ಅಂಕಣಪ್ರಚಲಿತ

ಕೇಂದ್ರಬಿಂದುವಾಗಿದೆ ಮೋದಿ ಕ್ಷೇತ್ರದ ಗಂಗಾನದಿ.! ಕರ್ನಾಟಕ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳು ಏನನ್ನುತ್ತಿವೆ? ಶುದ್ಧಿಯಾಗಿದ್ದಾಳಾ ಗಂಗೆ?

ವಾರಾಣಾಸಿ ಲೋಕಸಭಾ ಕ್ಷೇತ್ರ. ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲೇ ಗುರುತಿಸಿಕೊಂಡಿರುವ ಕ್ಷೇತ್ರವಿದು. ಇದಕ್ಕೆ ಕಾರಣ ಒಂದು ಈ ಕ್ಷೇತ್ರದಲ್ಲಿ ಕಾಶಿ ವಿಶ್ವನಾಥ ನೆಲೆಸಿ ಗಂಗೆಯನ್ನು ತನ್ನ ಮುಡಿಯಲ್ಲಿ ಇರಿಸಿಕೊಂಡಿದ್ದು ಮತ್ತೊಂದು ಈ ಕ್ಷೇತ್ರವನ್ನು ಪ್ರಧಾನಿ ಮೋದಿಯವರು ಪ್ರತಿನಿಧಿಸುತ್ತಿರುವುದು. ಇದೀಗ ಲೋಕಸಭಾ ಚುನಾವಣೆ ಕಾವೇರಿರುವುದರಿಂದ ಈ ಕ್ಷೇತ್ರ ಆಕರ್ಷಣೀಯ ಕೇಂದ್ರಬಿಂದುವಾಗಿದೆ.

ವಾರಾಣಾಸಿ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಗುರುತಿಸಿಕೊಂಡಿರುವುದು ಗಂಗಾನದಿಯಿಂದ.ದೇಶದಲ್ಲೇ ಪವಿತ್ರ ನದಿಯೆಂದು ಗುರುತಿಸಿಕೊಂಡಿರುವ ಪವಿತ್ರ ಗಂಗಾ ಅತ್ಯಂತ ಮಾಲಿನ್ಯವಾಗಿದ್ದು ಗೊತ್ತೇ ಇದೆ. ಪಕ್ಕದಲ್ಲೇ ಸ್ಮಶಾನ ಇದ್ದು ಹೆಣಗಳ ರಾಶಿಯನ್ನೇ ಗಂಗೆಯಲ್ಲಿ ತೇಲಿಬಿಡುತ್ತಾರೆ. ಸ್ಥಳೀಯ ಕಾರ್ಖಾನೆಗಳ ಕಲುಷಿತ ನೀರುಗಳು ಇದೇ ನದಿಯನ್ನು ಸೇರಿಕೊಂಡು ಪವಿತ್ರ ಗಂಗೆ ಅಕ್ಷರಶಃ ಕಲುಷಿತವಾಗಿದ್ದಳು.

ಮೋದಿಯವರು ಪ್ರಧಾನಿಯಾಗುತ್ತಲೇ ನಮಾಮಿ ಗಂಗಾ ಎಂಬ ಯೋಜನೆಯನ್ನು ತಂದು ಅದಕ್ಕೆಂದೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಗಂಗೆಯನ್ನು ಶುದ್ಧೀಕರಣಗೊಳಿಸುವ ಪ್ರಕ್ರಿಯೆಗೆ ಆರಂಭದಲ್ಲಿಯೇ ಚಾಲನೆ ನೀಡಿದ್ದರು. ಗಂಗೆಯ ಮೈನಲ್ಲಿ ಅಂಟಿಕೊಂಡಿದ್ದ ಕಲ್ಮಶವನ್ನು ದೂರಗೊಳಿಸುವ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದರು.

ಇದೀಗ ಚುನಾವಣೆ ನಡೆಯುತ್ತಿರುವುದರಿಂದ ಕರ್ನಾಟಕದ ಮಾಧ್ಯಮಗಳೂ ಉತ್ತರ ಪ್ರದೇಶದ ವಾರಾಣಾಸಿ ಕ್ಷೇತ್ರದಲ್ಲಿ ಬೀಡುಬಿಟ್ಟಿವೆ. ಕರ್ನಾಟಕದ ಪ್ರಮುಖ ಮಾಧ್ಯಮಗಳು ನಡೆಸಿರುವ ಸಮೀಕ್ಷೆಯ ಪ್ರಕಾರ ಗಂಗೆ ಈಗ ಹಿಂದಿನಂತಿಲ್ಲ. ವರುಣಾ ಹಾಗೂ ಅಸಿ ಎಂಬ ಎರಡು ನದಿಗಳು ಸೇರಿ ವಾರಾಣಾಸಿ ಎಂಬ ಹೆಸರು ಬಂದಿದೆ. ಈ ಎರಡು ನದಿಗಳು ಗಂಗೆಯನ್ನು ಸೇರಿಕೊಳ್ಳುತ್ತವೆ. ವರುಣಾ ಶುದ್ಧಿಯಾಗಿದ್ದು ಅಸಿ ನದಿ ಇನ್ನೂ ಶುದ್ಧಿಯಾಗಬೇಕಾಗಿದೆ. 2022ರ ವೇಳೆಗೆ ಗಂಗೆ ಸಂಪೂರ್ಣ ಶುದ್ಧಿಯಾಗುತ್ತಾಳೆ ಎಂಬುವುದು ಮಾಧ್ಯಮಗಳ ವರದಿ. ಆದರೆ ಈಗಾಗಲೇ ಸ್ವತಃ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ ಗಂಗಾನದಿಯ ನೀರನ್ನು ಸೇವಿಸುವ ಮೂಲಕ ಗಂಗೆ ಶುದ್ಧಿಯಾಗಿದೆ ಎಂದು ಸಾರಿದ್ದನ್ನು ನೆನಪಿಸಿಕೊಳ್ಳಬಹುದು.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close