ಪ್ರಚಲಿತರಾಜಕೀಯರಾಜ್ಯ

ವಿಪಕ್ಷಗಳ ಮೆಚ್ಚುಗೆಗೂ ಕಾರಣವಾದ ಲಿಂಬಾವಳಿ ಕೆಲಸ.! ನೆರೆ ಸಂತ್ರಸ್ತರಿಗೆ ಬರೋಬ್ಬರಿ 42 ಲಕ್ಷ ಹಣ ಹಾಗೂ 12 ಲಾರಿಗಳನ್ನು ಕಳಿಸಿದ ಮಹದೇವಪುರ ಶಾಸಕ.!

ಭೀಕರ ಬರಗಾಲದಿಂದ ಬಳಲುತ್ತಿದ್ದ ಕಾರ್ನಾಟಕದ ಮಂದಿಗೆ ವರುಣ ದೇವ ಮುನಿದು ಬಿಟ್ಟಿದ್ದ. ಉತ್ತರ ಕರ್ನಾಟಕದಲ್ಲಿ ಕಂಡು ಕೇಳರಿಯದ ಮಳೆಯಿಂದಾಗಿ ಜನರ ಜೀವನವೇ ಇಲ್ಲದಂತಾಗಿತ್ತು. ಬಡವ ಬಲ್ಲಿದನೆನ್ನದೆ ಲಕ್ಷಾಂತರ ಜನರ ಜೀವನ ಗಂಜಿಕೇಂದ್ರದಲ್ಲಿ ಸೀಮಿತವಾಗುವಂತೆ ಆಗಿತ್ತು. ಆದರೆ ಈ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಾಗಿದ್ದ ಕೆಲ ರಾಜಕಾರಣಿಗಳು ಕೆಸರೆರೆಚಾಟದಲ್ಲಿ ತೊಡಗಿಕೊಂಡಿದ್ದರು. ಆದರೆ ಬೆಂಗಳೂರಿನ ಮಹದೇವಪುರ ಶಾಸಕರು ಮಾಡಿರುವ ಕೆಲಸಗಳು ಈಗ ವಿಪಕ್ಷಗಳ ಮೆಚ್ಚುಗೆ ಹಾಗೂ ಪ್ರಶಂಸೆಗೂ ಕಾರಣವಾಗಿದೆ.

42 ಲಕ್ಷ ಹಣ ಸಂಗ್ರಹಿಸಿದ ಲಿಂಬಾವಳಿ.!

ಕೆಲ ರಾಜಕಾರಣಿಗಳು ಹಾಗೂ ಜನಪ್ರತಿನಿದಿಗಳು ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ನಡೆಸುತ್ತಿದ್ದರೆ ಕೆಲ ರಾಜಕಾರಣಿಗಳು ಹಾಗೂ ಜನಪ್ರತಿನಿದಿಗಳು ಜನರ ಸಂಕಷ್ಟಕ್ಕೆ ಧಾವಿಸಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದರು. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಮಹದೇವಪುರ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡ ಅರವಿಂದ ಲಿಂಬಾವಳಿ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕೆಲ ರಾಜಕಾರಣಿಗಳನ್ನು ಮಾಧ್ಯಮದಲ್ಲಿ ಬ್ರೇಕಿಂಗ್ ಕೊಡಲಾಗುತ್ತದೆ. ಆದರೆ ಜನಪರ ಸೇವೆ ಮಾಡಿದವರ ಕೆಲಸಗಳು ಮೌನವಾಗಿರುತ್ತದೆ.

ಮಹದೇವಪುರ ಶಾಸಕರಾದ ಅರವಿಂದ ಲಿಂಬಾವಳಿಯವರು ನೆರೆ ಸಂತ್ರಸ್ತರಿಗೆ ತನ್ನ ವಿಧಾನಸಭಾ ಕ್ಷೇತ್ರದಲ್ಲಿ ಹಣಸಂಗ್ರಹಕ್ಕೆ ಮುಂದಾಗಿದ್ದರು. ತನ್ನ ಕ್ಷೇತ್ರದ ಉದ್ಯಮಿಗಳು ಹಾಗೂ ಜನತೆಯಿಂದ ಧನಸಹಾಯವನ್ನು ಅಪೇಕ್ಷಿಸಿದರು. ಮಹದೇವಪುರ ಶಾಸಕರ ಈ ಮನವಿಗೆ ಒಟ್ಟುಗೂಡಿದ ಹಣದ ಮೊತ್ತ ಬರೋಬ್ಬರಿ 42 ಲಕ್ಷ. ಈವರೆಗೆ 42 ಲಕ್ಷ ಹಣಗಳನ್ನು ನೆರೆ ಸಂಸತ್ರಸ್ತರಿಗೆ ನೀಡಲಾಗಿದೆ. ನೆರೆ ಸಂತ್ರಸ್ತರಿಗೆ ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಈ ಬಗ್ಗೆ ಅಭಿಯಾನ ನಡೆಸುತ್ತಿದ್ದುದು ಸಂಘದ ಕಾರ್ಯಕರ್ತರ (ಆರ್.ಎಸ್.ಎಸ್. ಸಂಚಲಿತ ಸಂತ್ರಸ್ತರ ಪರಿಹಾರ ನಿಧಿ) ಮೂಲಕ ಈ ಕಳಿಸಿಕೊಡಲಾಗಿದೆ.

