ಪ್ರಚಲಿತ

ಇತ್ತ ಕರ್ನಾಟಕದಲ್ಲಿ ಸರಕಾರ ರಚನೆಯ ಸರ್ಕಸ್ ನಡೆಯುತ್ತಿದ್ದರೆ ಅತ್ತ ಲೋಕಸಭಾ ಚುನಾವಣೆಯತ್ತ ಮೋದಿ ಚಿತ್ತ!! 2019 ರಲ್ಲಿ “ಒಂದು ದೇಶ ಒಂದು ಚುನಾವಣೆಗೆ” ಮೋದಿ ಸರಕಾರದ ನಡೆಸುತ್ತಿದೆ ಕಸರತ್ತು!!

ಎಲ್ಲವೂ ಅಂದುಕೊಂಡತೆ ಆದರೆ ಬರುವ ವರ್ಷ “ವನ್ ನೇಶನ್ ವನ್ ಎಲೆಕ್ಷನ್” ನಡೆಯಬಹುದು. ದೇಶದಲ್ಲಿ ಏಕಕಾಲಿಕ ಚುನಾವಣೆ ನಡೆಯಬೇಕು, ಜನರ ಹಣ ಮತ್ತು ಸಮಯದ ಉಳಿತಾಯ ಆಗಬೇಕು ಎಂದು ಭಾಜಪದ ಭೀಷ್ಮ ಅಡ್ವಾಣಿ ಅವರು ದಶಕಗಳಿಂದಲೂ ಪ್ರತಿಪಾದಿಸುತ್ತಲೆ ಬಂದಿದ್ದಾರೆ. UPA ಕಾಲದಲ್ಲಿ ಈ ಪ್ರಸ್ತಾವನೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ಅಲ್ಲಿ ಹತ್ತು ವರ್ಷಗಳಿಂದ ಧೂಳು ತಿನ್ನುತ್ತಿದ್ದ ಕಡತಗಳನ್ನು ಮತ್ತೆ ಹೊರತೆಗೆದು ಈ ಪ್ರಸ್ತಾವನೆಗೆ ಜೀವ ತುಂಬುತ್ತಿದ್ದಾರೆ ಮೋದಿ. ಇತ್ತ ಎಲ್ಲರ ಚಿತ್ತ ಕರ್ನಾಟಕದ ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಜಂಗಿ ಕುಸ್ತಿಯ ಮೇಲೆ ನೆಟ್ಟಿದ್ದರೆ ಅತ್ತ ಮಾಸ್ಟರ್ ಸ್ಟ್ರೋಕ್ ಪರಿಣಿತ ಮೋದಿಯ ಚಿತ್ತ ದೇಶದ ಏಳಿಗೆಯ ಮೇಲೆ ನೆಟ್ಟಿದೆ.

ಒಂದರೆಘಳಿಗೆಯೂ ಮೋದಿ ಅವರಿಗೆ ದೇಶದ ಚಿಂತೆ ಬಿಟ್ಟು ನಿಶ್ಚಿಂತೆಯಾಗಿರಲು ಸಾಧ್ಯವೆ? ಬಹುಶ ಇಲ್ಲ. ಆ ವ್ಯಕ್ತಿ ಕೂತಾಗ, ನಿಂತಾಗ, ಮಲಗಿರುವಾಗ, ಬಹುಶ ಕನಸಿನಲ್ಲೂ ದೇಶದ ಏಳಿಗೆಯನ್ನೆ ಬಯಸುತ್ತಾರೆ ಎಂದೆಣಿಸುತ್ತದೆ. ಮೋದಿ ಜಾಗದಲ್ಲಿ ಬೇರೆಯವರಿದ್ದಿದ್ದರೆ, “ನನಗ್ಯಾಕೆ ಬೇಕು ಉಸಾಬರಿ ಬೇಕಾದರೆ ಮಾಡ್ಲಿ, ಇಲ್ಲಾಂದ್ರೆ ಸಾಯ್ಲಿ, ನಾನಂತೂ ದುಡ್ಡು ಮಾಡಿ ವಿದೇಶಿ ಬ್ಯಾಂಕ್ ನಲ್ಲಿ ಜಮೆ ಮಾಡುತ್ತೇನೆ” ಎನ್ನುತ್ತಿದ್ದರೇನೋ? ಆದರೆ ಆ ಫಕೀರ ಹಾಗೆ ಮಾಡಲಿಲ್ಲ ಬದಲಾಗಿ ತನ್ನ ಪ್ರಾಣದ ಹಂಗು ತೊರೆದು ವ್ಯವಸ್ತೆಯನ್ನು ಬದಲಾಯಿಸುವ ಪಣ ತೊಟ್ಟಿದ್ದಾರೆ.

