ಪ್ರಚಲಿತ

ಎಲ್ಲಾ ಸಮೀಕ್ಷೆಯಲ್ಲೂ ಮೋದಿಯೇ ಬೆಸ್ಟ್: ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೇರಿಕಾವೂ ಭಾರತದ ಕಾಲಬುಡದಲ್ಲಿ!

ಪ್ರಧಾನಿ ಮೋದಿ ಅವರು ಭಾರತದ ಪ್ರಧಾನಿಯಾಗಿ ಆಡಳಿತ ವಹಿಸಿಕೊಂಡ ಬಳಿಕ ಜಗತ್ತಿನಲ್ಲೇ ಭಾರತದ ಸ್ಥಾನಮಾನ ಬದಲಾಗಿದೆ. ಯಾವುದೇ ಸಂಕಷ್ಟದ ಸಂದರ್ಭ ಇರಲಿ ವಿಶ್ವದ ಘಟಾನುಘಟಿ ರಾಷ್ಟ್ರಗಳು ಸಹಿತ ಭಾರತದ ನೆರವು ಯಾಚಿಸುವಷ್ಟರ ಮಟ್ಟಿಗೆ ಭಾರತ ಶಕ್ತಿಶಾಲಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಡೀ ಜಗತ್ತು ಭಾರತದ ಪ್ರಧಾನಿ ಮೋದಿ ಅವರಂತಹ ಸಮರ್ಥ ನಾಯಕನನ್ನು ಎದುರು ನೀಡುತ್ತಿದೆ ಎನ್ನುವುದಕ್ಕೆ ಸಮೀಕ್ಷೆಯೊಂದರಲ್ಲಿ ಸಾಕ್ಷಿ ದೊರೆತಿದೆ. ಅಮೆರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ಜಾಗತಿಕ ನಾಯಕರಲ್ಲಿ ಅತ್ಯಂತ ಜನಪ್ರಿಯ ನಾಯಕ ಯಾರು ಎಂಬ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಮೊದಲ ಸ್ಥಾನ ದೊರೆತಿದೆ.‌ ಜಗತ್ತಿನ ೨೨ ನಾಯಕರನ್ನಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೆಚ್ಚು ಜನಪ್ರಿಯ ನಾಯಕ ಎಂಬ ಅಂಶ ಬಯಲಾಗಿದೆ.

ಸಮೀಕ್ಷೆ ನಡೆಸಿದ ೧೦೦% ಜನರಲ್ಲಿ ೭೮% ಜನರು ಪ್ರಧಾನಿ ಮೋದಿ ಅವರಿಗೆ ಓಟ್ ಮಾಡಿದ್ದಾರೆ. ಮೋದಿ ಅವರು ಅಗ್ರಸ್ಥಾನದಲ್ಲಿದ್ದರೆ ಅವರ ಬಳಿಕ ಮೆಕ್ಸಿಕನ್ ಅಧ್ಯಕ್ಷ ಆ್ಯಂಡ್ರಸ್ ಮ್ಯಾನ್ಯುಯಲ್ ಲೆಪೆಜ್ ಒಬ್ರಡಾಲ್ ಅವರು ೬೮% ಮತಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಸ್ವಿಸ್ ಅಧ್ಯಕ್ಷ ಅಲನ್ ಬರ್ಸೆಟ್ ಅವರು ಇದ್ದಾರೆ. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಏಳನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಒಂದು ಕಾಲದಲ್ಲಿ ಎಲ್ಲಾ ವಿಷಯದಲ್ಲಿಯೂ ಒಂದು ಹೆಜ್ಜೆ ಮುಂದಿದ್ದ ಅಮೆರಿಕಾವನ್ನು ಸಹ ಹಿಂದಿಕ್ಕಿ ಭಾರತ ಮುಂದುವರಿದೆ ಎನ್ನುವುದಕ್ಕೆ ಈ ಸಮೀಕ್ಷೆ ಸಾಕ್ಷ್ಯ ನುಡಿವಂತಿದೆ.

ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ಮತ್ತಷ್ಟು ಪ್ರಕಾಶಮಾನವಾಗಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಹೆಚ್ಚಿನ ಸಮೀಕ್ಷೆಗಳಲ್ಲಿ ಪ್ರಧಾನಿ ಮೋದಿ ಅವರೇ ಬೆಸ್ಟ್ ಎಂಬ ಫಲಿತಾಂಶ ಬರುತ್ತಿರುವುದೇ ಉದಾಹರಣೆಯಾಗಿದೆ. ಮಾರ್ನಿಂಗ್ ಕನ್ಸಲ್ಟ್ ನಲ್ಲಿಯೂ ಇದೇ ಫಲಿತಾಂಶ ಬಂದಿದ್ದು, ಪ್ರಧಾನಿ ಮೋದಿ ಅವರೆ ದು ರು ಅಮೆರಿಕಾದ ಅಧ್ಯಕ್ಷರೂ ಸಹ ಡಮ್ಮಿ ಎಂದು ಜಗಜ್ಜಾಹೀರಾಗಿದೆ. ಮೋದಿ ಅವರಿಗೆ ಸರಿ ಸಮಾನವಾದ ನಾಯಕ ಇಡೀ ವಿಶ್ವದಲ್ಲೇ ಇಲ್ಲ ಎಂಬುದಕ್ಕೂ ಈ ಸಮೀಕ್ಷೆಯ ಫಲಿತಾಂಶ ಸ್ಪಷ್ಟ ನಿದರ್ಶನ.

ಒಟ್ಟಿನಲ್ಲಿ ಈ ರಿಸಲ್ಟ್ ಮೋದಿ ವಿರೋಧಿಗಳಿಗೆ ಉರಿವಲ್ಲಿಗೆ ಉಪ್ಪಿಟ್ಟಂತಾಗಿದ್ದು, ಮೋದಿ ಅಭಿಮಾನಿಗಳಿಗೆ ಮಾತ್ರ ಮತ್ತಷ್ಟು ಸಂತಸವನ್ನು ತಂದುಕೊಟ್ಟಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

Tags

Related Articles

Close