ಪ್ರಚಲಿತ

ತಮ್ಮ ಸರ್ಕಾರದ ಅವಧಿಯಲ್ಲಿ ಮಕ್ಕಳಿಗೆ ಸೇರಬೇಕಾದ ದಾಸೋಹದ ಸಾಮಾಗ್ರಿ ಪೂರೈಕೆ ನಿಲ್ಲಿಸಿದ್ದನ್ನು, ಯಡಿಯೂರಪ್ಪ ಸರ್ಕಾರದ ಮೇಲೆ ಆರೋಪಿಸಿದರೇ ಮಾಜಿ ಸಚಿವ ಯು ಟಿ ಖಾದರ್??!!

ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋಧಿ ಪೂರೈಕೆಯನ್ನು ಸರ್ಕಾರ ನಿಲ್ಲಿಸಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ನ ಹಿರಿಯ ನಾಯಕರಾದ ಯು ಟಿ ಖಾದರ್ ಆರೋಪಿಸಿದ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಸಚಿವ ಯು.ಟಿ.ಖಾದರ್ ಆರೋಪಕ್ಕೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಶಿಕಲಾ ಜೊಲ್ಲೆ ಅವರು, ನಮ್ಮ ಸರ್ಕಾರ ಬಂದ ಮೇಲೆ ಸಿದ್ದಗಂಗಾ ಮಠಕ್ಕೆ ಅಕ್ಕಿ-ಗೋಧಿ ಪೂರೈಕೆ ನಿಲ್ಲಿಸಿಲ್ಲ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಈ ಪೂರೈಕೆ ನಿಂತಿತ್ತು ಎಂದು ಸ್ಪಷ್ಟ ಪಡಿಸಿದ್ದಾರೆ.

ರಾಜ್ಯದಲ್ಲಿ 464 ಸಂಸ್ಥೆಗಳಿಗೆ ದಾಸೋಹ ಯೋಜನೆ ಜಾರಿಯಲ್ಲಿತ್ತು ಇದರಲ್ಲಿ 183 ಸರ್ಕಾರಿ ಸಂಸ್ಥೆಗಳು. ಉಳಿದ 281 ಖಾಸಗಿ ಸಂಸ್ಥೆಗಳಿಗೆ ಮಾತ್ರ ಅನುದಾನ ನಿಲ್ಲಿಸಲಾಗಿದೆ ಇದರಲ್ಲಿ ಸಿದ್ದಗಂಗಾ ಮಠವೂ ಇದೆ. ಶ್ರೀಗಳು ಹಿಂದೆಯೇ ಪತ್ರ ಬರೆದಿದ್ದರು. ಪತ್ರ ಬಂದ ಬಳಿಕ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರದಿಂದಲೇ ರೇಷನ್ ಕೊಡಲು ನಿರ್ಧರಿಸಿದ್ದೇವೆ ಎಂದು ಶಶಿಕಲಾ ಜೊಳ್ಳೆ ಸ್ಪಷ್ಟಪಡಿಸಿದರು.

ಖಾಸಗಿ ಸಂಸ್ಥೆಗಳ ದಾಸೋಹ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ ಅದಕ್ಕೂ ದಾಸೋಹದ ದುರುಪಯೋಗದ ಆರೋಪ ಕೇಳಿ ಬಂದದ್ದೇ ಕಾರಣ…. ಇದು ಮೂರು ತಿಂಗಳಿನಿಂದ ನಿಲ್ಲಿಸಿರುವುದಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಅನುದಾನ ನಿಲ್ಲಿಸಲಾಗಿತ್ತು.

ಈಗ ಫೈಲ್ ತರಿಸಿಕೊಂಡು ಮತ್ತೆ ರಾಜ್ಯ ಸರ್ಕಾರದಿಂದಲೇ ಅಕ್ಕಿ, ಗೋಧಿ ಪೂರೈಕೆ ಮಾಡುತ್ತೇವೆ. ಖಾಸಗಿ ಸಂಸ್ಥೆಗಳಿಗೆ ಅಕ್ಕಿ, ಗೋದಿ ಪೂರೈಕೆಗೆ 12.50 ಕೋಟಿ ರೂ. ಮಾತ್ರ ಅಗತ್ಯ ಇದೆ. ಈಗಾಗಲೇ ಸಿಎಂ ಜತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅಕ್ಕಿ, ಗೋಧಿ ಪೂರೈಕೆ ಮಾಡುತ್ತೇವೆ ಇದಕ್ಕೆ ವಾರ್ಷಿಕ 12.50 ಕೋಟಿ ರೂ. ಖರ್ಚು ಆಗುತ್ತದೆ. ಈ ಹಣವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸುದ್ಧಿ ಗೋಷ್ಠಿಯಲ್ಲಿ ತಿಳಿಸಿದರು..

ಪ್ರಸಕ್ತ ರಾಜ್ಯ ಸರ್ಕಾರ ಅನ್ನದಾಸೋಹವನ್ನು ಖಾಸಗಿ ಶಾಲೆಗಳಿಗೂ ವಿಸ್ತರಿಸಿದ್ದು ಮುಂದಿನ ಒಂದು ವರ್ಷದವರೆಗೆ ಅಕ್ಕಿ, ಗೋಧಿ ಪೂರೈಸಲು 18 ಕೋಟಿ ಬಿಡುಗಡೆ ಗೊಳಿಸಿದೆ.

Tags

Related Articles

FOR DAILY ALERTS
Close