ಸೂತ್ರಗಳ ಪ್ರಕಾರ ಬುಧವಾರ ದೇಶದಲ್ಲಿ ಏಕಕಾಲಿಕ ಚುನಾವಣೆಯ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ದೇಶದಲ್ಲಿ ಬೇರೆ ಬೇರೆ ಕಡೆ, ಬೇರೆ ಬೇರೆ ಸಮಯದಲ್ಲಿ ನಡೆಯುವ ಸ್ಥಾನೀಯ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ಏಕ ಕಾಲದಲ್ಲಿ ನಡೆಸಲು ಸಾಧ್ಯವೆ ಎಂದು ಕಾನೂನು ಆಯೋಗ ಮತ್ತು ಚುನಾವಣಾ ಆಯೋಗದಿಂದ ತಿಳಿದುಕೊಳ್ಳಲು ಈ ಸಭೆ ಕರೆಯಲಾಗಿತ್ತು. ಪ್ರಧಾನ ಮಂತ್ರಿ ಕಾರ್ಯಾಲಯವು ಆದಷ್ಟು ಬೇಗ ಏಕಕಾಲಿಕ ಚುನಾವಣೆ ನಡೆಸಲು ಬೇಕಾದ ಎಲ್ಲಾ ವ್ಯವಸ್ತೆಗಳನ್ನು ಮಾಡಲು ಬಯಸಿದೆ ಎಂದು ‘ಎಕೊನಾಮಿಕ್ ಟೈಮ್ಸ್ ‘ ವರದಿ ಮಾಡಿದೆ. ದೇಶದಲ್ಲಿ ಏಕಕಾಲಿಕ ಚುನಾವಣೆ ನಡೆಸಲು ಸಂಭಾವ್ಯ ಆಯ್ಕೆಗಳನ್ನು ಅನ್ವೇಷಿಸಲು ಮೋದಿ ಸರ್ಕಾರ ನೀತಿ ಆಯೋಗ ಮತ್ತು ಕಾನೂನು ಸಚಿವಾಲಯಕ್ಕೆ ನಿರ್ದೇಶ ನೀಡಿದೆ.

ಮೋದಿ 2016 ರಿಂದಲೆ ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಮಾರ್ಚ್ ತಿಂಗಳಿನ ವರದಿಯ ಪ್ರಕಾರ ಟೋಕಿಯೊ ಮೂಲದ ಜಾಗತಿಕ ಆರ್ಥಿಕ ಸೇವಾ ಸಂಸ್ಥೆ ‘ನೊಮುರಾ’ ಮುಂದಿನ ಲೋಕಸಭಾ ಚುನಾವಣೆಯು ಅವಧಿಗೂ ಮುಂಚಿತವಾಗಿಯೇ ನಡೆಯಬಹುದೆಂದು ಸೂಚನೆ ನೀಡಿದೆ. ಬರುವ ವರ್ಷ ಮಾರ್ಚ್ ತಿಂಗಳಲ್ಲಿ ಛತ್ತೀಸ್ ಗಡ, ರಾಜಸ್ತಾನ ಮತ್ತು ಮಧ್ಯ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಏಕಕಾಲಿಕ ಚುನಾವಣೆ ಪ್ರಸ್ತಾವನೆಗೆ ಸಂಸತ್ತಿನಲ್ಲಿ ಹಸಿರು ಬಾವುಟ ತೋರಿದರೆ ಲೋಕಸಭಾ ಚುನಾವಣೆಯೂ ಮಾರ್ಚಿನಲ್ಲೆ ನಡೆಯಬಹುದೆನ್ನಲಾಗುತ್ತಿದೆ. “ಯುದ್ದ ಕಾಲೇ ಶತ್ರಾಭ್ಯಾಸ” ನಡೆಸದೆ ಮಂತ್ರಿ ಮಾಗಧರು, ಸಂಸದ- ಶಾಸಕರು ಮತ್ತು ಕಾರ್ಯಕರ್ತರೆಲ್ಲ ಈಗಿಂದಲೆ ಲೋಕಸಭಾ ಚುನಾವಣೆಯ ತಯಾರಿ ನಡೆಸುವುದು ಒಳ್ಳೆಯದು.

ಏಕಕಾಲಿಕ ಚುನಾವಣೆ ನಡೆಯುವುದರಿಂದ ದೇಶಕ್ಕೇನು ಲಾಭ?

