ಪ್ರಚಲಿತ

ಮದರಾಸಗಳ ಬುಡಕ್ಕೆ ಕೊಳ್ಳಿ ಇಟ್ಟ ಮೋದಿ-ಯೋಗಿ!

ಏನೇ ಹೇಳಿ ನೀವು.. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ‌ಕ್ಕೆ ಇರುವಷ್ಟು ‘ಧಮ್’ ಈ ವರೆಗೆ ಭಾರತ ಸರ್ಕಾರ‌ದ ಆಡಳಿತ ಚುಕ್ಕಾಣಿ ಹಿಡಿದಿದ್ದ ಯಾವುದೇ ಸರ್ಕಾರ‌ಕ್ಕೆ, ಪಕ್ಷಕ್ಕೆ ಇರ್ಲಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ಉತ್ತರ‌ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಆದ ನಂತರದಲ್ಲಿ ಮಹತ್ವದ ಹಲವಾರು ಅಭಿವೃದ್ಧಿ ಕಾರ್ಯಗಳು, ಮಹತ್ವದ ನಿರ್ಣಯಗಳನ್ನು ಪ್ರಕಟ ಮಾಡಿರುವುದು ನಿಮಗೆ ಗೊತ್ತೇ ಇದೆ‌. ಇದೀಗ, ಉತ್ತರ ಪ್ರದೇಶದ ಮದರಸಾಗಳಲ್ಲಿ ಕಲಿಯುತ್ತಿರುವ 1 – 8 ನೇ ತರಗತಿಯ ವರೆಗಿನ ಮಕ್ಕಳಿಗೆ ನೀಡುವ ಸ್ಕಾಲರ್ಶಿಪ್ ರದ್ದು ಮಾಡುವಂತೆ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಮದರಸಾಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಲಿಯೇ ಮಧ್ಯಾಹ್ನದ ಊಟ , ಪುಸ್ತಕ ಇತ್ಯಾದಿಗಳ‌ನ್ನು ಉಚಿತವಾಗಿ ನೀಡಲಾಗುತ್ತಿದೆ. ಹೀಗಿರುವಾಗ ಸ್ಕಾಲರ್ಶಿಪ್ ನೀಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈವರೆಗೆ 1 – 5 ನೇ ತರಗತಿಯ ವರೆಗಿನ ಮಕ್ಕಳಿಗೆ 1 ಸಾವಿರ ರೂ. ಮತ್ತು 5 – 8 ನೇ ತರಗತಿ ವಿದ್ಯಾರ್ಥಿಗಳಿಗೆ ಅವರು ಅಧ್ಯಯನ ನಡೆಸುತ್ತಿರುವ ವಿಷಯಕ್ಕೆ ಅನುಗುಣವಾಗಿ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿತ್ತು. ಈ ಸ್ಕಾಲರ್ಶಿಪ್ ಅನ್ನು ಬಡವರಿಗೆ ನೀಡಲಾಗುತ್ತಿದ್ದು, ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಪಡೆಯುತ್ತಿದ್ದರು. ಆದರೆ ಮುಸ್ಲಿಂ ವಿದ್ಯಾರ್ಥಿಗಳು ಮದರಸಾಗಳಿಂದ ಸಹ ವಿದ್ಯಾರ್ಥಿ ವೇತನ ಸೌಲಭ್ಯ ಪಡೆಯುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದ 16,558 ಮದರಸಾಗಳಲ್ಲಿ‌ನ ಸುಮಾರು 5 ಲಕ್ಷ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯುತ್ತಿದ್ದಾರೆ. ಅವರಿಗೆ ಮದರಸಾಗಳಲ್ಲಿಯೂ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗುವ ಸ್ಕಾಲರ್ಶಿಪ್ ಅನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಹೇಳಿದೆ.

ಸದ್ಯ ಉತ್ತರ ಪ್ರದೇಶದ‌ಲ್ಲಿ ಜಾರಿಗೆ ಬರಲಿರೋ ಈ ನೀತಿ, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳ‌ಲ್ಲಿಯೂ ಜಾರಿಯಾಗಬೇಕು. ಹಾಗೆಯೇ, ಈ ರದ್ದಾದ ಸ್ಕಾಲರ್ಶಿಪ್ ಮೊತ್ತವನ್ನು ದೇಶದ ಮತ್ತಷ್ಟು ಬಡ ವಿದ್ಯಾರ್ಥಿಗಳಿಗೆ ನೀಡುವಂತಾದಲ್ಲಿ ಈ ದೇಶದ ಅಭಿವೃದ್ಧಿ ಸಾಧ್ಯ. ದೇಶದ ಆರ್ಥಿಕ‌ತೆ ವೃಥಾ ಪೋಲಾಗದಂತೆ ತಡೆಯುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಂಡ ಮೋದಿ ನೇತೃತ್ವದ ಕೇಂದ್ರ ಸರ್ಕಾರ‌ಕ್ಕೆ ಸಲ್ಯೂಟ್.

Tags

Related Articles

Close