿ ಶಾಪ ನೀಡಿದ್ದನಂತೆ. ಕಾಕತಾಳೀಯ ಎಂಬಂತೆ ಟಿಪ್ಪು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೋರಾಡುವ ವೇಳೆ ಶ್ರೀರಂಗಪಟ್ಟಣದಲ್ಲಿ ಸಾಮಾನ್ಯ ಸೈನಿಕನಂತೆ ಸಾವನ್ನಪ್ಪಿದ್ದ. ಸದ್ಯ ಇರುವ ದೇಗುಲದ ನೇರಕ್ಕೆ 300 ಮೀಟರ್ ದೂರದಲ್ಲಿಯೇ ಟಿಪ್ಪು ಶವ ಬಿದ್ದಿತ್ತು ಎಂದು ಸ್ಥಳೀಯರು ಹನುಮ ದೇಗಲದ ದಂತಕಥೆಯನ್ನು ಹೇಳುತ್ತಾರೆ.

ಇನ್ನು ಈ ಬಗ್ಗೆ, ಹಿರಿಯ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ ಅವರು, “ಶ್ರೀರಂಗಪಟ್ಟಣದ ಆರಾಧ್ಯ ದೈವ ಹನುಮಾನ್ ವಿಗ್ರಹ ಭಗ್ನಗೊಳಿಸಿ ಟಿಪ್ಪು ಅದರ ಮೇಲೆ ಗುಮ್ಮಟ ನಿರ್ಮಿಸಿದ್ದಾನೆ. ಮೂಲ ಹನುಮಾನ್ ವಿಗ್ರಹವನ್ನು ಶ್ರೀರಂಗಪಟ್ಟಣದ ಜನ ಊರಿನಲ್ಲೇ ಬೇರೆಡೆ ಇಟ್ಟಿದ್ದಾರೆ. ಆ ಆಂಜನೇಯ ದೇಗುಲಕ್ಕೆ ನಾನು ಹೋಗಿದ್ದೇನೆ” ಎಂದು ಹೇಳಿದ್ದಾರೆ.

Related image

ಮೈಸೂರು ಪುರಾತತ್ವ ಇಲಾಖೆ ವಾರ್ಷಿಕ ವರದಿ, ಮಸೀದಿ ಮೇಲಿರುವ ಕುರುಹುಗಳನ್ನು ಆಧರಿಸಿ ಕೇಂದ್ರ ಪುರಾತತ್ವ ಇಲಾಖೆಗೆ ಆರ್.ಟಿ.ಐ ಕಾರ್ಯಕರ್ತ ಭಾಸ್ಕರನ್ ದೂರು ನೀಡಿದ್ದಾರೆ. “ಹನುಮ ದೇಗುಲವನ್ನು ಪುನರ್ ಸ್ಥಾಪಿಸಬೇಕು. ಕೇಂದ್ರ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಜುಮ್ಮಾ ಮಸೀದಿಯಲ್ಲಿ ಅದರ ಅಸಲಿ ಇತಿಹಾಸವನ್ನು ಬರೆದು ಪ್ರಕಟಿಸಬೇಕು. ಪ್ರತಿಯೊಬ್ಬರಿಗೂ ಸತ್ಯ ಗೊತ್ತಾಗಬೇಕು. ಅಷ್ಟೇ ಅಲ್ಲದೇ, ಇದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಈ ನಿಟ್ಟಿನಲ್ಲಿ ಕಾನೂನು ಸಮರ ಮಾಡಲು ಸಿದ್ಧತೆ ನಡೆದಿದೆ” ಎಂದು ಭಾಸ್ಕರನ್ ತಿಳಿಸಿದ್ದಾರೆ!!

ಈಗಾಗಲೇ ಟಿಪ್ಪು ಸುಲ್ತಾನನ್ನು ಸ್ವಾತಂತ್ರ್ಯಗಾರನೆಂದು ಬಿಂಬಿಸಿ ಆತನನ್ನು ಹೊಗಳಿ ಅಟ್ಟಕ್ಕೇರಿಸಿರುವ ಬುದ್ದಿಜೀವಿಗಳೂ ಆತನ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಟಿಪ್ಪು ಕೆಲ ದೇವಾಲಯಕ್ಕೆ ಕಾಣಿಕೆ ಕೊಟ್ಟ ಎಂಬ ಕಾರಣಕ್ಕೆ ಆತ ಸೌಹಾರ್ದ ಸಾರ್ವ ಭೌಮನಾಗಲಾರ, ಏಕೆಂದರೆ ದಕ್ಷಿಣ ಭಾರತದ ಸುಮಾರು 8000 ದೇವಾಲಯಗಳನ್ನು ನಾಶ ಮಾಡಿದ್ದ ಎನ್ನುವುದನ್ನು ಲೂಯಿ ರೈಸ್ ತನ್ನ ಮೈಸೂರ್ ಗಸೇಟೀರ್ ಎಂಬ ಪುಸ್ತಕದಲ್ಲಿ ಸವಿಸ್ತಾರವಾಗಿ ಉಲ್ಲೇಖ ಮಾಡಿದ್ದಾನೆ. ಅಷ್ಟೇ ಯಾಕೆ, ಟಿಪ್ಪುವಿನ ಕಾಟ ತಡೆಯಲಾರದೆ ಗುರುವಾಯುರು ದೇಗುಲದ ಮೂರ್ತಿಗಳನ್ನು ಅಂಬಲಪ್ಪುರಕ್ಕೆ ಸಾಗಿಸಲಾಯ್ತು ಎಂಬುವುದು ಉಲ್ಲೇಖವಾಗಿದೆ. ಟಿಪ್ಪುನ ಬಗೆಗಿರುವ ಈ ವಿಚಾರಗಳೇ ಆತನ ಕ್ರೂರ ತನಕ್ಕೆ ಸಾಕ್ಷಿಯಾಗಿ ನಿಂತಿರಬೇಕಾದರೆ ಆತ ಅದು ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗಬಲ್ಲನೋ ನಾ ಕಾಣೆ!!

ಮೂಲ :  http://vijayavani.net/looks-like-a-rockstone-and-hanuman-shrine/

– ಅಲೋಖಾ

Tags

Related Articles

Close