ಪ್ರಚಲಿತ

ಆಕಾಶ-ಭೂಮಿ-ಸಾಗರದಾಳದಲ್ಲೂ ಸನಾತನ ಭಾರತದ ಕುರುಹುಗಳು!! ಹಿಮಚ್ಚಾದಿತ ಅಂಟಾರ್ಕ್ಟಿಕಾದ ಪ್ರಾಚೀನ ಸರೋವರದ ಅಡಿಯಲ್ಲಿ ಕಂಡುಬಂದಿದೆ ಬೃಹದಾಕಾರದ ಸ್ವಸ್ತಿಕ!!

ಭಾರತ ಮತ್ತು ಸನಾತನ ಧರ್ಮ ಆತ್ಮ ಮತ್ತು ದೇಹವಿದ್ದಂತೆ. ಒಂದರಿಂದ ಇನ್ನೊಂದನ್ನು ಬೇರ್ಪಡಿಸುವುದು ಸಾಧ್ಯವೆ ಇಲ್ಲ. ಭಾರತೀಯ ಸನಾತನ ಪರಂಪರೆಯಲ್ಲಿ ಸ್ವಸ್ತಿಕ ಚಿಹ್ನೆಗೆ ಬಹಳ ಮಹತ್ವ ಇದೆ. ಅಚಲ ಸೂರ್ಯನ ಸುತ್ತ ಸುತ್ತುವ ಗ್ರಹಗಳನ್ನು ಪ್ರತಿನಿಧಿಸುವಂತಿರುವ ಸ್ವಸ್ತಿಕ ಚಿಹ್ನೆಯನ್ನು ಉಪಯೋಗಿಸದ ಹಿಂದೂಗಳೆ ಇಲ್ಲ. ಭಾರತದ ಪ್ರತಿ ಸನಾತನಿಯ ಮನೆಯಲ್ಲಿಯೂ ಕಾಣಿಸಿಕೊಳ್ಳುವ ಇಂತಹದೆ ಒಂದು ಸ್ವಸ್ತಿಕ ದೂರದ ಅಂಟಾರ್ಕ್ಟಿಕ್ ಖಂಡದ ಪ್ರಾಚೀನ ಸರೋವರದ ಅಡಿಯಲ್ಲಿ ಕಂಡುಬಂದಿದೆ ಎಂದರೆ, ಸನಾತನ ಧರ್ಮ ಅಂಟಾರ್ಕ್ಟಿಕ್ ಖಂಡದವರೆಗೂ ಹಬ್ಬಿತ್ತು ಎನ್ನುವುದು ಸಾಬೀತಾಗುತ್ತದೆ.

ರಷ್ಯನ್ ವೈಜ್ಞಾನಿಕ ತಂಡವು ಅಂಟಾರ್ಕ್ಟಿಕ್ ಖಂಡದ ಮೇಲೆ ವಿಶ್ವದ ಅತಿದೊಡ್ಡ ಮುಳುಗಿದ ವಸ್ತೋಕ್ ಸರೋವರದೊಳಗೆ ಯಶಸ್ವಿಯಾಗಿ 3,768 ಮೀಟರುಗಳಷ್ಟು ಆಳಕ್ಕೆ ಕೊರೆದಾಗ ಅವರಿಗೊಂದು ಆಘಾತಕಾರಿ ವಸ್ತು ಕಾಣಿಸಿಕೊಳ್ಳುತ್ತದೆ. ನೀರಿನೊಳಗೆ ಕ್ಯಾಮರಾ ಕಣ್ಣುಗಳಿಗೆ 20 ದಶಲಕ್ಷ ವರ್ಷಗಳಿಗೂ ಹೆಚ್ಚು ಸಮಯದಿಂದಲೂ ಮುಳುಗಿರಬಹುದಾದ “ಬಂಗಾರದಂತಹ ಸ್ವಸ್ತಿಕ” ದಂತಹ ಚಿಹ್ನೆ ಕಾಣಸಿಗುತ್ತದೆ. ಈ ಸ್ವಸ್ತಿಕ ಕನಿಷ್ಟ 100 ಮೀಟರ್ ಎತ್ತರ ಮತ್ತು ಅಗಲ ಇರಬಹುದೆಂದು ಅಂದಾಜಿಸಲಾಗಿದೆ!

