ಪ್ರಚಲಿತ

‘ಲವ್ ಜಿಹಾದ್’: ಹಿಂದೂ ಹೆಣ್ಮಕ್ಕಳೇ ಜಾಗೃತರಾಗಿ

ಅದು ಯಾವ ಮಾಯೆಯೋ ಗೊತ್ತಿಲ್ಲ. ಹದಿಹರೆಯದಲ್ಲಿ ಕೆಲ ಹಿಂದೂ ಹೆಣ್ಮಕ್ಕಳಿಗೆ ಮುಸ್ಲಿಂ ಹುಡುಗರ ಮೇಲೆ ಇನ್ನಿಲ್ಲದ ಪ್ರೀತಿ ಉಕ್ಕಿ ಹರಿಯುತ್ತದೆ. ಹೆತ್ತವರು, ಸಾಕಿ ಸಲ ಹಿ ದವರು, ಒಡಹುಟ್ಟಿದವರನ್ನೂ ಬಿಟ್ಟು ಮುಸ್ಲಿಂ ಜಿಹಾದಿಗಳ ಹಿಂದೆ ನಡೆಯುವ ಹಲವು ಹಿಂದೂ ಹೆಣ್ಮಕ್ಕಳ ಕಥೆಯನ್ನು ನಾವು ಮಾಧ್ಯಮಗಳಲ್ಲಿಯೂ, ಕೆಲವೊಮ್ಮೆ ನಮ್ಮ ಸುತ್ತಮುತ್ತಲಲ್ಲಿಯೂ ಕಾಣುತ್ತೇವೆ.

ಇದು ಧಾರವಾಡದಲ್ಲಿ ನಡೆದ ಕಥೆ. ಹಿಂದೂ ಯುವತಿಯರನ್ನು ಮದುವೆಯಾಗಲು ಮುಸ್ಲಿಂ ಯುವಕರು ಸಿದ್ಧತೆ ನಡೆಸಿದ್ದು, ರಿಜಿಸ್ಟ್ರಾರ್ ಆಫೀಸಿನ ನೊಟೀಸ್ ಬೋರ್ಡ್‌ನಲ್ಲಿಯೂ ಈ ಅನ್ಯ ಮತೀಯ ವಿವಾಹ ರಾರಾಜಿಸಲಾರಂಭಿಸಿತ್ತು. ಈ ವಿಚಾರ ಹಿಂದೂ ಸಂಘಟನೆ ಬಜರಂಗದಳದ ಗಮನಕ್ಕೆ ಬಂದಿದ್ದು, ಸದ್ಯ ಈ ಲವ್ ಜಿಹಾದ್ ಅನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಹುಡುಗಿಯರ ಮನೆಯವರ ಮನವೊಲಿಕೆ ಮಾಡುವಲ್ಲಿಯೂ ಸಫಲರಾಗಿದ್ದಾರೆ.

ಲವ್ ಜಿಹಾದ್‌ಗೆ ತುತ್ತಾಗಲಿದ್ದ ಈ ಇಬ್ಬರು ಯುವತಿಯರಿಗೂ ಸದ್ಯ ಕೌನ್ಸಲಿಂಗ್ ನಡೆಯುತ್ತಿದೆ. ಯುವಕ, ಯುವತಿಯರು ಧಾರವಾಡ ಮೂಲದವರೇ ಆಗಿದ್ದು, ಸದ್ಯ ಜಿಹಾದಿ ಯುವಕರ ಕೈಯಿಂದ ಈ ಹುಡುಗಿಯರನ್ನು ಪಾರು ಮಾಡಲಾಗಿದೆ.

ಲವ್ ಜಿಹಾದ್‌ಗೆ ತುತ್ತಾಗಿ ಹತ್ಯೆಯಾಗುತ್ತಿರುವ, ಮತಾಂತರವಾಗುತ್ತಿರುವ, ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಳ್ಳುತ್ತಿರುವ ಯುವತಿಯರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದರೂ, ಈ ಬಗ್ಗೆ ಕೆಲವು ಹಿಂದೂ ಯುವತಿಯರು ಎಚ್ಚೆತ್ತುಕೊಳ್ಳದೇ ಇರುವುದು ನಿಜಕ್ಕೂ ದುರಂತ. ಅಲ್ಲದೆ ಲವ್ ಜಿಹಾದ್ ಸೇರಿದಂತೆ ಇನ್ನಿತರ ಜಿಹಾದಿಗಳಿಗೆ ತುತ್ತಾಗಿ ಬದುಕು ಕಳೆದುಕೊಂಡವರ ನೈಜ ಜೀವನವನ್ನು ಆಧರಿಸಿ ಸಾಕ್ಷ್ಯಚಿತ್ರಗಳು ಬರುತ್ತಿದ್ದರೂ, ಕೆಲ ಹಿಂದೂಗಳಿಗೆ ಇನ್ನೂ ಜ್ಞಾನೋದಯವಾಗದೇ ಇರುವುದು ದುರಂತವೇ ಸರಿ.

ಹಿಂದೂ ಸಮಾಜ, ಹಿಂದೂ ಸಂಘಟನೆಗಳು ಸಹ ಹಿಂದೂ ಸಮುದಾಯವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದರು, ನಮ್ಮವರು ಎಚ್ಚೆತ್ತುಕೊಳ್ಳದೇ ಇರುವುದು ಬೇಸರದ ಸಂಗತಿ. ಇನ್ನಾದರೂ ನಮ್ಮ ಹಿಂದೂ ಸಮುದಾಯದ ಜಿಹಾದಿಗಳ ಬಲೆಗೆ ಬಿದ್ದ ಹೆಣ್ಮಕ್ಕಳಲ್ಲಿ ಜಾಗೃತಿ ಮೂಡಲಿ ಎಂಬ ಆಶಯ ನಮ್ಮದು.

Tags

Related Articles

Close