ಪ್ರಚಲಿತ

ಯುದ್ಧವನ್ನೇ ಮಾಡದೆ ಪಾಕಿಸ್ತಾನವನ್ನು ಮಖಾಡೆ ಮಲಗಿಸಿದ ಮೋದಿ: ರಾಜತಾಂತ್ರಿಕತೆಯ ಪವರ್!

ಒಂದು ದೇಶ ಅಭಿವೃದ್ಧಿ ಹೊಂದುವುದು ಅಥವಾ ಪತನವಾಗುವುದು ಆ ದೇಶದ ನಾಯಕನ ಆಡಳಿತ ವೈಖರಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಇದಕ್ಕೆ ಸಾಕ್ಷಿ ೨೦೧೪ ರ ನಂತರ ಭಾರತದ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದೀಜಿ ಮತ್ತು ಭಾರತದ ಅಭಿವೃದ್ಧಿಯ ನಾಗಾಲೋಟ.

ಈ ಹಿಂದೆ ಭಾರತ ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳಿಂದ ಭಾರತವನ್ನು ಹೊರತಂದು, ಈ ದೇಶವನ್ನು ಸಮಸ್ಯೆಗಳ ಸುಳಿಯಿಂದ ಮುಕ್ತವಾಗಿಸಲು ಹೊರಟ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು.

ಅಂದ ಹಾಗೆ ಪಾಕಿಸ್ತಾನದ ಈಗಿನ ಅಬ್ಹೇಪಾರಿ ಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ೨೦೧೪ ರ ಮೊದಲು ಭಾರತದ ಮೇಲೆ ಉಗ್ರವಾದ ಸೇರಿದಂತೆ ಇನ್ನಿತರ ರೀತಿಯಲ್ಲಿ ಆಕ್ರಮಣ ನಡೆಸುತ್ತಿದ್ದ ಪಾಕ್‌ನ ಇಂದಿನ ಸ್ಥಿತಿಯನ್ನು ಕಂಡರೆ, ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ. ಪ್ರಧಾನಿ ಮೋದಿ ಅವರು ಪ್ರಧಾನಿ ಆಗುವುದಕ್ಕೂ ಮೊದಲು, ಭಾರತದ ಆಡಳಿತ ಕಾಂಗ್ರೆಸ್ ಪಕ್ಷದ ಕೈಲಿರುವಾಗಲೂ ಮೋದಿ ಅವರು ಪಾಕಿಸ್ತಾನವನ್ನು ಮಣಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸದಾ ಬೆಂಬಲವನ್ನು ನೀಡಿದ್ದರು. ಮಾತ್ರವಲ್ಲದೆ ಪಾಕ್ ವಿಚಾರ ಬಂದಾಗಲೆಲ್ಲಾ ಸರ್ಕಾರದ ಪರವೇ ಮಾತನಾಡುತ್ತಿದ್ದರು. ಪಾಕಿಸ್ತಾನ ವನ್ನು ಹೇಗೆ ಮಣಿಸಬೇಕು?, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದು ಹೇಗೆ? ಇತ್ಯಾದಿಗಳ ಬಗೆಗೂ ಪ್ರಚೋದನಾಕಾರಿಯಾಗಿ ಮಾತನಾಡುತ್ತಿದ್ದರು.

ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಪಾಕಿಸ್ತಾನವನ್ನು ಪೋಷಿಸುವ ಕೆಲಸವನ್ನೇ ಮಾಡುತ್ತಿತ್ತು. ೨೦೧೯ ರ ಸಮಯದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಪಾರಂಪರಿಕ ಶತ್ರು ರಾಷ್ಟ್ರ ಪಾಕಿಸ್ತಾನವೆಂಬ ಪಾಪಿಸ್ತಾನವನ್ನು ಹೇಗೆ ಬರ್ಬಾದ್ ಮಾಡುತ್ತೇನೆ ನೋಡುತ್ತಿರಿ ಎಂಬುದಾಗಿ ತಮ್ಮ ಭಾಷಣವೊಂದರಲ್ಲಿ ಹೇಳಿದ್ದರು. ಅದರಂತೆಯೇ ಈಗ ಪಾಕಿಸ್ತಾನ ಸಂಪೂರ್ಣ ನೆಲಕ್ಕಚ್ಚಿ ನಿರ್ನಾಮವಾಗುವ ಸ್ಥಿತಿಗೆ ಬಂದು ತಲುಪಿದೆ. ತಿನ್ನುವ ಅನ್ನಕ್ಕೂ ಗತಿ ಇಲ್ಲದೆ ಪರದಾಡುತ್ತಿದೆ. ಈವರೆಗೆ ಭಾರತದ ವಿರುದ್ಧ ಪಿತೂರಿಯನ್ನೇ ನಡೆಸುತ್ತಿದ್ದ ರಾಷ್ಟ್ರ, ಇಂದು ಪ್ರಧಾನಿ ಮೋದಿ ನೇತೃತ್ವದ ಭಾರತದ ಕಾಲು ಹಿಡಿದು ಕಾಪಾಡಿ ಎಂದು ಬೇಡುವ ಸ್ಥಿತಿ ತಲುಪಿದೆ. ಪಾಕಿಸ್ತಾನವೇ ಹೇಳುವಂತೆ ಪ್ರಧಾನಿ ಮೋದಿ ಅವರು ಭಾರತವನ್ನು ಮುನ್ನಡೆಸಲು ಇರಿಸಿದ ಪ್ರತಿಯೊಂದು ಹೆಜ್ಜೆಯೂ ಪಾಪಿ ಪಾಕಿಸ್ತಾನವನ್ನು ಇಂತಹ ದುರಂತ ಪರಿಸ್ಥಿತಿಗೆ ತಳ್ಳಿದೆ. ಪಾಕಿಸ್ತಾನವನ್ನು ಪೋಷಿಸುತ್ತಿದ್ದ ಭಾರತದ ರಾಜಕೀಯ ಪಕ್ಷ ಕಾಂಗ್ರೆಸ್ ನೆಲಕಚ್ಚಿದ ಹಾಗೆಯೇ, ಅತ್ತ ಪಾಪಿ ಪಾಕಿಸ್ತಾನದ ಕತೆಯೂ ಹೀನಾಯ ಸ್ಥಿತಿಗೆ ತಲುಪಿ ಬಿಟ್ಟಿದೆ.

೨೦೧೯ ರಲ್ಲಿ ಪ್ರಧಾನಿ ಮೋದಿ ಅವರು ಪಾಕಿಸ್ತಾನವನ್ನು ಭಿಕ್ಷೆ ಬೇಡುವಂತೆ ಮಾಡುವುದಾಗಿ ಹೇಳಿದ್ದರು. ಅದಾಗಿ ಕೇವಲ ಮೂರೇ ಮೂರು ವರ್ಷದಲ್ಲಿ ಪಾಕ್‌ಗೆ ತಿನ್ನುವುದಕ್ಕೂ ಗತಿ ಇಲ್ಲದಂತೆ ಆಹಾರ ಕ್ಷಾಮ, ಯಾವುದನ್ನೂ ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗದ ಆಹಾರ ಕ್ಷಾಮ, ವಿದ್ಯುತ್ ಕ್ಷಾಮ ಬರ ಸಡಿಲಿನಂತೆ ಹೊಡೆದಿದೆ. ಪ್ರಧಾನಿ ಮೋದಿ ಅವರ ಆಳ್ವಿಕೆ ಆರಂಭವಾದ ಕೇವಲ ೮ ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕೃಪಾ ಪೋಷಿತ ಪಾಕಿಸ್ತಾನ ಎರಡೂ ಸಹ ಮತ್ತೆ ಮೇಲೇಳದ ಸ್ಥಿತಿಗೆ ತಲುಪಿದೆ ಎಂದರೆ ಪ್ರಧಾನಿ ಮೋದಿ ಅವರ ದೂರದೃಷ್ಟಿ ಎಷ್ಟು ಆಳವಾದದ್ದು, ಭಾರತದ ಸುರಕ್ಷತೆಗಾಗಿ ಮೋದಿ ಕೈಗೊಂಡ ದಿಟ್ಟ ನಿಲುವುಗಳು ಎಷ್ಟು ತೀಕ್ಷ್ಣವಾದದ್ದು ಎಂಬುದನ್ನು ನೀವೇ ಆಲೋಚಿಸಿ.