12 ಲಾರಿಗಳಲ್ಲಿ ಅಗತ್ಯ ವಸ್ತುಗಳ ಸಾಗಾಟ.!

ಇನ್ನು 42 ಲಕ್ಷ ಮೊತ್ತದ ಹಣದೊಂದಿಗೆ 12 ಲಾರಿಗಳಲ್ಲಿ ಅಗತ್ಯ ಇರುವ ವಿವಿಧ ವಸ್ತುಗಳನ್ನೂ ಸಾಗಾಟ ಮಾಡಲಾಗಿದೆ. ಕಾಳಜಿ (ಗಂಜಿ)ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರಿಗೆ ಅಗತ್ಯವಿರುವ ಉಡುಪುಗಳು, ಹೊದಿಕೆಗಳು, ದಿನಬಳಕೆಯ ವಸ್ತುಗಳು, ಹಾಲು, ನೀರು, ಬಿಸ್ಕತ್, ಅಕ್ಕಿ,ಬೆಂಕಿ ಪೊಟ್ಟಣ, ದೀಪಗಳು ಸಹಿತ ಅನೇಕ ವಸ್ತುಗಳನ್ನು ಕಳಿಸಿಕೊಡಲಾಗಿದೆ. ಖುದ್ದು ಶಾಸಕರ ಜವಬ್ಧಾರಿಯಲ್ಲಿ 12 ಲಾರಿಗಳ ಮೂಲಕ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿ ಕಾಳಜಿ ಕೇಂದ್ರಗಳಿಗೆ ಕಳಿಸಿಕೊಡಲಾಗಿದೆ.

ಬೆಳ್ತಂಗಡಿಗೂ ಸಹಾಯ.!

ಕರಾವಳಿ ಭಾಗಗಳಲ್ಲಿ ನೆರೆ ಹಾವಳಿ ಕಡಿಮೆ ಇದ್ದರೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲ ಭಾಗಗಳಲ್ಲಿ ಪ್ರವಾಹ ಎದುರಾಗಿತ್ತು. 250ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದವು. ಹೀಗಾಗಿ ಈ ಬಗ್ಗೆಯೂ ಮನಮಿಡಿದ ಲಿಂಬಾವಳಿಯವರು ಬೆಳ್ತಂಗಡಿಗೂ ಅಗತ್ಯ ವಸ್ತುಗಳನ್ನು ತುರ್ತಾಗಿ ಕಳಿಸಿಕೊಟ್ಟಿದ್ದರು. ಈ ಮೂಲಕ ರಾಜ್ಯಮಟ್ಟದ ನಾಯಕನ ಕೆಲಸ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರವಲ್ಲ, ಇಡಿಯ ರಾಜ್ಯದ ಜವಬ್ದಾರಿ ಕೂಡಾ ತನ್ನ ಮೇಲಿದೆ ಎಂಬುವುದನ್ನು ನೆನೆದು ಕೆಲಸ ಮಾಡಿದ್ದಾರೆ.

ವ್ಯಯಕ್ತಿಕ ಒಂದು ಲಕ್ಷ ದೇಣಿಗೆ.!

ತನ್ನ ಕ್ಷೇತ್ರದಿಂದ 42 ಲಕ್ಷ ಹಣಗಳನ್ನು ಕ್ರೋಡೀಕರಿಸಿ ನೆರೆ ಸಂತ್ರಸ್ತರಿಗೆ ಕಳಿಸಿಕೊಟ್ಟಿದ್ದರೆ ವ್ಯಯಕ್ತಿಕವಾಗಿಯೂ ಸಹಕಾರಿಯಾಗಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತನ್ನ ವ್ಯಯಕ್ತಿಕ ಒಂದು ಲಕ್ಷ ಹಣವನ್ನು ದೇಣಿಗೆಯ ರೂಪದಲ್ಲಿ ನೀಡಿದ್ದಾರೆ.

ಯಾವುದೇ ಮಾಧ್ಯಮಗಳಲ್ಲಿ ಪ್ರಚಾರ ಪಡೆಯದ ಅರವಿಂದ ಲಿಂಬಾವಳಿಯವರು ನೆರೆ ಸಂತ್ರಸ್ತರಿಗೆ ಮೌನವಾಗಿಯೇ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ತನ್ನ ವಿಧಾನಸಭಾ ಕ್ಷೇತ್ರ ಮಹದೇವಪುರದಲ್ಲಿ ತನ್ನ ಜನಪ್ರಿಯತೆಯನ್ನು ಬಳಸಿಕೊಂಡು ಇಷ್ಟು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದು ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close