ಪ್ರಚಲಿತ

ಉಗ್ರರ ದಮನಕ್ಕೆ ಭಾರತೀಯ ಸೇನೆಯಿಂದ ಬಂಕರ್ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್!! ಈ ಬಾರಿ ಉಡೀಸ್ ಆಗುತ್ತಾ ಪಾಕ್!!

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಉಗ್ರದಮನಕ್ಕಾಗಿ  ಭದ್ರತಾಪಡೆಗಳನ್ನು ಅಭಿವೃದ್ಧಿಪಡಿಸುತ್ತನೇ ಬರುತ್ತಿದ್ದಾರೆ!! ಒಂದು ಕಡೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಪ್ರಧಾನಿ ನರೇಂದ್ರ ಮೋದಿ…. ಮತ್ತೊಂದು ಕಡೆ ಭಾರತವನ್ನು ರಕ್ಷಿಸಲು ಸರ್ವ ರೀತಿಯಲ್ಲಿ ಸನ್ನದ್ಧವಾಗಿರುವ ಸೇನೆ.. ಅದಕ್ಕೊಬ್ಬ ಉತ್ಸಾಹಿ ಸೇನಾಧಿಕಾರಿ ಬಿಪಿನ್ ರಾವತ್.. ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಿದ ಭಾರತ ಅತ್ತ ಪಾಕ್ ಪ್ರೇರಿತ ಭಯೋತ್ಪಾದನೆಗೂ ತಕ್ಕ ಮದ್ದು ಅರೆಯುತ್ತಿದೆ. ಆದರೂ ಉಗ್ರರ ಉಪಟಳ ಜಾಸ್ತಿಯಾಗುತ್ತನೇ ಬರುತ್ತಿದೆ!! ರಂಜಾನ್ ಮಾಸ ಹಾಗೂ ಅಮರನಾಥ ಯಾತ್ರೆ ವೇಳೆ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು ಉಗ್ರ ನಿಗ್ರಹ ಕಾರ್ಯಾಚರಣೆ ಸ್ಥಗಿತಕ್ಕೆ ಆಗ್ರಹಿಸಿ ಜಮ್ಮು- ಕಾಶ್ಮೀರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಷರತ್ತು ಬದ್ಧ ಸಮ್ಮತಿ ನೀಡಿತ್ತು!! ಆದರೂ ಅದನ್ನು ಮೀರಿಯೂ ಉಗ್ರರು ಭಾರತದ ವಿರುದ್ಧ ನರಿ ಬುದ್ಧಿಯನ್ನು ತೋರಿಸಿದ್ದಾರೆ!! ಇದಾಗಲೇ  ಶತ್ರು ರಾಷ್ಟ್ರವನ್ನು ಮಣಿಸಲು ಭಾರತ ಅನೇಕ ಉಪಾಯಗಳನ್ನು ಮಾಡಿತ್ತಾದರೂ ಉಗ್ರರು ಮಾತ್ರ ತನ್ನ ಹಳೇ ಛಾಳಿಯನ್ನು ಬಿಡಲು ಒಪ್ಪುತ್ತಿಲ್ಲ!! ಇತ್ತೀಚೆಗೆ ಜಮ್ಮು- ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ಉಪಟಳ ಜಾಸ್ತಿಯಾಗುತ್ತನೇ ಇದೆ!!

ಗಡಿಯಲ್ಲಿ ಶಾಂತಿ ಕಾಪಾಡಬೇಕೆಂದರೆ ಉಗ್ರರ ಗಡಿ ನುಸುಳುವಿಕೆ ನಿಲ್ಲಿಸಿ ಎಂದು ಭಾರತೀಯ ಸೇನಾ ಮುಖ್ಯಸ್ಥ  ಜನರಲ್  ಬಿಪಿನ್ ರಾವತ್ ಪಾಕಿಸ್ಥಾನಕ್ಕೆ ಖಡಕ್ಕಾಗಿಯೇ ಎಚ್ಚರಿಕೆ ನೀಡಿದ್ದರು!! ಗಡಿಯಲ್ಲಿ ಶಾಂತಿ ನೆಲೆಸಲು ನಾವು ಇಚ್ಚಿಸಿದರೂ , ಪಾಕಿಸ್ಥಾನ ಕದನ ವಿರಾಮ ಉಲ್ಲಂಘಸಿರುವುದನ್ನು ಮುಂದುವರೆಸಿದೆ. ಇದರಿಂದ ಅನೇಕರು ಜೀವ ಕಳೆದುಕೊಳ್ಳುವಂತಾಯಿತು. ಅಪಾರ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ. ದಾಳಿ  ನಡೆಸಿದರೆ ನಾವು ಕೂಡಾ ಪ್ರತಿ ದಾಳಿ ನಡೆಸಬೇಕಾಗುತ್ತದೆ. ಪಾಕಿಸ್ಥಾನಕ್ಕೆ ಶಾಂತಿ ಬೇಕಾದರೆ ಮೊದಲು ತನ್ನ ಕುತಂತ್ರ ನೀತಿಗಳನ್ನು ನಿಲ್ಲಿಸಲಿ ಎಂದು ಭಾರತ ಹೇಳಿತ್ತಾದರೂ ಅದನ್ನು ಮೀರಿಯು ಮತ್ತೆ ಉಗ್ರರ ಅಟ್ಟಹಾಸ ಮೆರೆದಿದ್ದರು!!