ಬರೋಬ್ಬರಿ ಇಪ್ಪತ್ತು ವರ್ಷಗಳ ಕಾಲ ಈ ಹಿಮವನ್ನು ಕೊರೆದು ಸಿಹಿನೀರಿನ ಸರೋವರದ ಮೇಲ್ಮೈ ತಲುಪಲಾಗಿತ್ತು. ಹಿಮದೊಳಗೆ ಮುಳುಗಿದ್ದ ಈ ಸರೋವರದೊಳಗೆ ದೈತ್ಯ ಗಾತ್ರದ ಸ್ವಸ್ತಿಕ ಪತ್ತೆಯಾಗಿತ್ತು. ಈ ಸರೋವರ 20 ಮಿಲಿಯನ್ ವರ್ಷಗಳಿಂದ ಹಿಮಚ್ಚಾದಿತವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗಾದರೆ 20 ಮಿಲಿಯನ್ ವರ್ಷಗಳ ಹಿಂದೆ ಇಲ್ಲಿ ಜನರು ವಾಸವಾಗುತ್ತಿದ್ದರೆ? ವೊಸ್ತೋಕ್ ಸರೋವರದೊಳಗೆ ಸ್ವಸ್ತಿಕದ ಚಿಹ್ನೆ ದೊರೆತಿರುವುದು ಈ ವಾದಕ್ಕೆ ಪುಷ್ಟಿ ಕೊಡುತ್ತಿದೆ. ಪುರಾಣಗಳ ಪ್ರಕಾರ ಶಿವನ ಪ್ರಕೋಪದಿಂದ ಪಾರಾಗಲು ದಾಕ್ಷಾಯಣಿಯ ತಂದೆ ದಕ್ಷ ದಕ್ಷಿಣ ಧ್ರುವದಲ್ಲಿ ಅಡಗಿದ್ದನೆಂದು ಹೇಳಲಾಗುತ್ತದೆ. ಗುಜರಾತಿನ ಸೋಮನಾಥ ದೇವಾಲಯದಲ್ಲಿ ಬಾಣ ಸ್ತಂಭದ ಮೂಲಕ ದಕ್ಷಿಣ ಧ್ರುವದವೆರೆಗಿನ ಜ್ಯೋತಿರ್ಮಾರ್ಗವನ್ನು ತೋರಿಸಲಾಗಿದೆ!

ಹಾಗಾದರೆ ಈ ಬಾಣ ಸ್ಥಂಭಕ್ಕೂ ಅಂಟಾರ್ಕ್ಟಿಕ್ ಖಂಡಕ್ಕೂ ಅಲ್ಲಿ ಸರೋವರದೊಳಗೆ ಮುಳುಗಿರುವ ಬಂಗಾರದಂತಹ ಸ್ವಸ್ತಿಕಕ್ಕೂ ಸಂಬಂಧ ಇರಬಹುದೆ? ಕೆಲವು ವಿಜ್ಞಾನಿಗಳು ಇದು ಅನ್ಯಗ್ರಹ ಜೀವಿಗಳ UFOಗಳನ್ನು ಇಳಿಸುವ ನಿಲ್ದಾಣಗಳಾಗಿರಬಹುದು ಎಂದು ಅಂದಾಜಿಸುತ್ತಾರೆ. ಏಕೆಂದರೆ ಗೂಗಲ್ ಮ್ಯಾಪ್ ಮೂಲಕ ನೋಡಿದಾಗ ಅಂಟಾರ್ಕ್ಟಿಕ್ ಹಿಮದ ಅಡಿಯಲ್ಲಿ ಪ್ರಾಕೃತಿಕವಲ್ಲದ 3 ಕಿಲೋ ಮೀಟರುಗಳಷ್ಟು ಬೃಹತ್ತಾದ 3 ರೇಖೆಗಳು ಕಾಣಿಸುತ್ತವೆ ಎನ್ನಲಾಗಿದೆ. ಇದು ಮಾನವ ನಿರ್ಮಿತ ರೇಖೆ ಇರಬಹುದು ಎನ್ನುವುದು ವಿಜ್ಞಾನಿಗಳ ಅಂಬೋಣ.

