ದೇಶಪ್ರಚಲಿತ

ಜನತಾ ಕರ್ಫ್ಯೂ ಎರಡು ವಾರ ಮುಂದುವರೆಸಿ,ಹತ್ತೇ ದಿನದಲ್ಲಿ ಸಹಜ ಸ್ಥಿತಿಗೆ ಬರುತ್ತೇವೆ.! ಪ್ರಧಾನಿ,ಮುಖ್ಯಮಂತ್ರಿಗಳಿಗೆ ಉಡುಪಿ ಶಾಸಕರ ಮನವಿ!

ರಷ್ಯಾದಲ್ಲಿ ಮುಂದಿನ ಹದಿನೈದು ದಿನಗಳ ಕಾಲ ಯಾರೂ ಮನೆಯಿಂದ ಹೊರಗೆ ಬರಬಾರದು,ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಲ್ಲಿನ ಸರ್ಕಾರ ಆದೇಶಿಸಿದೆ.ಆದರೆ ಭಾರತದಲ್ಲಿ ಕೇವಲ ಪ್ರಧಾನಮಂತ್ರಿಗಳ ತಲಾ ಜನರು ಮನೆಯಿಂದ ಹೊರಗೆ ಬಾರದೆ ಜಾಗೃತಿ ವಹಿಸುತ್ತಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ರಾಷ್ಟ್ರವ್ಯಾಪಿ ಪೂರ್ಣ ಬೆಂಬಲ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಜನತಾ ಕರ್ಫ್ಯೂ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ರಘುಪತಿ ಭಟ್ ಇವರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರನ್ನು ನಮೂದಿಸಿ ಟ್ವೀಟ್ ಮಾಡಿದ ಉಡುಪಿ ಶಾಸಕ ರಘುಪತಿ ಭಟ್ ಮುಂದಿನ ಎರಡು ವಾರಗಳ ಕಾಲ ಯಥಾಸ್ಥಿತಿ ಮುಂದುವರೆದರೆ ನಾವು ಶೀಘ್ರ ಸಹಜ ಸ್ಥಿತಿಗೆ ಬರುತ್ತೇವೆ ಎಂದು ಹೇಳಿದ್ದಾರೆ.

“ನನ್ನ ಮನೆಗೆ ಪ್ರತಿ ದಿನ ನೂರಾರು ಸಾರ್ವಜನಿಕರು ಭೇಟಿಗಾಗಿ ಬರುತ್ತಾರೆ.ಆದರೆ‌ ಇಂದಿನ ಜನತಾ ಕರ್ಫ್ಯೂ ಪರಿಣಾಮ ಯಾರೊಬ್ಬರೂ ಮನೆಗೆ ಬಂದಿಲ್ಲ.ಜನರಲ್ಲಿ ಜಾಗೃತಿ ಮೂಡಿದೆ. ಹೀಗಾಗಿ ಇದನ್ನು ಮುಂದುವರಿಸಿದರೆ ನಾವು 4 ತಿಂಗಳ ಬದಲಿಗೆ 10 ದಿನಗಳಲ್ಲಿ ಮರಳಿ ಸಹಜ ಸ್ಥಿತಿಗೆ ಬರಬಹುದು” ಎಂದು ಶಾಸಕರು ಹೇಳಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close