ಭಾರತದ ವಿರುದ್ಧ ಅಣು ಬಾಂಬ್ ಸ್ಫೋಟ ಮಾಡಲೂ ಸಿದ್ಧ ಎಂದಿದ್ದ ಪಾಕಿಸ್ತಾನಕ್ಕೆ ಕೂಳಿಗೂ ಗತಿ ಇಲ್ಲ. ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದ ಕಾಂಗ್ರೆಸ್ ಸಹ ಭಾರತದಲ್ಲಿ ನೆಲೆ ಕಳೆದುಕೊಂಡು ಇನ್ನೇನು ಮಾಯವಾಗುವ ಸ್ಥಿತಿ ತಲುಪಿದೆ. ಪಾಕ್ ಈ ವರೆಗೆ ಜೀವಂತವಾಗಿತ್ತು ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್. ಕಾಂಗ್ರೆಸ್ ಆಡಳಿತದಲ್ಲಿ ಪಾಕಿಸ್ತಾನವನ್ನು ಸಾಕುವ ಕೆಲಸ ನಡೆಯುತ್ತಿತ್ತು. ಇದರಿಂದ ಕೊಬ್ಬಿದ ಪಾಕ್ ಭಾರತದ ವಿರುದ್ಧ ಉಗ್ರ ಚಟುವಟಿಕೆ, ಭಾರತದ ಸೇನೆಯ ವಿರುದ್ಧ ಕಾರ್ಯಾಚರಣೆ ನಡೆಸುತ್ತಿತ್ತು. ಹೀಗಿದ್ದರೂ ಪಾಕ್ ಅನ್ನು ಮಟ್ಟ ಹಾಕಲು ಕಾಂಗ್ರೆಸ್ ಪಟ್ಟ ಪ್ರಯತ್ನ ಶೂನ್ಯವಾಗಿತ್ತು.

ಆದರೆ ಯಾವಾಗ ದೇಶ ಪ್ರಧಾನಿ ಮೋದಿ ಅವರ ಕೈ ಸೇರಿತೋ ಆಗ ಪಾಕ್‌ಗೆ ಕೇಡುಗಾಲ ಆರಂಭವಾಯಿತು. ಭಾರತದ ಅಭಿವೃದ್ಧಿ ದೃಷ್ಟಿಯಿಂದ ತೆಗೆದುಕೊಂಡ ಪ್ರತಿ ಹೆಜ್ಜೆಯೂ ಕಾಂಗ್ರೆಸ್ ಮತ್ತು ಪಾಕ್‌ ಗೆ ಅವನತಿಯ ದಾರಿ ತೋರಿಸಿತು. ಪಾಕ್ ಮತ್ತು ಕಾಂಗ್ರೆಸ್ ಪತನದತ್ತ ಸಾಗುತ್ತಿರುವುದೇ ಪ್ರಧಾನಿ ಮೋದಿ ಅವರ ಸುರಕ್ಷಿತ ಭಾರತದ ಕನಸು ಮತ್ತು ಅದಕ್ಕಾಗಿ ಕೈಗೊಂಡ ಕಾರ್ಯ ತಂತ್ರಗಳು ಎಷ್ಟು ಪರಿಣಾಮಕಾರಿ ಎನ್ನುವುದಕ್ಕೆ ಸಾಕ್ಷಿ.

ಅಂದ ಹಾಗೆ ಪ್ರಧಾನಿ ಮೋದಿ ಅವರು ಯಾವುದೇ ಯುದ್ಧ ನಡೆಸದೆಯೇ, ಭಾರತೀಯರಿಗೆ ಯಾವುದೇ ಹಾನಿ ಸಂಭವಿಸದ ರೀತಿಯಲ್ಲಿ ಕಾಂಗ್ರೆಸ್ ಮತ್ತು ಪಾಕಿಸ್ತಾನ‌ವನ್ನು ಬಿಕ್ಷುಕರನ್ನಾಗಿ ಮಾಡಿದ್ದಾರೆ. ಇದು ಮೋದೀಜಿ ಅವರ ರಾಜತಾಂತ್ರಿಕ ನಡೆಗೆ ಹಿಡಿದ ಕೈಗನ್ನಡಿ.

Tags

Related Articles

Close