ಪ್ರಚಲಿತ

ಮೋದಿ ಹೆಸರು ಹೇಳಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆಯೇ ಕಾಂಗ್ರೆಸ್?

ಕೆಟ್ಟರೂ ಬುದ್ಧಿ ಮಾತ್ರ ಬರಲಿಲ್ಲ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಅನ್ವಯವಾಗುತ್ತದೆ. ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರಿಗಾದ ಸ್ಥಿತಿ ಎಲ್ಲರೂ ಬಲ್ಲವರೇ. ಮೋದಿ ಉಪನಾಮ ಹೊಂದಿರುವ ಎಲ್ಲರೂ ಕಳ್ಳರು ಎನ್ನುವ ಮೂಲಕ ಕೋರ್ಟ್‌ನಿಂದ ಎರಡು ವರ್ಷಗಳ ಜೈಲುಶಿಕ್ಷೆಗೆ ತುತ್ತಾದದ್ದು, ಆ ಬಳಿಕ ಇದೇ ಕಾರಣಕ್ಕೆ ಲೋಕಸಭೆಯಿಂದಲೂ ಅನರ್ಹನಾದದ್ದು ಗೊತ್ತು ಇದೆ.

ಹಿರಿಯ ಕ್ರಮ ಚಾಳಿ ಮನೆಮಂದಿಗೆಲ್ಲ ಎಂಬಂತೆ ಈಗ ರಾಹುಲ್ ಗಾಂಧಿಯ ದುರ್ವರ್ತನೆಯನ್ನೇ ತಾನೂ ತೋರುವ ಮೂಲಕ ಕರ್ನಾಟಕದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಮೋದಿ ಅವರನ್ನು ನಿಂದಿಸಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾತ್ರವಲ್ಲದೆ ನಲಪಾಡ್‌ನ ಈ ವರ್ತನೆಗೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಅಂದ ಹಾಗೆ ರಾಹುಲ್ ಗಾಂಧಿ ಅರ್ಹತೆ ಬಳಿಕ ನಲಪಾಡ್ ಈ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯನ್ನು ನಲಪಾಡ್ ಪುನರುಚ್ಚರಿಸಿದ್ದು, ಮೋದಿ ಎಂಬ ಹೆಸರಿರುವ ಎಲ್ಲರೂ ಕಳ್ಳರೇ. ಈ ಬಗ್ಗೆ ದೂರು ದಾಖಲಿಸಿದರೂ ನಾನು ಹೆದರುವುದಿಲ್ಲ ಎಂದು ಅಹಂಕಾರ ಪ್ರದರ್ಶಿಸಿದ್ದರು. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿತ್ತು. ನಲಪಾಡ್ ವಿವಾದಾತ್ಮಕ ಹೇಳಿಕೆಗೆ ಸಖರಾಯಪಟ್ಟಣದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರದೀಪ್ ಎಂಬವರು ದೂರು ದಾಖಲು ಮಾಡಿದ್ದಾರೆ. ಹಾಗೆಯೇ ನಲಪಾಡ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದರಿಗೆ ಮೋದಿ, ಬಿಜೆಪಿ ಮುಂದೆ ಎಲ್ಲಿ ತಮ್ಮ ಅಸ್ತಿತ್ವವೇ ಇಲ್ಲವಾಗುವುದೋ ಎಂಬ ಭಯದಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದು ಮತ್ತು ಆ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವುದು ದುರಂತವೇ ಸರಿ.

Tags

Related Articles

Close