ಪ್ರಚಲಿತ

ಸ್ಫೋಟಕ ಸುದ್ಧಿ! ಮೈತ್ರಿ ಸರಕಾರ ಬೀಳಿಸಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್.! ಯಾರೂ ಊಹಿಸದ ರೀತಿಯಲ್ಲಿ ಗೇಮ್ ಪ್ಲಾನ್ ಆರಂಭಿಸಿದ ಮಾಜಿ ಸಿಎಂ.!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಷ್ಟು ಚಾಪ್ಟರ್ ಎಂದರೆ ಅಧಿಕಾರದ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಸರ್ವಾಧಿಕಾರದ ಆಡಳಿತ ನಡೆಸಿ ಯಾರೊಬ್ಬರನ್ನೂ ಕ್ಯಾರೇ ಅನ್ನುತ್ತಿರಲಿಲ್ಲ. ಒಂದರ್ಥದಲ್ಲಿ ಹೇಳುವುದಾದರೆ ಸಿದ್ದರಾಮಯ್ಯನವರು ಛಲಗಾರ ಎಂದರೆ ತಪ್ಪಾಗದು. ಯಾಕೆಂದರೆ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದರಲ್ಲಿ ಹೀನಾಯವಾಗಿ ಸೋಲುಂಡು ಇನ್ನೊಂದೆಡೆ ಅಲ್ಪ ಅಂತರದ ಮತಗಳಿಂದ ಗೆದ್ದಿದ್ದರು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಇದೀಗ ಕೇವಲ ಶಾಸಕರಷ್ಟೇ. ಆದರೆ ತಮ್ಮ ದರ್ಪ ಮಾತ್ರ ಕಡಿಮೆ ಮಾಡಿಕೊಂಡಿಲ್ಲ, ಯಾಕೆಂದರೆ ಕುಮಾರಸ್ವಾಮಿ ನೇತ್ರತ್ವದ ಮೈತ್ರಿ ಸರಕಾರವನ್ನೇ ಉರುಳಿಸಲು ಸಿದ್ದರಾಮಯ್ಯನವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ಕುಮಾರಸ್ವಾಮಿ ಅವರ ವಿರುದ್ಧ ಸೇಡುತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.!

ಯಾಕೆಂದರೆ ಧರ್ಮಸ್ಥಳದ ಶಾಂತಿವನದಲ್ಲಿ ಆರೋಗ್ಯ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು ಮೈತ್ರಿ ಸರಕಾರದ ಬಗ್ಗೆ ಅಸಮಧಾನ ಹೊರ ಹಾಕುತ್ತಲೇ ಇದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ವೈಮನಸ್ಸು ಹೊಂದಿರುವ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದೇ ಇಷ್ಟವಿರಲಿಲ್ಲ. ಆದರೆ ಹೈಕಮಾಂಡ್ ಒತ್ತಡಕ್ಕೆ ಮಣಿದು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದರು. ಆದರೆ ಇದೀಗ ಮತ್ತೆ ಸೆಟೆದು ನಿಂತಿರುವ ಸಿದ್ದರಾಮಯ್ಯನವರು ತೆರೆಮರೆಯಲ್ಲೇ ಗೌಪ್ಯವಾಗಿ ಸಭೆ ನಡೆಸಿ ಸರಕಾರ ಉರುಳಿಸುವ ತಂತ್ರ ಹೂಡುತ್ತಿದ್ದಾರೆ.!

ಅತೃಪ್ತ ಶಾಸಕರ ಜೊತೆ ಸಿದ್ದು ಗೌಪ್ಯ ಸಭೆ..!