卐 ಅಥವಾ 卍 ಭಾರತೀಯ ಉಪ ದ್ವೀಪದಲ್ಲಿ ಹುಟ್ಟಿದಂತಹ ಒಂದು ಧಾರ್ಮಿಕ ಚಿನ್ಹೆ. ಸ್ವಸ್ತಿಕ ಪ್ರಪಂಚದ ಅತ್ಯಂತ ಹಳೆಯ ಸಂಕೇತವಾಗಿದೆ, ಬಹುಶ ಹಿಮ ಯುಗದ ಕಾಲದಿಂದಲೂ ಈ ಚಿನ್ಹೆ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಭಾರತೀಯ ಸನಾತನ ಧರ್ಮದಲ್ಲಿ ಶಾಂತಿ ಮತ್ತು ನಿರಂತರತೆಯ ಪ್ರತೀಕವಾಗಿ ಪೂಜಿಸಲ್ಪಡುತ್ತದೆ ಸ್ವಸ್ತಿಕದ ಚಿಹ್ನೆ. ಮಿಲಿಯಾಂತರ ವರ್ಷಗಳ ಹಿಂದೆ ದಕ್ಷಿಣ ಧ್ರುವದಲ್ಲಿ ದೇವಾನುದೇವತೆಗಳು ವಾಸಿಸಿರಬಹುದೆ? ಪುರಾಣ ಬಲ್ಲವರ ಪ್ರಕಾರ ಋಗ್ವೇದದ ಉತ್ಪತ್ತಿ ಆದದ್ದು ಉತ್ತರ ಧ್ರುವದಲ್ಲಿ ಅಂದರೆ ಈಗಿನ ಆರ್ಕಟಿಕ್ ಖಂಡದ ಆಸುಪಾಸಿನಲ್ಲಿ. ಈಗಿನ ರಷ್ಯಾವನ್ನು ಆ ಕಾಲದಲ್ಲಿ ಋಷಿ ವರ್ಷ ಎನ್ನಲಾಗುತ್ತಿತ್ತು. ಅಂದರೆ ಋಷಿಗಳು ವಾಸಿಸುವ ಸ್ಥಳ! ಹಾಗಾದರೆ ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೂ ಸನಾತನ ಧರ್ಮ ಪಸರಿಸಿತ್ತು!

2002ರಲ್ಲಿ ಅಂಟಾರ್ಕ್ಟಿಕಾದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಕ್ಯಾಲೀಫೋರ್ನಿಯಾದ ಟಿವಿಯ ತಂಡವೊಂದು ಕಾಣೆಯಾಗುತ್ತದೆ. ಅವರನ್ನು ಹುಡುಕಿಕೊಂಡು ಹೋದ ಅಮೇರಿಕಾದ ನೌಕಾ ಪಡೆಗೆ ಒಂದು ಟೇಪ್ ದೊರಕುತ್ತದೆ ಮತ್ತು ಅದರಲ್ಲಿ 3,200 ಮೀಟರ್ ಕೆಳಗಡೆ ಅಂಟಾರ್ಕ್ಟಿಕ್ ಹಿಮದ ಅಡಿಯಲ್ಲಿ ಪುರಾತನ ನಗರದ ಅವಶೇಷಗಳು ಕಂಡುಬಂದಿರುವ ಚಿತ್ರಗಳನ್ನು ಚಿತ್ರೀಕರಿಸಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ಅಮೇರಿಕಾದ ಸರಕಾರ ಆ ವೀಡಿಯೋದ ಪ್ರಸಾರಣವನ್ನು ತಡೆಗಟ್ಟುತ್ತದೆ. ಮಾತ್ರವಲ್ಲ ಆ ಟಿವಿ ತಂಡದಲ್ಲಿದ್ದ ಜನರು ಏನಾದರೆಂದು ಕಡೆಗೂ ಪತ್ತೆ ಹಚ್ಚಲಾಗಲಿಲ್ಲ! ಹಾಗಾದರೆ ಅಮೇರಿಕಾ ಜಗತ್ತಿನಿಂದ ಏನನ್ನು ಮುಚ್ಚಿಡುತ್ತಿದೆ?