ಬಹಳ ಲಾಭವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಖಜಾನೆಯಿಂದ 3,426 ಕೋಟಿ ರೂಪಾಯಿಗಳು ಖರ್ಚಾಗಿವೆ. 2009 ರಲ್ಲಿ 1,483 ಕೋಟಿ ರುಪಾಯಿಗಳನ್ನು ಲೋಕಸಭಾ ಚುನಾವಣೆಗಳಿಗೆ ಖರ್ಚು ಮಾಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಈ ಖರ್ಚು ಹೆಚ್ಚುತ್ತಿದೆ ಮತ್ತು ರಾಷ್ಟ್ರೀಯ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿಗಳ ಹೊರೆ ಬೀಳುತ್ತಿದೆ. ಇನ್ನು ವಿಧಾನಸಭಾ ಚುನಾವಣೆಗಳಿಗೆ ರಾಜ್ಯಗಳ ವಿಸ್ತಾರದ ಮೇಲೆ ಖರ್ಚು ವೆಚ್ಚಗಳು ನಿರ್ಧಾರವಾಗುತ್ತವೆ. ಸ್ಥಾನೀಯ ಚುನಾವಣೆಗಳ ಖರ್ಚು ವೆಚ್ಚಗಳೂ ಕೂಡ ಕಡಿಮೆಯೆಂದರು ನೂರಿನ್ನೂರು ಕೋಟಿವರೆಗೆ ಮುಟ್ಟುತ್ತದೆ. ಹೀಗಿರುವಾಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದರೆ ಸರಕಾರದ ಬೊಕ್ಕಸದ ಮೇಳೆ ಬೀಳುವ ಹೊರೆ ಕಡಿಮೆಯಾಗಿ ಆ ಹಣವನ್ನ ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ.

ಪದೆ ಪದೆ ಚುನಾವಣೆ ನಡೆಯುವುದರಿಂದ ಜನರ ಸಮಯವೂ ಹಾಳಾಗುತ್ತದೆ. ಚುನಾವಣೆಗಳನ್ನು ಸುಸೂತ್ರವಾಗಿ ನಡೆಸಲು ಅಗಾಧವಾದ ಮಾನವ ಶಕ್ತಿ ಬೇಕಾಗುತ್ತದೆ. ಸರಕಾರದ ಅಧಿಕಾರಿಗಳು ಚುನಾವಣಾ ಕೆಲಸಗಳಲ್ಲೆ ನಿರತರಾಗಿದ್ದರೆ ಅಭಿವೃದ್ದಿಯ ಕೆಲಸಗಳಿಗೆ ವೇಗ ದೊರಕುವುದಿಲ್ಲ. ಆದ್ದರಿಂದ ಏಕಕಾಲಿಕ ಚುನಾವಣೆ ಜನರ ಹಣ ಮತ್ತು ಸಮಯ ಪೋಲಾಗುವುದನ್ನು ತಡೆಯುತ್ತದೆ.

ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಮೋದಿಗೇನು ಲಾಭ?

ಶೂನ್ಯ. ಆ ವ್ಯಕ್ತಿ ತನ್ನ ಲಾಭಕ್ಕಾಗಿ ಇದುವರೆಗೆ ಏನಾದರೂ ಮಾಡಿದ್ದರೆ ತಾನೆ ಮುಂದೆ ಮಾಡೋಕೆ? ತಾನು ಮುಖ್ಯಮಂತ್ರಿಯಾಗಿದ್ದಾಗ ದುಡಿದದ್ದೆಲ್ಲವನ್ನೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧಾರೆ ಎರೆದು ಖಾಲಿ ಕೈಯಲ್ಲಿ ತಿರುಗುವ ಫಕೀರ ಅವರು. ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಮೋದಿಯವರಿಗೆ ಗೆಲುವನ್ನು ತರಬಹುದು ಇಲ್ಲ ಸೋಲನ್ನೂ ತರಬಹುದು. ಅವರ ಈ ನಿರ್ಧಾರ ಅವರಿಗೆ ಆತ್ಮಘಾತಿಯಾಗಬಹುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಬಹುಮತ ಪಡೆಯದೆಯೂ ಇರಬಹುದು, ಯಾವುದನ್ನೂ ಈಗಲೆ ಹೇಳಲು ಆಗುವುದಿಲ್ಲ. ಪ್ರಾಣವನ್ನೆ ಪಣಕಿಟ್ಟಿರುವ ಆ ಫಕೀರ ಪದದ ಲಾಲಸೆ ಮಾಡುವವರಲ್ಲ. ತಾವು ಪ್ರಧಾನಮಂತ್ರಿ ಪದದಲ್ಲಿರಲಿ, ಇಲ್ಲದಿರಲಿ ಅವರು ಯೋಚಿಸುವುದು ಈ ದೇಶದ ಮತ್ತು ಜನರ ಒಳಿತಿನ ಬಗ್ಗೆ ಮಾತ್ರ. ಇಂತಹ ವ್ಯಕ್ತಿ ಪ್ರಧಾನಿಯಾಗಿ ದೊರಕಿರುವುದು ನಮ್ಮ ಸೌಭಾಗ್ಯ. ದೇಶದಲ್ಲಿ ಏಕಕಾಲಿಕ ಚುನಾವಣೆ ನಡೆಯಲಿ, ನಡೆಯದಿರಲಿ ಮೋದಿ ಪ್ರತಿ ಬಾರಿಯೂ ಪ್ರಧಾನಿಯಾಗಿ ಬರಲಿ

-ಶಾರ್ವರಿ

Tags

Related Articles

Close