ಈಗಾಗಲೇ ಕುಮಾರಸ್ವಾಮಿ ಅವರ ಜೊತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು ಇದೀಗ ಸಿದ್ದರಾಮಯ್ಯನವರ ಜೊತೆ ಸೇರಿಕೊಂಡು ರಾಜ್ಯ ಸರಕಾರದ ವಿರುದ್ಧ ಕತ್ತಿಮಸೆಯಲು ಆರಂಭಿಸಿದ್ದಾರೆ. ಯಾಕೆಂದರೆ ಮೈತ್ರಿ ಸರಕಾರ ಸಿದ್ದರಾಮಯ್ಯನವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ಕೆಲ ಶಾಸಕರು, ಧರ್ಮಸ್ಥಳದ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯನವರ ಜೊತೆ ಇದೀಗ ಸಭೆ ಮುಗಿಸಿದ್ದಾರೆ. ಸುಮಾರು ೨೦ ನಿಮಿಷಗಳ ಕಾಲ ಮಾತೂಕತೆ ನಡೆಸಿರುವ ಅತೃಪ್ತ ಶಾಸಕರು, ಸಿದ್ದರಾಮಯ್ಯನವರು ಮೈತ್ರಿ ಸರಕಾರದ ಪ್ರಮುಖ ವ್ಯಕ್ತಿ. ಅವರನ್ನು ಕಡೆಗಣಿಸಿದರೆ ಸರಕಾರವ ಉರುಳುವುದು ಗ್ಯಾರಂಟಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ಕಾಂಗ್ರೆಸ್ ಶಾಸಕ ಮತ್ತು ಸಿದ್ದರಾಮಯ್ಯನವರ ಆಪ್ತರಾಗಿರುವಂತಹ ರಮೇಶ್ ಜಾರಕಿಹೊಳಿ ಅವರು ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಅದೇ ರೀತಿ ಶಾಸಕ ನಾರಾಯಣ ಅವರೂ ಕೂಡ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡಿದ್ದು, ಮೈತ್ರಿ ಸರಕಾರ ಉಳಿಯಬೇಕಾದರೆ ಸಿದ್ದರಾಮಯ್ಯನವರ ಸಹಾಯ ಬೇಕು. ಸಿದ್ದರಾಮಯ್ಯನವರನ್ನು ಮೈತ್ರಿ ಸರಕಾರ ಮೂಲೆಗುಂಪು ಮಾಡುವ ಪ್ರಯತ್ನ ನಡೆಸುತ್ತಿದೆ. ಆದರೆ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಿದರೆ ಸರಕಾರ ಉರುಳಿಸಲು ನಮಗೂ ಗೊತ್ತು ಎಂದು ನೇರವಾಗಿ ಸಮ್ಮಿಶ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸಿದ್ದರಾಮಯ್ಯನವರು ಸರಕಾರದಲ್ಲಿ ಮೂಲೆಗುಂಪಾಗುತ್ತಿದ್ದಂತೆ ತಮ್ಮ ಬೆಂಬಲಿತ ಶಾಸಕರನ್ನು ಒಟ್ಟುಗೂಡಿಸಿ ಭಾರೀ ತಂತ್ರ ರೂಪಿಸುತ್ತಿದ್ದಾರೆ ಎಂಬುದು ಸತ್ಯ..!

ಬಜೆಟ್ ಮಂಡನೆ ವಿಚಾರದಲ್ಲಿ ಈಗಾಗಲೇ ಸಿದ್ದರಾಮಯ್ಯನವರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದು ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳಲ್ಲಿ ಆತಂಕ ಉಂಟುಮಾಡಿದೆ. ಇದೀಗ ಅದರ ಬೆನ್ನಲ್ಲೇ ಸಿದ್ದರಾಮಯ್ಯನವರು ಅತೃಪ್ತ ಶಾಸಕರನ್ನು ಸೇರಿಸಿಕೊಂಡು ಸಭೆ ನಡೆಸಿರುವುದು ಮತ್ತಷ್ಟು ಕುತೂಹಲ ಕೆರಳುವಂತೆ ಮಾಡಿದೆ.!

–ಅರ್ಜುನ್

Tags

Related Articles

Close