Image result for pakistani terrorists

ಮಾತ್ರವಲ್ಲೆದೆ ರಂಜಾನ್ ಮಾಸದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ನಿಲ್ಲಿಸಿ ಎಂದು ಕೇಂದ್ರ ಸರ್ಕಾರ ಸೂಚಿಸಿದ್ದು ಉಗ್ರರು ತನ್ನ ಹಳೇ ಛಾಳಿಯನ್ನು ಬಿಡದ ಕಾರಣ ಭದ್ರತಾ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಕೇಂದ್ರ ಸರ್ಕಾರ ರಂಜಾನ್ ಮಾಸದಂದೇ 5 ಉಗ್ರರನ್ನು ಪಾಪಿಗಳ ಲೋಕಕ್ಕೆ ಅಟ್ಟಿತ್ತು!! ಇದು ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ನೀಡಿರುವ ಗಿಫ್ಟ್ ಆದರೆ ಶತ್ರು ರಾಷ್ಟ್ರಗಳಿಗೆ ಇದು ಎಚ್ಚರಿಕೆಯ ಘಂಟೆಯೂ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಭಾರತದ ವಿರುದ್ಧ ಯುದ್ಧಕ್ಕೆ ಕಾಲ್ಕೆದು ಬರುವ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಕಾದಿದೆ!!

5,500 ಸೇನಾ ಬಂಕರ್ ಗಳನ್ನು ನಿರ್ಮಾಣ:

ನಮ್ಮ ಭಾರತೀಯ ಸೇನೆ ಯಾವ ಶತ್ರು ರಾಷ್ಟ್ರಕ್ಕೂ ಹೆದರುವವರಲ್ಲ!! ಶತ್ರುಗಳು ಬಂದರೆ ಹೆದರಿ ಓಡುವವರಲ್ಲ!! ಶತ್ರುಗಳಿಗೆ ಎದೆಯೊಡ್ಡಿ ನಿಂತು ತನ್ನ ಉಸಿರಿನ ಕೊನೆಯ ಕ್ಷಣದ ವರೆಗೂ ಹೋರಾಟ ನಿಲ್ಲಿಸಲ್ಲ!! ಇದೀಗ  ಗಡಿಯಲ್ಲಿ ಭದ್ರತೆ ಹಾಗೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ದೃಷ್ಟಿಯಿಂದ ಜಮ್ಮು-ಕಾಶ್ಮೀರ ಗಡಿಯಲ್ಲಿ ಸುಮಾರು 5,500 ಸೇನಾ ಬಂಕರ್ ಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲ, ಗಡಿ ಭಾಗದಲ್ಲಿ ಉಗ್ರರ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸುವ ದೃಷ್ಟಿಯಿಂದ 200 ಸಮುದಾಯ ಭವನ ಹಾಗೂ ಗಡಿ ಭವನಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಇಡೀ ಯೋಜನೆಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಪೂರ್ಣಗೊಳಿಸುವ ಚಿಂತನೆಯಿದೆ.

Image result for indian soldiers

ಈ ಯೋಜನೆಯ ಜಾರಿಗಾಗಿ ಸುಮಾರು 153 ಕೋಟಿ ರೂಪಾಯಿಗಳ ಅವಶ್ಯಕತೆಯಿದ್ದು, ಈಗಾಗಲೇ  ಕೇಂದ್ರ ಗೃಹ ಸಚಿವಾಲಯ ಹಣ ಮಂಜೂರು ಮಾಡಲು ಒಪ್ಪಿಗೆ ಸೂಚಿಸಿದೆ. ಒಟ್ಟಿನಲ್ಲಿ ಗಡಿಯಲ್ಲಿ ಉಪಟಳ ಮಾಡುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸಜ್ಜಾಗಿರುವುದು ಉತ್ತಮ ಬೆಳವಣಿಗೆಯಾಗಿದೆ!! ಈಗಾಗಲೇ ಶತ್ರುಗಳು ಭಾರತದತ್ತ ಮುಖ ಮಾಡಬೇಕೆಂದರೆ ಸಾವಿರ ಬಾರಿ ಯೋಚನೆ ಮಾಡುತ್ತಾರೆ… ಇದೀಗ ಇಂತಹ ಬಂಕರ್‍ಗಳ ವಿಷಯ ತಿಳಿದಲ್ಲಿ ಖಂಡಿತ ಉಗ್ರರಿಗೆ ಆಘಾತವಾಗುವುದು ಖಂಡಿತ!!

  • ಪವಿತ್ರ
Tags

Related Articles

Close