ಅಮೇರಿಕಾ ಮತ್ತು ರಷ್ಯಾಗಳು ಜಗತ್ತಿನಾದ್ಯಂತ ಹಲವಾರು ಉತ್ಖನನ ಕಾರ್ಯಗಳನ್ನು ನಡೆಸುತ್ತಿದೆ. ಎಲ್ಲೆಲ್ಲಾ ಉತ್ಖನನ ನಡೆದಿವೆಯೋ ಅಲ್ಲೆಲ್ಲಾ ಭಾರತದ ಸನಾತನ ಧರ್ಮಕ್ಕೆ ಸಂಬಂಧ ಪಟ್ಟ ಕುರುಹುಗಳು ಎಲ್ಲಾ ಕಡೆಯಿಂದಲೂ ದೊರೆಯುತ್ತಿವೆ. ಆದರೆ ಈ ದೇಶಗಳು ಸತ್ಯವನ್ನು ಜಗತ್ತಿನಿಂದ ಮರೆ ಮಾಚಿ ಇಡುತ್ತವೆ. ಏಕೆಂದರೆ ಸತ್ಯ ಹೊರ ಬಂದರೆ ಭಾರತವೆ ಸರ್ವ ನಾಗರಿಕತೆಗೂ ತೊಟ್ಟಿಲು ಎನ್ನುವುದು ಸಾಬೀತಾಗುತ್ತದೆ ಮತ್ತು ಏಸು-ಅಲ್ಲಾಗಳು ಈ ಜಗತ್ತನ್ನು ಸೃಷ್ಟಿಸಿದ್ದು ಎನ್ನುವ ಬುರುಡೆ ಒಡೆದು ವೆಟಿಕನ್- ಮಕ್ಕಾಗಳು ದಿವಾಳಿ ಏಳುತ್ತವೆ. ಆದ್ದರಿಂದ ಜಗತ್ತಿನಾದ್ಯಂತ ಸನಾತನ ಧರ್ಮಕ್ಕೆ ಸಂಬಂಧ ಪಟ್ಟ ಸಾಕ್ಷ್ಯಗಳು ದೊರಕುತ್ತಿದ್ದರೂ ಅವುಗಳು ತುಟಿಪಿಟಿಕ್ ಎನ್ನುತ್ತಿಲ್ಲ.

ಭಾರತದಲ್ಲಿ ನಮ್ಮ ವೇದ-ಪುರಾಣಗಳು ಹೇಳಿದ್ದನ್ನು ಜನರು ನಂಬುವುದಿಲ್ಲ ಆದರೆ ಅಮೇರಿಕಾ-ರಷ್ಯಾ, ನಾಸಾ-ಪಾಸಾಗಳು ಹೇಳಿದರೆ ಸತ್ಯವೆಂದು ನಂಬುವ ಜನರು ಅನೇಕರಿದ್ದಾರೆ. ಈ ಶೋಧನೆಗಳನ್ನು ಅಮೇರಿಕಾ-ರಷ್ಯಾಗಳೆ ಮಾಡಿರುವುದರಿಂದ ಇದನ್ನಾದರೂ ನಂಬಬಹುದು. ಅಂಗೈ ನೋಡಲು ಕನ್ನಡಿ ಬೇಡ. ಸನಾತನ ಭಾರತ ಸರ್ವ ಜನಾಂಗದ ಜನನಿ ಇದು ಸತ್ಯ. ನಂಬದವರಿಗೆ ಮಾತ್ರ ಬೇಕು ಸಾಕ್ಷ್ಯ. ಈಗ ಅದೂ ಕೂಡಾ ದೊರೆಯುತ್ತಿದೆ. ಇನ್ನಾದರೂ ನಂಬುತ್ತೀರಾ?

-ಶಾರ್ವರಿ

Tags

Related Articles

Close